ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ಇತ್ತೀಚಿನ ವರದಿಯು ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ದೊಡ್ಡ ಪ್ರಮಾಣದ ಹಿಂದೂ ದೇವಾಲಯದ ರಚನೆ ಇತ್ತು ಎನ್ನುವುವದನ್ನು ಬಲವಾಗಿ ಸೂಚಿಸಿದೆ ಎಂದು ಈ ಕೇಸ್ನಲ್ಲಿ ಹಿಂದು ಪರ ವಾದ ಮಂಡಿಸಿರುವ ವಕೀಲ ವಿಷ್ಣು ಶಂಕರ್ ಜೈನ್ ಗುರುವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈನ್, ಎಎಸ್ಐ ಸಮೀಕ್ಷೆಯು, ಈಗಿರುವ ರಚನೆಗಿಂತ ದೊಡ್ಡ ಪ್ರಮಾಣದ ಹಿಂದು ದೇವಾಲಯ ಅಲ್ಲಿತ್ತು ಎನ್ನುವುದನ್ನು ಸೂಚಿಸಿದೆ ಎಂದು ಹೇಳಿದ್ದಾರೆ. ಮಸೀದಿ ನಿರ್ಮಾಣಕ್ಕೂ ಮುನ್ನ ಮಂದಿರ ಇತ್ತು. ಚಿಕ್ಕ ಮಂದಿರವಲ್ಲ. ಅಲ್ಲಿ ದೊಡ್ಡ ಭವ್ಯ ಮಂದಿರ ನಿರ್ಮಾಣವಾಗಿತ್ತು. ಹಿಂದಿನ ಕಟ್ಟಡದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದ್ದು, 32 ಹಿಂದೂ ಮಂದಿರಗಳ ಶಾಸನಗಳು ಇದರಲ್ಲಿ ಪತ್ತೆಯಾಗಿದೆ. ಈ ಮಂದಿರದಲ್ಲಿರುವ ಶಾಸನಗಳು ಕನ್ನಡ, ತೆಲುಗು ಹಾಗೂ ದೇವನಾಗರಿ ಲಿಪಿಯಲ್ಲಿವೆ ಎಂದು ವರದಿ ತಿಳಿಸಿದೆ.
ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಸಮೀಕ್ಷೆಯನ್ನು ಸಹ ಎಎಸ್ ವರದಿ ಒಳಗೊಂಡಿದೆ. ಆ ಮೂಲಕ ಪ್ರದೇಶದಲ್ಲಿ ಐತಿಹಾಸಿಕ ಪದರಗಳ ಬಗ್ಗೆ ಇದ್ದ ಪ್ರಶ್ನೆಗಳಿಗೂ ಉತ್ತರ ಪಡೆಯಲಾಗಿದೆ. ವಿಷ್ಣು ಶಂಕರ್ ಜೈನ್ ಪ್ರಕಾರ ಪ್ರಸ್ತುತ ರಚನೆಯು ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆ ಎನ್ನುವುದು ಖಚಿತವಾಗಿ ತೋರುತ್ತಿದೆ ಎಂದಿದ್ದಾರೆ.
“ಎಎಸ್ಐ ಕಂಡುಕೊಂಡಿರುವ ಸಂಶೋಧನೆಗಳು ಮಸೀದಿಗೆ ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಣ್ಣ ಬದಲಾವಣೆಗಳೊಂದಿಗೆ ಕಂಬಗಳು ಮತ್ತು ಪ್ಲಾಸ್ಟರ್ ಅನ್ನು ಮರುಬಳಕೆ ಮಾಡಲಾಗಿದೆ ಎಂದು ಸೂಚಿಸುತ್ತದೆ. ಹಿಂದೂ ದೇವಾಲಯದ ಕೆಲವು ಕಂಬಗಳನ್ನು ಹೊಸ ರಚನೆಯಲ್ಲಿ ಬಳಸಲು ಸ್ವಲ್ಪ ಮಾರ್ಪಡಿಸಲಾಗಿದೆ. ಕಂಬಗಳ ಮೇಲಿನ ಕೆತ್ತನೆಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ,” ಜೈನ್ ಎಎಸ್ಐ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ದೇವನಾಗರಿ, ತೆಲುಗು, ಕನ್ನಡ ಮತ್ತು ಇತರ ಲಿಪಿಗಳಲ್ಲಿ ಬರೆಯಲಾದ ಪ್ರಾಚೀನ ಹಿಂದೂ ದೇವಾಲಯಕ್ಕೆ ಸೇರಿದ ಶಾಸನಗಳನ್ನು ಸಹ ಸ್ಥಳದಲ್ಲಿ ಪತ್ತೆ ಮಾಡಲಾಗಿದೆ ಎಂದು ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಕುರಿತು ಎಎಸ್ಐ ಸಮೀಕ್ಷೆಯ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರಿಗೆ ನೀಡಬೇಕು ಎಂದು ವಾರಣಾಸಿ ನ್ಯಾಯಾಲಯ ತೀರ್ಪು ನೀಡಿದ ಒಂದು ದಿನದ ನಂತರ ಎಎಸ್ಈ ವರದಿ ಬಹಿರಂಗವಾಗಿದೆ. ಕಳೆದ ವರ್ಷ, ಎಎಸ್ಐ ಜ್ಞಾನವಾಪಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತು, ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ಗುರುತಿಸುವ ಸಲುವಾಗಿ ಈ ಸಮೀಕ್ಷೆ ಮಾಡಲಾಗಿತ್ತು.
ಹಿಂದೂ ಅರ್ಜಿದಾರರು 17 ನೇ ಶತಮಾನದ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ ನಂತರ ನ್ಯಾಯಾಲಯವು ಎಎಸ್ಐ ಸಮೀಕ್ಷೆಗೆ ಆದೇಶ ನೀಡಿತ್ತು.
#WATCH | Varanasi, Uttar Pradesh | Advocate Vishnu Shankar Jain, representing the Hindu side, gives details on the Gyanvapi case.
He says, “The ASI has said that there existed a large Hindu Temple prior to the construction of the existing structure. This is the conclusive… pic.twitter.com/rwAV0Vi4wj
— ANI (@ANI) January 25, 2024
ಮಥುರಾ, ತಾಜ್ಮಹಲ್, ಕುತುಬ್ ಮಿನಾರ್, ಟೀಲೆ ಕಿ ಮಸ್ಜಿದ್ ಕೂಡ ನಮ್ಮ ಲಿಸ್ಟ್ನಲ್ಲಿವೆ: ವಿಷ್ಣುಶಂಕರ್ ಜೈನ್
ಜ್ಞಾನವಾಪಿ ಪ್ರಕರಣದಲ್ಲಿ ನಾವು ಗೆಲುವಿನ ಹೊಸ್ತಿಲಲ್ಲಿದ್ದೇವೆ. ದೇಶಾದ್ಯಂತ
ಎಲ್ಲೆಲ್ಲಿ ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಲಾಗಿದೆಯೋ ಅಲ್ಲೆಲ್ಲಾ ನಾವು ಎಲ್ಲಾ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ. ತಾಜ್ ಮಹಲ್, ಕುತುಬ್ ಮಿನಾರ್, ಕಾಶಿ, ಮಥುರಾ, ಟೀಲೆ ಕಿ ಮಸ್ಜಿದ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಮ್ಮ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ ಎಂದು ವಿಷ್ಣುಶಂಕರ್ ಜೈನ್ ತಿಳಿಸಿದ್ದಾರೆ.
BIG NEWS 🚨 Advocate Vishnu Shankar Jain says "We are on the verge of victory in the Gyanvapi case.
Wherever temple has been demoIished & mosque has been made, we will fight legal battles for restoration of all temples.""Our cases are going on for Taj Mahal, Qutub Minar, Kashi,… pic.twitter.com/lnH74UM7Ud
— Times Algebra (@TimesAlgebraIND) January 25, 2024
WATCH –pic.twitter.com/W2e1CV1h01
— Times Algebra (@TimesAlgebraIND) January 25, 2024