ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್‌ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಕೇವಲ ಒಂದು ನಿಮಿಷ ರೈಲು ವಿಳಂಬವಾಗಿ ಬಂದ ಕಾರಣ ತಜ್ಞರು ತನಿಖೆ ನಡೆಸಿದ್ದಾರೆ.
ರೈಲಿನ ಚಾಲಕ ಶೌಚಾಲಯಕ್ಕೆ ಹೋದ ಕಾರಣ ರೈಲು ತಡವಾಗಿ ಬಂದಿದೆ ಎಂಬ ಸಂಗತಿ ಗೊತ್ತಾಗಿದೆ. ವಿಚಾರಣೆ ವೇಳೆ ಚಾಲಕ ಈ ವಿಷ್ಯವನ್ನು ಹೇಳಿದ್ದಾನೆ. ಹೊಟ್ಟೆ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿತು. ಹಾಗಾಗಿ ತರಬೇತಿ ಪಡೆದ ಕಂಡಕ್ಟರ್ ಗೆ ಜವಾಬ್ದಾರಿ ನೀಡಿ ಶೌಚಾಲಯಕ್ಕೆ ತೆರಳಿದ್ದೆ ಎಂದಿದ್ದಾನೆ. ಚಾಲಕನಿಲ್ಲದೆ ರೈಲು 3 ನಿಮಿಷ ಚಲಿಸಿದೆ.
ತರಬೇತಿ ಪಡೆಯದ ಕಂಡಕ್ಟರ್‌ಗೆ 160 ಪ್ರಯಾಣಿಕರನ್ನು ಹೊತ್ತ ರೈಲನ್ನು ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಓಡಿಸಿದ್ದಾನೆ. ಈ ಬುಲೆಟ್ ರೈಲುಗಳು ಕಂಪ್ಯೂಟರ್ ನಿಯಂತ್ರಣದಲ್ಲಿರುತ್ತವೆ. ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯವಿದ್ದಾಗ ಬ್ರೇಕ್‌ಗಳನ್ನು ಹಾಕಲಾಗುತ್ತದೆ. ರೈಲಿನ ವೇಗವನ್ನು ಹೆಚ್ಚಿಸುವುದು ಚಾಲಕನ ಕೆಲಸ. ಒಂದು ವೇಳೆ ರೈಲು ಸಮಯಕ್ಕೆ ತಲುಪಿದ್ದರೆ ಈ ಸಂಗತಿ ಹೊರಗೆ ಬರ್ತಿರಲಿಲ್ಲ. ಪ್ರೋಟೋಕಾಲ್ ಪ್ರಕಾರ, ಚಾಲಕನು ಆಜ್ಞಾ ಕೇಂದ್ರದೊಂದಿಗೆ ಮಾತನಾಡಬೇಕು ಮತ್ತು ರೈಲಿನ ನಿಯಂತ್ರಣವನ್ನು ಅರ್ಹ ಕಂಡಕ್ಟರ್‌ಗೆ ಹಸ್ತಾಂತರಿಸಬೇಕು. ಆದ್ರೆ ಮುಜುಗರದಿಂದಾಗಿ ಹೇಳಿರಲಿಲ್ಲವೆಂದು ಚಾಲಕ ಒಪ್ಪಿಕೊಂಡಿದ್ದಾನೆ.
ಮುಂದಿನ ಸುದ್ದಿ: ಭಾರತದಲ್ಲಿದೆ ಹೆಸರೇ ಇಲ್ಲದ ರೇಲ್ವೇ ಸ್ಟೇಷನ್: ಇದರ ಹಿಂದಿರುವ ಕರಾಳ ಸತ್ಯ ತಿಳಿದರೆ ಬೆಚ್ಚಿಬೀಳ್ತೀರ
ಹೆಸರೇ ಇಲ್ಲದ ರೈಲು ನಿಲ್ದಾಣ ಭಾರತದಲ್ಲಿದೆ ಎಂದರೆ ಯಾರೂ ಸಹ ನಂಬುವುದಿಲ್ಲ. ಹೆಸರಿಲ್ಲದ ರೈಲು ನಿಲ್ದಾಣವಿರಲು ಹೇಗೆ ಸಾಧ್ಯ? ಹೆಸರಿಲ್ಲದ ರೈಲು ನಿಲ್ದಾಣವನ್ನು ಗುರುತಿಸುವುದಾದರೂ ಹೇಗೆ? ನಾಮಫಲಕ ತುಂಬಾ ಮುಖ್ಯ ಎನ್ನುವವರು ಈ ಸುದ್ದಿ ಓದಿದರೆ ಒಮ್ಮೆ ಅಚ್ಚರಿಗೀಡಾಗುವುದು ಖಂಡಿತ.
ನಿಜವಾಗಿಯೂ ಹೆಸರಿಲ್ಲದ ರೈಲು ನಿಲ್ದಾಣವೊಂದು ದೇಶದಲ್ಲಿದೆ. ವಿಶೇಷವಾಗಿ ಅದು ಹೆಸರಿಲ್ಲದ ರೈಲು ನಿಲ್ದಾಣವೆಂದೇ ಖ್ಯಾತಿಯಾಗಿದೆ. ಪ್ರತಿ ನಿಲ್ದಾಣಕ್ಕೂ ಖಂಡಿತವಾಗಿ ಹೆಸರು ಇರಲೇಬೇಕು. ಆದರೆ, ಈ ರೈಲು ನಿಲ್ದಾಣ ಹೆಸರು ಕಳೆದುಕೊಂಡು ರೋಚಕ ಕತೆಯನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಹೆಸರೇ ಇಲ್ಲದ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಆದ್ರಾ ರೈಲು ವಿಭಾಗದಲ್ಲಿ ಬರುತ್ತದೆ. ಈ ನಿಲ್ದಾಣ ಬಂಕುರಾ-ಮಾಸಗ್ರಾಮ್ ರೈಲು ಮಾರ್ಗದಲ್ಲಿ ಬರುತ್ತದೆ. ರೈನಾ ಮತ್ತು ರೈನಾಗರ್ ಎಂಬ ಎರಡು ಗ್ರಾಮಗಳ ನಡುವೆ ಈ ರೈಲು ನಿಲ್ದಾಣ ಬರುತ್ತದೆ.
ಈ ನಿಲ್ದಾಣಕ್ಕೆ ಮೊದಲು ರೈನಗರ್ ರೈಲು ನಿಲ್ದಾಣ ಎಂದು ಹೆಸರಿಡಲಾಗಿತ್ತು. ಆದರೆ, ರೈನಾ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ತಮ್ಮ ಊರಿನ ಹೆಸರಿಡುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟವು ನಡೆಯುತ್ತಿತ್ತು. ಈ ಸುದ್ದಿ ಕೋಸ್ಟ್ ರೈಲ್ವೇ ಬೋರ್ಡ್ಗೆ ತಿಳಿದಿದೆ. ವಿವಾದವನ್ನು ಬಗೆಹರಿಸಲು ಅಧಿಕಾರಿಗಳು ಕೂಡ ಯತ್ನಿಸಿದರೂ, ಯಾವುದೇ ಫಲ ದೊರೆಯಲಿಲ್ಲ.
ಇದಾದ ಬಳಿಕ ಒಂದು ನಿರ್ಧಾರಕ್ಕೆ ಬಂದು ರೈಲ್ವೇ ಬೋರ್ಡ್ ನಾಮಫಲಕದಿಂದ ರೈನಗರ್ ಹೆಸರನೇ ತೆಗೆದುಹಾಕಿದರು. ಮತ್ತೆ ಅದಕ್ಕೆ ಮರುನಾಮಕರಣ ಮಾಡಲು ಸಹ ಮುಂದಾಗಲಿಲ್ಲ. ಅಂದಿನಿಂದ ಅದು ಹೆಸರಿಲ್ಲದ ರೈಲು ನಿಲ್ದಾಣವಾಗಿಯೇ ಉಳಿದಿದೆ. ಇದರಿಂದಾಗಿ ಇಲ್ಲಿಗೆ ಬರುವ ಅನೇಕ ಪ್ರಯಾಣಿಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ.
ರೈಲು ನಿಲ್ದಾಣ ಹೆಸರಿಲ್ಲದೇ ಪ್ರಯಾಣಿಕರು ಸಹ ಗೊಂದಲಕ್ಕೀಡಾಗಿದ್ದಾರೆ. ಆದರೆ, ಅಧಿಕಾರಿಗಳು ಈಗಲೂ ಸಹ ರೈನಗರ್ ಹೆಸರಿನಲ್ಲೇ ಟಿಕೆಟ್ ಕೊಡುತ್ತಿದ್ದಾರೆ. ಆದರೆ, ನಾಮಫಲಕದಲ್ಲಿ ಮಾತ್ರ ಯಾವುದೇ ಹೆಸರಿಲ್ಲ. ಕೇವಲ ಹಳದಿ ಬಣ್ಣದ ಖಾಲಿ ಬೋರ್ಡ್ ಮಾತ್ರ ಪ್ರಯಾಣಿಕರಿಗೆ ಪ್ರತಿ ಬಾರಿ ದರ್ಶನವಾಗುತ್ತಿದೆ.