ಗ್ವಾಲಿಯರ್, ಮಧ್ಯಪ್ರದೇಶ:
ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಸರಳಾ ತ್ರಿಪಾಠಿ
ಗ್ವಾಲಿಯರ್‌ನ ಗಾಂಧಿ ನಗರದಲ್ಲಿ ವಾಸಿಸುತ್ತಿರುವ ಸರಳಾ ತ್ರಿಪಾಠಿ ಅವರ ದಿವಂಗತ ಪತಿ ವಿಷ್ಣುವಲ್ಲಭ ತ್ರಿಪಾಠಿ ಅವರು ಎಜಿ (ಅಕೌಂಟೆಂಟ್ ಜನರಲ್ ಆಫ್ ಇಂಡಿಯಾ) ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಸರಳಾ ತ್ರಿಪಾಠಿ ಅವರು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಗ್ವಾಲಿಯರ್‌ನಲ್ಲಿ ಇವರು ಎಲ್ಲರಿಗೂ ಚಿರಪರಿಚಿತರು, ಆದರೆ 2019 ರಲ್ಲಿ ದೀಪಾವಳಿಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಸರಳಾ ತ್ರಿಪಾಠಿಯವರನ್ನ “ಮನ್ ಕಿ ಬಾತ್” ನಲ್ಲಿ ಪ್ರಸ್ತಾಪಿಸಿದಾಗ ಅವರ ಆದರ್ಶಪ್ರಾಯ ಕಾರ್ಯವು ದೇಶಾದ್ಯಂತ ಗುರುತಿಸಲ್ಪಟ್ಟಿದೆ. ಸೇವಾ ಮನೋಭಾವವಿದ್ದರೆ, 97 ರ ವಯಸ್ಸಿನಲ್ಲೂ ಚಿಕ್ಕವರಂತೆ ಕಾಣುತ್ತಾರೆ. ಸರಳಾ ತ್ರಿಪಾಠಿ ಅವರು ಗ್ವಾಲಿಯರ್‌ನ ಸಂಸ್ಥೆಯೊಂದರಿಂದ ಮದರ್ ತೆರೆಸಾ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಪ್ರಧಾನಿ ಮೋದಿಯವರಿಂದ ಪಡೆದ ಪ್ರಶಂಸೆಯ ನಂತರ ಅವರ ಉತ್ಸಾಹವೂ ಹೆಚ್ಚಾಯಿತು.
ನೀರು ಪೂರೈಕೆ ಅಭಿಯಾನ ಆರಂಭವಾದದ್ದು ಹೀಗೆ:
ಅದು 1993ರ ವಿಷಯ. ಸರಳಾ ತ್ರಿಪಾಠಿ ಪ್ರವಾಸದಿಂದ ಹಿಂತಿರುಗಿದ್ದರು. ಬೇಸಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು ಸಿಗುವುದೇ ದೊಡ್ಡ ಸಮಸ್ಯೆ ಎಂದು ಮನಗಂಡರು. ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ರೈಲು ತಪ್ಪಿ ಹೋಗುವ ಭೀತಿಯಿಂದ ಪ್ರಯಾಣಿಕರು ನೀರು ತುಂಬಿಸಿಕೊಳ್ಳಲು ಇಳಿಯಲೂ ಸಾಧ್ಯವಾಗುತ್ತಿರಲಿಲ್ಲ. ಮರುದಿನವೇ ಅವರು ಗ್ವಾಲಿಯರ್ ರೈಲು ನಿಲ್ದಾಣವನ್ನು ತಲುಪಿದರು. ಇಲ್ಲಿ ಪಂಜಾಬಿ ಪರಿಷತ್ ಸದಸ್ಯರು ನೀರು ಪೂರೈಸುತ್ತಿದ್ದರು. ಸರಳಾ ತ್ರಿಪಾಠಿ ಕೂಡ ಅದೇ ದಿನದಿಂದ ಪರಿಷತ್ತಿಗೆ ಸೇರಿ ನೀರು ಕೊಡಲು ಆರಂಭಿಸಿದರು. ಈ 30 ವರ್ಷಗಳಲ್ಲಿ ಪರಿಷತ್ತಿನ ಅನೇಕ ಅಧ್ಯಕ್ಷರು ಬದಲಾದರು, ಹೊಸ ಸದಸ್ಯರು ಬಂದರು ಹೋದರು, ಆದರೆ ಸರಳಾ ತ್ರಿಪಾಠಿ ಅವರು ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಬಾಯಿಂದ ತನ್ನ ಹೆಸರು ಕೇಳಿ ಪುಳಕಿತರಾದ ಸರಳಾ ತ್ರಿಪಾಠಿ
ಸರಳಾ ತ್ರಿಪಾಠಿ ಮಾತನಾಡುತ್ತ, ಪ್ರಯಾಣಿಕರ ಆಸನದ ಬಳಿ ಹೋಗಿ ನೀರನ್ನು ನೀಡುವ ಕೆಲಸ ನಿಜಕ್ಕೂ ತೃಪ್ತಿ ನೀಡುತ್ತದೆ. ನನ್ನ ಜೀವನವು ಯಾರಿಗಾದರೂ ಉಪಯುಕ್ತವಾಗುತ್ತಿದೆಯಲ್ಲ ಎಂದು ತೋರುತ್ತದೆ. ಪ್ರಧಾನಿ ತಮ್ಮ ಹೆಸರನ್ನು ತೆಗೆದುಕೊಂಡಾಗ, 94 ನೇ ವಯಸ್ಸಿನಲ್ಲಿ ನನಗೆ ನಾನು 25 ವರ್ಷದವಳಂತೆ ಭಾಸವಾಗಿತ್ತು. ಉತ್ಸಾಹ ಇಮ್ಮಡಿಗೊಂಡಿತು. ಈ ವಯಸ್ಸಿನಲ್ಲೂ ಮಾನಸ ಸರೋವರಕ್ಕೆ ಪ್ರಯಾಣ ಬೆಳೆಸಬೇಕು ಎಂಬುದು ನನ್ನ ಇನ್ನೊಂದು ಗುರಿ ಎಂದು ಹೇಳುತ್ತಾರೆ ಸರಳಾ.
ಸರಳಾ ತ್ರಿಪಾಠಿ ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಅದನ್ನು ನೋಡಿಯೇ ಪ್ರಯಾಣಿಕರಿಗೆ ನೀರು ಕೊಡುವ ಉತ್ಸಾಹ ನಮ್ಮಲ್ಲಿ ಮೂಡುತ್ತದೆ. ಇದೇ ಕಾರಣಕ್ಕೆ ನಮ್ಮ ಇಡೀ ತಂಡ ಒಂದೆಡೆಯಾದರೆ 97 ವರ್ಷದ ಸರಳಾ ತ್ರಿಪಾಠಿ ಮತ್ತೊಂದೆಡೆ. ಅವಳು ನಮ್ಮ ಯುವ ಸಂಗಾತಿ ಎನ್ನುತ್ತಾರೆ ಅವರ ತಂಡದ ಸದಸ್ಯರು.