ನೆಲ್ಲೂರು(ಆಂಧ್ರಪ್ರದೇಶ): ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು, 50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.
ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾವಿರಾರು ಮಂದಿ ಸೇರುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಕೋವಿಡ್ ಗುಣಪಡಿಸಲು ಉಚಿತ ಆಯುರ್ವೇದ ಔಷಧ ಸಿಗುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಸೂಕ್ತ ಕ್ರಮ ಜರಗಿಸಲು ಮುಂದಾಗಿತ್ತು. ಅದರಂತೆ ಅಧಿಕಾರಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಆಯುರ್ವೇದ ಚಿಕಿತ್ಸೆ ಬಗ್ಗೆ ಜನರು ಪಾಸಿಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ವಾಪಸ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಶೀಘ್ರವಾಗಿ ಪೂರ್ಣ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
1000s throng for #AyurvedicMedicine for #Covid19 given by #Anandaiah in #Krishnapatnam, #Nellore district, #AndhraPradesh .
Several patients were also brought to the village out of belief.
Despite no scientific evidence, the free medicine became popular as a great healer. pic.twitter.com/e0vFUh2v6U— P Pavan (@PavanJourno) May 21, 2021
ಬೋಗಿನಿ ಆನಂದಯ್ಯ ಉಚಿತ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದು, ಸಂಘಟಕರ ಹೇಳಿಕೆ ಪ್ರಕಾರ ದಿನದಿಂದ ದಿನಕ್ಕೆ ಔಷಧ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 20ಸಾವಿರಕ್ಕೂ ಅಧಿಕ ಮಂದಿಗೆ ಔಷಧ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾವು ಔಷಧಕ್ಕಾಗಿ ಗಿಡಮೂಲಿಕೆಯನ್ನು ಉಪಯೋಗಿಸುತ್ತಿದ್ದೇವೆ. ಇದು ಕೋವಿಡ್ ಮುಂಜಾಗ್ರತಾ ಹಾಗೂ ಗುಣಪಡಿಸಲು ಉಪಯೋಗವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಆಯುರ್ವೇದ ಔಷಧ ನೀಡುತ್ತಿದ್ದೇನೆ. ನನ್ನ ಮಗ ಆರಂಭಿಕವಾಗಿ ಒಂದು ಲಕ್ಷ ರೂ. ನೀಡಿದ್ದ, ಇದೀ ಗ ಗಿಡಮೂಲಿಕೆ ಹಾಗೂ ಇತರ ಅಗತ್ಯವಸ್ತುಗಳಿಗಾಗಿ ಜನರು ದೇಣಿಗೆ ನೀಡುತ್ತಿದ್ದಾರೆ ಎಂದು ಆನಂದಯ್ಯ ತಿಳಿಸಿದ್ದಾರೆ.
ಆಯುರ್ವೇದ ಔಷಧ ನೀಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿ ಧನಲಕ್ಷ್ಮೀ, ಆರ್ ಡಿಒ ಸುವರ್ಣಮ್ಮ, ನೆಲ್ಲೂರ್ ಗ್ರಾಮೀಣ ಡಿಎಸ್ ಪಿ ವೈ.ಹರನಾಥ್ ರೆಡ್ಡಿ ಮತ್ತು ಆಯುಷ್ ವೈದ್ಯರು ಭೇಟಿ ನೀಡಿದ್ದರು. ಅಲ್ಲದೇ ಸ್ಯಾಂಪಲ್ಸ್ ಅನ್ನು ಪಡೆದುಕೊಂಡಿದ್ದರು.
ಔಷಧಕ್ಕೆ ಉಪಯೋಗಿಸುವ ಗಿಡಮೂಲಿಕೆಯ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ. ಜನರು ಔಷಧ ತೆಗೆದುಕೊಳ್ಳುವಾಗ ಕೋವಿಡ್ ನಿಯಮ ಪಾಲಿಸುವಂತೆ ಧನಲಕ್ಷ್ಮಿ ತಿಳಿಸಿದ್ದಾರೆ.
ಮುಂದಿನ ಸುದ್ದಿ:
ಕೊರೋನಾ ಭಯದಲ್ಲಿರುವ ಜನರಿಗೆ ಗುಡ್ ನ್ಯೂಸ್: ಜ್ವರ, ನೆಗಡಿ, ಕೆಮ್ಮು, ಎದೆ ನೋವು ಸೇರಿದಂತೆ ಎಲ್ಲ ವೈರಸ್ಸನ್ನೂ ಥಟ್ಟನೆ ಓಡಿಸುತ್ತೆ ಈ ಕಷಾಯ
ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ ಕೆಲವು ಕಷಾಯಗಳು ಸಹಕಾರಿ.
ಕಷಾಯ ಕುಡಿಯುವ ಮೂಲಕ ಈ ಎಲ್ಲ ರೋಗದಿಂದ ಮುಕ್ತಿ ಪಡೆಯಬಹುದು. ರೋಗದ ವಿರುದ್ಧ ಹೋರಾಡಲು ನಮಗೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗ ನಿರೋಧಕ ಶಕ್ತಿ ಮಾತ್ರೆಗಳಿಗಿಂತ ನೈಸರ್ಗಿಕವಾಗಿ ಬಂದಲ್ಲಿ ಹೆಚ್ಚು ಪ್ರಯೋಜನಕಾರಿ.
ತುಳಸಿ ಕಷಾಯ : ಈ ಕಷಾಯ ತಯಾರಿಸಲು 100 ಗ್ರಾಂ ತುಳಸಿ, 10 ಗ್ರಾಂ ದಾಲ್ಚಿನ್ನಿ, 10 ಗ್ರಾಂ ಬೇವಿನ ಎಲೆ, 50 ಗ್ರಾಂ ಸೋಂಪು, 15 ಗ್ರಾಂ ಸಣ್ಣ ಏಲಕ್ಕಿ ಮತ್ತು 10 ಗ್ರಾಂ ಕರಿಮೆಣಸಿನ ಅವಶ್ಯಕತೆಯಿದೆ.
ಈ ಎಲ್ಲಾ ವಸ್ತುಗಳನ್ನು ಪುಡಿಮಾಡಿ. ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಬಿಸಿ ಮಾಡಿ. ಇದು ಕುದಿಯಲು ಬಂದಾಗ ಅರ್ಧ ಚಮಚ ಈ ಮಿಶ್ರಣವನ್ನು ಹಾಕಿ. ಸ್ವಲ್ಪ ಸಮಯದವರೆಗೆ ಕುದಿಯಲು ಬಿಡಿ. ನಂತ್ರ ಫಿಲ್ಟರ್ ಮಾಡಿ ಬಿಸಿಯಿರುವಾಗ ಕುಡಿಯಿರಿ.
ಲವಂಗ, ತುಳಸಿ,ಕಾಳು ಮೆಣಸು,ಶುಂಠಿ ಕಷಾಯ :ನೆಗಡಿ, ಎದೆ ನೋವನ್ನು ಕಡಿಮೆ ಮಾಡಲು ಈ ಕಷಾಯ ಸೇವನೆ ಉತ್ತಮ. ಲವಂಗ, ತುಳಸಿ, ಶುಂಠಿ ಮತ್ತು ಕರಿಮೆಣಸಿನ ಕಷಾಯವು ನೆಗಡಿಗೆ ಪ್ರಯೋಜನಕಾರಿಯಾಗಿದೆ. ಈ ಕಷಾಯವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಶುಂಠಿ ರಸವು ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಲವಂಗ, ತುಳಸಿ, ಶುಂಠಿ ಮತ್ತು ಕರಿಮೆಣಸಿನ ಕಷಾಯ ತಯಾರಿಸಲು, ಎರಡು ಕಪ್ ನೀರು, 7-8 ತುಳಸಿ ಎಲೆಗಳು, 5 ಕರಿಮೆಣಸು, 5 ಲವಂಗ ಮತ್ತು ಒಂದು ಚಮಚ ತುರಿದ ಶುಂಠಿಯನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ 8-10 ನಿಮಿಷ ಕುದಿಸಿ. ಅದನ್ನು ಫಿಲ್ಟರ್ ಮಾಡಿ ಬೆಚ್ಚಗಿರುವಾಗ ಕುದಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
ಏಲಕ್ಕಿ, ಜೇನು ತುಪ್ಪದ ಕಷಾಯ : ಉಸಿರಾಟದ ತೊಂದರೆ ಕೊರೊನಾದ ಆರಂಭಿಕ ಲಕ್ಷಣ. ಕೊರೊನಾದಿಂದ ಮಾತ್ರ ಉಸಿರಾಟದ ಸಮಸ್ಯೆ ಕಾಡಬೇಕೆಂದೇನಿಲ್ಲ.
ಉಸಿರಾಟದ ಸಮಸ್ಯೆ ಕಾಡುವವರು ಏಲಕ್ಕಿ ಜೇನು ತುಪ್ಪದ ಕಷಾಯ ಕುಡಿಯಬೇಕು. ಒಂದು ಚಮಚ ಏಲಕ್ಕಿ ಪುಡಿಯನ್ನು ಎರಡು ಕಪ್ ನೀರಿಗೆ ಹಾಕಿ ಕನಿಷ್ಠ 10 ನಿಮಿಷ ಕುದಿಸಿ. ನಂತರ ಫಿಲ್ಟರ್ ಮಾಡಿ ಸ್ವಲ್ಪ ತಣ್ಣಗಾದ್ಮೇಲೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.
ಲವಂಗ, ತುಳಸಿ, ಕಪ್ಪು ಉಪ್ಪಿನ ಕಷಾಯ : ಲವಂಗ-ತುಳಸಿ ಮತ್ತು ಕಪ್ಪು ಉಪ್ಪಿನ ಕಷಾಯವು ಕೀಲು ನೋವಿಗೆ ಪರಿಹಾರ ನೀಡುತ್ತದೆ. ಈ ರೀತಿಯ ಕಷಾಯ ತಯಾರಿಸಲು, ಎರಡು ಗ್ಲಾಸ್ ನೀರನ್ನು ಪಾತ್ರೆಗೆ ಹಾಕಿ ಅದಕ್ಕೆ 8-10 ತುಳಸಿ ಎಲೆಗಳು, 5 ಲವಂಗ ಸೇರಿಸಿ ಚೆನ್ನಾಗಿ ಕುದಿಸಿ. ನೀರು ಅರ್ಧವಾದ್ಮೇಲೆ ಜರಡಿ ಹಿಡಿದು ರುಚಿಗೆ ತಕ್ಕಂತೆ ಕಪ್ಪು ಉಪ್ಪು ಸೇರಿಸಿ ಕುಡಿಯಿರಿ.
ವೈರಲ್ ಜ್ವರ ಕಡಿಮೆ ಮಾಡುವ ಕಷಾಯ :ಬದಲಾಗುತ್ತಿರುವ ಹವಾಮಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವೈರಲ್ ಜ್ವರದಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅನೇಕರ ಭಯಕ್ಕೆ ಕಾರಣವಾಗಿದೆ.
ವೈರಲ್ ಫಿವರ್ ನಿಂದ ಬಳಲುತ್ತಿರುವವರು ಕಷಾಯ ಕುಡಿದು ಜ್ವರ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ತಯಾರಿಸಲು ಒಂದು ಏಲಕ್ಕಿ, ದಾಲ್ಚಿನಿ ತುಂಡು, 5 ಕರಿಮೆಣಸು, 3 ಲವಂಗ, ಅರ್ಧ ಚಮಚ ಅಜ್ವೈನ್ ಮತ್ತು ಒಂದು ಚಿಟಕಿ ಅರಿಶಿಣ ಬೇಕು.
ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರು ಹಾಕಿ ಅದರಲ್ಲಿ ಅರಿಶಿನ ಬಿಟ್ಟು ಎಲ್ಲ ವಸ್ತುಗಳನ್ನು ಹಾಕಿ. ನೀರು ಅರ್ಧಕ್ಕೆ ಬಂದ್ಮೇಲೆ ಇದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ಅದನ್ನು ಕುಡಿಯಿರಿ.
ಈ ಎಲ್ಲಾ ವಸ್ತುಗಳು ದೇಹದ ಶಾಖವನ್ನು ಹೆಚ್ಚಿಸುತ್ತವೆ. ಹಾಗಾಗಿ ಇದನ್ನು ಸೇವಿಸಿದ ನಂತ್ರ ಆಹಾರದ ಬಗ್ಗೆ ಗಮನ ನೀಡಬೇಕು. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಬೇಧಿ ಶುರುವಾಗುವ ಸಾಧ್ಯತೆಯಿದೆ. ಯಾವುದೇ ಕಷಾಯ ಸೇವನೆ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.