ಕೇವಲ 15 ದಿನಗಳಲ್ಲೇ 3 ಸ್ಪೋಟಕ ನಿರ್ಧಾರ ಕೈಗೊಂಡು ಪಂಚರಾಜ್ಯಗಳ ಚುನಾವಣೆಯ ಲೆಕ್ಕಾಚಾರಗಳನ್ನೇ ತಲೆ ಕೆಳಗೆ ಮಾಡಿದ ಮೋದಿ ಸರ್ಕಾರ

in Kannada News/News 260 views

ದೇಶದ ಐದು ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಉಳಿದಿದ್ದು, ಚುನಾವಣಾ ಆಯೋಗವು ಮುಂದಿನ ವರ್ಷದ ಆರಂಭದಲ್ಲಿ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ನಂಬಲಾಗಿದೆ. ಈ ಐದು ರಾಜ್ಯಗಳ ಪೈಕಿ ಪಂಜಾಬ್ ಹೊರತುಪಡಿಸಿ ಉಳಿದ ನಾಲ್ಕೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರದಲ್ಲಿದ್ದು, ಕೇಸರಿ ಪಾಳಯ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಂಪೂರ್ಣ ಬಲದಿಂದ ಕೆಲಸ ಮಾಡುತ್ತಿದೆ. ಏತನ್ಮಧ್ಯೆ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಈಗಾಗಲೇ ಚುನಾವಣೆಗೆ ಮುನ್ನ ಇಂತಹ ಮೂರು ಮಾಸ್ಟರ್ ಸ್ಟ್ರೋಕ್‌ಗಳನ್ನು ಬಾರಿಸಿದ್ದು ಇದರಿಂದಾಗಿ ಉಳಿದ ಪಕ್ಷಗಳು ಚುನಾವಣಾ ನಿರ್ವಹಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿವೆ ಎಂದೇ ಹೇಳಬಹುದು.

Advertisement

ಪಂಜಾಬ್: ಕರ್ತಾರ್‌ಪುರದ ನೆಪದಲ್ಲಿ ಅಸಮಾಧಾನವನ್ನು ಕಡಿಮೆ ಮಾಡುವ ಪ್ರಯತ್ನ

2020 ರ ಕೊನೆಯಲ್ಲಿ, ಪಂಜಾಬ್‌ನಿಂದ ಹೆಚ್ಚಿನ ಸಂಖ್ಯೆಯ ರೈತರು ದೆಹಲಿಯ ಗಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದಾಗ, ಪಂಜಾಬ್‌ ಹಾದಿಯು ಬಿಜೆಪಿಗೆ ಕಷ್ಟಕರವಾಗಿಬಿಟ್ಟಿತ್ತು. ಕಿಸಾನ್ ಆಂದೋಲನ್ ಮುಂದುವರೆದಂತೆ, ಮಾಧ್ಯಮಗಳಲ್ಲಿ ಬಿಜೆಪಿಯ ಬಗ್ಗೆ ಸಿಖ್ ಸಮುದಾಯದ ಅಸಮಾಧಾನದ ವರದಿಗಳು ಬಂದವು. ಆದಾಗ್ಯೂ, ಈ ಹಿಂದೆ ಪಂಜಾಬ್ ಕಾಂಗ್ರೆಸ್‌ನಲ್ಲಿನ ಗದ್ದಲದ ನಡುವೆ, ಮಾಜಿ ಸಿಎಂ ಅಮರಿಂದರ್ ಸಿಂಗ್ ಪ್ರತ್ಯೇಕಗೊಂಡು ಹೊಸ ಪಕ್ಷವನ್ನು ರಚಿಸುವುದಾಗಿ ಘೋಷಿಸಿದಾಗ, ವಾತಾವರಣವನ್ನು ಗ್ರಹಿಸಿದ ಬಿಜೆಪಿ, ಕರ್ತಾರ್‌ಪುರ ಕಾರಿಡಾರ್ ತೆರೆಯುವುದಾಗಿ ಘೋಷಿಸಿತು. ಈ ಒಂದು ನಿರ್ಧಾರದಿಂದ ಬಿಜೆಪಿಯ ಮೇಲಿನ ಸಿಖ್ಖರ ಅಸಮಾಧಾನ ಕೊಂಚಮಟ್ಟಿಗೆ ಕಡಿಮೆಯಾಯಿತಾದರೂ, ರಾಜಕೀಯ ವಿಷಯಗಳಲ್ಲದೆ, ಬಿಜೆಪಿ ಸಿಖ್ಖರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ ಎಂಬ ಸಂದೇಶವನ್ನು ರವಾನಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಬಿಜೆಪಿಯ ಯಶಸ್ವಿ ನಿರ್ವಹಣೆ, ಕರ್ತಾರ್‌ಪುರ ಕಾರಿಡಾರ್ ತೆರೆಯುವ ನಿರ್ಧಾರದ ಜೊತೆಗೆ, ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಪಕ್ಷವು ಹೆಜ್ಜೆ ಹಾಕಲು ಪ್ರಾರಂಭಿಸಿದೆ.

ಉತ್ತರಪ್ರದೇಶ: ಕೃಷಿ ಕಾನೂನು ವಾಪಸ್ ಪಡೆದದ್ದು ದೊಡ್ಡ ಗೇಮ್ ಚೇಂಜರ್

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯುತ್ತಿರುವ ಕಿಸಾಸ್ ಆಂದೋಲನವು ಉತ್ತರಪ್ರದೇಶದ ಚುನಾವಣೆಯಲ್ಲಿ ದೊಡ್ಡ ಅಂಶವಾಗಿ ಕಂಡುಬಂದಿದೆ. ಇತ್ತೀಚೆಗೆ, ಪಶ್ಚಿಮ ಉತ್ತರಪ್ರದೇಶದ ಮುಜಫರ್‌ನಗರದಲ್ಲಿ ರೈತ ಸಂಘಟನೆಗಳು ಬೃಹತ್ ರ್ಯಾಲಿಯನ್ನು ನಡೆಸಿದಾಗ, ಪಶ್ಚಿಮ ಯುಪಿಯಲ್ಲಿ ಈ ಬಾರಿ ಬಿಜೆಪಿಯ ಹಾದಿ ತುಂಬಾ ಕಷ್ಟಕರವಾಗಿದೆ ಎಂಬ ಗುಸುಗುಸು ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಘೋಷಿಸಿದಾಗ, ಉತ್ತರಪ್ರದೇಶದ ರಾಜಕೀಯ ಚಿತ್ರಣವೇ ಮತ್ತೊಮ್ಮೆ ಬದಲಾಯಿತು. ರಾಜಕೀಯ ತಜ್ಞರ ಪ್ರಕಾರ, ಕೃಷಿ ಕಾನೂನುಗಳ ವಾಪಸ್ ಪಡೆದದ್ದರಿಂದ ರೈತರ ಅಸಮಾಧಾನ ಕಡಿಮೆಯಾಗದಿದ್ದರೂ, ಪಶ್ಚಿಮ ಯುಪಿಯಲ್ಲಿ ಬಿಜೆಪಿಗೆ ಇನ್ನು ಮುಂದೆ ರೈತರ ವಿರೋಧವನ್ನು ಎದುರಿಸಬೇಕಾಗಿಲ್ಲ. ಇದರೊಂದಿಗೆ ಕೃಷಿ ಕಾನೂನುಗಳು ರದ್ದಾದ ಬಳಿಕವೂ ರೈತರ ಆಂದೋಲನ್ ಮುಂದುವರಿದರೆ ಅದರ ಹಿಂದೆ ಪ್ರತಿಪಕ್ಷಗಳ ರಾಜಕೀಯ ಅಡಗಿದೆ ಎಂಬ ಅಂಶವನ್ನು ಬಿಜೆಪಿ ಚುನಾವಣೆಯಲ್ಲಿ ಬಲವಾಗಿ ಎತ್ತಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕಾನೂನುಗಳ ರದ್ದು ಮಾಡಿದ್ದು ಬಿಜೆಪಿಯ ದೊಡ್ಡ ವರದಾನವಾಗಿ ಪರಿಣಮಿಸಲಿದೆ.

ಉತ್ತರಾಖಂಡ: ದೇವಸ್ಥಾನಂ ಬೋರ್ಡ್ ಬಗ್ಗೆ ಯೂ-ಟರ್ನ್, ವಿಪಕ್ಷಗಳಿಗಿದ್ದ ಒಂದು ಅಸ್ತ್ರವನ್ನೂ ಕಿತ್ತುಕೊಂಡ ಬಿಜೆಪಿ

ಉತ್ತರಾಖಂಡದ ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದಲ್ಲಿ ಮಂಡಿಸಲಾದ ದೇವಸ್ತಾನಂ ಬೋರ್ಡ್ ರಚನೆಯ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ಆರಂಭದಿಂದಲೂ ವಿರೋಧ ಎದುರಿಸುತ್ತಿತ್ತು. ಚಾರ್ ಧಾಮ್‌ನ ಪುರೋಹಿತ ಸಂಘಟನೆಗಳು ಈ ವಿಷಯದಲ್ಲಿ ಬಿಜೆಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಬಂದಿದ್ದರೂ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಸಹ ಇದನ್ನು ರಾಜಕೀಯ ವಿಷಯವಾಗಿಸುವಲ್ಲಿ ವಿಳಂಬ ಮಾಡಲಿಲ್ಲ. ಪ್ರಧಾನಿ ಮೋದಿಯವರ ಕೇದಾರನಾಥ ಭೇಟಿಗೂ ಮುನ್ನವೇ ಇಬ್ಬರು ಹಿರಿಯ ಬಿಜೆಪಿ ನಾಯಕರು ಕೇದಾರನಾಥ ಧಾಮದಲ್ಲಿ ಪುರೋಹಿತರಿಂದ ಭಾರೀ ವಿರೋಧವನ್ನು ಎದುರಿಸಬೇಕಾಯಿತು ಎಂಬುದು ಇದರ ಮೊದಲ ನೋಟ. ಇಂತಹ ಪರಿಸ್ಥಿತಿಯಲ್ಲಿ, ಉತ್ತರಾಖಂಡ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿಧಾನಸಭೆ ಚುನಾವಣೆಗೆ ಮುನ್ನ ರಾಜಕೀಯ ವಾತಾವರಣವನ್ನು ಗ್ರಹಿಸಿದರು ಮತ್ತು ದೇವಸ್ತಾನಂ ಮಂಡಳಿ ರಚಿಸುವ ಮಸೂದೆಯನ್ನು ಹಿಂಪಡೆಯುವುದಾಗಿ ಘೋಷಿಸಿದರು. ಪ್ರತಿಪಕ್ಷಗಳ ಕೈಯಿಂದ ದೊಡ್ಡ ವಿಚಾರವನ್ನೇ ಸಿಎಂ ಧಾಮಿ ಕಿತ್ತುಕೊಂಡಿದ್ದಾರೆ ಎಂಬುದನ್ನು ಉತ್ತರಾಖಂಡದ ರಾಜಕೀಯ ತಜ್ಞರೂ ಒಪ್ಪುತ್ತಿದ್ದಾರೆ. ಏಕೆಂದರೆ, ಚುನಾವಣೆ ಸಂದರ್ಭದಲ್ಲಿ ದೇವಸ್ತಾನಂ ಮಂಡಳಿ ವಿಚಾರ ತಲೆದೋರಿದ್ದರೆ ಖಂಡಿತವಾಗಿಯೂ ಉತ್ತರಾಖಂಡದಲ್ಲಿ ಬಿಜೆಪಿಗೆ ಸಾಕಷ್ಟು ಹಾನಿಯಾಗುತ್ತಿತ್ತು.

Advertisement
Share this on...