ಕನ್ಹಯ್ಯಲಾಲ್ ಹ-ತ್ಯೆಯಾಗಿ 4 ದಿನಗಳೂ ಕಳೆದಿಲ್ಲ ಅದೇ ರಾಜಸ್ಥಾನದಲ್ಲಿ ಜಿಹಾದಿಗಳಿಂದ ಮತ್ತೊಬ್ಬ ಹಿಂದೂ ಯುವಕನ ಮೇಲೆ ಮಾರಾಣಾಂತಿಕ ದಾಳಿ: ತಾಲಿಬಾನ್ ಆಗುವತ್ತ ರಾಜಸ್ಥಾನ

in Uncategorized 171 views

ಪಂಕಜ್ ಎಂಬ ಹಿಂದೂ ಯುವಕನಿಗೆ ಚಾ-ಕು-ವಿನಿಂದ ಇ-ರಿದ ನಾಲ್ವರು ಆರೋಪಿಗಳನ್ನು ರಾಜಸ್ಥಾನದ ರಾಜಸಮಂದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೆಸರು ಯಮೀನ್, ವಾಸಿಂ, ವಾಸಿಂ ಪಠಾಣ್ ಮತ್ತು ಸೊಹೈಲ್ ಖಾನ್ ಎಂದು ಹೇಳಲಾಗುತ್ತಿದೆ. ಸಣ್ಣ ಜಗಳದ ನಂತರ ಈ ನಾಲ್ವರು ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಪಂಕಜ್ ಮೇಲೆ ಚಾ-ಕು-ವಿನಿಂದ ಮಾರಣಾಂತಿಕ ಹ-ಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜುಲೈ 1, 2022 ರಂದು (ಶುಕ್ರವಾರ) ಪೊಲೀಸರು ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಘಟನೆ ರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಸಂತ್ರಸ್ತ ಪಂಕಜ್ ಮಾಧ್ಯಮಗಳೊಂದಿಗೆ ಮಾತನಾಡುತ್ತ, “ನನ್ನ ಸ್ನೇಹಿತ ಪಿಪ್ರದಾ ಮತ್ತು ನಾನು ಹೋಟೆಲ್‌ಗೆ ದಾಲ್ ಬಾಟಿ ತಿನ್ನಲು ಹೋಗಿದ್ದೆವು. ನಾವು ಅಲ್ಲಿ ನಿಂತಿದ್ದಾಗಲೇ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದರು. ಅವನರು ನನ್ನ ಸ್ನೇಹಿತನೊಂದಿಗೆ ಜಗಳವಾಡಲು ಪ್ರಾರಂಭಿಸಿದಾಗ, ನಾವು ಅವರನ್ನು ತಡೆದೆವು. ನಾನು ಜಗಳವಾಡುವುದನ್ನು ನಿಲ್ಲಿಸಲು ಮುಂದಾದಾಗ ಅವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯಲಾರಂಭಿಸಿದರು. ಇದರಿಂದಾಗಿ ನಾವೂ ವಾಗ್ವಾದಕ್ಕೆ ಇಳಿದಿದೆವು. ಸ್ವಲ್ಪ ಸಮಯದ ನಂತರ ಇಬ್ಬರೂ ಹೊರಟುಹೋದರು”

ಸಂತ್ರಸ್ತ ಪಂಕಜ್ ಮುಂದೆ ಮಾತನಾಡುತ್ತ, “ಘಟನೆಯ ನಂತರ ನಾವೂ ಬೇರೆ ಹೋಟೆಲ್‌ಗೆ ಹೋದೆವು. 10-15 ನಿಮಿಷಗಳ ನಂತರ ಇಬ್ಬರೂ ಇನ್ನೂ ಇಬ್ಬರನ್ನ ಕರೆತಂದರು. ನಾಲ್ವರ ಪೈಕಿ ಮೂವರ ಬಳಿ ಚಾಕುಗಳಿದ್ದವು. ಅವರು ನನ್ನ ಮೇಲೆ ದಾ-ಳಿ ಮಾಡಿದರು. ಈ ವೇಳೆ ನನಗೆ ಗಾಯವಾಯಿತು. ನಂತರ ಅವರೆಲ್ಲರೂ ಓಡಿಹೋದರು” ಎಂದಿದ್ದಾರೆ. ಸಂತ್ರಸ್ತ ಪಂಕಜ್ ಅವರ ತಲೆ ಮತ್ತು ಕೈಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಉದಯಪುರಕ್ಕೆ ಕರೆದೊಯ್ಯಲಾಗಿದೆ. ಚಿಕಿತ್ಸೆ ವೇಳೆ ಪಂಕಜ್‌ಗೆ 20ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ.

ರಾಜಸ್ಥಾನ ಪೊಲೀಸರ ಪ್ರಕಾರ, ಘಟನೆಯು ಜೂನ್ 26, 2022 ರಂದು ರಾತ್ರಿ ಸುಮಾರು 10:30 ಕ್ಕೆ ನಡೆದಿದ್ದು, ಮರುದಿನ ಜೂನ್ 27 ರಂದು ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಸಂತ್ರಸ್ತ ಪಂಕಜ್ ವಯಸ್ಸು 27 ವರ್ಷವಾಗಿದೆ. ಘಟನೆಯ ಸಂದರ್ಭದಲ್ಲಿ ಕೈಲಾಶ್ ಎಂಬ ಇನ್ನೊಬ್ಬ ಸ್ನೇಹಿತ ಕೂಡ ಸಂತ್ರಸ್ತನ ಜೊತೆಗಿದ್ದ. ಬೈಕ್‌ನಲ್ಲಿ ಬಂದ ಇಬ್ಬರು ಹುಡುಗರು ಊಟದ ವಿಚಾರವಾಗಿ ಹೋಟೆಲ್ ಮಾಲೀಕರೊಂದಿಗೆ ಜಗಳ ಮಾಡಿಕೊಂಡಿದ್ದರಿಂದ ಘಟನೆ ಶುರುವಾಗಿದೆ. ಈ ವೇಳೆ ಜಗಳವಾಡುತ್ತಿದ್ದವರನ್ನು ಪಂಕಜ್ ಮತ್ತು ಆತನ ಸಂಗಡಿಗರು ಬೇರ್ಪಡಿಸಿದ್ದಾರೆ. ನಂತರ ದಾ-ಳಿ-ಕೋರರು ಮತ್ತಿಬ್ಬರ ಜೊತೆ ಬಂದು ಪಂಕಜ್‌ನ್ನ ಹಿಗ್ಗಾಮುಗ್ಗಾ ಥಳಿಸಿ, ಚಾ-ಕು-ಗಳಿಂದ ಹ-ಲ್ಲೆ ನಡೆಸಿದರು. ಪಂಕಜ್ ಅವರ ತಲೆ, ಬೆನ್ನು, ತೋಳುಗಳು, ಭುಜಗಳು ಮತ್ತು ಬದಿಗಳಲ್ಲಿ ಗಂಭೀರವಾದ ಗಾಯಗಳಾಗಿವೆ.

ಪೊಲೀಸ್ ಪ್ರೆಸ್ ನೋಟ್ ಪ್ರಕಾರ, ಗಾಯಗೊಂಡ ಪಂಕಜ್‌ನ ಕೂಗಾಟದ ಮೇರೆಗೆ ನೆರೆಹೊರೆಯವರು ಜಮಾಯಿಸಿದಾಗ ನಾಲ್ವರು ದಾಳಿಕೋರರು ಓಡಿಹೋದರು. ನಂತರ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ಭಿಲ್ವಾರಾ ಮತ್ತು ಉದಯಪುರದಲ್ಲಿ ದಾ-ಳಿ ನಡೆಸಿದರು. ಅಂತಿಮವಾಗಿ 25 ವರ್ಷದ ಯಾಸಿನ್, 20 ವರ್ಷದ ವಾಸಿಂ, 20 ವರ್ಷದ ವಾಸಿಂ ಪಠಾಣ್ ಮತ್ತು 20 ವರ್ಷದ ಸೊಹೈಲ್ ಎಂಬ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರೂ ಆರೋಪಿಗಳು ಗೂಂಡಾಗಳಾಗಿದ್ದಾರೆ. ಪಂಕಜ್ ಮೇಲೆ ಚಾ-ಕು-ವಿನಿಂದ ಹ-ಲ್ಲೆ ನಡೆಸಿದ್ದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ಹಯ್ಯನಂತೆಯೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಹಿಂದೂವಿನ ಹ-ತ್ಯೆ

ನೂಪುರ್ ಶರ್ಮಾ ಅವರನ್ನ ಬೆಂಬಲಿಸಿದ್ದಕ್ಕಾಗಿ, ರಾಜಸ್ಥಾನದ ಉದಯಪುರದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ಕನ್ಹಯ್ಯಲಾಲ್ ಪ್ರಾಣ ಕಳೆದುಕೊಂಡಿದ್ದರು. ಈಗ ಇದೇ ಕಾರಣಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲೂ ಹಿಂದೂ ಹ-ತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮೃತರ ಹೆಸರು ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಆಗಿದೆ. ಕೋಲ್ಹೆ ಅವರು ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಜೂನ್ 21 ರಂದು ಅವರನ್ನ ಜಿಹಾದಿಗಳಿಂದ ಹ-ತ್ಯೆ ಮಾಡಲಾಗಿತ್ತು. ಉಮೇಶ್ ಕೋಲ್ಹೆ ಅವರಿಗೆ 54 ವರ್ಷ ವಯಸ್ಸಾಗಿತ್ತು. ಉಮೇಶ್ ಅವರ ಪುತ್ರ ಸಂಕೇತ್ ನೀಡಿದ ದೂರಿನ ಮೇರೆಗೆ ಅಮರಾವತಿ ಕೊತ್ವಾಲಿ ಪೊಲೀಸರು ಮುದಸ್ಸಿರ್ ಅಹ್ಮದ್ ಮತ್ತು ಶಾರುಖ್ ಪಠಾಣ್ ಎಂಬಾತರನ್ನ ಜೂನ್ 23 ರಂದು ಬಂಧಿಸಿದ್ದರು. ವಿಚಾರಣೆಯ ನಂತರ, ಅಬ್ದುಲ್ ತೌಫಿಕ್, ಶೋಯೆಬ್ ಖಾನ್ ಮತ್ತು ಅತಿಬ್ ರಶೀದ್ ಎಂಬಾತರನ್ನ ಜೂನ್ 25 ರಂದು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಶಮೀಮ್ ಅಹ್ಮದ್ ಅಲಿಯಾಸ್ ಫಿರೋಜ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ನ್ಯೂಸ್ 18 ಪ್ರಕಾರ, ಈಗ NIA ಈ ಪ್ರಕರಣದ ಬಗ್ಗೆಯೂ ತನಿಖೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಪೊಲೀಸರ ತನಿಖೆಯ ವೇಳೆ ಉಮೇಶ್ ಕೊಲ್ಹೆ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ ಅನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಫಾರ್ವರ್ಡ್ ಮಾಡಿದ್ದರು ಎಂದು ಆಂಗ್ಲ ಪತ್ರಿಕೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮೂಲಗಳನ್ನು ಉಲ್ಲೇಖಿಸಿದೆ. ಅವರು ಆಕಸ್ಮಿಕವಾಗಿ ಆ ಪೋಸ್ಟ್ ಅನ್ನು ಮುಸ್ಲಿಮರ ಗ್ರೂಪ್ ನಲ್ಲಿ ಶೇರ್ ಮಾಡಿದ್ದರು. ಉಮೇಶ್ ತನ್ನ ಗ್ರಾಹಕರಿಂದಾಗಿ ಆ ಗ್ರೂಪ್ ನಲ್ಲಿ ಸೇರಿಕೊಂಡಿದ್ದರು. ಪತ್ರಿಕೆಯ ಪ್ರಕಾರ, ಪ್ರವಾದಿಯನ್ನು ಅವಮಾನಿಸಿದ ಕಾರಣಕ್ಕಾಗಿ ಉಮೇಶ್ ಸಾಯಲೇಬೇಕಿತ್ತು ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬಾತ ಪೊಲೀಸರಿಗೆ ತಿಳಿಸಿದ್ದಾನೆ. ಜೂನ್ 21ರ ರಾತ್ರಿ ಉಮೇಶ್ ತನ್ನ ಮೆಡಿಕಲ್ ಸ್ಟೋರ್ ಮುಚ್ಚಲು ಹೋಗುತ್ತಿದ್ದರು, ಮತ್ತೊಂದು ಸ್ಕೂಟರ್‌ನಲ್ಲಿ ಸಂಕೇತ್ ಮತ್ತು ಅವರ ಪತ್ನಿ ವೈಷ್ಣವಿ ಇದ್ದರು. ತಂದೆಯ ಬೈಕ್ ಪ್ರಭಾತ್ ಚೌಕ್ ಮೂಲಕ ಮಹಿಳಾ ಕಾಲೇಜು ನ್ಯೂ ಹೈಸ್ಕೂಲ್ ಗೇಟ್ ತಲುಪಿದಾಗ, ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ತಮ್ಮ ತಂದೆಯನ್ನು ಮುಂದಿನಿಂದ ಸುತ್ತುವರೆದರು ಎಂದು ಉಮೇಶ್ ಪುತ್ರ ಸಂಕೇತ್ ಪೊಲೀಸರಿಗೆ ತಿಳಿಸಿದ್ದಾರೆ.

ಸಂಕೇತ್ ಹೇಳುವ ಪ್ರಕಾರ ತಮ್ಮ ತಂದೆ ಉಮೇಶ್ ಕೋಲ್ಹೆ ಅವರ ಕುತ್ತಿಗೆಗೆ ಎಡಭಾಗದಲ್ಲಿ ಆರೋಪಿಗಳು ಇರಿದಿದ್ದಾನೆ. ಇದರಿಂದ ಅವರು ಬಿದ್ದು ರಕ್ತಸ್ರಾವವಾಗತೊಡಗಿತು. ಅವರು ಸಹಾಯಕ್ಕಾಗಿ ಮನವಿ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಮೂರನೇ ವ್ಯಕ್ತಿ ಬಂದಿದ್ದು, ಮೂವರೂ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಜನರ ನೆರವಿನಿಂದ ಉಮೇಶ್ ಕೋಲ್ಹೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸಂಕೇತ್ ಪೊಲೀಸರಿಗೆ ತಿಳಿಸಿದ್ದಾರೆ. ಬಂಧಿತರು ಮತ್ತೊಬ್ಬರಿಂದ ಸಹಾಯ ಪಡೆದಿರುವುದು ಅಂದರೆ 10,000 ಹಣ ಸಹಾಯ ಮತ್ತು ಕಾರಿನೊಂದಿಗೆ ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಅಮರಾವತಿ ಪೊಲೀಸರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Advertisement
Share this on...