ಈ ಸರಣಿಯ 2 ರೂಪಾಯಿಯ ನಾಣ್ಯಗಳಿದ್ದರೆ ನೀವಾಗಬಹುದು ಲಕ್ಷಾಧಿಪತಿಗಳು: ನೀವು ಮಾಡಬೇಕಾದ್ದು ಇಷ್ಟೇ…

in Kannada News/News 6,124 views

ನವದೆಹಲಿ: ಕಾಲಗಳೇ ಗತಿಸಿದರೂ ಕೂಡ ಕೆಲವು ಜನರ ಹಳೆ ಸಂಗತಿಗಳು, ವಸ್ತುಗಳನ್ನು ಸಂಗ್ರಹಿಸಿಡುವ ಹವ್ಯಾಸ ಮಾತ್ರ ಇನ್ನೂ ಬದಲಾಗಿಲ್ಲ. ಇಂದಿಗೂ ಕೂಡ ಜನರಿಗೆ ಹಳೆ ನಾಣ್ಯಗಳು  (Old Coins Collection) ಹಾಗೂ ನೋಟುಗಳನ್ನು ಸಂಗ್ರಹಿಸಿಡುವ ಹವ್ಯಾಸವಿರುತ್ತದೆ. ಇಂತಹ ಜನರಿಗೆ ಇದು ಸಂತಸದ ಸುದ್ದಿಯಾಗಿದೆ. ಈ ಜನರು ತಮ್ಮ ಬಳಿ ಇರುವ 1, 2 ಹಾಗೂ 5 ರೂ.ಗಳ ನಾಣ್ಯ ಹಾಗೂ ನೋಟುಗಳ ಮೂಲಕ ಮಾಲಾಮಾಲ್ ಆಗಬಹುದು. ಹೌದು, ಕೆಲ ವಿಶೇಷ ಸಂಗತಿಗಳನ್ನು ಹೊಂದಿರುವ ನೋಟು (Rare Notes), ನಾಣ್ಯಗಳ (Old Coins) ಮಾರಾಟ ಮಾಡಿ ನೀವೂ ಕೂಡ ಸಾವಿರಾರು ಅಥವಾ ಲಕ್ಷಾಂತರ ಹಣ ಸಂಗ್ರಹಿಸಬಹುದು.

Advertisement

ಹಲವು ಜನರಿಗೆ ಆಂಟಿಕ್ ವಸ್ತುಗಳನ್ನು (Antique Collection) ಸಂಗ್ರಹಿಸಿ ಇಡುವ ಹವ್ಯಾಸ ಇರುತ್ತದೆ ಮತ್ತು ಅವು ಜೀವನಪೂರ್ತಿ ಅವುಗಳಿಗೆ ಬೆಲೆ ಕೊಡುತ್ತಾರೆ. ಹೀಗಾಗಿ ಅವರು ಹಳೆ ನೋಟುಗಳನ್ನು ಹಾಗೂ ನಾಣ್ಯಗಳನ್ನು ಆಂಟಿಕ್ (Antique Coins) ಕೆಟಗರಿಗೆ ಸೇರಿಸಿರುತ್ತಾರೆ.

ನಾಣ್ಯಗಳ ಬಳಕೆ ಎರಡು ಸಾವಿರ ವರ್ಷಗಳ ಹಿಂದೆ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕಾಲಾನಂತರ ನಾಣ್ಯಗಳು ಸಹ ಬದಲಾಗುತ್ತಾ ಬಂದಿದೆ. ಓಲ್ಡ್​ ಇಸ್​ ಗೋಲ್ಡ್​ ಎಂದು ಹಿರಿಯರು ಹೇಳುವ ಮಾತಿನಂತೆ ಇಂದು ಹಳೆಯ ನಾಣ್ಯಗಳಿಗೂ ಭಾರಿ ಬೇಡಿಕೆ ಇದೆ.

ಹೌದು. 1994, 1995, 1997 ಮತ್ತು 2000 ಸರಣಿಯ ವಿಶೇಷವಾದ 2 ರೂಪಾಯಿ ನಾಣ್ಯಗಳಿಗೆ ಬಹುಬೇಡಿಕೆ ಬಂದಿದೆ. ನಿಮ್ಮ ಬಳಿ ಏನಾದರೂ ನಾಣ್ಯಗಳಿದ್ದರೆ ನೀವು ಲಕ್ಷಾಧಿಪತಿಯಾಗುವ ಸಾಧ್ಯತೆ ಇದೆ. ವಿಶೇಷವಾದ ನಾಣ್ಯಗಳನ್ನು ಮಾರಾಟ ಮಾಡಿ ಲಕ್ಷ ರೂಪಾಯಿ ಗಳಿಸಬಹುದಾಗಿದೆ.

ಎಲ್ಲಿ ಮತ್ತು ಹೇಗೆ? 

1. ಮೊದಲು ಬೆಂಗಳೂರು ಮೂಲದ ಕ್ವಿಕ್ಕರ್​ ವೆಬ್​ಸೈಟ್​ನಲ್ಲಿ ರಿಜಿಸ್ಟರ್​ ಮಾಡಿಕೊಳ್ಳಬೇಕು.

2. ಬಳಿಕ ವಿಶೇಷವಾದ ಎರಡು ರೂಪಾಯಿ ನಾಣ್ಯದ ಫೋಟೋ ತೆಗೆದು ವೆಬ್​​ಸೈಟ್​ನಲ್ಲಿ ಅಪ್​ಲೋಡ್​ ಮಾಡಿ.

3. ಫೋಟೋ ಅಪ್​ಲೋಡ್​ ಮಾಡಿದ ಬಳಿಕ ನಿಮ್ಮ ಮೊಬೈಲ್​ ನಂಬರ್​ ಮತ್ತು ಈಮೇಲ್ ಅಥವಾ ವಾಸ ಸ್ಥಳದ ಮಾಹಿತಿ​ ನೀಡಬೇಕು. ನೀವು ನೀಡಿದ ಮಾಹಿತಿಯನ್ನು ವೆಬ್​ಸೈಟ್​ ವೆರಿಫೈ ಸಹ ಮಾಡಲಿದೆ.

4. ನೀವು ಅಪ್​ಲೋಡ್​ ಮಾಡಿದ ವಿಶೇಷ ಎರಡು ರೂಪಾಯಿ ನಾಣ್ಯವನ್ನು ನೋಡಿ ಯಾರಿಗಾದರೂ ಇಷ್ಟವಾದರೆ ನೇರವಾಗಿ ನಿಮಗೆ ಕರೆ ಮಾಡಿ ಅದನ್ನು ಕೊಂಡುಕೊಳ್ಳಲಿದ್ದಾರೆ. ಇದನ್ನೆಲ್ಲ ಮಾಡುವ ಮುನ್ನ ನೀವು ವೆಬ್​ಸೈಟ್​ನಲ್ಲಿರುವ ನಿಯಮಗಳನ್ನು ಒಮ್ಮೆ ಓದಿಕೊಳ್ಳುವುದು ಒಳಿತು.

5 ರೂಪಾಯಿಯ ಈ ನೋಟುಗಳಿಗೂ ಇದೆ ಭಾರೀ ಡಿಮ್ಯಾಂಡ್

ಯಾರ ಬಳಿ ಈ ಐದು ರೂ.ಗಳ ಹಳೆ ನೋಟು  (5 Rupee Rare Note) ಇದೆಯೋ ಅವರು ಅದನ್ನು ಮಾರಾಟ ಮಾಡಿ ಸಾವಿರಾರು ರೂ. ಹಣ ಸಂಪಾದಿಸಬಹುದು. ಆದರೆ, ಅದಕ್ಕಾಗಿ ನಿಮ್ಮ ಬಳಿ ಇರುವ ನೋಟಿನಲ್ಲಿ ಕೆಲ ವಿಶೇಷ ಸಂಗತಿಗಳಿರಬೇಕು. ಈ ವಿಶೇಷ ಸಂಗತಿಗಳು ನಿಮಗೆ ನಿಮ್ಮ ಐದು ರೂಪಾಯಿ  (5 Rupee Note) ನೋಟಿಗೆ 30 ಸಾವಿರ ರೂ. ಕೊಡಿಸಬಹುದು.

30 ಸಾವಿರ ರೂ.ಗಳನ್ನು ಸಂಪಾದಿಸಲು ನಿಮ್ಮ ಬಳಿ ಇರುವ ಐದು ರೂ.ಗಳ ನೋಟಿನಲ್ಲಿ ಟ್ರ್ಯಾಕ್ಟರ್ (Tractor) ಇರಬೇಕು. ಜೊತೆಗೆ ಅದರಲ್ಲಿ 786 ಬರೆದಿರಬೇಕು. ಈ ನೋಟನ್ನು ಆಂಟಿಕ್   (Antique Category)ಕೆಟಗರಿಯಲ್ಲಿ ತುಂಬಾ ರೆಯರ್ ಎಂದು ಹೇಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve bank Of India) ಈ ನೋಟಿಗೆ ಎಕ್ಷಟ್ರೀಮ್ಲಿ ರೆಯರ್ (Extremely Rare Notes) ಮಾನ್ಯತೆ ದೊರೆತಿದೆ. ಕೊವಿಡ್-19 (Coronavirus) ಕಾರಣ ವಿಧಿಸಲಾಗಿರುವ ಲಾಕ್ ಡೌನ್ (Lockdown) ನಲ್ಲಿ ಹಣ ಗಳಿಕೆಗೆ ಜನರ ಬಳಿ ಇದೊಂದು ಉತ್ತಮ ಆಪ್ಶನ್ ಆಗಿದೆ.

ಈ ರೀತಿಯ ಐದು ರೂಪಾಯಿ ನೋಟು (5 rupee note sale) ಒಂದು ವೇಳೆ ನಿಮ್ಮ ಬಳಿಯೂ ಇದ್ದರೆ, ನೀವೂ ಕೂಡ ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ನೀವು ಅದನ್ನು ಆನ್ಲೈನ್ ನಲ್ಲಿಯೂ ಕೂಡ ಮಾರಾಟ ಮಾಡಬಹುದು. ನಿಮ್ಮ ಈ ನೋಟನ್ನು ಮಾರಾಟ ಮಾಡಲು ನೀವು coinbazzar.com ವೆಬ್ ತಾಣಕ್ಕೆ ಭೇಟಿ ನೀಡಬಹುದು. ಅಲ್ಲಿ ನೀವು Online Seller ಆಗಿ ನಿಮ್ಮ ಹೆಸರನ್ನು ನೋಂದಣಿ ಮಾಡಬಹುದು. ಬಳಿಕ ನಿಮ್ಮ ಬಳಿ ಇರುವ ನೋಟಿನ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್ಲೋಡ್ ಮಾಡಿ ಸೆಲ್ ಮಾಡಬಹುದು. ಈ ಪ್ರೋಸೆಸ್ ಬಳಿಕ ಆಸಕ್ತಿವುಳ್ಳ ಜನರು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಹಾಗೂ ಆ ನೋಟನ್ನು ನೀವು ಅವರಿಗೆ ಮಾರಾಟ ಮಾಡಬಹುದು.

50 ಪೈಸೆಯ ನಾಣ್ಯದಿಂದಲೂ ಆಗಬಹುದು ಲಕ್ಷಾಧಿಪತಿಗಳು

25 ಪೈಸೆ ಪ್ರವೃತ್ತಿ 2011 ರಲ್ಲಿ ಕೊನೆಗೊಂಡಿತು. ಇದರ ನಂತ್ರ, ಮುಂದಿನ ವರ್ಷಗಳಲ್ಲಿ ಜನರು 50 ಪೈಸೆಯನ್ನ ತೆಗೆದುಕೊಳ್ಳುವುದನ್ನ ನಿಲ್ಲಿಸಿದ್ದರು. ಅಂದ್ರೆ, ಸರ್ಕಾರವು ಅವುಗಳನ್ನ ಬಳಸುವುದನ್ನು ನಿಲ್ಲಿಸುವ ಮೊದಲೇ ಜನರು ಇದನ್ನ ಬಳಸುವುದನ್ನು ನಿಲ್ಲಿಸಿದ್ದರು. ಹಣದುಬ್ಬರ ಯುಗದಲ್ಲಿ 50 ಪೈಸೆ ನಾಣ್ಯವು ನಿಷ್ಪ್ರಯೋಜಕವಾಗಿದೆ ಎಂದು ಜನರು ಹೇಳಿದರು. ಅದರ ನಂತ್ರ ಅದು ಕ್ರಮೇಣ ಪ್ರವೃತ್ತಿಯಿಂದ ಹೊರಟು ಹೋಯಿತು. ಆದ್ರೆ, ಈಗ ಈ ಅನುಪಯುಕ್ತ ನಾಣ್ಯ ನಿಮ್ಮನ್ನ ಕೋಟ್ಯಾಧಿಪತಿಯನ್ನಾಗಿ ಮಾಡಬಹುದು.

1 ಲಕ್ಷಕ್ಕೆ ಮಾರಾಟವಾಗುತ್ತಿದೆ..!

ಹೌದು, 50 ಪೈಸೆ ಸ್ಟೀಲ್ ನಾಣ್ಯವನ್ನ ಓಲ್ಕ್ಸ್ನಲ್ಲಿ ಒಂದು ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ, ಇದು ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟಕ್ಕೆ ಪ್ರಸಿದ್ಧವಾಗಿದೆ. ಈ ಹೊಳೆಯುವ ನಾಣ್ಯದಲ್ಲಿ ಒಂದು ವಿಶೇಷ ವಿಷಯವಿದ್ದು, ಈ ನಾಣ್ಯವನ್ನ 2011ರಲ್ಲಿ ತಯಾರಿಸಲಾಯಿತು. 50 ಪೈಸೆಯನ್ನ ನಿಷೇಧಿಸಿದಾಗ ಅದೇ ವರ್ಷದ ನಾಣ್ಯ ಇದು. ಈ ನಾಣ್ಯವನ್ನ ಆನ್‌ಲೈನ್‌ನಲ್ಲಿ ಒಂದು ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮಲ್ಲಿ ಅಂತಹ 50 ಪೈಸೆ ನಾಣ್ಯವೂ ಇದ್ದರೆ, ಅದನ್ನ ಮಾರಾಟ ಮಾಡುವ ಮೂಲಕ ನೀವೂ ಕೂಡ ಬೇಗನೆ ಮಿಲಿಯನೇರ್ ಆಗಬಹುದು.

ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ?

ನೀವು 50 ಪೈಸೆಗಳ ಅಂತಹ ನಾಣ್ಯವನ್ನ ಸಹ ಹೊಂದಿದ್ದರೆ, ನೀವು ಅದನ್ನು ಮನೆಯಲ್ಲಿ ಕುಳಿತು ಮಾರಾಟ ಮಾಡಬಹುದು. ಓಲ್ಕ್ಸ್‌ನಂತಹ ಸೈಟ್ ನಿಮಗೆ ಮಾರಾಟಗಾರನಾಗಿ ಸೇರಲು ಆಯ್ಕೆಯನ್ನ ನೀಡುತ್ತದೆ. ನೀವು ಅದರಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಇದರ ನಂತ್ರ, ನೀವು ಅದರ ಮೇಲೆ ಇರುವ ನಾಣ್ಯದ ಚಿತ್ರವನ್ನ ಅಪ್‌ಲೋಡ್ ಮಾಡಿ ಮಾರಾಟಕ್ಕೆ ಇರಿಸಿ. ಹಳೆಯ ನಾಣ್ಯಗಳನ್ನ ಸಂಗ್ರಹಿಸಲು ಇಷ್ಟಪಡುವ ಅನೇಕ ಜನರು ಜಗತ್ತಿನಲ್ಲಿ ಇದ್ದಾರೆ. ನಿಮ್ಮ ಜಾಹೀರಾತನ್ನ ಯಾರಾದರೂ ನೋಡಿದರೆ ಮತ್ತು ಅದನ್ನ ಖರೀದಿಸಲು ಆಸಕ್ತಿ ಇದ್ದರೆ, ಅವ್ರು ನಿಮ್ಮನ್ನು ಸಂಪರ್ಕಿಸ್ತಾರೆ. ಆನ್‌ಲೈನ್ ಪಾವತಿಯ ನಂತ್ರ, ಅವ್ರಿಗೆ ನಾಣ್ಯವನ್ನ ಕೊರಿಯರ್ ಮಾಡಿ. ಐಡಲ್ ನಾಣ್ಯಗಳಿಂದ ಮಿಲಿಯನೇರ್ ಆಗಲು ಇದು ಒಂದು ದೊಡ್ಡ ಮಾರ್ಗವಲ್ಲವೇ?

Advertisement