ಬುಡಾಪೆಸ್ಟ್ (ಹಂಗೇರಿ): ಚಿತ್ರನಟರು ಮತ್ತು ಕ್ರೀಡಾ ತಾರೆಯರನ್ನು ಅಭಿಮಾನಿಗಳು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಾರೆ, ಅವರು ಮಾಡುವ ಕಾರ್ಯಗಳು (ಕೆಟ್ಟದ್ದು, ಒಳ್ಳೆಯದ್ದು ಎರಡೂ) ಅಭಿಮಾನಿಗಳ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಈ ಘಟನೆ ತಾಜಾ ಉದಾಹರಣೆ.
ಪ್ರಸಿದ್ಧ ಕ್ರಿಕೆಟ್ ಆಟಗಾರನೊಬ್ಬ ನೀರು ಕುಡಿದ ಕಾರಣಕ್ಕೆ ಕೋಕಾಕೋಲಾ ಕಂಪೆನಿಗೆ 2 ಬಿಲಿಯನ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ.
ಆಗಿದ್ದೇನೆಂದರೆ ಪೋರ್ಚುಗಲ್ ಹಾಗೂ ಹಂಗೇರಿ ನಡುವಿನ ಯೂರೊ ಕಪ್ ಫುಟ್‌ಬಾಲ್ ಪಂದ್ಯವು ಹಂಗೇರಿಯಲ್ಲಿ ನಡೆಯುತ್ತಿದೆ. ಫುಟ್‌ಬಾಲ್‌ನ ವಿಶ್ವಖ್ಯಾತಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಆ ಸಮಯದಲ್ಲಿ ಟೇಬಲ್‌ನಲ್ಲಿ ಕೊಕಾಕೊಲಾ ಬಾಟಲ್‌ಗಳನ್ನು ಜೋಡಿಸಿಡಲಾಗಿತ್ತು. ಆಗ ರೊನಾಲ್ಡ್ ಅವರು ಬಾಯಾರಿಕೆಯಾದಾಗ ಕೊಕಾಕೊಲಾ ಬಾಟಲಿಯನ್ನು ಬದಿಗಟ್ಟು ನೀರಿನ ಬಾಟಲನ್ನು ಕೈಯಲ್ಲಿ ಹಿಡಿದುಕೊಂಡು ನೀರು ಕುಡಿಯಿರಿ ಎಂದು ಹೇಳಿದರು ಅಷ್ಟೇ…
ಇಲ್ಲಿ ಇಷ್ಟು ಆಗುತ್ತಿದ್ದಂತೆಯೇ ಕೋಕಾಕೋಲಾ ಕಂಪೆನಿಯ ಶೇರು ಮಾರುಕಟ್ಟೆ ದಿಢೀರ್ ಕುಸಿದು ಹೋಗಿದೆ. ಒಂದಲ್ಲ… ಎರಡಲ್ಲ ಬರೋಬ್ಬರಿ 2 ಬಿಲಿಯನ್ ಡಾಲರ್ ನಷ್ಟ ಕಂಪೆನಿಗೆ ಆಗಿದೆ! ವಿಚಿತ್ರ ಎನಿಸಿದರೂ ಇದು ಸತ್ಯ. ಏಕೆಂದರೆ ಜನರನ್ನು ಮರಳು ಮಾಡಲು ಹಲವು ಕಂಪೆನಿಗಳು ಕ್ರೀಡಾ ತಾರೆಯರು, ಸಿನಿಮಾ ನಟ- ನಟಿಯರನ್ನು ಬಳಸುವುದು ಹೊಸತೇನಲ್ಲ. ಕೊಕಾಕೊಲಾ ಯೂರೊ ಕಪ್‌ನ ಅಧಿಕೃತ ಪ್ರಾಯೋಜಕರಲ್ಲೊಂದಾಗಿತ್ತು. ಅದರಿಂದಲೇ ಅದನ್ನು ಅಲ್ಲಿ ಇಡಲಾಗಿತ್ತು.
ಈಗ ಕಂಪೆನಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತುಕ್ರಮ ತೆಗೆದು ಕೊಳ್ಳಲು ಮುಂದಾಗಿದ್ದಾರೆ!
ಇಲ್ಲಿದೆ ನೋಡಿ ವಿಡಿಯೋ:
Do NOT put Coca Cola in front of Cristiano Ronaldo 😠
This is absolutely brilliant 🤣 pic.twitter.com/bw9FYlTOI4
— Goal (@goal) June 15, 2021
ಕ್ರಿಸ್ಟಿಯಾನೋ ರೋನಾಲ್ಡೋ ರವರ ಈ ನಡೆಗೆ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದು ಕೋಕೋ ಕೋಲಾ, ಪೆಪ್ಸಿ, ಮೌಂಟೆನ್ ಡ್ಯೂ ನಂತಹ ಪಾನೀಯಗಳಿಂದ ಆರೋಗ್ಯಕ್ಕೆ ಹಾ ನಿ ಯೇ ಹೊರತು ಅವುಗಳಿಂದ ಒಳಿತಂತೂ ಇಲ್ಲ ಎನ್ನುತ್ತಿದ್ದಾರೆ.
ಬನ್ನಿ ಹಾಗಿದ್ದರೆ Pepsi, Mountain Dew ಬಗ್ಗೆ ಸ್ವತಃ ಆ ಕಂಪೆನಿಯೇ ನ್ಯಾಯಾಲಯದಲ್ಲಿ ಏನು ಹೇಳಿತ್ತು? ಅದನ್ನ ಸೇವಿಸದರೆ ಏನಾಗುತ್ತೆ ಅನ್ನೋದನ್ನ ಕಂಪೆನಿ ಹೇಳಿದ್ದೇನು ಅನ್ನೋ ಆ ತಂ ಕ ಕಾರಿ ವಿಷಯವನ್ನೂ ಒಮ್ಮೆ ಓದಿ ತಿಳಿದುಕೊಳ್ಳಿ
ಕೇಂದ್ರ ಸರ್ಕಾರ ನಡೆಸಿದ ತನಿಖೆಯಲ್ಲಿ, ಅನೇಕ ಕಂಪನಿಗಳು ತಂಪು ಪಾನೀಯಗಳಲ್ಲಿ ಅ-ಪಾ-ಯ-ಕಾ-ರಿ ಅಂಶಗಳಿವೆ ಎಂಬ ವರದಿಗಳು ಬಂದಿವೆ. ಆ‌್ಯಂಟಿಮೋನಿ, ಲೀಡ್ (ಸೀಸ), ಕ್ರೋಮಿಯಂ, ಕ್ಯಾಡ್ಮಿಯಮ್ ಮತ್ತು ಕಾಂಪೌಂಡ್ ಡಿಹೆಚ್‌ಪಿ ಮುಂತಾದ ವಿಷಕಾರಿ ಪದಾರ್ಥಗಳು ಪೆಪ್ಸಿಕೋ ಮತ್ತು ಕೋಕಾ-ಕೋಲಾದಂತಹ ಕಂಪನಿಗಳ ಕೋಲ್ಡ್ ಡ್ರಿಂಕ್ ಗಳಲ್ಲಿ ಕಂಡುಬಂದಿವೆ. ಆರೋಗ್ಯ ಸಚಿವಾಲಯದ ಡ್ರ-ಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (ಡಿಟಿಎಬಿ) ತನಿಖೆಯಲ್ಲಿ ಪೆಪ್ಸಿ, ಕೋಕಾ-ಕೋಲಾ, ಮೌಂಟೇನ್ ಡ್ಯೂ, ಸ್ಪ್ರೈಟ್ ಮತ್ತು 7UP ಕೋಲ್ಡ್ರಿಂಕ್‌ಗಳ ಮಾದರಿಗಳನ್ನು ಒಳಗೊಂಡಿತ್ತು.
7UP ಮತ್ತು ಮೌಂಟೇನ್ ಡ್ಯೂ ಪೆಪ್ಸಿಕೋ ಉತ್ಪನ್ನಗಳಾದರೆ, ಸ್ಪ್ರೈಟ್ ಕೋಕಾ-ಕೋಲಾ ಕಂಪನಿಯ ಡ್ರಿಂಕ್ ಆಗಿದೆ. ಈ ವರದಿಯ ನಂತರ, ಮನುಷ್ಯರಿಗೆ ಈ ತಂಪು ಪಾನೀಯಗಳು ಸುರಕ್ಷಿತವೇ? ಎಂಬ ಪ್ರಶ್ನೆಗಳು ಉದ್ಭವಿಸಿದ್ದರೂ, ಕಾರ್ಪೊರೇಟ್ ಕಂಪೆನಿಗಳು ಕೆಮಿಕಲ್ ಬಳಸಿ ಜನರ ಪ್ರಾ-ಣ-ದ ಜೊತೆ ಆಟವಾಡುತ್ತಿವೆ. ಆ-ಘಾ-ತ-ಕಾ-ರಿ ಸಂಗತಿಯೆಂದರೆ, ಕೋಲ್ಡ್ ಡ್ರಿಂಕ್ ತಯಾರಕರಾದ ಪೆಪ್ಸಿಕೋ ತನ್ನ ಉತ್ಪನ್ನ ‘ಮೌಂಟೇನ್ ಡ್ಯೂ ನಲ್ಲಿ ಇ-ಲಿಯನ್ನು ಮುಳುಗಿಸಿಟ್ಟರೆ ಅದು 30 ದಿನಗಳಲ್ಲಿ ಕರಗಿಬಿಡುತ್ತದೆ ಎಂದು ನ್ಯಾಯಾಲಯದಲ್ಲಿ ಸ್ವತಃ ತಾನೇ ಹೇಳಿಕೆಯನ್ನ ನೀಡಿದೆ.
ಈ ಪ್ರಕರಣ 2009 ದ್ದಾಗಿದೆ. ಆಗ ಅಮೆರಿಕಾದ ಮ್ಯಾಡಿಸನ್ ಕೌಂಟಿ ನಿವಾಸಿಯಾದ ರೊನಾಲ್ಡ್ ಬಾಲ್ ಅವರು ಆಫೀಸಿನಿಂದ ಮೌಂಟೇನ್ ಡ್ಯೂನ ಕ್ಯಾನ್‌ನ ಖರೀದಿಸಿದ್ದರು ಹಾಗು ಅದರ ರುಚಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದ್ದರು. ಅವರು ಆ ಮೌಂಟೇನ್ ಡ್ಯೂ ಕುಡಿದಾಗ ಅವರು ಅ-ನಾ-ರೋ-ಗ್ಯ-ಕ್ಕೆ ಒಳಗಾಗಿದ್ದರು ಮತ್ತು ಅವರು ತಕ್ಷಣ ವಾಂ-ತಿ ಮಾಡಲು ಪ್ರಾರಂಭಿಸಿದರು ಎಂದು ಅವರು ನ್ಯಾಯಾಲಯದಲ್ಲಿ ಹೇಳಿದ್ದರು. “ಮೌಂಟನ್ ಡ್ಯೂನ ಕ್ಯಾನ್ ನಿಂದ ಪಾನೀಯವನ್ನ ಕಪ್ ಗೆ ಹಾಕಿದಾಗ ಅದರಲ್ಲಿ ಸ-ತ್ತ ಇ-ಲಿ-ಯೊಂದು ಕಂಡುಬಂದಿತು” ಎಂದು ಬಾಲ್ ಆರೋಪಿಸಿದ್ದರು. ಬಾಲ್ ಪೆಪ್ಸಿಕೋಗೆ ಇಲಿಯ ವಾಸನೆಯಿರುವ ಕೋಲ್ಡ್ ಡ್ರಿಂಕ್ ಮಾದರಿಯನ್ನ ತಮ್ಮ ಪತ್ರದೊಂದಿಗೆ ಕಳುಹಿಸಿದರು. ಅವರು ಹೇಳುವ ಪ್ರಕಾರ ಕೋಲ್ಡ್ ಡ್ರಿಂಕ್ ನಲ್ಲಿ ಇಲಿಯ ದೇ-ಹ ಸಂಪೂರ್ಣವಾಗಿ ಸು-ಟ್ಟು ಹೋಗಿತ್ತು ಎಂದು ಹೇಳಿದ್ದರು.
ಆದರೆ ಪೆಪ್ಸಿಕೋ ಕಂಪೆನಿ ಬಾಲ್ ರವರ ಆ-ರೋ-ಪ-ಗಳನ್ನ ಸಾರಾಸಗಟಾಗಿ ತಿರಸ್ಕರಿಸಿತು ಹಾಗು ತಮ್ಮ ಕಂಪೆನಿಯ ವಿ-ರು-ದ್ಧ ದಾಖಲಾದ ಮೊಕದ್ದಮೆಯನ್ನ ರ-ದ್ದು-ಗೊಳಿಸಿವಂತೆ ಒಂದು ಅಫಿಡೆವಿಟ್ ಹಾಕಿತು. ಇದರಲ್ಲಿ ಕಂಪೆನಿಯು, “ಬಾಲ್ ಅದನ್ನ ತಂದು ಎಷ್ಟು ದಿನಗಳವರೆಗಿಟ್ಟು ಅದನ್ನ ಕುಡಿಯೋಕೆ ಪ್ರಯತ್ನಿಸಿದ್ದರೋ ಅಷ್ಟು ದಿನಗಳೊಳಗೆ ಆ ಇ-ಲಿ ಪಾನೀಯದಲ್ಲಿ ಕರಗಿಹೋಗಿರುತ್ತದೆ” ಎಂದು ಹೇಳಿತ್ತು.
ವೆಟೆರಿಯನ್ ಲಾರೆನ್ಸ್ ಮ್ಯಾಕ್‌ಗಿಲ್ ರವರು ಹೇಳುವ ಪ್ರಕಾರ “ಏಪ್ರಿಲ್ 2008 ರಲ್ಲಿ ಕ್ಯಾನ್‌ನ್ನ ಸೀಲ್ ಮಾಡಿ ಕಳಿಸಿದ್ದರು, ಆಗಿನಿಂದ ಒಂದು ವೇಳೆ ಅದರಲ್ಲಿ ನಿಜವಾಗಿಯೂ ಇ-ಲಿ ಬಿ-ದ್ದಿ-ದ್ದರೆ ಅದು 30 ದಿನಗಳ ಬಳಿಕ ಅದು ಕರಗಿಹೋಗಿರುತ್ತಿತ್ತು” ಎಂದಿದ್ದರು. ಅವರ ಮಾತಿನ ಅರ್ಥವೇನೆಂದರೆ “ನಾನು ಆ್ಯ-ಸಿ-ಡ್ ದ್ರವ್ಯದ ಪ್ರಭಾವವನ್ನಅರಿತಿದ್ದೇನೆ. ಮೌಂಟೆನ್ ಡ್ಯೂ ನಂತಹ ಸೋಡಾ ಡ್ರಿಂಕ್ಸ್ ನಲ್ಲಿ ಇದು ಸರ್ವೇ ಸಾಮಾನ್ಯ ವಿಷಯವಾಗಿದೆ. ಇದರಿಂದ ಇ-ಲಿ ಹಾಗು ಇತರ ಪ್ರಾಣಿಗಳ ಮೇಲೂ ಪ್ರಭಾವ ಬೀರುತ್ತದೆ”
ಅವರು ನ್ಯಾಯಾಲಯದಲ್ಲಿ ಮಾತನಾಡುತ್ತ, “ಒಂದು ವೇಳೆ ಇ-ಲಿ-ಯನ್ನ ಮೌಂಟೆನ್ ಡ್ಯೂ ನಲ್ಲಿ ನಾಲ್ಕರಿಂದ ಆರು ದಿನಗಳ ಕಾಲ ಮುಳುಗಿಸಿಟ್ಟರೆ ಅದರ ಎಲುಬುಗಳಲ್ಲಿನ ಕ್ಯಾಲ್ಶಿಯಂ ಉಳಿಯೋದೇ ಇಲ್ಲ” ಎಂದಿದ್ದರು. ಮ್ಯಾಕ್‌ಗಿಲ್ ಹೇಳುವ ಅರ್ಥವೇನೆಂದರೆ ಇ-ಲಿ-ಯ ಇಡೀ ಶ ರೀ ರ ಕರಗಿ ಕೇವಲ ಬಾಲ ಮಾತ್ರ ಉಳಿಯುತ್ತೆ ಎಂಬುದಾಗಿದೆ
ನ್ಯಾಯಾಲಯದಲ್ಲಿ ಕಂಪನಿಯು ಮಾತನಾಡುತ್ತ “ಬಾಲ್ ಯಾವ ಮೌಂಟೆನ್ ಡ್ಯೂ ಕ್ಯಾನ್ ಓಪನ್ ಮಾಡಿದ್ದರೋ ಅದನ್ನ 74 ದಿನಗಳ ಹಿಂದೆ ಸೆಂಟ್ ಲೂಯಿಸ್ ನಲ್ಲಿ ಪ್ಯಾಕ್ ಮಾಡಲಾಗಿತ್ತು. ಬಾಲ್ ಆ ಕ್ಯಾನ್ ನಲ್ಲಿ ಇ-ಲಿ-ಯಿತ್ತು ಅಂತ ಹೇಳಿದ್ದಾರೆ ಆದರೆ ಅದಕ್ಕೆ ಸಾಕ್ಷಿ ಕೊಟ್ಟಿಲ್ಲ” ಎಂದು ಹೇಳಿತ್ತು. ಬಾಲ್ ತನಗೆ 50,000 ಡಾಲರ್ ಪರಿಹಾರ ಕೊಡಬೇಕೆಂಬ ದಾ ವೆ ಹೂಡಿದ್ದರು ಆದರೆ ಪೆಪ್ಸಿಕೋ ಬಾಲ್ ಆ ರೋ ಪ ಸುಳ್ಳೆಂದು ಸಾಬೀತು ಮಾಡಿತ್ತು. ಇದರರ್ಥ ಪೆಪ್ಸಿಕೋ ಕಂಪೆನಿಯ ಯಾವುದೇ ಕೋಲ್ಡ್ ಡ್ರಿಂಕ್ಸ್ ನಲ್ಲಿ ಇ-ಲಿ ಬಿದ್ದರೂ ಅದು 30 ದಿನಗಳೊಳಗಾಗಿ ಕರಗಿ ಹೋಗುತ್ತೆ ಅನ್ನೋದನ್ನ ಪರೋಕ್ಷವಾಗಿ ಕಂಪೆನಿ ತಾನೇ ಖುದ್ದು ನ್ಯಾಯಾಲಯದಲ್ಲಿ ಹೇಳಿತ್ತು. ಈಗ ನೀವು ಈ ಕೋಲ್ಡ್ ಡ್ರಿಂಕ್ಸ್ ಗಳನ್ನ ಕುಡಿದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗಬಹುದು ಅನ್ನೋದನ್ನ ಯೋಚಿಸಿ.