ಇಂಟರ್ನ್ಯಾಷನಲ್ ಡೆಸ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಐಷಾರಾಮಿ ಹೋಟೆಲ್ ಅನ್ನು ನೆಲಸಮ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚಿತ್ರಗಳು ಮತ್ತು ವೀಡಿಯೊಗಳಲ್ಲಿ, ಹೋಟೆಲ್ ಕಟ್ಟಡವು ಧೂಳು ಮತ್ತು ಭಗ್ನಾವಶೇಷಗಳಾಗಿ ಬದಲಾಗುತ್ತಿರುವುದನ್ನು ಕಾಣಬಹುದಾಗಿದೆ. ಈ ಬೃಹತ್ ಕಟ್ಟಡವನ್ನು ಕೆಡವಲು ಸುಮಾರು 3000 ಬಾರ್ ಡೈನಮೈಟ್ ಅನ್ನು ಬಳಸಲಾಯಿತು.
BREAKING: the Trump Plaza casino in Atlantic City was just demolished.💥
— Dena Grayson, MD, PhD (@DrDenaGrayson) February 17, 2021
ಮಾಜಿ ಅಧ್ಯಕ್ಷ ಟ್ರಂಪ್ ರವರ ಪ್ಲಾಜಾ ಹೋಟೆಲ್ & ಕ್ಯಾಸಿನೊ’ದ ಮೂರು ಕ್ಯಾಸಿನೊಗಳಲ್ಲಿ ಇದು ಮೊದಲನೆಯದು. ಇಲ್ಲಿ ಅಮೆರಿಕದ ಪ್ರಸಿದ್ಧ ಸೆಲೆಬ್ರಿಟಿಗಳಾದ ಮೈಕ್ ಟೈಸನ್, ಮಡೋನಾ, ಹಲ್ಕ್ ಹೊಗನ್, ಮಿಕ್ ಜಾಗರ್ ಮತ್ತು ಕೀತ್ ರಿಚರ್ಡ್ಸ್ ಮನರಂಜನೆ ಮೋಜು ಮಸ್ತಿಗಾಗಿ ಬರುತ್ತಿದ್ದರು. ಈ ಕ್ಯಾಸಿನೊ 1984 ರಲ್ಲಿ ಪ್ರಾರಂಭವಾಗಿತ್ತು ಹಾಗು 2014 ರಿಂದ ಮುಚ್ಚಲ್ಪಟ್ಟಿತ್ತು. ಇದನ್ನು 210 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಆದರೆ 2013 ರಲ್ಲಿ ಇದನ್ನ ಕೇವಲ 20 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಯಿತು.
ಇದನ್ನು 2014 ರಲ್ಲಿ ಕ್ಲೋಸ್ ಮಾಡಲಾಗಿತ್ತು. ಹಲವಾರು ಬಿರುಗಾಳಿಗಳಿಂದಾಗಿ, ಈ ಕಟ್ಟಡದ ಹೊರಭಾಗವು ಶಿಥಿಲಗೊಂಡಿತ್ತು, ಕಳೆದ ವರ್ಷ ಜೂನ್‌ನಲ್ಲಿ ನಗರದ ಮೇಯರ್ ಮಾರ್ಟ್ ಕಟ್ಟಡವನ್ನು ನೆಲಸಮಗೊಳಿಸುವಂತೆ ಮಾರ್ಟಿ ಸ್ಮಾಲ್‌ಗೆ ಆದೇಶಿಸಿದ್ದರು. ಈ ಕಟ್ಟಡದ ಲೈವ್ ಸ್ಟ್ರೀಮಿಂಗ್ ಸಹ ಮಾಡಲಾಯಿತು. ಈ ಕಟ್ಟಡವು ಕುಸಿಯುವುದನ್ನು ನೋಡಲು ನೂರಾರು ಜನರು ನೆರೆದಿದ್ದರು. ಕೆಲವೇ ಸೆಕೆಂಡುಗಳಲ್ಲಿ, ಈ ಟ್ರಂಪ್ ಹೋಟೆಲ್ ಧೂಳಿನ ರಾಶಿಯಾಗಿ ಹೇಗೆ ಮಾರ್ಪಟ್ಟಿತು ಎಂಬುದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಬಹುದಾಗಿದೆ.
34 ಅಂತಸ್ತಿನ ಬೃಹತ್ ಕಟ್ಟಡವು ಕುಸಿಯಲು ಕೇವಲ 20 ಸೆಕೆಂಡುಗಳನ್ನು ತೆಗೆದುಕೊಂಡಿತು. ಒಂದರ ನಂತರ ಒಂದರಂತೆ ಅನೇಕ ಸ್ಫೋಟಗಳಿಂದ ಇಡೀ ನಗರವು ನಡುಗಿತು. ಕಟ್ಟಡ ಕುಸಿದ ನಂತರ, ಅದರ ಭಗ್ನಾವಶೇಷವು ಕೇವಲ 8 ಅಂತಸ್ತಿನಷ್ಟು ಮಾತ್ರ ಉಳಿದಿದೆ, ಅದನ್ನು ತೆರವುಗೊಳಿಸಲು ಜೂನ್ ವರೆಗೆ ಸಮಯ ಬೇಕಾಗುತ್ತದೆ ಎಂದು ಅಟ್ಲಾಂಟಿಕ್ ಸಿಟಿ ಮೇಯರ್ ಹೇಳುತ್ತಾರೆ. ಇದರೊಂದಿಗೆ, ಕಟ್ಟಡ ಕುಸಿದಾಗ ನಾನು ರೋಮಾಂಚಿತನಾಗಿದ್ದೆ. ಅದು ಒಂದು ಐತಿಹಾಸಿಕ ಕ್ಷಣ ಎಂದು ಅವರು ಹೇಳಿದರು.
ಕಳೆದ 40 ವರ್ಷಗಳಿಂದ ಅಮೇರಿಕಾದಲ್ಲಿ ಅಧ್ಯಕ್ಷರಿಗಿಂತಲೂ ಹತ್ತಿರತ್ತಿರ ಎರಡು ಪಟ್ಟು ಹೆಚ್ಚು ಸಂಬಳ ಈ ವ್ಯಕ್ತಿಗೆ ಸಿಗುತ್ತಿದೆ: ಯಾರೀತ ಗೊತ್ತಾ?
ವೈರಸ್ ಟಾಸ್ಕ್ ಫೋರ್ಸ್‌ನ ಪ್ರಮುಖ ಸದಸ್ಯರಾದ ಡಾ.ಆಂಥೋನಿ ಫೌಚಿ ಅವರು ಅಮೇರಿಕ ಸರ್ಕಾರದ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ, ಫೆಡರಲ್ ಸ್ಯಾಲರಿ ಡೇಟಾವು 2019 ರ ವರ್ಷದವರೆಗೆ ಮಾತ್ರ ಲಭ್ಯವಿದೆ, ಅದರ ಪ್ರಕಾರ ಆಂಥೋನಿ ಫೌಚಿಯ ವಾರ್ಷಿಕ ವೇತನವು $417,608 ಅಂದರೆ ಸುಮಾರು 3 ಕೋಟಿ ರೂ. ನಷ್ಟಿದೆ. ಅದೇ ಸಮಯದಲ್ಲಿ, ಯುಎಸ್ ಅಧ್ಯಕ್ಷರ ವೇತನ $400,000 ನಷ್ಟಿದೆ. ಆಂಥೋನಿ ಫೌಚಿ ಅಮೆರಿಕ ಅಧ್ಯಕ್ಷರಿಗಿಂತ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಯಾಗಿದ್ದಾರೆ.
ಫೌಚಿಗಿಂತ ದೊಡ್ಡ ಹುದ್ದೆಯನ್ನು ಅಲಂಕರಿಸಿದ ಟ್ರಂಪ್ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಮೈಕ್ ಪೆನ್ಸ್ ಕೂಡ 2019 ರಲ್ಲಿ ವಾರ್ಷಿಕ 235,100 ಡಾಲರ್ ವೇತನವನ್ನು ಹೊಂದಿದ್ದರು. ಅದೇ ಸಮಯದಲ್ಲಿ, ಡಾ.ಡೆಬೊರಾ ಬ್ರಿಕ್ಸ್ ಅವರ ವಾರ್ಷಿಕ ವೇತನವು ಈ ಅವಧಿಯಲ್ಲಿ 305,972 ಡಾಲರ್ ಆಗಿತ್ತು.
OpenTheBooks.com ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಯುಎಸ್ ಸರ್ಕಾರಿ ನೌಕರರಲ್ಲಿ ಹೆಚ್ಚು ಸಂಭಾವನೆ ಪಡೆಯುವವರು ವೈದ್ಯಕೀಯ ಮತ್ತು ದಂತ ಅಧಿಕಾರಿಗಳೇ ಆಗಿದ್ದಾರೆ.
ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು 2019 ರಲ್ಲಿ 223,500 ಡಾಲರ್ ಸಂಬಳವನ್ನು ಪಡೆದಿದ್ದಾರೆ. ಯುಎಸ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಅವರ ವಾರ್ಷಿಕ ವೇತನ 27,700 ಡಾಲರ್ ನಷ್ಟಿದೆ.
ಯಾರು ಈ ಫೌಚಿ?
ಕರೋನಾ ವೈರಸ್ ಸಾಂಕ್ರಾಮಿಕದ ಈ ಯುಗದಲ್ಲಿ ಡಾ.ಆಂಥೋನಿ ಫೌಚಿ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಡಾ. ಆಂಥೋನಿ ಫೌಚಿಯವರ ಅತಿದೊಡ್ಡ ಸಾಧನೆಯೆಂದರೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಪೆಕ್ಷಿಯಸ್ ಡಿಸೀಸ್ (NIAID) ಗೆ 36 ವರ್ಷಗಳ ಕಾಲ ಪರಿಣಾಮಕಾರಿಯಾಗಿ ಮುನ್ನಡೆಸಿದ್ದು. ಅವರು 1984 ರಿಂದ ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಡಾ. ಫೌಚಿಯನ್ನು ಅಮೆರಿಕದ ಸಾಂಕ್ರಾಮಿಕ ರೋಗಗಳ ಅತಿದೊಡ್ಡ ತಜ್ಞ ಎಂದು ಪರಿಗಣಿಸಲಾಗಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕ ಮತ್ತು ವೈರಸ್ ಸೋಂಕಿನ ಹರಡುವಿಕೆ ಜಗತ್ತಿಗೆ ಭೀಕರವಾಗಿತ್ತು. ಆದರೆ ಬಹುಶಃ ಇದು ವೈರಸ್ ಅಷ್ಟೇ ಆಗಿತ್ತು ಹೊರತು ಡಾ. ಫೌಚಿಗೆ ಹೊಸದೇನೂ ಆಗಿರಲಿಲ್ಲ. ಕಳೆದ 36 ವರ್ಷಗಳಲ್ಲಿ, ಅವರು HIV/AIDS, SARS, MERS, ಎಬೋಲಾ, ಸ್ವೈನ್ ಫ್ಲೂ, ಜಿಕಾ ದಂತಹ ರೋಗಗಳನ್ನೂ ನೋಡಿದ್ದಾರೆ ಅನೇಕ ಆರೋಗ್ಯ ಸಮಸ್ಯೆಗಳ ಕುರಿತು ಅಮೇರಿಕದ ಆರು ಅಧ್ಯಕ್ಷರಿಗೆ ಸಲಹೆ ನೀಡಿದ್ದಾರೆ.
ಎಚ್ಐವಿ ದೇಹದ ರಕ್ಷಣೆಯನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ದೇಹವು ಅಪಾಯಕಾರಿ ಸೋಂಕುಗಳಿಗೆ ಹೇಗೆ ಗುರಿಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಡಾ. ಫೌಚಿ ಮಹತ್ವದ ಕೊಡುಗೆ ನೀಡಿದ್ದಾರೆ. ಇದಲ್ಲದೆ, ಅಂತಹ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ, ಇದು ಎಚ್ಐವಿ ಸೋಂಕಿತ ಜನರ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.