ಬೆಂಗಳೂರು:
ಬಿಎಸ್‍ವೈ ಷ ರ ತ್ತು, ‘ಹೈ’ ಗೊಂ ದ ಲ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಹೈಕಮಾಂಡ್ ಮುಂದೆ ಕೆಲ ಷ ರ ತ್ತು ಗಳನ್ನು ಇರಿಸಿದ್ದರು ಎನ್ನಲಾಗಿದೆ. ಆ ಷ ರ ತ್ತು ಗಳ ಪೈಕಿ ತಮ್ಮ ವಿ ರು ದ್ಧ ಮತ್ತು ತಮಗೆ ಆಡಳಿತ ನಡೆಸಲು ಬಿಡದ ಎಂಎಲ್‍ಸಿ ಸಿ.ಪಿ.ಯೋಗೇಶ್ವರ್, ಶಾಸಕರಾದ ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಚಿವ ಸ್ಥಾನ ನೀಡಬಾರದು. ಒಂದು ವೇಳೆ ಇವರಿಗೆ ಸಂಪುಟದಲ್ಲಿ ಸ್ಥಾನ ಮಾಡಿದ್ರೆ, ಪುತ್ರ ವಿಜಯೇಂದ್ರನ ಹೆಸರು ಪರಿಗಣಿಸಬೇಕೆಂಬ ಷ ರ ತ್ತು ಇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬಿಎಸ್‍ವೈಗೆ ಸಿಕ್ಕಿದ್ದು ಗೆಲುವಾ? ಸೋಲು?: ಯೆಸ್, ಸಚಿವ ಸಂಪುಟದಲ್ಲಿ ತಮ್ಮ ವಿ ರೋ ಧಿ ಗಳಿಗೆ ಸಚಿವ ಸ್ಥಾನ ಸಿಗದಂತೆ ನೋಡಿಕೊಳ್ಳಲು ಯಡಿಯೂರಪ್ಪ ಮೇಲ್ನೋಟಕ್ಕೆ ಯಶಸ್ವಿಯಾದಂತೆ ಕಾಣುತ್ತೆ. ಮತ್ತೊಂದು ಕಡೆ ಪುತ್ರ ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ಬಿಎಸ್‍ವೈ ಫೇ-ಲ್ ಆದ್ರಾ ಅನ್ನೋ ಪ್ರ ಶ್ನೆ ಸಹ ಮುನ್ನಲೆಗೆ ಬಂದಿದೆ. ಇತ್ತ ಕೇಂದ್ರ ಸಚಿವ ಸಂಪುಟದಲ್ಲಿಯೂ ಪುತ್ರ, ಸಂಸದ ಬಿ.ವೈ.ರಾಘವೇಂದ್ರರಿಗೆ ನಿ ರಾ ಸೆ ಯುಂಟಾಗಿತ್ತು.
ಮುಖ್ಯಮಂತ್ರಿ ಆಯ್ಕೆ ಯಲ್ಲಿ ಮೇಲುಗೈ ಸಾಧಿಸಿದ್ದ ಯಡಿಯೂರಪ್ಪ ಅವರು ಸಂಪುಟ ರಚನೆಯಲ್ಲಿ ತೀ ವ್ರ ಹಿ ನ್ನ ಡೆ ಅನುಭವಿಸಿದ್ದಾರೆ. ತಮ್ಮ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಲು ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ಇದು ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಿ ನ್ನ ಡೆ ಯೆಂದೇ ವ್ಯಾಖ್ಯಾನಿಸಲಾಗಿದೆ.
ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾ ಜೀ ನಾ ಮೆ ನೀಡಿದ ನಂತರ ಅಚ್ಚರಿ ಅಭ್ಯರ್ಥಿಯಾಗಿ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ, ಈ ಬಾರಿ ತಮ್ಮ ಪುತ್ರನನ್ನು ಸಂಪುಟಕ್ಕೆ ಸೇರಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಮಧ್ಯಾಹ್ನ 12 ಗಂಟೆವರೆಗೂ ವಿಜಯೇಂದ್ರ ನನ್ನು ಸಂಪುಟಕ್ಕೆ ಸೇರಿಸಿಕೊಳ್ಳು ವಂತೆ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಮೂಲಕ ದೆಹಲಿ ನಾಯಕರಿಗೆ ಭಾ ರೀ ಲಾ ಬಿ ನಡೆಸಿದರು.
ವಿಜಯೇಂದ್ರ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಲೇಬೇಕು, ಸಚಿವ ಸ್ಥಾನ ನೀಡುವುದರಿಂದ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂಬ ಕಾರಣವನ್ನು ವರಿಷ್ಠರ ಮುಂದೆ ಇಟ್ಟಿದ್ದರು. ಆದರೆ, ಇದಕ್ಕೆ ತೀ ವ್ರ ವಿ ರೋ ಧ ವ್ಯಕ್ತಪಡಿಸಿರುವ ಹೈಕಮಾಂಡ್ ಕುಟುಂಬ ರಾಜಕಾರಣವನ್ನು ವಿ ರೋ ಧಿ ಸು ವ ನಾವೇ ನಿಮ್ಮ ಪುತ್ರನಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾದರೂ ಹೇಗೆ?
ಈಗಾಗಲೇ ಒಬ್ಬ ಪುತ್ರ ಸಂಸದನಾಗಿದ್ದಾನೆ. ಮತ್ತೊಬ್ಬ ಪುತ್ರನನ್ನು ಸಚಿವರನ್ನಾಗಿ ಮಾಡುವುದಾದರೆ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳ ಕು ಟುಂ ಬ ರಾ ಜ ಕಾ ರ ಣ ವನ್ನು ಪ್ರಶ್ನಿಸಲು ಸಾಧ್ಯವೇ ಎಂದಿದ್ದಾರೆ. ಇನ್ನೊಂದು ಮೂಲದ ಪ್ರಕಾರ ವಿಜಯೇಂದ್ರನಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ಅದು ಮತ್ತೊಂದು ಶ ಕ್ತಿ ಕೇಂದ್ರ (ಪವರ್ ಸೆಂಟರ್ ) ಆಗಲಿದೆ. ಇದರಿಂದ ಬೊಮ್ಮಾಯಿ ಅವರು ಮುಕ್ತವಾಗಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿಜಯೇಂದ್ರನಿಗೆ ಸಂಪುಟದಲ್ಲಿ ಸ್ಥಾನಮಾನ ನೀ ಡ ಲೇ ಬಾ ರ ದು ಎಂದು ರಾಜ್ಯವನ್ನು ಪ್ರತಿನಿಧಿಸುವ ದೆಹಲಿ ನಾಯಕರು ಅಡ್ಡಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲವನ್ನು ಪರಿಗಣಿಸಿಯೇ ವರಿಷ್ಠರು ವಿಜಯೇಂದ್ರನಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ನೀಡಲು ನಿ ರಾ ಕ ರಿ ಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ರಚನೆಯಾಗಿದ್ದು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ ಆಯ್ಕೆ ಲೆಕ್ಕಾಚಾರವನ್ನು ಗಮನಿಸಿದರೆ ಬಿಜೆಪಿ ಹೈಕಮಾಂಡ್ ಜಾಣ ನಡೆಯನ್ನು ಆಯ್ದುಕೊಂಡಿರುವುದು ಸ್ಪಷ್ಟವಾಗಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿ ರು ದ್ಧ ಬಂಡಾಯವೆದಿದ್ದ ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ಗೆ ಮಂತ್ರಿಗಿರಿ ಸಿಕ್ಕಿಲ್ಲ. ಇನ್ನು ಮುಖ್ಯಮಂತ್ರಿ ಸ್ಥಾನದ ಮೇ ಲೆ ಕ ಣ್ಣಿ ಟ್ಟು ದೆಹಲಿಗೆ ಓಡಾಡಿದ್ದ ಅರವಿಂದ್ ಬೆಲ್ಲದ್ ಅವರಿಗೂ ಸಚಿವ ಸ್ಥಾನ ಧಕ್ಕಿಲ್ಲ. ಇವರುಗಳಿಗೆ ಸಚಿವ ಸ್ಥಾನ ಸಿಗದಂತೆ ನೋಡಿಕೊಳ್ಳುವಲ್ಲಿ ಆ ಮಟ್ಟಿಗೆ ಬಿಎಸ್‍ವೈ ಯಶಸ್ವಿಯಾಗಿದ್ದಾರೆ ಅಂತಲೇ ಹೇಳಬಹುದು. ಆದರೆ ಯಡಿಯೂರಪ್ಪ ಪೂರ್ಣವಾಗಿ ಗೆ ದ್ದಿ ಲ್ಲ.
ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಅವರನ್ನು ಸರ್ಕಾರದ ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ, ಹಾಗಂತ ದೂರನೂ ಇಟ್ಟಿಲ್ಲ. ತುಂಬಾನೇ ಚಾಣಾಕ್ಷ ನಡೆಯನ್ನು ಆಯ್ದುಕೊಂಡಿದ್ದಾರೆ. ಬಿಎಸ್‍ವೈ ಅವರ ಕೆಲ ವಿ ರೋ ಧಿ ಗಳಿಗೆ ಸಚಿವ ಸ್ಥಾನ ಕೊಡದ ಮೂಲಕ ಅವರನ್ನು ಸಮಾಧಾನ ಮಾಡುವ ಕೆಲಸ ಆಗಿದೆ. ಆದರೆ ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯಗೂ ಹೈಕಮಾಂಡ್ ಸಚಿವ ಸ್ಥಾನ ನೀಡಿಲ್ಲ. ಆ ಮೂಲಕ ಬಿಎಸ್‍ವೈಗೆ ಹೈಕಮಾಂಡ್ ಅರ್ಧಚಂದ್ರವನ್ನು ನೀಡಿದೆ ಎನ್ನಬಹುದು
ಸಿಎಂ ಸ್ಥಾನದಿಂದ ಕೆಳಗಿಳಿದ ಯಡಿಯೂರಪ್ಪ ಸೂಚನೆಯಂತೆ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟಲಾಗಿದೆ. ಬಿಎಸ್‍ವೈ ಕೃಪೆಯಿಂದ ಸಿಎಂ ಆಗಿರುವ ಬೊಮ್ಮಾಯಿ ಅವರಿಗೆ ಯಡಿಯೂರಪ್ಪರ ನೆರಳಾಗದಂತೆ ದೆಹಲಿ ನಾಯಕರು ಮೊದಲೇ ಎ ಚ್ಚ ರಿ ಸಿ ದ್ದಾ ರೆ. ಅದೇ ರೀತಿ ವಿಜಯೇಂದ್ರ, ರೇಣುಕಾಚಾರ್ಯ ಅವರನ್ನು ಸರ್ಕಾರ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಯಡಿಯೂರಪ್ಪ ನೆ ರ ಳಿ ನಿಂ ದ ಕೊಂಚ ಸರಿದು ಸ್ವಂತಿಕೆ ಕಾಪಾಡುಕೊಳ್ಳಲು ಬೊಮ್ಮಾಯಿ ಕೂಡ ಮುಂದಾಗಿದ್ದಾರೆ ಎಂದೇ ವಿಶ್ಲೇಷಿಸಬಹುದಾಗಿದೆ.
ಇನ್ನು ಮೂಲಗಳ ಪ್ರಕಾರ ಕ್ಯಾಬಿನೆಟ್ ಆಯ್ಕೆಗೆ ಯಡಿಯೂರಪ್ಪ ಸೂಚಿಸಿದ್ದ ಶಾಸಕರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಕೊಟ್ಟಿಲ್ಲ.
ಬಿಎಸ್‍ವೈ ನೀಡಿದ್ದ ಪಟ್ಟಿ
ಎಂಪಿ ರೇಣುಕಾಚಾರ್ಯ, ಮಾಡಾಳು ವೀರೂಪಾಕ್ಷಪ್ಪ, ಹರತಾಳು ಹಾಲಪ್ಪ, ರಾಜೂಗೌಡ ನಾಯಕ್, ಎಂಪಿ ಕುಮಾರಸ್ವಾಮಿ, ಪ್ರೀತಂಗೌಡ, ಶಿವನಗೌಡ ನಾಯಕ್, ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ
ಮೇಲಿನ ಪಟ್ಟಿಯಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬಿಎಸ್‍ವೈ ಬೇಡ ಎಂದವರಿಗೆ ಬಿಜೆಪಿ ಸಚಿವ ಸ್ಥಾನ ಕೊಟ್ಟಿಲ್ಲವಾದರೂ, ಬೇಕು ಎಂದವರಿಗೂ ಸಚಿವ ಸ್ಥಾನ ನೀಡದೆ ರಾ ಜ ಕೀ ಯ ದಾ ಳ ಉ ರು ಳಿ ಸಲಾಗಿದೆ.
ಇನ್ನು ಈ ಬಾರಿಯೂ ಮಂತ್ರಿಗಿರಿಯಿಂದ ವಂ ಚಿ ತ ರಾದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಬಳಿ ಅ ಸ ಮಾ ಧಾ ನ ಹೊ ರ ಹಾಕಿದ್ದಾರೆ ಎನ್ನಲಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದರು ಹೈಕಮಾಂಡ್ ಕ್ಯಾಬಿನೆಟ್ಗೆ ಸೇರಿಸಿಕೊಂಡಿಲ್ಲ ಎಂದು ಭಾವುಕರಾಗಿ ಬಿಎಸ್‍ವೈ ಎದುರು ಕ ಣ್ಣೀ ರಿ ಟ್ಟಿ ದ್ದಾ ರೆ ಎನ್ನಲಾಗುತ್ತಿದೆ. ಕೋವಿಡ್ ಸಮಯದಲ್ಲಿ ತಮ್ಮ ಕೆಲಸದ ಮೂಲಕವೇ ರೇಣುಕಾಚಾರ್ಯ ಹೆಸರಾಗಿದ್ದರು. ದೆಹಲಿ ನಾಯಕರು ಕರೆ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಎಂದು ಶಹಬ್ಬಾಶ್ ಗಿರಿ ಕೊಟ್ಟಿದ್ದರು. ಇದರಾಚೆಗೂ ಹೊನ್ನಾಳಿ ಶಾಸಕರಿಗೆ ಮಂತ್ರಿ ಆಗುವ ಭಾಗ್ಯ ಇನ್ನೂ ಬಂದಿಲ್ಲ.
ಮಂತ್ರಿ ಸ್ಥಾನ ದೊರೆಯದ ಹಿನ್ನೆಲೆ ಯಡಿಯೂರಪ್ಪರನ್ನು ಭೇಟಿ ಮಾಡಿದ ರೇಣುಕಾಚಾರ್ಯ ಅವರು ನಾನು ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ತ ಪ್ಪಾ ದ ರೂ ಏನು? ಪಕ್ಷ ವಿ ರೋ ಧಿ ಗಳ ವಿ ರು ದ್ಧ ಹೋ ರಾ ಟ ಮಾಡಿದ್ದೇ ತ ಪ್ಪಾ ಎಂದು ಪ್ರ ಶ್ನಿ ಸು ವ ಮೂಲಕ ಗ ದ್ಗ ದಿ ತ ರಾದರು ಎನ್ನಲಾಗುತ್ತಿದೆ. ಮುಂದೆ ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇದೆ ಎಂದು ಯಡಿಯೂರಪ್ಪ ಸಮಾಧಾನ ಮಾಡಿದ್ದಾರೆ.