ರೈಲಲ್ಲಿ ಪ್ರಯಾಣಿಸುವವರು ಒಂದು ವೇಳೆ ಅವರ ಟಿಕೆಟ್ ಕ್ಯಾನ್ಸೆಲ್ ಮಾಡಿದರೆ ಅದರ ಹಣ ವಾಪಸಾಗುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ರೀತಿ ಹಣ ವಾಪಸು ಕೊಡಲೂ ಸಾಕಷ್ಟು ನಿಯಮವಿದೆ. ಯಾವ ಸಮಯದಲ್ಲಿ ಟಿಕೆಟ್ ಬುಕ್ ಆಗಿದೆ? ಯಾವ ಸಮಯದಲ್ಲಿ ಕ್ಯಾನ್ಸಲ್ ಆಗಿದೆ ಎನ್ನುವ ಹಲವು ವಿಚಾರಗಳನ್ನು ಗಮನಿಸಿಯೇ ಎಷ್ಟು ಹಣ ವಾಪಸು ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.
ಟಿಕೆಟ್ ಆರ್ಎಸಿ ಅಥವಾ ವೇಟಿಂಗ್ ಲಿಸ್ಟ್ನಲ್ಲಿದ್ದರೆ:
ಸಾಮಾನ್ಯವಾಗಿ ನೀವು ಟಿಕೆಟ್ ಕಾಯ್ದಿರಿಸಲು ಹೋದಾಗ ನಿಮ್ಮ ಟಿಕೆಟ್ ವೇಟಿಂಗ್ ಲಿಸ್ಟ್ ಅಥವಾ ಆರ್ಎಸಿಗೆ ಸೇರಿಕೊಳ್ಳಬಹುದು. ರೈಲು ಹೊರಡುವ ಕೆಲ ಸಮಯದ ಮೊದಲು ಚಾರ್ಟ್ ನೀಡಲಾಗುವುದು. ಅದರಲ್ಲೂ ನಿಮ್ಮ ಟಿಕೆಟ್ ಕನ್ಫರ್ಮ್ ಆಗಿಲ್ಲವೆಂದಾದಲ್ಲಿ ನೀವು ರೈಲು ಹೊರಡುವುದಕ್ಕೆ ಅರ್ಧ ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಸ್ಲೀಪರ್ ಕೋಚ್ ಟಿಕೆಟ್ಗೆ 30 ರೂಪಾಯಿ ಹಾಗೂ ಎಸಿ ಕೋಚ್ಗೆ 60 ರೂಪಾಯಿ ಶುಲ್ಕ ತೆಗೆದುಕೊಳ್ಳಲಾಗುವುದು.
ನೀವು ಬುಕ್ ಮಾಡಿದ ಟಿಕೆಟ್ ಕನ್ಫರ್ಮ್ ಆಗಿದ್ದು, ನಿಮ್ಮ ಸೀಟಿನ ನಂಬರ್ ನಿಮಗೆ ಬಂದಿದ್ದರೆ ಅದಕ್ಕೆ ಸಮಯದ ಆಧಾರದ ಮೇಲೆ ಶುಲ್ಕ ಹಾಕಲಾಗುವುದು. ಫಸ್ಟ್ ಕ್ಲಾಸ್ ಎಸಿಗೆ 240 ರೂಪಾಯಿ, 2 ಎಸಿ/ ಫಸ್ಟ್ ಕ್ಲಾಸ್ಗೆ 200 ರೂಪಾಯಿ, 3 ಎಸಿ/ಎಸಿಸಿ/ 3 ಎ ಎಕಾನಮಿಗೆ 180 ರೂಪಾಯಿ, ಸೆಕಂಡ್ ಸ್ಲೀಪರ್ ಕ್ಲಾಸ್ಗೆ 120 ರೂಪಾಯಿ ಹಾಗೂ ಸೆಕೆಂಡ್ ಕ್ಲಾಸ್ಗೆ 60 ರೂಪಾಯಿಯನ್ನು ಮಿನಿಮಮ್ ಚಾರ್ಜಸ್ ಎಂದು ಕಟ್ ಮಾಡಲಾಗುವುದು. ಹಾಗೆಯೇ ಒಂದು ವೇಳೆ ನೀವು ಟಿಕೆಟ್ ಅನ್ನು ರೈಲು ಹೊರಡುವುದಕ್ಕೆ 12 ಗಂಟೆ ಮೊದಲು 48 ಗಂಟೆಗಳೊಳಗೆ ಕ್ಯಾನ್ಸಲ್ ಮಾಡಿದರೆ ಅದಕ್ಕೆ ಟಿಕೆಟ್ನ ಶೇ. 25ನ್ನು ಕಟ್ ಮಾಡಲಾಗುವುದು. ಹಾಗೆಯೇ ರೈಲು ಹೊರಡುವುದಕ್ಕೆ 4 ಗಂಟೆಯ ಮೊದಲು 12 ಗಂಟೆಯ ಒಳಗೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಟಿಕೆಟ್ನ ಶೇ. 50 ಅನ್ನು ಕಟ್ ಮಾಡಲಾಗುತ್ತದೆ. ರೈಲು ಹೊರಡುವುದಕ್ಕೆ 4 ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡುವುದಕ್ಕೆ ಅವಕಾಶವಿಲ್ಲ ಹಾಗೆಯೇ ಆ ಹಣ ನಿಮಗೆ ವಾಪಸು ಬರುವುದಿಲ್ಲ.
ರೈಲಿನ ಬೋಗಿಗಳ ಹಿಂದೆ X ಎಂಬ ಚಿಹ್ನೆ ಹಾಗು LV ಅಂತ ಬರೆಯುವುದಾದರೂ ಯಾಕೆ? ಏನಿದರ ಹಿಂದಿನ ಅರ್ಥ?
why is the sign of ‘X’ on the last train of the train: ಬಹುತೇಕ ಭಾರತದ ಎಲ್ಲರೂ ಭಾರತೀಯ ರೈಲಿನಲ್ಲಿ ಪ್ರಯಾಣಿಸಿಯೇ ಇರುತ್ತೀರ ಹಾಗು ಹಲವಾರು ಬಾರಿ ರೈಲುಗಳಲ್ಲಿ ಜನ ಒಂದಿಲ್ಲೊಂದು ಚಿಹ್ನೆ (sign) ಗಳನ್ನ ನೋಡಿಯೇ ಇರುತ್ತೀರ ಹಾಗು ಸಾಮಾನ್ಯ ಜನರಿಗೆ ಅವುಗಳ ಅರ್ಥವೇನು ಅಂತ ಯೋಚಿಸುವ ಹಾಗೆ ಮಾಡಿರುತ್ತದೆ. ಅಂಥದ್ರಲ್ಲಿ ಹಲವಾರು ಬಾರಿ ಪ್ಲ್ಯಾಟಫಾರಂ ನಲ್ಲಿ ನಿಂತ ನಾಗರಿಕರ ಎದುರು ಟ್ರೇನ್ ಪಾಸ್ ಆದಾಗ ರೈಲಿನ ಕೊನೆಯ ಬೋಗಿಯ ಹಿಂದೆ ಒಬ್ಬ ಮನುಷ್ಯ ನಿಂತಿರುತ್ತಾನೆ. ಆದರೆ ಆ ಮನುಷ್ಯ ಯಾಕೆ ನಿಂತಿರುತ್ತಾನೆ ಎಂದು ನೀವು ಯೋಚಿಸಿರುತ್ತೀರ.
ಅಷ್ಟಕ್ಕೂ ರೈಲಿನ ಕೊನೆಯ ಬೋಗಿಯ ಹಿಂದೆ X ಎಂಬ ಚಿಹ್ನೆಯನ್ನ ಯಾಕೆ ಬರೆದಿರಲಾಗುತ್ತೆ? ಈ ಪ್ರಶ್ನೆ ನಿಮ್ಮಲ್ಲೂ ಒಂದಿಲ್ಲೊಂದು ಬಾರಿ ಉದ್ಭವಿಸಿರುತ್ತದೆ. ಬನ್ನಿ ಹಾಗಿದ್ದರೆ ನಿಮ್ಮ ಈ ಪ್ರಶ್ನೆಗೆ ಉತ್ತರವನ್ನ ನಾವು ತಿಳಿಸುತ್ತೇವೆ
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಯಾವ ಪ್ಯಾಸೆಂಜರ್ ಟ್ರೇನ್ ರಾತ್ರಿ ಸಮಯದಲ್ಲಿ ಚಲಿಸುತ್ತೋ ಅದರ ಹಿಂದೆ ಬಿಳಿ ಅಥವ ಹಳದಿ ಬಣ್ಣದ ಈ ಗುರುತು ಇರುತ್ತದೆ. ಈ ಚಿಹ್ನೆ ರೈಲಿನ ಬೋಗಿಯ ಹಿಂದೆ ಹಾಕುವುದು ಅತ್ಯವಶ್ಯಕವಾಗಿದೆ. ಈ ನಿಯಮ ಭಾರತೀಯ ರೇಲ್ವೇ ಕಡೆಯಿಂದ ಮಾಡಲಾಗಿದೆ. ಇದರ ಜೊತೆಗೆ ನೀವು ಹಲವಾರು ಟ್ರೇನ್ ಗಳ ಮೇಲೆ LV ಅಂತ ಬರೆದಿರೋದನ್ನೂ ನೋಡಿರುತ್ತೀರ, ಜೊತೆಗೆ ರೈಲಿನ ಹಿಂದೆ ಕೆಂಪು ಬಣ್ಣದ ಲೈಟ್ ಬ್ಲಿಂಕ್ ಕೂಡ ಆಗುತ್ತಿರುತ್ತದೆ.
ವಾಸ್ತವವಾಗಿ, ರೈಲಿನ ಕೊನೆಯ ಬೋಗಿಯಲ್ಲಿ LV ಬರೆಯುವ ಅರ್ಥವೇನೆಂದರೆ ಅದು ಲಾಸ್ಟ್ ವೆಹಿಕಲ್ (Last Vehicle) ಅಂದರೆ ಕೊನೆಯ ವಾಹನ ಎಂಬುದಾಗಿದೆ. ಇದನ್ನು ಯಾವಾಗಲೂ X ಮಾರ್ಕ್‌ನೊಂದಿಗೆ ಬರೆಯಲಾಗುತ್ತದೆ, ಇದರ ಮೂಲಕ ರೇಲ್ವೆ ನೌಕರರಿಗೆ ಇದು ರೈಲಿನ ಕೊನೆಯ ಬೋಗಿ ಎಂಬ ಮಾಹಿತಿಯನ್ನ ನೀಡಲಾಗುತ್ತದೆ. ರೈಲಿನ ಹಿಂಭಾಗದಲ್ಲಿ ಯಾವುದೇ ಗುರುತು ಇಲ್ಲದಿದ್ದರೆ, ರೈಲು ತುರ್ತು ಪರಿಸ್ಥಿತಿಯಲ್ಲಿದೆ ಎಂದು ಅರ್ಥ!
ಮತ್ತೊಂದೆಡೆ, ಅದರೊಂದಿಗೆ ರೈಲಿನ ಹಿಂದೆ ಚಲಿಸುವ ಕೆಂಪು ದೀಪವು ರೈಲ್ವೆ ಟ್ರ್ಯಾಕ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿರುತ್ತದೆ, ಈ ಬೆಳಕು ಆ ಜನರು ಕೆಲಸ ಮಾಡುವ ಸ್ಥಳದಿಂದ ರೈಲು ಹೊರಟುಹೋಗಿದೆ ಎಂದು ಹೇಳುತ್ತದೆ. ಇದಲ್ಲದೆ, ಈ ಬೆಳಕು ಕೆಟ್ಟ ವಾತಾವರಣದಲ್ಲೂ ನೌಕರರ ಗಮನವನ್ನೂ ಸೆಳೆಯುತ್ತದೆ!
ರೇಲ್ವೇ ಸ್ಟೇಷನ್ನಿನಲ್ಲಿನ ಬೋರ್ಡ್ ಹಳದಿ ಬಣ್ಣದಲ್ಲಿರೋದ್ಯಾಕೆ?
ದೇಶದ ಲೈಫ್ ಲೈನ್ ಎಂದೇ ಕರೆಯುವ ಭಾರತೀಯ ರೇಲ್ವೆಯಲ್ಲಿ ನೀವು ಒಂದಿಲ್ಲೊಂದು ಬಾರಿ ಪ್ರಯಾಣಿಸಿರುತ್ತೀರ. ನೀವು ರೈಲ್ವೆಯಲ್ಲಿ ಪ್ರಯಾಣಿಸದೆ ಇದ್ದರೂ ಕನಿಷ್ಟ ಪಕ್ಷ ಯಾವುದಾದರೂ ರೇಲ್ವೆ ನಿಲ್ದಾಣವಂತೂ ನೋಡಿರುತ್ತೀರ, ಅಲ್ಲಿ ನೀವು ರೇಲ್ವೆ ಸ್ಟೇಷನ್ನಿನ ಹೆಸರನ್ನ ಹಳದಿ ಬಣ್ಣದ ಸೈನ್ ಬೋರ್ಡ್ ಮೇಲೆ ಬರೆದಿರುವ ಹೆಸರನ್ನ ಕಂಡಿರುತ್ತೀರ.
ಆದರೆ ಬಹುಶಃ ನೀವು ಈ ವಿಷ್ಯವನ್ನ ತಿಳಿದುಕೊಳ್ಳುವ ಗೋಜಿಗೆ ಹೋಗಿರೋದೇ ಇಲ್ಲ, ಒಂದು ವೇಳೆ ಇದರ ಹಿಂದಿನ ಕಾರಣ ನಿಮಗೆ ತಿಳಿದಿದ್ದರೆ ಖುಷಿಯ ಸಂಗತಿಯೇ ಸರಿ. ಆದರೆ ನಿಮಗೆ ಈ ವಿಷ್ಯದ ಬಗ್ಗೆ ಮಾಹಿತಿ ಇರದಿದ್ದರೆ ನಾವಿಂದು ನಿಮಗೆ ಇದರ ಹಿಂದಿನ ಕಾರಣವನ್ನ ತಿಳಿಸುತ್ತೇವೆ ಬನ್ನಿ.
ಹಳದಿ ಬಣ್ಣದ ಮುಖ್ಯ ರೂಪದಿಂದ ಸೂರ್ಯನ ಕಿರಣಗಳಿಂದ ಪ್ರಭಾವಿತವಾಗಿದ್ದಾಗಿದೆ. ಹಳದಿ ಬಣ್ಣದ ನೇರ ಕನೆಕ್ಷನ್ ಖುಷಿ, ಬುದ್ಧಿ ಹಾಗು ಎನರ್ಜಿಗೆ ಸಂಬಂಧಿಸಿದ್ದಾಗಿದೆ. ಜನನಿಬಿಡ ಪ್ರದೇಶದಲ್ಲಿ ಹಳದಿ ಬಣ್ಣದ ಬ್ಯಾಕಗ್ರೌಂಡ್ ಉಳಿದ ಬಣ್ಣಗಳಿಗಿಂತಲೂ ಜನರನ್ನ ಹೆಚ್ಚು ಆಕರ್ಷಿಸುತ್ತದೆ. ಇದರ ಹೊರತಾಗಿ ವಾಸ್ತುಶಿಲ್ಪ ಹಾಗು ಮನೋವೈಜ್ಞಾನಿಕ ವಿಷ್ಯವನ್ನ ದೃಷ್ಟಿಯಲ್ಲಿಟ್ಟುಕೊಂಡು ಹಳದಿ ಬಣ್ಣವನ್ನ ಬಳಸಲಾಗುತ್ತದೆ.
ಹಳದಿ ಬಣ್ಣದ ಬ್ಯಾಕಗ್ರೌಂಡ್ ನ ಮೇಲೆ ಕಪ್ಪು ಬಣ್ಣದ ಬರವಣಿಗೆ ಹೆಚ್ಚು ಪ್ರಭಾವಶಾಲಿಯಾಗಿ ಕಾಣುತ್ತದೆ, ಯಾಕಂದ್ರೆ ಇದು ನೀವು ಎಷ್ಟು ದೂರದಿಂದ ನೋಡಿದರೂ ಸ್ಪಷ್ಟವಾಗಿ ಕಾಣಬಹುದಾದ ದೃಶ್ಯವಾಗಿದೆ. ನೀವು ಗಮನಿಸಿದ್ದರೆ ರಸ್ತೆಯ ಬದಿಯಲ್ಲಿನ ಸೈನ್ ಬೋರ್ಡ್ ಗಳು ಕೂಡ ಹಳದಿ ಬಣ್ಣದಿಂದ ಕೂಡಿದ್ದಾಗಿದ್ದು ಅದರ ಮೇಲೆ ಕಪ್ಪು ಬಣ್ಣದ ಅಕ್ಷರಗಳನ್ನ ನೋಡಿರುತ್ತೀರ.
ಇದರ ಹೊರತಾಗಿ ಅಪಾಯದ ಮುನ್ಸೂಚನೆಗಾಗಿ ಕೆಂಪು ಬಣ್ಣದ ಬ್ಯಾಕಗ್ರೌಂಡ್ ಇರುವ ಸೈನ್ ಬೋರ್ಡ್ ಹಾಗು ಅದರ ಮೇಲೆ ಬಿಳಿ ಬಣ್ಣದ ಜೊತೆ ಜೊತೆಗೆ ಹಳದಿ ಬಣ್ಣದಿಂದಲೂ ಬರೆದಿರುತ್ತಾರೆ. ಕೆಂಪು ಬಣ್ಣ ಹಲವರಿಗೆ ಕಿರಿಕಿರಿ ಉಂಟು ಮಾಡುತ್ತದೆ, ಇದೇ ಕಾರಣದಿಂದಾಗಿ ಅಪಾಯದ ಮುನ್ಸೂಚನೆಗಾಗಿ ಈ ಬಣ್ಣವನ್ನ ಬಳಸಲಾಗುತ್ತದೆ.
ರಸ್ತೆಯ ಬದಿಯ ಹೊರತಾಗಿ ರೇಲ್ವೆ ಇಲಾಖೆಯಲ್ಲಿ ಕೆಂಪು ಬಣ್ಣವನ್ನೂ ಹಲವು ಕಡೆ ಬಳಸಲಾಗುತ್ತದೆ. ಇದರ ಹೊರತಾಗಿ ಗಾಡಿಯ ಹಿಂದೆಯೂ ಕೆಂಪು ಬಣ್ಣದ ಲೈಟ್ ಹಾಕಿರುತ್ತಾರೆ, ಇದರ ಉದ್ದೇಶ ಹಿಂದೆ ಬರುವ ಗಾಡಿಗಳು ಮುಂದಿನ ಗಾಡಿಯನ್ನ ಸುಲಭವಾಗಿ ದೂರದಿಂದಲೇ ಕಾಣಬಹುದು ಎಂಬುದಾಗಿದೆ.