ಕನ್ಹಯ್ಯಲಾಲ್ ಹ-ತ್ಯೆಯ ಬಗ್ಗೆ ಕೆಂಡಾಮಂಡಲರಾಗಿ ಮುಸ್ಲಿಮರ ಬಗ್ಗೆ ಇಡೀ ಹಿಂದೂ ಸಮಾಜಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ನೂಪುರ್ ಶರ್ಮಾ ಬೆಂಬಲಕ್ಕೆ ನಿಂತಿದ್ದ ಡಚ್ ಸಂಸದ ಗೀರ್ಟ್ ವಿಲ್ಡರ್ಸ್

in Uncategorized 181 views

ಆಂಸ್ಟರ್‌ಡ್ಯಾಮ್: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಹ-ತ್ಯೆ-ಯ ಪ್ರತಿಧ್ವನಿ ಇದೀಗ ವಿದೇಶಕ್ಕೂ ತಲುಪಿದೆ. ಈ ಘಟನೆಯನ್ನು ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲೂ ಕೂಡ ಖಂಡಿಸಲಾಗುತ್ತಿದೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಭಾರತದಲ್ಲಿ ಸುದ್ದಿಯಾಗಿದ್ದ ನೆದರ್ಲ್ಯಾಂಡ್ಸ್ ಸಂಸದ ಗಿರ್ಟ್ ವೈಲ್ಡರ್ಸ್ ಕನ್ಹಯ್ಯ ಹ-ತ್ಯೆ-ಯ ಘಟನೆಯ ವಿರುದ್ಧ ಮತ್ತೊಮ್ಮೆ ತಮ್ಮ ಧ್ವನಿ ಎತ್ತಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಮೂಲಭೂತವಾದ, ಭ-ಯೋ-ತ್ಪಾ-ದನೆ ಮತ್ತು ಜಿಹಾದಿಗಳಿಂದ ಹಿಂದುತ್ವವನ್ನು ಉಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಇಸ್ಲಾಮಿಕ್ ತುಷ್ಟೀಕರಣ ಮಾಡದಿರಿ

ಕನ್ಹಯ್ಯ ಕೊ-ಲೆ-ಯಾದ ಬೆನ್ನಲ್ಲೇ ನೆದರ್ಲೆಂಡ್ಸ್ ಸಂಸದ ಗಿರ್ಟ್ ವೈಲ್ಡರ್ಸ್ ಸರಣಿ ಟ್ವೀಟ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್‌ನಲ್ಲಿ, “ಭಾರತ, ನಾನು ನಿಮಗೆ ಸ್ನೇಹಿತನಾಗಿ ಹೇಳುತ್ತಿದ್ದೇನೆ, ಅಸಹಿಷ್ಣುತೆಯನ್ನು ಸಹಿಸಿಕೊಳ್ಳುವುದನ್ನು ನಿಲ್ಲಿಸಿ. ಜಿಹಾದಿಗಳು, ಭ-ಯೋ-ತ್ಪಾ-ದಕರು ಮತ್ತು ಮೂಲಭೂತವಾದಿಗಳಿಂದ ಹಿಂದುತ್ವವನ್ನು ರಕ್ಷಿಸಿ. ಇಸ್ಲಾಂ ಧರ್ಮವನ್ನು ತುಷ್ಟೀಕರಣ ಮಾಡಬೇಡಿ, ಇಲ್ಲದಿದ್ದರೆ ನೀವು ಅದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ” ಎಂದಿದ್ದಾರೆ.

Advertisement

ನೂಪುರ್ ಶರ್ಮಾ ಬೆಂಬಲಿಸುವಂತೆ ಮನವಿ

ಈ ಘಟನೆಗೆ ಸಂಬಂಧಿಸಿದಂತೆ ಒಂದರ ಹಿಂದೊಂದರಂತೆ ಹಲವಾರು ಟ್ವೀಟ್‌ಗಳನ್ನು ಮಾಡಿದ ಅವರು, “ಈ ಹ-ತ್ಯೆ-ಗೆ ಪ್ರತಿಕ್ರಿಯೆಯಾಗಿ, ನಾವೆಲ್ಲರೂ ಒಟ್ಟಾಗಿ ನಿಂತು ನೂಪುರ್ ಶರ್ಮಾ ಅವರನ್ನು ಬೆಂಬಲಿಸಬೇಕು, ಏಕೆಂದರೆ ಅವರು ನಮ್ಮೆಲ್ಲರನ್ನೂ ಕೊ-ಲ್ಲ-ಲು ಸಾಧ್ಯವಿಲ್ಲ. ಹಿಂದೂಗಳಿಗೆ 100 ಪ್ರತಿಶತದಷ್ಟು ರಕ್ಷಣೆ ನೀಡುವ ನಾಯಕನ ಅವಶ್ಯಕತೆಯಿದೆ” ಎಂದು ಹೇಳಿದರು. ಗಿರ್ಟ್ ವೈಲ್ಡರ್ಸ್ ಮುಂದಿನ ಟ್ವೀಟ್ ನಲ್ಲಿ, “ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿರಬೇಕು. ಅದು ಅವರ ದೇಶ, ಅವರ ಮಾತೃಭೂಮಿ, ಅದು ಅವರದು! ಭಾರತ ಇಸ್ಲಾಮಿಕ್ ರಾಷ್ಟ್ರವಲ್ಲ” ಎಂದು ಬರೆದಿದ್ದಾರೆ. ಗಿರ್ಟ್ ಈ ಹಿಂದೆಯೂ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದರು. ಈ ಹಿಂದೆ ಅವರು “ತುಷ್ಟೀಕರಣ ಎಂದಿಗೂ ಕೆಲಸ ಮಾಡುವುದಿಲ್ಲ. ಇದು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ” ಎಂದು ಹೇಳಿದ್ದರು.

ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ* | This country people eating Mud Rotis|Most Amazing 30 facts

Watch and Subscribe to the Channel to get such amazing facts

ಇಸ್ಲಾಂನ್ನ ಬ್ಯಾನ್ ಮಾಡುವ ಅಭಿಯಾನಕ್ಕೆ ಬೆಂಬಲ

ಸಂಸದ ಗೀರ್ಟ್ ವಿಲ್ಡರ್ಸ್ ತಮ್ಮ ದೇಶದಲ್ಲಿ ಕೂಡ ಇಸ್ಲಾಂ ಧರ್ಮವನ್ನು ನಿಷೇಧಿಸಬೇಕೆಂದು (ಬ್ಯಾನ್) ಪ್ರಚಾರ ಮಾಡಿದ್ದಾರೆ. ಅಸಹಿಷ್ಣುತೆ ಹೊಂದಿರುವ ಜನರ ಬಗ್ಗೆ ಎಲ್ಲಾ ದೇಶಗಳು ಸಹಿಷ್ಣುತೆಯನ್ನು ನಿಲ್ಲಿಸಬೇಕು ಎಂದು ವಿಲ್ಡರ್ಸ್ ನಂಬುತ್ತಾರೆ. ಗೀರ್ಟ್ ನೆದರ್ಲ್ಯಾಂಡ್ಸ್ ರಾಜಕೀಯದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆ. ಅವರ ರಾಜಕೀಯ ಸಿದ್ಧಾಂತ ಬಲಪಂಥೀಯ ಸಿದ್ಧಾಂತವಾಗಿದೆ. 2006 ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ಆಂಟಿ-ಇಮಿಗ್ರೇಷನ್ ಪಾರ್ಟಿ ಫಾರ್ ಫ್ರೀಡಮ್ (PVV) ಅನ್ನು ಸ್ಥಾಪಿಸಿದ ಗೀರ್ಟ್ ವಿಲ್ಡರ್ಸ್, ಇತರ ವಿಷಯಗಳ ಜೊತೆಗೆ, ಹಿಜಾಬ್ ಧರಿಸುವುದರ ಮೇಲೆ ತೆರಿಗೆ ಮತ್ತು ಯುರೋಪಿಯನ್ ಒಕ್ಕೂಟದಿಂದ ನೆದರ್ಲ್ಯಾಂಡ್ಸ್ ನಿರ್ಗಮಿಸಲು ಕರೆ ನೀಡಿದ್ದಾರೆ.

ನೆದರ್ಲೆಂಡ್ಸ್‌ ನ ಡೊನಾಲ್ಡ್ ಟ್ರಂಪ್

ಗೀರ್ಡ್ ವಿಲ್ಡರ್ಸ್‌ಗೆ ನೀಡಿದ ಹೇಳಿಕೆಗಳಿಂದಾಗಿ ಮತ್ತು ನೆದರ್‌ಲ್ಯಾಂಡ್‌ನ ವಲಸೆ ನೀತಿಗಳಿಗೆ ಬದಲಾವಣೆಗಳಿಗೆ ಕರೆ ನೀಡಿದ್ದ ಅವರನ್ನು ‘ನೆದರ್‌ಲ್ಯಾಂಡ್ಸ್‌ನ ಡೊನಾಲ್ಡ್ ಟ್ರಂಪ್’ ಎಂದೂ ಕರೆಯಲಾಗುತ್ತದೆ. ಆಗಸ್ಟ್ 2019 ರಲ್ಲಿ, ಗೀರ್ಟ್ ವೈಲ್ಡರ್ಸ್ ಅವರು ಭಾರತವನ್ನು ‘ಸಂಪೂರ್ಣ ಪ್ರಜಾಪ್ರಭುತ್ವ’ ಮತ್ತು ಪಾಕಿಸ್ತಾನವನ್ನು ‘100 ಪ್ರತಿಶತ ಭ-ಯೋ-ತ್ಪಾ-ದಕ ರಾಷ್ಟ್ರ’ ಎಂದು ಕರೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು (ಆರ್ಟಿಕಲ್ 370) ರದ್ದುಗೊಳಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದರು.

ಇಮ್ರಾನ್ ಖಾನ್‌ನ್ನ ಇಸ್ಲಾಮಿಕ್ ಉ-ಗ್ರ-ಗಾಮಿ ಎಂದು ಕರೆದಿದ್ದರು

ಗೀರ್ಟ್ ವಿಲ್ಡರ್ಸ್ ಅವರು ಪಾಕಿಸ್ತಾನವನ್ನು ಇಸ್ಲಾಮಿಕ್ ಭ-ಯೋ-ತ್ಪಾ-ದಕ ರಾಷ್ಟ್ರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ಇಸ್ಲಾಮಿಕ್ ಉ-ಗ್ರ-ಗಾಮಿ’ ಎಂದು ಕರೆದಿದ್ದರು. ಗೀರ್ಟ್ ಮತ್ತು ಅವರ ಕುಟುಂಬ 2004 ರಿಂದ ಪೊಲೀಸ್ ರಕ್ಷಣೆಯಲ್ಲಿದೆ. ಅವರು ಒಮ್ಮೆ ಕುರಾನ್ ಅನ್ನು ಅಡಾಲ್ಫ್ ಹಿಟ್ಲರನ ಮೈನ್ ಕ್ಯಾಂಪ್‌ಗೆ ಹೋಲಿಸಿದ್ದರು. 2014 ರಲ್ಲಿ ಟೆಲಿವಿಷನ್ ಭಾಷಣದಲ್ಲಿ ಮಾಡಿದ ಕಾಮೆಂಟ್‌ಗಳಿಗಾಗಿ ಮೊರಾಕೊ ವಿರುದ್ಧ ತಾರತಮ್ಯ ಮಾಡುವಂತೆ ಡಚ್ ಜನರನ್ನು ಪ್ರೇರೇಪಿಸುವಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿತ್ತು.

ನೂಪುರ್ ಶರ್ಮಾ ಬೆಂಬಲಿಸಿದ್ದ ಕನ್ಹಯ್ಯಲಾಲ್

ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಟೈಲರ್ ಆಗಿದ್ದ ಕನ್ಹಯ್ಯಾಲಾಲ್ ಅವರನ್ನು ಮಂಗಳವಾರ ಕೊ-ಚ್ಚಿ ಕೊ-ಲೆ ಮಾಡಲಾಗಿತ್ತು. ಈ ಪೋಸ್ಟ್ ಅನ್ನು ಅವರ 8 ವರ್ಷದ ಮಗು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹ-ತ್ಯೆ-ಯ ಇಬ್ಬರು ಆರೋಪಿಗಳಾದ ರಿಯಾಜ್ ಮೊಹಮ್ಮದ್ ಮತ್ತು ಗೋಸ್ ಮೊಹಮ್ಮದ್ ಎಂಬಾತರನ್ನ ರಾಜ್‌ಸಮಂದ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಡೀ ರಾಜಸ್ಥಾನದಲ್ಲಿ ಪೊಲೀಸರು ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಅದೇ ಸಮಯದಲ್ಲಿ, ಉದಯಪುರದಲ್ಲಿ ಮುನ್ನೆಚ್ಚರಿಕೆಯಾಗಿ ಕರ್ಫ್ಯೂ ವಿಧಿಸಲಾಗಿದೆ. ಕೊ-ಲೆ-ಯ ವಿಡಿಯೋ ಶೇರ್ ಮಾಡದಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

 

Advertisement
Share this on...