“ಎಂಥಾ ತೂಫಾನ್ ಬರುತ್ತೆ ನೋಡ್ತಾ ಇರಿ, ಅದನ್ನ ನೀವು ತಡ್ಕೊಳ್ಳೋಕೂ ಆಗಲ್ಲ”: ಭಾರತೀಯ ಸೇನೆಯ ವಿರುದ್ಧ ನಾಲಿಗೆ ಹರಿಬಿಟ್ಟ ಫಾರುಖ್ ಅಬ್ದುಲ್ಲಾ

in Uncategorized 912 views

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಮಾತನಾಡುತ್ತ, ನಾನು ಹಳ್ಳಿಗೆ ಹೋಗಿ ಅಂಗಡಿಯವನನ್ನು ಈ ಬಗ್ಗೆ ಕೇಳಿದೆ. ಮತಯಂತ್ರಗಳ ಬಳಿ ಬರಬೇಡಿ, ಇಲ್ಲದಿದ್ದರೆ ನಿನ್ನ ಕಾಲುಗಳನ್ನು ಮುರಿಯುತ್ತೇವೆ ಎಂದು ಸೈನಿಕರು ಹೇಳಿದ್ದರು ಎಂದು ಅವರು ಹೇಳಿದರು. ಇದಾದ ನಂತರ ನಾನು ಸೇನೆಗೆ ಮತ್ತು ಸರ್ಕಾರಕ್ಕೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಹೇಳಲು ಬಯಸುತ್ತೇನೆ, ಇಲ್ಲದಿದ್ದರೆ ಎಂಥಾ ತೂಫಾನ್ ಬರಲಿದೆಯೆಂದರೆ ಅದನ್ನ ನೀವು ತಡೆದುಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರದ ಜನರಿಗೆ ಮತ ಹಾಕಲು ಸೇನೆ ಅವಕಾಶ ನೀಡಲೇ ಇಲ್ಲ ಎಂದು ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ. ಇದರೊಂದಿಗೆ ಸರ್ಕಾರ ಮತ್ತು ಭಾರತೀಯ ಸೇನೆಗೂ ಎಚ್ಚರಿಕೆಯನ್ನೂ ನೀಡಿದ್ದಾರೆ. ಫಾರೂಕ್ ಅಬ್ದುಲ್ಲಾ ಅವರು ತಮ್ಮ ಎಚ್ಚರಿಕೆಯಲ್ಲಿ, ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ, ಇಲ್ಲದಿದ್ದರೆ ಎಂಥಾ ತೂಫಾನ್ ಬರಲಿದೆಯೆಂದರೆ ಅದನ್ನ ನೀವು ತಡೆದುಕೊಳ್ಳಲೂ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ (1996ರಲ್ಲಿ ಜಮ್ಮು ಕಾಶ್ಮೀರದ) ಮತದಾನ ನಡೆಯುತ್ತಿದ್ದ ದೋಡಾ ಗ್ರಾಮಕ್ಕೆ ಹೋಗಿದ್ದೆ ಎಂದು ಫಾರೂಕ್ ಅಬ್ದುಲ್ಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರ್ಮಿ ಕ್ಯಾಂಪ್‌ನಲ್ಲಿ (ಮತದಾನ) ಯಂತ್ರಗಳನ್ನು ಇರಿಸಿದ್ದರಿಂದ ನನಗೆ ಅಲ್ಲಿ ಯಾರೂ ಕಾಣಿಸಲಿಲ್ಲ. ಇಲ್ಲಿ ಯಾರೂ ಇಲ್ಲ ಏಕೆ ಎಂದು ಕೇಳಿದಾಗ, ಅವರು (ಸೈನಿಕರು) ಯಾರೂ ಮತ ಹಾಕಲು ಬಂದಿಲ್ಲ ಎಂದು ಹೇಳಿದರು ಎಂದಿದ್ದಾರೆ.

ಇದರೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮಾತನಾಡುತ್ತ, ನಂತರ ನಾನು ಹಳ್ಳಿಗೆ ಹೋಗಿ ಅಂಗಡಿಯವನನ್ನು ಈ ಬಗ್ಗೆ ಕೇಳಿದೆ. ಮತಯಂತ್ರಗಳ ಬಳಿ ಬರಬೇಡಿ, ಇಲ್ಲದಿದ್ದರೆ ನಿಮ್ಮ ಕಾಲುಗಳನ್ನು ಮುರಿಯುತ್ತೇವೆ ಎಂದು ಸೈನಿಕರು ಹೇಳಿದ್ದರು ಎಂದು ಅವರು ಹೇಳಿದರು. ಇದಾದ ಬಳಿಕ ಮಾತನಾಡಿದ ಅವರು, ನಾನು ಸೇನೆಗೆ ಮತ್ತು ಸರ್ಕಾರಕ್ಕೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಹೇಳಲು ಬಯಸುತ್ತೇನೆ, ಇಲ್ಲದಿದ್ದರೆ ಎಂಥಾ ತೂಫಾನ್ ಬರಲಿದೆಯೆಂದರೆ ಅದನ್ನ ನೀವು ತಡೆದುಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದರು. ಮುಂದೆ ಮಾತನಾಡಿದ ಫಾರುಖ್ ಅಬ್ದುಲ್ಲಾ, 2018 ರ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದು ನಮ್ಮ ಕಡೆಯಿಂದ ಮಾಡಿದ ತಪ್ಪಾಗಿದೆ ಮತ್ತು ಭವಿಷ್ಯದಲ್ಲಿ ಜಮ್ಮು ಕಾಶ್ಮೀರದ ಪ್ರತಿ ಚುನಾವಣೆಯಲ್ಲಿ ನನ್ನ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು. ಈಗಲೇ ನಾವು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ ಎಂಬುದನ್ನು ನೆನಪಿಡಿ. ಬದಲಾಗಿ ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

ಫಾರೂಕ್ ಅಬ್ದುಲ್ಲಾ ಅವರು ಸೋಮವಾರ ಮತ್ತೊಂದು ಅವಧಿಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಇಲ್ಲಿನ ನಸೀಮ್ ಬಾಗ್‌ನಲ್ಲಿರುವ ಪಕ್ಷದ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಸಮಾಧಿ ಬಳಿ ನಡೆದ ಎನ್‌ಸಿಯ ಪ್ರತಿನಿಧಿ ಅಧಿವೇಶನದಲ್ಲಿ 85 ವರ್ಷ ವಯಸ್ಸಿನ ಫಾರುಖ್ ಅಬ್ದುಲ್ಲಾ ರವರನ್ನ ಅವಿರೋಧವಾಗಿ ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಯಿತು. ಇದೇ ದಿನ ಶೇಖ್ ಅಬ್ದುಲ್ಲಾ ಅವರ 117ನೇ ಜನ್ಮದಿನವನ್ನೂ ಆಚರಿಸಲಾಯಿತು. ನ್ಯಾಶನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ ಅಲಿ ಮೊಹಮ್ಮದ್ ಸಾಗರ್ ಅವರು ಮಾತನಾಡುತ್ತ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕದ ವೇಳೆಗೆ ಅಬ್ದುಲ್ಲಾ ಅವರ ನಾಮಪತ್ರವನ್ನು ಮಾತ್ರ ಸ್ವೀಕರಿಸಲಾಗಿದೆ. ಫಾರೂಕ್ ಅಬ್ದುಲ್ಲಾ ಅವರನ್ನು ಬೆಂಬಲಿಸಿ ಕಾಶ್ಮೀರದಿಂದ 183, ಜಮ್ಮುವಿನಿಂದ 396 ಮತ್ತು ಲಡಾಖ್‌ನಿಂದ 25 ನಿರ್ಣಯಗಳನ್ನು ಸ್ವೀಕರಿಸಲಾಗಿದೆ ಎಂದು ಮೊಹಮ್ಮದ್ ಸಾಗರ್ ಹೇಳಿದರು. ಕಳೆದ ಐದು ವರ್ಷಗಳ ಹಿಂದೆ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷೀಯ ಚುನಾವಣೆ ನಡೆದಿತ್ತು.

Advertisement
Share this on...