“ಎಷ್ಟೇ ಕರೆದರೂ ತವರು ಮನೆಯಿಂದ ನನ್ನ ಹೆಂಡತಿ ಮನೆಗೆ ಬರುತ್ತಿಲ್ಲ” ಎಂದು ಮನನೊಂದು ತನ್ನ ಪ್ರೈವೆಟ್ ಪಾರ್ಟ್‌ನ್ನೇ ಕತ್ತರಿಸಿಕೊಂಡ ಯುವಕ…

in Uncategorized 779 views

ಬಿಹಾರದ ಮಧೇಪುರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿ ತನ್ನ ತವರು ಮನೆಗೆ ಹೋಗಿದ್ದರಿಂದ ಬೇಸರಗೊಂಡ ಪತಿ ತನ್ನ ಪ್ರೈವೆಟ್ ಪಾರ್ಟ್‌ನ್ನೇ ಕತ್ತರಿಸಿಕೊಂಡಿದ್ದಾನೆ. ಬಳಿಕ ಆತನ ಸ್ಥಿತಿ ಹದಗೆಟ್ಟಿತು. ಸದ್ಯ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾನೆ.

Advertisement

ವರದಿಗಳ ಪ್ರಕಾರ, ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಕೃಷ್ಣ ಬಾಸುಕಿ ಎಂಬ ವ್ಯಕ್ತಿಯ ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು. ಆಕೆ ತನ್ನ ತಾಯಿಯ ಮನೆಯಿಂದ ಹಿಂತಿರುಗಬೇಕೆಂದು ಪತಿ ಹೇಳುತ್ತಲೇ ಇದ್ದ, ಆದರೆ ಹೆಂಡತಿ ಒಪ್ಪದೆ ತನ್ನ ತಾಯಿಯ ಮನೆಯಿಂದ ವಾಪಸ್ ಬರಲಿಲ್ಲ. ಇದರಿಂದ ಬೇಸರಗೊಂಡ ಪತಿ ಹ ರಿ ತವಾದ ಆಯುಧದಿಂದ ತನ್ನ ಪ್ರೈವೇಟ್ ಪಾರ್ಟ್‌ನ್ನೇ ಕತ್ತರಿಸಿಕೊಂಡಿದ್ದಾನೆ. ರಕ್ತ ಸ್ರಾವವಾಗುತ್ತ ಬಿದ್ದಿದ್ದ ವ್ಯಕ್ತಿಯನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ರೋಗಿಯು ಚಿಕಿತ್ಸೆ ಪಡೆಯುತ್ತಿದ್ದು, ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಪ್ರದೇಶದ ಬುಡಕಟ್ಟು ಸಮುದಾಯದ ಜನರು ಮುಂದಿನ ಒಂದು ತಿಂಗಳ ಕಾಲ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಕೃಷ್ಣ ಬಾಸುಕಿ ಅವರ ತಂದೆ ಗ್ರಾಮದ ಬುಡಕಟ್ಟು ಸಮುದಾಯದ ಮುಖ್ಯಸ್ಥರು. ಸಮುದಾಯದ ಕುಟುಂಬ ದೇವತೆಗಳನ್ನೂ ಅವರ ಮನೆಯಲ್ಲಿ ಸ್ಥಾಪಿಸಲಾಗಿದೆ. ಉತ್ಸವ ನೋಡಲು ಜನರು ಕೃಷ್ಣ ಬಾಸುಕಿ ಮನೆಗೆ ಬಂದರು. ಜನರು ಕುಲದೇವತೆಯ ಬಳಿ ರಕ್ತವನ್ನು ಕಂಡರು. ಜನರು ಮನೆಯೊಳಗೆ ಪ್ರವೇಶಿಸಿದಾಗ, ರಕ್ತದ ಮಡುವಿನಲ್ಲಿ ಕೃಷ್ಣ ನರಳುತ್ತ ಬಿದ್ದಿದ್ದ. ನಂತರ ತಕ್ಷಣವೇ ತಡ ಮಾಡದೆ ಆತನನ್ನ ಆಸ್ಪತ್ರೆಗೆ ಸಾಗಿಸಲಾಯಿತು.

ಸಾಂದರ್ಭಿಕ ಚಿತ್ರ

ವರದಿಗಳ ಪ್ರಕಾರ, ಮಧೇಪುರದ ರಜನಿ ನಯಾನಗರದ ನಿವಾಸಿ ಕೃಷ್ಣ ಗೋಲ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲೋಧ್ ವಾರ್ಡ್‌ನ ಯುವತಿಯನ್ನ ವಿವಾಹವಾಗಿದ್ದ. ದಂಪತಿಗಳಿಗೆ ಮೂವರು ಪುತ್ರಿಯರು ಮತ್ತು ಇಬ್ಬ ಪುತ್ರ ಇದ್ದಾರೆ. ಕೃಷ್ಣ ಬಾಸುಕಿ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. 2 ತಿಂಗಳ ಹಿಂದೆ ಪಂಜಾಬ್‌ನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ಹುಟ್ಟಿದ ನಂತರ ಆತ ಪಂಜಾಬ್ ನಿಂದ ತನ್ನ ಊರಿಗೆ ಮರಳಿದ್ದ ಎಂದು ಗ್ರಾಮದ ಜನ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಿಹಾರದಲ್ಲೇ ನಡೆದಿತ್ತು ಇಂತಹುದೇ ಘಟನೆ

ನೇಪಾಳದಲ್ಲಿ ಬಿಹಾರದ ಯುವಕನೊಬ್ಬ ತನ್ನ ಪ್ರೈವೇಟ್ ಪಾರ್ಟ್‌ನ್ನೇ ಕ-ತ್ತ-ರಿಸಿಕೊಂಡಿದ್ದ. ಮದುವೆಯಾಗುತ್ತಿಲಗಲ್ಲ, ಲೇಟ್ ಆಗುತ್ತಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈತನನ್ನು ಇರ್ಫಾನ್ ಶೇಖ್ ಎಂದು ಗುರುತಿಸಲಾಗಿದೆ. ಈತ ಬೇತಿಯಾದ ಸಾಠಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲ ಬರ್ವಾ ಗ್ರಾಮದ ನಿವಾಸಿಯಾಗಿದ್ದು ನೇಪಾಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಘಟನೆಯ ಬಗ್ಗೆ ನೇಪಾಳ ಪೊಲೀಸರಿಂದ ಮಾಹಿತಿ ಪಡೆದ ನಂತರ, ಸಂಬಂಧಿಕರು ಆತನನ್ನ ಮನೆಗೆ ಕರೆತಂದರು. ಸದ್ಯ ಇರ್ಫಾನ್‌ನ್ನ ಬೇತಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಆತನ ಸ್ಥಿತಿ ಸುಧಾರಿಸುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಬಡತನ, ಮದುವೆ ವಿಳಂಬ ಮತ್ತು 5 ಹಿರಿಯ ಹೆಣ್ಣುಮಕ್ಕಳ ಮದುವೆಯಾಗದಿರುವುದೇ ಕಾರಣ ಎಂದು ಇರ್ಫಾನ್ ತಾಯಿ ಹೇಳಿದ್ದಾರೆ. ತಾನು ಮೊದಲು ತನ್ನ 5 ಹಿರಿಯ ಹೆಣ್ಣುಮಕ್ಕಳನ್ನು ಮದುವೆ ಮಾಡಿಸಲು ಬಯಸಿದ್ದಳು. ಇದರಿಂದಾಗಿ ಇರ್ಫಾನ್ ಮದುವೆ ತಡವಾಗುತ್ತಿತ್ತು. ಆತ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಅಂತ ಗೊತ್ತಿದ್ದರೆ ಮೊದಲು ಆತನದ್ದೇ ಮದುವೆ ಮಾಡಿಸುತ್ತಿದ್ದೆ ಎಂದು ಇರ್ಫಾನ್ ತಾಯಿ ಹೇಳಿದ್ದಾರೆ.

ಇರ್ಫಾನ್ ಗಾಯಗೊಂಡಿರುವ ಬಗ್ಗೆ ನೇಪಾಳ ಪೊಲೀಸರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಇರ್ಫಾನ್ ನೇಪಾಳದ ಪೋಖರಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಆತನ ತಂದೆ ಇಂತೇಜಾರ್ ಶೇಖ್ ಅವರ ಪ್ರಕಾರ, ಆತ ಮನೆಗೆ ಬರುವ ಬಗ್ಗೆ ಕರೆ ಮಾಡಿ ತಿಳಿಸಿದ್ದ. ಆದರೆ ಮರುದಿನವೇ ಆತ ತನ್ನ ಖಾಸಗಿ ಅಂಗವನ್ನು ಕ-ತ್ತ-ರಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಆತನನ್ನ ನೇಪಾಳದ ಬಿರ್‌ಗುಂಜ್‌ನಲ್ಲಿರುವ ನಾರಾಯಣಿ ಆಸ್ಪತ್ರೆಯಿಂದ ಬಿಹಾರದ ಬೇತಿಯಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಆತನನ್ನು ಕರೆದುಕೊಂಡು ಹೋಗಲು ಸಂಬಂಧಿಕರು ನೇಪಾಳದ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಆತ ಓಡಿ ಹೋಗಿದ್ದ ಎಂದು ಹೇಳಲಾಗುತ್ತಿದೆ. ಸಾಕಷ್ಟು ಹುಡುಕಾಟದ ನಂತರ, ಆತ ಇಂಡೋ-ನೇಪಾಳ ಅಂತರಾಷ್ಟ್ರೀಯ ಗಡಿಯಲ್ಲಿರುವ ರಕ್ಸಾಲ್ ಬಳಿ ಪತ್ತೆಯಾಗಿದ್ದ. ಕುಟುಂಬಸ್ಥರು ಇರ್ಫಾನ್‌ನ್ನ ಕೇಳಿದಾಗ ಆತ ನೇಪಾಳದ ಅಂಗಡಿಯಿಂದ ಬ್ಲೇ-ಡ್ ಖರೀದಿಸಿ ತನ್ನ ಖಾಸಗಿ ಅಂಗವನ್ನು ಕ-ತ್ತ-ರಿಸಿ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳುತ್ತಿಲ್ಲ. ಚಿಕಿತ್ಸೆ ನೀಡುತ್ತಿರುವ ಪ್ರಮೋದ್ ತಿವಾರಿ ಇರ್ಫಾನ್‌ನ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.

Advertisement
Share this on...