ಕೃಷಿಯ ಮೂಲಕ ಕಂಪೆನಿಯನ್ನೇ ತೆರೆದು ಕೋಟ್ಯಾಧೀಶ್ವರಳಾದ ಬೆಂಗಳೂರಿನ ಯುವತಿ

in Kannada News/News/Story/ಕನ್ನಡ ಮಾಹಿತಿ 3,420 views

ನಮ್ಮ ದೇಶದಲ್ಲಿ ಕೆಲ ಜನರಿಗೆ ಅನ್ನಿಸೋದೇನೆಂದರೆ ಕೃಷಿಯಲ್ಲಿ ಯಾವುದೇ ಲಾಭವಿಲ್ಲದಿದ್ದರೂ ರೈತರ‌್ಯಾಕೆ ಸುಖಾಸುಮ್ಮನೆ ಸಾಲ ಮಾಡಿಕೊಂಡು ಸಾಯ್ತಾರೆ ಅನ್ನೋದಾಗಿದೆ. ಹೀಗೆ ಅಂದುಕೊಳ್ಳುವವರಿಗಾಗಿಯೇ ನಾವಿಂದು ಯುವತಿಯೊಬ್ಬಳ ಸಾಧನೆಯ ಕಥೆಯನ್ನ ನಿಮಗಾಗಿ ತಂದಿದ್ದೇವೆ. ಈ ಯುವತಿ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ದೊಡ್ಡ ಕಂಪೆನಿಯನ್ನ ತೆರೆದು ಇಂದು ಭರ್ಜರಿಯಾದ ಹಣವನ್ನ ಗಳಿಸುತ್ತಿದ್ದಾಳೆ.

Advertisement

37 ವರ್ಷದ ಗೀತಾಂಜಲಿ ರಾಜಾಮಣಿ ಮೂಲತಃ ಬೆಂಗಳೂರಿನವರಾಗಿದ್ದಾರೆ. ಇವರು ಕೃಷಿಯಲ್ಲಿ ವಿಭಿನ್ನವಾದ ಟೆಕ್ನಿಕ್ ಅಳವಡಿಸಿ ಇದರ ಜೊತೆ ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುತ್ತಿದ್ದಾರೆ. 2017 ರಲ್ಲಿ ಇವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸ್ಟಾರ್ಟಪ್ ಕಂಪೆನಿಯಾದ ಫಾರ್ಮಿಜನ್ ಶುರು ಮಾಡಿದ್ದರು. ಈಗ ಇವರ ಕಂಪೆನಿಯ ಬ್ರ್ಯಾಂಚ್ ಗಳು ಬೆಂಗಳೂರು, ಹೈದ್ರಾಬಾದ್ ಹಾಗು ಸೂರತ್ ನಲ್ಲೂ ಕಾರ್ಯ ನಿರ್ವಹಿಸುತ್ತಿವೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ ಈ ಕಂಪೆನಿ?

ಗೀತಾಂಜಲಿಯವರ ಕಂಪೆನಿ ಒಂದು ಕಡೆ ರೈತರಿಗೆ ಸಮನಾದ ಪಾರ್ಟ್ನರ್ಶಿಪ್ ಮಾಡಿಕೊಂಡು ಅವರಿಂದ ಜೈವಿಕ ಕೃಷಿ ಮಾಡಿಸುತ್ತಾರಾದರೆ ಮತ್ತೊಂದು ಕಡೆ ರೈತರ ಜಮೀನನ್ನ 600-600 ಸ್ವಾಯರ್ ಫೀಟ್ ನ ಆಕಾರದಲ್ಲಿ ಡಿವೈಡ್ ಮಾಡಿ ಗ್ರಾಹಕರಿಗೆ ಬಾಡಿಗೆಗೆ ನೀಡುತ್ತಾರೆ. ಇದರ ಬಾಡಿಗೆ ಪ್ರತಿ ತಿಂಗಳು 2500 ರೂ. ಆಗಿರುತ್ತದೆ‌. ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ತಾವು ಸೆಲೆಕ್ಟ್ ಮಾಡಿದ ಹೊಲದಲ್ಲಿ ತಮಗಿಷ್ಟವಾದ ತರಕಾರಿ ಬೆಳೆಗಳನ್ನ ಬೆಳೆಯುತ್ತಾರೆ ಹಾಗು ಬೆಳೆ ಬೆಳೆದ ಬಳಿಕ ಕಂಪೆನಿಯ ವಾಹನವೇ ಅವುಗಳನ್ನ ತೆಗೆದುಕೊಂಡು ಗ್ರಾಹಕರ ಮನೆಗೆ ತಲುಪಿಸುತ್ತದೆ.

ಇದರಿಂದ ಎರಡು ರೀತಿಯ ಲಾಭವಾಗುತ್ತಿವೆ, ಒಂದು ಗ್ರಾಹಕರಿಗೆ 100% ಸಾವಯವ ತರಕಾರಿ ಮನೆಯಲ್ಲಿ ಕೂತಲ್ಲೇ ಸಿಗುತ್ತದೆ ಹಾಗು ಎರಡನೆಯ ಲಾಭವೇನೆಂದರೆ ರೈತರ ಆದಾಯ ಮೂರು ಪಟ್ಟು ಹೆಚ್ಚಾಗಿದೆ. ಕಂಪೆನಿಯ ಗ್ರಾಹಕರ ಸಂಖ್ಯೆ 3 ಸಾವಿರಕ್ಕೂ ಅಧಿಕವಾಗಿಬಿಟ್ಟಿದೆ. ಈಗ ಕಂಪೆನಿಯ ಟರ್ನ್ ಓವರ್ ವರ್ಷಕ್ಕೆ 8.40 ಕೋಟಿಯಾಗಿಬಿಟ್ಟಿದೆ. ಗೋಲ್ಡ್‌ಮ್ಯಾನ್ ಸಾಕ್ಸ್ ಹಾಗು ಫಾರ್ಚೂನ್ ಕಂಪೆನಿ ಕಳೆದ ವರ್ಷ ಅಕ್ಟೋಬರ್ ನಲ್ಲಿಯೇ ಗೀತಾಂಜಲಿಯವರನ್ನ ಗ್ಲೋಬಲ್ ವುಮೆನ್ ಲೀಡರ್ ಪ್ರಶಸ್ತಿಯಿಂದ ಪುರಸ್ಕರಿಸಿದೆ.

ಗೀತಾಂಜಲಿ ಯವರು ಮಾತನಾಡುತ್ತ “ನಾವು ಯಾವ ತರಕಾರಿಗಳನ್ನ ತಿನ್ನುತ್ತೇವೋ ಅದರಲ್ಲಿ ಕೀಟನಾಶಕಗಳೂ ಇರುತ್ತವೆ. ಇದು ನಮ್ಮ ಶರೀರಕ್ಕೆ ಅಪಾಯಕಾರಿಯಾಗಿದೆ. ಇದನ್ನೇ ನಾವು ತಲೆಯಲ್ಲಿಟ್ಟುಕೊಂಡು ಎರಡು ವರ್ಷಗಳ ಹಿಂದೆ ‘ಫಾರ್ಮಿಜನ್’ ಕಂಪೆನಿ ಶುರು ಮಾಡುವ ಐಡಿಯಾ ಹೊಳೆದಿತ್ತು. ನಮ್ಮ ಮನೆಯ ಬಳಿಯೊಬ್ಬ ರೈತನಿದ್ದ. ಅವರ ಬಳಿಯಿದ್ದ ಜಮೀನನ್ನೇ ನಾನು ತರಕಾರಿ ಬೆಳೆಯಲು ಬಾಡಿಗೆಗೆ ತೆಗೆದುಕೊಂಡೆ. ಬಳಿಕ ರೈತರ ಜೊತೆ ಸಂವಾದವೂ ನಡೆಸಿ ಕೀಟನಾಶಕಗಳನ್ನ ಬಳಸಬೇಡಿ ಎಂಬ ಸಲಹೆ ನೀಡಿದೆವು. ನಾವು ಈ ಕುರಿತಾದ ಆ್ಯಪ್ ಕೂಡ ಮಾಡಿದ್ದೇವೆ. ಜೂನ್ 2017 ರಲ್ಲಿ ನಾವು ನಮ್ಮ ಮೊದಲ ಬೆಳೆ ಮಾರಾಟ ಮಾಡಿದ್ದೆವು. ಈಗ ನಮ್ಮ ಕಂಪೆನಿ ಬೆಂಗಳೂರು, ಹೈದ್ರಾಬಾದ್ ಹಾಗು ಸೂರತ್ ನಗರಗಳಲ್ಲೂ ಕಾರ್ಯ ನಿರ್ವಹಿಸುತ್ತಿವೆ”

Advertisement
Share this on...