ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 10 ಸಾವಿರ ಕೊಟ್ಟ ಉದ್ಯಮಿ: ಮಾರಾಟ ಮಾಡಿದ ವಿದ್ಯಾರ್ಥಿನಿ ರಾತ್ರೋರಾತ್ರಿ ಲಕ್ಷಾಧಿಪತಿ, ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 98 views

ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ. ನಂತೆ ಒಟ್ಟು 12 ಹಣ್ಣುಗಳನ್ನು 1,20,000 ರೂ.ಕೊಟ್ಟು ಖರೀದಿಸಿದ್ದಾರೆ. ಈ ಎಲ್ಲಾ ಹಣವನ್ನು ಬಾಲಕಿ ತಂದೆ ಶ್ರಿಮಲ್ ಕುಮಾರ್​​​ ಬ್ಯಾಂಕ್​ ಖಾತೆಗೆ ವರ್ಗಾಯಿಸಲಾಗಿದೆ. ಬಾಲಕಿ ಫೋನ್​ ಖರೀದಿಸಲು ಉದ್ಯಮಿ ಸಹಾಯ ಮಾಡಿದ್ದಾರೆ.

Advertisement

ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದ ಮೊರೆ ಹೋಗುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳ ಬಳಿಯೂ ಸ್ಮಾರ್ಟ್​ಫೋನ್​ ಇಲ್ಲ. ಆನ್​ಲೈನ್​ ತರಗತಿ ಕೇಳಲು ಈ ಮಕ್ಕಳು ಪರದಾಡುತ್ತಿದ್ದಾರೆ. ಅವರ ಸಾಲಿಗೆ ಜೆಮ್​ಶೆಡ್​ಪುರದ ಬಾಲಕಿಯೂ ಸೇರ್ಪಡೆಯಾಗುತ್ತಾಳೆ. ಈ ಹುಡುಗಿ ಆನ್​ಲೈನ್​ ತರಗತಿ ಕೇಳಲು ಮೊಬೈಲ್​ ಖರೀದಿಗಾಗಿ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಿದ್ದಳು. ಈಕೆ ಮಾರಿದ 12 ಮಾವಿನ ಹಣ್ಣಿಗೆ ಬರೋಬ್ಬರಿ 1,20,000 ಹಣ ಸಿಕ್ಕಿದ್ದು, ಬಾಲಕಿ ಸ್ಮಾರ್ಟ್​ಫೋನ್​ ಖರೀದಿಸಿ ಖುಷಿಯಾಗಿದ್ದಾಳೆ. ಜೊತೆಗೆ ಆನ್​ಲೈನ್​ ತರಗತಿ ಕೇಳುತ್ತಿದ್ದಾಳೆ. ಕೇವಲ 12 ಮಾವಿನ ಹಣ್ಣಿಗೆ ಲಕ್ಷಗಟ್ಟಲೇ ದುಡ್ಡು ಕೊಟ್ಟು ಯಾರು ಖರೀದಿಸಿದರು ಯಾರು ಅಂತೀರಾ? ಮುಂಬೈನ ಖ್ಯಾತ ಉದ್ಯಮಿ ಅಮೆಯಾ ಹೆಟೆ ಬಾಲಕಿಯ ಬಳಿ 12 ಮಾವಿನ ಹಣ್ಣುಗಳನ್ನು ಖರೀದಿಸಿ 1,20,000 ರೂ.ಕೊಟ್ಟಿದ್ದಾರೆ.

ತುಳಸಿ ಕುಮಾರಿ ಎಂಬ 11 ವರ್ಷದ ಬಾಲಕಿ ತೀರಾ ಬಡ ಕುಟುಂಬದ ಹುಡುಗಿ. ಈಕೆಗೆ ಆನ್​ಲೈನ್​ ತರಗತಿಗಳು ನಡೆಯುತ್ತಿವೆ. ಆದರೆ ಕ್ಲಾಸ್ ಕೇಳಲು ಸ್ಮಾರ್ಟ್​ಫೋನ್ ಇರಲಿಲ್ಲ. ಹೀಗಾಗಿ ಬಾಲಕಿ ರಸ್ತೆ ಬದಿ ಮಾವಿನ ಹಣ್ಣುಗಳನ್ನು ಮಾರಿ ಹಣ ಸಂಪಾದನೆ ಮಾಡುತ್ತಿದ್ದಳು. ಬಾಲಕಿಯ ಸ್ಥಿತಿಯನ್ನರಿತ ಮುಂಬೈನ ಖ್ಯಾತ ಉದ್ಯಮಿ ಅಮೆಯಾ ಹೆಟೆ ಬಾಲಕಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆಕೆಯ ಬಳಿ ಹೋಗಿ, ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ. ನಂತೆ ಒಟ್ಟು 12 ಹಣ್ಣುಗಳನ್ನು 1,20,000 ರೂ.ಕೊಟ್ಟು ಖರೀದಿಸಿದ್ದಾರೆ. ಈ ಎಲ್ಲಾ ಹಣವನ್ನು ಬಾಲಕಿ ತಂದೆ ಶ್ರಿಮಲ್ ಕುಮಾರ್​​​ ಬ್ಯಾಂಕ್​ ಖಾತೆಗೆ ವರ್ಗಾಯಿಸಲಾಗಿದೆ. ಬಾಲಕಿ ಫೋನ್​ ಖರೀದಿಸಲು ಉದ್ಯಮಿ ಸಹಾಯ ಮಾಡಿದ್ದಾರೆ.

ಮಾವಿನ ಹಣ್ಣಿಗೆ ಲಕ್ಷಗಟ್ಟಲೇ ಹಣ ಕೊಟ್ಟಿದನ್ನು ನೋಡಿ ಬಾಲಕಿ ಶಾಕ್ ಆಗಿದ್ದಾಳೆ. ಜೊತೆಗೆ ಖುಷಿಯಾಗಿದ್ದಾಳೆ. 13 ಸಾವಿರ ರೂಪಾಯಿಯ ಸ್ಮಾರ್ಟ್​ ಫೋನ್​ ಜೊತೆಗೆ ವರ್ಷಪೂರ್ತಿ ಇಂಟರ್​ನೆಟ್​ ರೀಚಾರ್ಜ್​ ಪ್ಯಾಕ್​ ಮಾಡಿಸಿದ್ದಾರೆ. ಬಾಲಕಿಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಬಾರದಂತೆ ಸಹಾಯ ಮಾಡಿದ್ದಾರೆ.

ಜಾರ್ಖಂಡ್​​ನ ಸಣ್ಣ ಗ್ರಾಮದಲ್ಲಿರುವ ಬಾಲಕಿಯನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ನ್ಯೂಸ್ 18 ನೆಟ್​​ವರ್ಕ್​ ಉಪಕ್ರಮದಿಂದ ಸಾಧ್ಯವಾಯಿತು. ಸದ್ಯ ಕುಮಾರಿಗೆ ಸ್ಮಾರ್ಟ್​ ಫೋನ್ ಸಿಕ್ಕಿರುವುದು ಬಹಳ ಖುಷಿಯಾಗಿದೆ. ಜೊತೆಗೆ ಇನ್ಮುಂದೆ ಕಠಿಣ ಪರಿಶ್ರಮದಿಂದ ಓದುವುದಾಗಿ ಹೇಳಿದ್ದಾಳೆ. ತಮ್ಮ ಮಗಳ ಬಗ್ಗೆ ಪೋಷಕರು ಹೆಮ್ಮೆ ಪಡುತ್ತಿದ್ದಾರೆ.

ಕುಮಾರಿಗೆ ಓದುವ ಆಸೆ ಬಹಳ ಇದೆ ಎಂದು ಆಕೆಯ ತಂದೆ ಹೇಳಿದ್ದಾರೆ. ಕುಮಾರಿ ಮಾವಿನ ಹಣ್ಣು ಮಾರುವುದು ಆಕೆಯ ತಾಯಿಗೆ ಇಷ್ಟವಿರಲಿಲ್ಲ. ಕೊನೆಗೂ ಯಾವುದೇ ಕಡೆಯಿಂದ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಹಾಯ ದೊರೆತಿದೆ. ಇದರಿಂದ ಬಾಲಕಿಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಉಂಟಾಗಲ್ಲ.

Advertisement
Share this on...