ಮನುಷ್ಯ ಮಾಡಿದ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ, ಮನುಷ್ಯ ಮಾಡಿದ ಪಾಪಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯನ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಮನುಷ್ಯನ ಕರ್ಮ ಭಾದೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಯನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ.
ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕದಲ್ಲಿ ಮಳೆ ಮುನ್ಸೂಚನೆಯನ್ನು ನೀಡಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರವರ ವಿಚಾರ ಅದರ ಬಗ್ಗೆ ಹೇಳಲು ಆಗುವುದಿಲ್ಲ. ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ, ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ.
ರಾಜಕೀಯ ವ್ಯವಸ್ಥೆಯಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಹೇಳಿದ್ದೆ ಎಂದು ತಿಳಿಸಿದರು. ಈ ಮೂಲಕ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲೂ ಅಸ್ಥಿರತೆ ಕಾಡಲಿದೆ ಎಂದು ಸೂಚ್ಯವಾಗಿ ಹೇಳಿದರು. ಆದರೀಗ ಅವರು ಹೇಳಿರುವುದು ನಿಜವಾಗಿದೆ ಮಳೆ ಕಡಿಮೆಯಾಗಿದೆ ಮಾತ್ರವಲ್ಲದೆ ಇಸ್ರೇಲ್ ಅಲ್ಲಿ ಯುದ್ಧದ ಸಂದರ್ಭ ಎದುರಾಗಿದೆ. ಒಂದೇ ಸರ್ಕಾರ ಬರುತ್ತದೆ, ಸ್ಥಿರ ಸರ್ಕಾರ ಇರುತ್ತದೆ ಎಂದು ಹೇಳಿದ್ದೆ, ಅದು ನಿಜವಾಗಿದೆ.
ಅದರಂತೆ ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ. ಜತೆಗೆ ಜಲಪ್ರಳಯ ಆಗುವ ಲಕ್ಷಣ ಇದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ. ಈ ಮೊದಲು ಬಾಂಬ್ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ’ ಎಂದು ಕೋಡಿಶ್ರೀ ನುಡಿದಿದ್ದರು.
ಇತ್ತೀಚಿನ ಪ್ರಕರಣಗಳನ್ನು ಗಮನಿಸುತ್ತಿದ್ದರೆ ಸ್ವಾಮೀಜಿ ನುಡಿದಿದ್ದ ಈ ಸ್ಪೋಟಕ ಭವಿಷ್ಯ ಈಗ ನಿಜವಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಹೌದು, ಇತ್ತೀಚೆಗೆ ಎಳೆ ಪ್ರಾಯದ ಯುವಕ ಯುವತಿಯರು ನೋಡು ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗಿ ಜನರನ್ನು ಚಿಂತೆ ಗೆ ತಳ್ಳುತ್ತಿದೆ.
ಕಳೆದ ವರ್ಷ ಕೋಡಿಹಳ್ಳಿ ಶ್ರೀಗಳು ನುಡಿದಿದ್ದ ಭವಿಷ್ಯ ಏನಾಗಿತ್ತು ಗೊತ್ತಾ?
ಮನುಷ್ಯ ಹೋಗು ಹೋಗುತ್ತಲೇ ಬಿದ್ದು ಸಾಯುವ ಕಾಲ ಬಂದೇ ಬರುತ್ತದೆ ಎಂದು ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು.
ಹಿಂದೆ ನೆಲಪಟ್ಟು ಎಂಬ ಕಾಯಿಲೆ ಇತ್ತು. ಅದಕ್ಕೆ ರಾಹು ಅಂತ ಹಿರಿಯರು ಕರೆಯುತ್ತಿದ್ದರು. ರಾಹು ಬಡೀತು, ಹೋಗ ಹೋಗ್ತಾ ಬಿದ್ದ ಅನ್ನೋರು. ಅಂತಹ ಕಾಯಿಲೆಗಳು ಮುಂದಿನ ದಿನಗಳಲ್ಲಿ ಬಂದೇ ಬರುತ್ತವೆ ಎಂದು ಹೇಳಿದ್ದರು.
ಕರೊನಾ ಸಂಪೂರ್ಣ ಮಾಯವಾಗಲು ಇನ್ನೂ 10 ವರ್ಷ ಬೇಕಾಗುತ್ತದೆ. ಜೂನ್ 20ರ ಬಳಿಕ ಸದ್ಯದ ಪರಿಸ್ಥಿತಿ ಸುಧಾರಿಸಲಿದೆ. ಕಫ, ಪಿತ್ತ, ವಾತದ ಮೂಲಕ ಕಾ ಯಿ ಲೆ ಬಂದು ಮನುಷ್ಯ ನರಳುತ್ತಾನೆಂದು ಎರಡು ವರ್ಷದ ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ. ಪ್ರ ಳ ಯ ಆಗುತ್ತೆ ಅಂದಿದ್ದೆ. ಹಿಮಾಲಯದಲ್ಲಿ ಅದೂ ಘಟಿಸಿತು.
ಭವಿಷ್ಯದಲ್ಲಿ ಇನ್ನೊಂದು ದೊಡ್ಡ ಅಲೆ ಬರಲಿದ್ದು ಅದರ ಪರಿಣಾಮ ಕೆಟ್ಟದಿದೆ. ಈಗ ಹೂಳುತ್ತಿರುವ ಹೆಣಗಳು ಆಗ ಮಾತನಾಡುತ್ತವೆ. ನಾನು ಹೇಳುವುದನ್ನೆಲ್ಲ ನೀವು ನೋಡುತ್ತೀರಿ ಎಂದರು. ‘ಕುಂಭದಲ್ಲಿ ಗುರು ಬರಲು ತುಂಬುವುದು ಕೆರೆ-ಕಟ್ಟೆ, ಶಂಭುವಿನ ಪದಸಾಕ್ಷೆ ಡಂಬವೆನಿಸಲು’ ಅಂದರೆ, ಕುಂಭ ರಾಶಿಯಲಿ ಮಳೆ ಹೆಚ್ಚಿದ್ದು, ಅದರ ಜತೆ ಶೀತವೂ ಇರಲಿದೆ. ಶೀತ ಎಂದರೆ ಕಾಯಿಲೆ ಎಂದರ್ಥ. ಕಾರ್ತಿಕದವರೆಗೆ ಕರೊನಾ ಆರ್ಭಟ ಜೋರಾಗಿರಲಿದೆ. ಗಾಳಿ, ಆಕಾಶ ಹಾಗೂ ಭೂಮಿಯ ಸ್ವಚ್ಛತೆಗೆ ಹೀಗೆಲ್ಲ ಆಗುತ್ತಿದೆ. ಪ್ರಕೃತಿಯಿಂದ ಯೋಗವಿದೆ. ಸಂಕ್ರಾಂತಿ ಬಳಿಕ ವಿಶ್ವದಲ್ಲಿ ಬಹುದೊಡ್ಡ ವಿಪ್ಲವ ಸಂಭವಿಸಲಿದೆ. ದೊಡ್ಡ ದೊಡ್ಡ ತ ಲೆ ಗಳು ಉರುಳುತ್ತವೆ. ರಾಜಕೀಯ ಭೀತಿ ಇದೆ. ಸಾಮೂಹಿಕ ಸಾವು – ನೋವು ಹೆಚ್ಚುತ್ತದೆ ಎಂದಿದ್ದರು.