“ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದಲ್ಲಿ ಪ್ರಧಾನಿ ಕೈವಾಡವಿಲ್ಲ”: ಬಿಜೆಪಿ ನೇತೃತ್ವದ NDA ಸೇರಲಿದ್ದಾರಾ ಮಮತಾ ಬ್ಯಾನರ್ಜಿ? ಪ್ರಧಾನಿ ಮೋದಿಯನ್ನ ಹಾಡಿಹೊಗಳುತ್ತ ಮಮತಾ ಬ್ಯಾನರ್ಜಿ ಹೇಳಿದ್ದೇನು ನೋಡಿ

in Kannada News/News 1,492 views

ನವದೆಹಲಿ: ಈ ವರದಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರುವ ಸುದ್ದಿಯ ಬಗ್ಗೆ ತಿಳಿದರೆ ನೀವು ಬಹುಶಃ ಆಶ್ಚರ್ಯಚಕಿತರಾಗಬಹುದು. ನಾವು ಬರೆದದ್ದನ್ನು ನೀವು ಒಂದು ಕ್ಷಣ ನಂಬುವುದಿಲ್ಲ. ಓದುವಾಗ ನಿಮಗೆ ಅಪಾರ್ಥವಾಗಿರಬಹುದು ಅಥವಾ ನಿಮ್ಮ ವರದಿಗಾರರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ನಿಮಗೆ ಅನಿಸಬಹುದು, ಆದರೆ ನಾವು ನಿಮಗೆ ಹೇಳಲು ಹೊರಟಿರುವುದು ನಿಜ ಮತ್ತು ಈ ಸತ್ಯವು ಈಗಷ್ಟೇ ರಾಜಕೀಯ ವಲಯದಲ್ಲಿ ಬೆಳಕಿಗೆ ಬಂದಿದೆ. ನೀವು ಮಾತ್ರವಲ್ಲ, ಇದರ ಬಗ್ಗೆ ತಿಳಿದುಕೊಳ್ಳುವ ಯಾರಿಗಾದರೂ ಇದು ಹೇಗಾಯ್ತು? ಎಂದು ನಂಬಲು ಸಾಧ್ಯವಿಲ್ಲ. ಬನ್ನಿ, ಈ ಸಂಪೂರ್ಣ ವಿಷಯದ ವಿವರಗಳನ್ನ ತಿಳಿದುಕೊಳ್ಳೋಣ.

Advertisement

ವಾಸ್ತವವಾಗಿ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ನಿಂದನಾ ನಿರ್ಣಯ ಮಂಡಿಸುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ ಎಂದು ವರದಿಯಾಗಿದೆ. ಹೌದು…ಇದು ಸತ್ಯ…ಆಶ್ಚರ್ಯಪಡಬೇಡಿ…ನೀವು ಏನೇ ಓದುತ್ತಿದ್ದೀರೋ, ನೀವು ಓದುತ್ತಿರುವ ಈ ಸುದ್ದಿ ಸಂಪೂರ್ಣವಾಗಿ ಸರಿಯಾಗೇ ಇದೆ. ಮಮತಾ ಬ್ಯಾನರ್ಜಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆಂದು ತಿಳಿದಾಗ ನಮಗೂ ನಂಬಲಾಗಿರಲಿಲ್ಲ. ಬನ್ನಿ, ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿರುವ ಬಗ್ಗೆ ತಿಳಿದುಕೊಳ್ಳೋಣ. ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ವಿರೋಧಿಸಿ ಬಿಜೆಪಿ ವಿರುದ್ಧ ಟಿಎಂಸಿ ಖಂಡನಾ ನಿರ್ಣಯ ಮಂಡಿಸಿದ್ದು, ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಆದರೆ, ಈ ನಡುವೆ ಪ್ರಧಾನಿ ಮೋದಿ ಬಗ್ಗೆ ಸಿಎಂ ಮಮತಾ ಹೇಳಿದ್ದನ್ನ ಯಾರೂ ನಂಬಲು ಸಾಧ್ಯವಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯಲ್ಲಿ ಪ್ರಧಾನಿಯವರ ಕೈವಾಡವಿಲ್ಲ ಎಂದು ಹೇಳುವ ಮೂಲಕ ಸಿಎಂ ಮಮತಾ ಎಲ್ಲರನ್ನು ದಂಗುಬಡಿಸಿದ್ದಾರೆ.

ಆದರೆ, ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರನ್ನ ಹೊಗಳಿರುವುದರ ಬಗ್ಗೆ ಹಲವು ಅರ್ಥಗಳನ್ನು ಹೊರತೆಗೆಯಲಾಗುತ್ತಿದೆ. ಪ್ರಧಾನಿ ಮೋದಿಯವರನ್ನು ಮಮತಾ ಹೊಗಳಿರುವುದು ವಿಪಕ್ಷಗಳಲ್ಲಿ ಒಡುಕುಂಟು ಮಾಡುವ ಪ್ರಕ್ರಿಯೆ ಶುರುವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಪ್ರತಿಪಕ್ಷಗಳು ಕುರುಡಾಗಿ ನಂಬುವಂತಹ ಸಾರ್ವತ್ರಿಕ ನಾಯಕನನ್ನು ಹೊಂದಿಲ್ಲ, ಆದ್ದರಿಂದ ಇಂದು ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯನ್ನು ಹೊಗಳಲು ಒತ್ತಾಯಿಸಲ್ಪಟಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿರುದ್ದಾರೆ ಆದರೆ ಪ್ರತಿಪಕ್ಷಗಳನ್ನ ಒಗ್ಗೂಡಸಿದ ನಂತರ ಪ್ರತಿಪಕ್ಷಗಳ ಮಹಾಗಠಬಂಧನ್‌ನ್ನ ಯಾರು ಮುನ್ನಡೆಸುತ್ತಾರೆ ಎಂಬ ಬಗ್ಗೆ ಪ್ರತಿಪಕ್ಷಗಳಲ್ಲಿ ಗೊಂದಲವಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಪ್ರತಿಪಕ್ಷಗಳು ಇನ್ನೂ ಒಂದಾಗುವುದರಿಂದ ದೂರವುಳಿದಿವೆ ಕಾರಣ ಪ್ರತಿಪಕ್ಷಗಳ ನಾಯಕತ್ವ ಯಾರು ವಹಿಸಬೇಕು ಎಂಬ ಗೊಂದಲ ಇನ್ನೂ ಹಾಗೇ ಉಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಮತಾ ಅವರ ಮೇಲಿನ ಹೇಳಿಕೆ ಪ್ರಸ್ತುತವಾಗಿದೆ ಎಂದು ಪರಿಗಣಿಸಲಾಗುತ್ತಿದೆ. ಇದೀಗ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಮತಾ ಬ್ಯಾನರ್ಜಿ ಅವರ ನಿಲುವಿನಲ್ಲಿ ಯಾವ ರೀತಿಯ ಬದಲಾವಣೆ ಕಂಡುಬರುತ್ತದೆ ಎಂಬುದರ ಎಲ್ಲರ ದೃಷ್ಟಿಯೂ ನೆಟ್ಟಿದೆ.

ನೆನ್ನೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಮಂಡಿಸಿದ ಖಂಡನಾ ನಿರ್ಣಯದ ಪರವಾಗಿ 189 ಮತಗಳು ಮತ್ತು ವಿರುದ್ಧ 69 ಮತಗಳು ಚಲಾವಣೆಯಾದವು. ಇದೇ ವೇಳೆ ಕೇಂದ್ರ ಸಂಸ್ಥೆಗಳು ಮಾಡುತ್ತಿರುವ ದಾಳಿಗಳ ವಿರುದ್ಧ ಮಮತಾ ಈ ರೀತಿಯಾಗಿ ಹೇಳಿದ್ದಾರೆ. ಅದೇ ಸಮಯದಲ್ಲಿ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಕೇಂದ್ರ ತನಿಖಾ ಸಂಸ್ಥೆಗಳಿಗೆ ವಿರುದ್ಧವಾದ ಖಂಡನಾ ನಿರ್ಣಯವನ್ನು ವಿರೋಧಿಸಿದರು. ಆದರೆ, ಈ ನಡುವೆ ವಿಧಾನಸಭೆಯಲ್ಲಿ ಮೇಲ್ಕಂಡ ಖಂಡನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಆದರೆ, ಅಂತಿಮವಾಗಿ ಅದು ಜಾರಿಯಾಯಿತು. ಇನ್ನು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಮಮತಾ ಬ್ಯಾನರ್ಜಿ ವರ್ತನೆ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ಇರಲಿದೆ.

Advertisement
Share this on...