ಕೊನೆಗೂ ಬರ್ಮುಡಾ ಟ್ರಯಾಂಗಲ್ ರಹಸ್ಯವನ್ನ ಭೇದಿಸಿದ ವಿಜ್ಞಾನಿಗಳು: ಆಂಜನೇಯನಿಗೂ ಇದೆ ಲಿಂಕ್

in Uncategorized 17,529 views

ಬರ್ಮುಡಾ ಟ್ರಯಾಂಗಲ್ ಹೆಸರನ್ನು ಕೇಳಿದಾಗ ಜನರು ಒಮ್ಮೆಲೆ ಬೆಚ್ಚಿ ಬೀಳುತ್ತಾರೆ. ಈ ಸ್ಥಳವನ್ನ ಒಂದು ಜಾಗವೆಂದು ಪರಿಗಣಿಸದೆ ಇದನ್ನು ದಾನವರ ಪ್ರದೇಶವೆಂದೂ ಕರೆಯಲಾಗುತ್ತದೆ. ಬರ್ಮುಡಾ ಟ್ರಯಾಂಗಲ್ ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಆಪೋಷನ ತೆಗೆದುಕೊಂಡ ಸ್ಥಳವಾಗಿದೆ. ಆದರೆ ಅದ್ಯಾವ ಕಾರಣಕ್ಕಾಗಿ ದೊಡ್ಡ ದೊಡ್ಡ ಹಡಗುಗಳು ಮತ್ತು ವಿಮಾನಗಳು ಇಲ್ಲಿ ಮುಳುಗುತ್ತವೆ ಅನ್ನೋ ರಹಸ್ಯವನ್ನು ಕಂಡುಹಿಡಿಯಲು ಇನ್ನೂ ಸಂಶೋಧನೆ ಮಾಡಬೇಕಾಗಿಲ್ಲ. ಅಂತಿಮವಾಗಿ, ವಿಜ್ಞಾನಿಗಳು ಈ ರಹಸ್ಯವನ್ನು ಭೇದಿಸಿದ್ದಾರೆ. ಈ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಕಾರ, ಇದು ಯುಎಫ್‌ಒ (ಫ್ಲೈಯಿಂಗ್ ಸಾಸರ್) ಅಥವಾ ಸಮುದ್ರ ದಾನವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಇದು ಒಂದು ರೀತಿಯ ಭಯಾನಕ ತರಂಗ (ಅಲೆ) ವಾಗಿದ್ದು ಯಾವುದೇ ರಾಕ್ಷಸನಿಗಿಂತ ಕಡಿಮೆಯಿಲ್ಲ ಎಂದು ವಿಜ್ಞಾನಿಗಳು ನಂಬುತ್ತಾರೆ, ಈ ಅಲೆಗಳಿಂದಾಗಿ, ದೊಡ್ಡ ದೊಡ್ಡ ಹಡಗು ಸಹ ಈ ಜಾಗದಲ್ಲಿ ಮು-ಳು-ಗು-ತ್ತವೆ‌. ಬರ್ಮುಡಾ ಟ್ರಯಾಂಗಲ್ ರಾಕ್ಷಸ ಟ್ರಯಾಂಗಲ್ ಎಂದೂ ಕರೆಯುತ್ತಾರೆ. ಇದು ಉತ್ತರ ಅಟ್ಲಾಂಟಿಕ್‌ನ ಪ್ರದೇಶವಾಗಿದ್ದು, ಇದು ಮಿಯಾಮಿ, ಬರ್ಮುಡಾ ಮತ್ತು ಪೋರ್ಟೊ ರಿಕೊಗಳ ಗಡಿಯಲ್ಲಿದೆ.‌ ಈ ಬರ್ಮುಡಾ ಟ್ರಯಾಂಗಲ್ ಹಲವಾರು ವರ್ಷಗಳಿಂದ ಹಡಗುಗಳು ಮತ್ತು ವಿಮಾನಗಳನ್ನು ಆಪೋಷಣ ತೆಗೆದುಕೊಂಡಿದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ಆಶ್ಚರ್ಯಕರ ಸಂಗತಿಯೆಂದರೆ, ಇಲ್ಲಿಯವರೆಗೆ, ಈ ವಿಮಾನಗಳು ಮತ್ತು ಹಡಗುಗಳು ಮಾತ್ರ ಪತ್ತೆಯಾಗಿಲ್ಲ.

ಅಧ್ಯಯನ ಮಾಡುವ ಸಂಶೋಧಕರು ಇದು ದಕ್ಷಿಣ ಮತ್ತು ಉತ್ತರದ ಚಂಡಮಾರುತವಾಗಿದ್ದು ಇದ್ದಕ್ಕಿದ್ದಂತೆ ಇವರೆಡೂ ಒಟ್ಟಿಗೆ ಸೇರುತ್ತಾರೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ, ಫ್ಲೋರಿಡಾದಲ್ಲಿ ಏನಾದರೂ ಸಂಭವಿಸಿದಲ್ಲಿ ಅದರಿಂದ ಅಲೆಗಳು, ತರಂಗಗಳು ಮತ್ತಷ್ಟು ಅಪಾಯಕಾರಿಯಾಗುತ್ತವೆ. ಈ ಭಯಾನಕ ಅಲೆಗಳು 100 ಅಡಿ ಎತ್ತರಕ್ಕೆ ಏರಬಹುದು. ಜನರ ಆತಂಕವನ್ನು ತೊಡೆದುಹಾಕಲು ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ. ರಾಕ್ಷಸ, ಆತ್ಮ, ಅಥವಾ ಯಾವುದೋ ಯುಎಫ್‌ಓ ಗಳ ಕಾರಣದಿಂದಾಗಿ ಹಡಗು, ವಿಮಾನಗಳು ಮುಳುಗುವುದಿಲ್ಲ ಆದರೆ ಅಲ್ಲಿನ ಅಪಾಯಕಾರಿ ಅಲೆಗಳಾಗಳಿಂದ ಅವು ಮುಳುಗಡೆಯಾಗಿವೆ ಎಂಬುದು ಈಗ ಸ್ಪಷ್ಟವಾಗಿದೆ. ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಬರ್ಮುಡಾ ಟ್ರಯಾಂಗಲ್ ತನ್ನೊಡಲಲ್ಲಿ ಮುಳುಗಿಸಿಕೊಂಡಿದೆ.

ಆಂಜನೇಯನಿಗೂ ಬರ್ಮುಡಾ ಟ್ರಯಾಂಗಲ್ ಗೂ ಸಂಬಂಧ?

ಈ ಜಗತ್ತು ಅಸಂಖ್ಯಾತ ರಹಸ್ಯಗಳಿಂದ ಕೂಡಿದೆ. ಇವುಗಳಲ್ಲಿ ಅಂತಹ ರಹಸ್ಯಗಳನ್ನು ಈಗಲೂ, ವಿಜ್ಞಾನಿಗಳು ಸಹ ಕಂಡುಹಿಡಿಯಲಾಗಲಿ ಬೇಧಿಸಲಾಗಲಿ ಸಾಧ್ಯವಾಗಿಲ್ಲ. ಅಂತಹ ರಹಸ್ಯಗಳಲ್ಲಿ ಒಂದನ್ನ ಬರ್ಮುಡಾ ಟ್ರಯಂಗಲ್ ಎಂದೂ ಕರೆಯುತ್ತಾರೆ. ಅಮೆರಿಕದ ಪೂರ್ವ ಭಾಗದಲ್ಲಿರುವ ಈ ಬರ್ಮುಡಾ ಟ್ರಯಾಂಗಲ್ ವಿಶ್ವದ ಅತ್ಯಂತ ಅಪಾಯಕಾರಿ ರಹಸ್ಯ ಸ್ಥಳವಾಗಿದೆ.

ಅಪ್ಪಿತಪ್ಪಿಯೂ ಹಡಗು ಅಥವ ವಿಮಾನಗಳು ಈ ಬರ್ಮುಡಾ ಟ್ರಿಯಾಂಗಲ್ ಸಮುದ್ರ ತೀರಕ್ಕೆ ಹೋದರೂ, ಅದು ಈ ಜಗತ್ತಿಗೆ ಮತ್ತೆ ಗೋಚರಿಸುವುದಿಲ್ಲ. ಇಲ್ಲಿ ಅಂತಹ ಅಗೋಚರ ಶಕ್ತಿ ಇದೆ, ಆದರೆ ವಿಶ್ವದ ವಿಜ್ಞಾನಿಗಳು ಇಲ್ಲಿಯವರೆಗೆ ಇದರ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ.

ಬರ್ಮುಡಾ ಟ್ರಯಂಗಲ್ ಪ್ರದೇಶದಲ್ಲಿ ಮೇರಿ ಸೆಲೆಸ್ಟ್ರಿ ಎಂಬ ವ್ಯಾಪಾರಿ ಹಡಗು ಕಣ್ಮರೆಯಾಗಿತ್ತು. 1945 ಮತ್ತು 1965 ರ ನಡುವೆ, ಬರ್ಮುಡಾ ಟ್ರಯಂಗಲ್ ನಲ್ಲಿ  8 ವಿಮಾನಗಳು ನಿಗೂಢವಾಗಿ ಕಣ್ಮರೆಯಾದವು, ಆದರೆ ಅವುಗಳು ಇಲ್ಲಿಯವರೆಗೂ ಪತ್ತೆಯಾಗಿಲ್ಲ.

ಸಮುದ್ರದ 13 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿರುವ ಬರ್ಮುಡಾ ಟ್ರಯಂಗಲ್ ಎಷ್ಟು ದೊಡ್ಡ ಪ್ರದೇಶವಾಗಿದೆಯೆಂದರೆ ಇದು ನಮ್ಮ ದೇಶದ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳನ್ನ ಒಟ್ಟುಗೂಡಿಸಿದರೆ ಅದಕ್ಕಿಂತಲೂ ದೊಡ್ಡ ಪ್ರದೇಶವಾಗಿದೆ. ಈ ಟ್ರಯಂಗಲ್ ಎಲ್ಲಿಂದ ಪ್ರಾರಂಭವಾಗಿ ಎಲ್ಲಿ ಕೊನೆಗೊಳ್ಳುತ್ತದೆ ಎಂದು ಊಹಿಸುವುದು ಕಷ್ಟ.

ಇಲ್ಲಿಯವರೆಗೆ, ಬರ್ಮುಡಾ ಟ್ರಯಾಂಗಲ್ ರಹಸ್ಯವನ್ನು ಯಾರೂ ಭೇದಿಸಲಾಗಿಲ್ಲ, ಆದರೆ ಲಕ್ಷಾಂತರ ವರ್ಷಗಳ ಹಿಂದೆಯೇ ಇದರ ರಹಸ್ಯ ಸೃಷ್ಟಿಯಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿಯವರೆಗೆ ಯಾವುದೇ ವಿಜ್ಞಾನಿಗಳು ಭೇದಿಸಲಾಗದ ರಹಸ್ಯವನ್ನು ನಾವು ರಾಮಾಯಣದಲ್ಲಿ ಕಾಣಬಹುದಾಗಿದೆ.

ಬರ್ಮುಡಾ ಟ್ರಯಂಗಲ್ ಬಗ್ಗೆ ಈ ರಾಮಾಯಣದ ಕನೆಕ್ಷನ್ ಇರುವ ಬಗ್ಗೆ ಎರಡು ರೀತಿಯ ಊಹೆಗಳಿವೆ. ಅವುಗಳಲ್ಲಿ ಮೊದಲನೆಯದು, ಹನುಮಂತ ಸೀತಾ ಮಾತೆಯನ್ನ ಹುಡುಕಲು ಹೊರಟಾಗ, ಅವನು ಏಳು ಸಮುದ್ರಗಳನ್ನು ದಾಟಿ ಶ್ರೀಲಂಕಾಕ್ಕೆ ಹೋಗಬೇಕಾಗಿರುತ್ತದೆ. ಆ ಏಳು ಸಮುದ್ರಗಳ ಮೇಲೆ ಹಾರುತ್ತಿರುವಾಗ ಸಮುದ್ರದಲ್ಲಿ ರಾಕ್ಷಸ ಮಹಿಳೆಯೊಬ್ಬಳು ಹನುಮನ ನೆರಳನ್ನ ಹಿಡಿಯುತ್ತಾಳೆ.  ಇದರಿಂದಾಗಿ ಹನುಮನಿಗೆ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಕೋ-ಪ-ಗೊಂಡ ಹನುಮಂತ ಆಕೆಯನ್ನ ವಧಿಸುತ್ತಾನೆ.

ಬಳಿಕ ಹನುಮ ಸೀತೆಯನ್ನು ಹುಡುಕುತ್ತಾ ಮುಂದೆ ಹೋಗುತ್ತಾನೆ, ಆದರೆ ಆ ರಾಕ್ಷಸ ಮಹಿಳೆಯ ಅಗೋಚರ ಶಕ್ತಿ ಈಗಲೂ ಬರ್ಮುಡಾ ಸಮುದ್ರದಲ್ಲಿ ರಹಸ್ಯಮಯವಾಗಿ ಜೀವಂತವಾಗುದೆ ಎಂದು ಹೇಳಲಾಗುತ್ತದೆ. ಆ ಸಮುದ್ರದ ಮೇಲೆ ಯಾವ ವಸ್ತುಗಳು ತೆರಳಿದರೂ ಅವುಗಳ ನೆರಳು ಕಂಡರೂ ಅವುಗಳನ್ನ ತಡೆದು ತನ್ನೊಳಗೆ ನುಂಗಿಬಿಡುತ್ತಾಳೆ ಎಂದು ಹೇಳಲಾಗುತ್ತದೆ.

ಎರಡನೆಯ ವಿಚಾರವೇನೆಂದರೆ ಇತಿಹಾಸದ ಶ್ರೇಷ್ಠ ಜ್ಞಾನಿ ಮತ್ತು ಪ್ರತಾಪಿ ರಾಜ ಲಂಕಾಪತಿ ರಾವಣ ಶಿವನ ಪರಮ ಭಕ್ತನಾಗಿದ್ದ. ಮರ್ಯಾದಾ ಪುರುಷೋತ್ತಮ ರಾಮ ಹಾಗು ರಾವಣನ ನಡುವೆ ಯುದ್ಧ ಪ್ರಾರಂಭವಾಗುತ್ತಿದ್ದಾಗ, ಶಿವನು ಮಂಡೋದರಿಯ ಬಳಿ ಹೋಗಿ ರಾವಣನ ಹೊಕ್ಕುಳಿಂದ ಮಣಿಯೊಂದನ್ನ ತರಲು ಹೇಳಿದ. ಅದೇ ರೀತಿ, ಮಂಡೋದರಿ ರಾವಣನ ಹೊಕ್ಕುಳಿನಿಂದ ಆ ಮಣಿಯನ್ನು ತಂದು ಕೊಟ್ಟಳು, ಅದಾದ ಬಳಿಕ ರಾವಣನ ಅಂ-ತ್ಯ ಖಚಿತವಾಯಿತು. ಆದರೆ ಆ ಮಣಿಯ ಪ್ರಭಾವ ಎಷ್ಟಿತ್ತೆಂದರೆ ಅದು ಜಗತ್ತಿನ ಎಲ್ಲ ಜೀವ ಜಂತುಗಳ ಪಾಲಿಗೆ ಅಪಾಯಕಾರಿಯಾಗಿತ್ತು.

ಆಗ ಶಿವನು ರಾಮದೂತ ಹನುಮನಿಗೆ ಕರೆದು ಆ ಮಣಿಯನ್ನ ಸುರಕ್ಷಿತ ಜಾಗಕ್ಕೆ ಕೊಂಡೊಯ್ದು ಇಡುವಂತೆ ಹೇಳಿದನು. ಆಗ ಹನುಮ ಆ ಮಣಿಯನ್ನ ಅಮೇರಿಕಾದ ಪೂರ್ವ ತಟದಲ್ಲಿರುವ ಅಟ್ಲಾಂಟಿಕ್ ಮಹಾಸಾಗರದ ಮಧ್ಯೆ 13 ಲಕ್ಷ ಸ್ಕ್ವಯರ್ ಫೀಟ್ ನಷ್ಟು ಆಳದಲ್ಲಿ ಅದನ್ನ ಅಡಗಿಸಿಟ್ಟನಂತೆ.

ಇದೇ ಕಾರಣದಿಂದ ಇಂದು ಕೂಡ ಯಾವುದೇ ವಸ್ತು ಆ ಪ್ರದೇಶದ ಮೇಲಿಂದ ಅಥವ ಹತ್ತಿರಕ್ಕೆ ಹೋದರೂ ಅವುಗಳನ್ನು ಆ ಜಾಗ ತನ್ನೆಡೆಗೆ ಸೆಳೆದು ಲೀನ‌ ಮಾಡಿಕೊಂಡುಬಿಡುತ್ತದೆ ಎಂದು ಹೇಳಲಾಗುತ್ತದೆ.

ಬರ್ಮುಡಾ ಟ್ರಯಂಗಲ್ ರಹಸ್ಯ ಹನುಮನಿಗೆ ಸಂಬಂಧಿಸಿದೆ. ಇದನ್ನ ಈವರೆಗೂ ಜಗತ್ತಿನ ಯಾವ ವಿಜ್ಞಾನಿಗಳೂ ಭೇದಿಸಲಾಗಿಲ್ಲ. ಆದರೆ ಬರ್ಮುಡಾ ಟ್ರಯಂಗಲ್‌ನ ಈ ರಹಸ್ಯ ರಾಮಾಯಣದಲ್ಲಿ ಅಡಗಿದೆ. ಈ ಮಾಹಿತಿ ಮೊಟ್ಟಮೊದಲ ಬಾರಿಗೆ dvi news ನಲ್ಲಿ ಪ್ರಕಟವಾಗಿತ್ತು. ಈ ವಿಷಯದ ಬಗ್ಗೆ ವಿಸ್ತೃತವಾದ ಮಾಹಿತಿ ಅದೂ ರಾಮಾಯಣದಲ್ಲಿ ಉಲ್ಲೇಖಿತವಾದ ಸಂಸ್ಕೃತ ಶ್ಲೋಕಗಳ ಮೂಲಕ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಬಯಸಿದರೆ ಕಮೆಂಟ್ ಮಾಡಿ ತಿಳಿಸಿ, ಖಂಡಿತವಾಗಿಯೂ ಅದರ ಬಗ್ಗೆ ಮತ್ತೊಂದು ವಿಸ್ತೃತ ಅಂಕಣವನ್ನ ನಿಮ್ಮೆದುರಿಡುತ್ತೇನೆ. ಧನ್ಯವಾದಗಳು

– Vinod Hindu Nationalist

Advertisement
Share this on...