ಕೊರೊನಾ ಪ್ರತಿದಿನವೂ ಒಂದಲ್ಲಾ ಒಂದು ನೋವಿನ ಸಂಗತಿಯಲ್ಲೇ ಬಿಚ್ಚಿಡುತ್ತಿದೆ. ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಆಜ್ ತಕ್ ವಾಹಿನಿಯ ನಿರೂಪಕ ರೋಹಿತ್ ಸರ್ದಾನಾ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು.
ಆ ಘಟನೆ ಮಾಸುವ ಮುನ್ನವೇ ದೂರದರ್ಶನ ವಾಹಿನಿ ನಿರೂಪಕಿ ಕಾನುಪ್ರಿಯಾ ಅವರು ಇದೇ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಕಾನುಪ್ರಿಯಾ ಅವರು ಕೇವಲ ಸುದ್ದಿ ನಿರೂಪಕಿ ಅಷ್ಟೇ ಅಲ್ಲದೇ, ನಟಿ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದರು. ಕೊರೊನಾ ಸೋಂಕು ದೃಢಪಟ್ಟ ನಂತರ ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಎರಡು ದಿನಗಳ ಹಿಂದಷ್ಟೇ ತಾನು ಆಸ್ಪತ್ರೆಗೆ ದಾಖಲಾಗಿದ್ದು, ತನಗೆ ಎಲ್ಲರ ಪ್ರಾರ್ಥನೆ ಅಗತ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಅವರು ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಶ್ವಾಸಕೋಸಕ್ಕೆ ಸೋಂಕು ಸಾಕಷ್ಟು ಹಾನಿಯನ್ನುಂಟು ಮಾಡಿತ್ತು. ಆಮ್ಲಜನಕದ ಕೊರತೆ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದಾಗಿ ಕಾನುಪ್ರಿಯಾ ಅವರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.
Brahma Kumaris TV Anchor Kanu Priya Succumbs To Covid-19, Sister BK Shivani Informs On Twitter.#KanuPriya #BKShivani #Coronavirushttps://t.co/MBRhsSRBOR
— ABP LIVE (@abplivenews) May 1, 2021
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ ಪುತ್ರನ ನಿಧನ
ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಳವಾಗುತ್ತಲೇ ಇದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಯಾವುದೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಅತ್ತ ಸ್ಯಾಂಡಲ್ ವುಡ್ ನಲ್ಲಿ ಯಾವ ಸಿನಿಮಾ ನಿರ್ಮಾಣದ ಕಾರ್ಯವಾಗಲೀ, ಬಿಡುಗಡೆಯಾಗಲೀ ಆಗುತ್ತಿಲ್ಲ. ಹಾಗಾಗಿ ಸಿನಿಮಾಗೆ ಸಂಬಂಧಿಸಿದ ಯಾವುದೇ ಕೆಲಸ ಸಾಗದೇ ಸಿನಿಮಾಗಳನ್ನೇ ನಂಬಿಕೊಂಡವರು ಇಂದು ಬೀದಿ ಬೀಳುವ ಸಂದರ್ಭ ಎದುರಾಗಿದೆ.
ಇದೇ ವೇಳೆ ಕೋಟಿ ರಾಮ ಅವರಂತಹ ದೊಡ್ಡ ದೊಡ್ಡ ನಿರ್ಮಾಪಕರೇ ಸಾವಿಗೀಡಾಗುತ್ತಿದ್ದಾರೆ. ಚಿತ್ರರಂಗದ ಅನ್ನದಾತರೆನಿಸಿದ ರಾಮು ಅವರು ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಮತ್ತೊಬ್ಬ ಟಾಪ್ ನಟನ ಸಾವು ಸಂಭವಿಸಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ್ದ ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಅವರು ಕೂಡ ಇತ್ತೀಚೆಗೆ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಇದೇ ವೇಳೆ ನವರಸ ನಾಯಕ ಜಗ್ಗೇಶ್ ಅವರ ತಮ್ಮ ಕೋಮಲ್ ಅವರಿಗೂ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದಾರೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ರಾಮು ಅವರ ಆರೋಗ್ಯದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವಪ್ಪಿದ್ದಾರೆ.
ರಾಮು ಕಣಗಾಲ್ ಅವರು ಭರತನಾಟ್ಯದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದ್ದರು. ಅಲ್ಲದೇ, ಕಣಗಾಲ್ ಹೆಸರಿನಲ್ಲಿ ನೃತ್ಯ ಶಾಲೆಯನ್ನು ನಡೆಸುತ್ತಿದ್ದರು. ಇವರು ಸಾಕಷ್ಟು ಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದಲ್ಲದೇ, ಕಿರುತೆರೆಯಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ರಾಮು ಕಣಗಾಲ್ ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬುದು ನಿಜಕ್ಕೂ ವಿಷಾದನೀಯ ಎನಿಸುತ್ತದೆ.
ಮೊನ್ನೆಯಷ್ಟೇ ಅಸುನೀಗಿದ್ದ ಶಂಖನಾದ ಅರವಿಂದ
ಬೆಂಗಳೂರು: ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಳವಾಗುತ್ತಲೇ ಇದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಯಾವುದೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಅತ್ತ ಸ್ಯಾಂಡಲ್ ವುಡ್ ನಲ್ಲಿ ಯಾವ ಸಿನಿಮಾ ನಿರ್ಮಾಣದ ಕಾರ್ಯವಾಗಲೀ, ಬಿಡುಗಡೆಯಾಗಲೀ ಆಗುತ್ತಿಲ್ಲ. ಹಾಗಾಗಿ ಸಿನಿಮಾಗೆ ಸಂಬಂಧಿಸಿದ ಯಾವುದೇ ಕೆಲಸ ಸಾಗದೇ ಸಿನಿಮಾಗಳನ್ನೇ ನಂಬಿಕೊಂಡವರು ಇಂದು ಬೀದಿಗೆ ಬೀಳುವ ಸಂದರ್ಭ ಎದುರಾಗಿದೆ.
ಕೋಟಿ ರಾಮು ಅವರಂತಹ ದೊಡ್ಡ ದೊಡ್ಡ ನಿರ್ಮಾಪಕರೇ ಸಾವಿಗೀಡಾಗುತ್ತಿದ್ದಾರೆ. ಚಿತ್ರರಂಗದ ಅನ್ನದಾತರೆನಿಸಿದ ರಾಮು ಅವರು ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗ ಚಿಕಿತ್ಸೆ ಫಲಕಾರಿಯಾಗದೇ ಸಾ ವ ನ್ನ ಪ್ಪಿ ದ್ದ ರು. ಅದರ ಬೆನ್ನಲ್ಲೇ ಮತ್ತೊಬ್ಬ ಟಾಪ್ ನಟನ ಸಾ ವು ಸಂಭವಿಸಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ್ದ ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಅವರು ಕೂಡ ಇತ್ತೀಚೆಗೆ ಕೊರೊನಾಕ್ಕೆ ಬ ಲಿ ಯಾಗಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರ ತಮ್ಮ ಕೋಮಲ್ ಅವರಿಗೂ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದರು. ಈ ಮಧ್ಯೆ ಸ್ಯಾಂಡಲ್‌ವುಡ್ ಗೆ ಮತ್ತೊಂದು ಆಘಾತ ಎದುರಾಗಿದೆ. ಹೌದು ಬೆಟ್ಟದ ಹೂವು ಕನ್ನಡ ಚಿತ್ರದ ಮೂಲಕ ಚಿರಪರಿಚಿತರಾದ ಹಿರಿಯ ಚಲನ ಚಿತ್ರ ಪೋಷಕ ನಟ ಶಂಖನಾದ ಅರವಿಂದ್ 70) ಕೊರೊನಾ ಸೋಂಕಿನಿಂದ ನಿ ಧ ನ ರಾಗಿದ್ದಾರೆ.
13 ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಅಂದಿನಿಂದ ಅರವಿಂದ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 1 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಬೆಟ್ಟದ ಹೂವು ಚಿತ್ರದಲ್ಲಿ ಶಂಖನಾದ್ ಅರವಿಂದ್ ಜೊತೆ ಪುನೀತ್ ರಾಜಕುಮಾರ್ ಬಾಲ್ಯ ನಟರಾಗಿ ನಟಿಸಿದ್ದರು. ಇದೀಗ ಅರವಿಂದ್ ಅವರ ಸುದ್ದಿ ಕೇಳಿ ಚಿಕ್ಕ ವಯಸ್ಸಿನಲ್ಲಿ ತನ್ನನ್ನ ಎತ್ತಿ ಆಡಿಸಿದ್ದ ಅಂಕಲ್ ಹೋಗಿಬಿಟ್ಟರೇ ಎಂದು ಪುನೀತ್ ಕಣ್ಣೀರಿಟ್ಟಿದ್ದಾರೆ.
ಶಂಖನಾದ ಅರವಿಂದ್ ಅವರು ಕಾಡಿನ ಬೆಂಕಿ, ಪ್ರಥಮ ಉಷಕಿರಣ, ಅನುಭವ ಸೇರಿದಂತೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ ಅರವಿಂದ್ ಮೃ ತ ಪಟ್ಟಿರುವ ಬಗ್ಗೆ ಅವರ ಪುತ್ರಿ ಮಾನಸ ಹೊಳ್ಳ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. “ಸತತ 13 ದಿನಗಳು ಆಸ್ಪತ್ರೆಯಲ್ಲಿ ಹೋರಾಟ ನಡೆಸಿ ಇಂದು 1 ಗಂಟೆಗೆ ದೈವದೀನರಾಗಿದ್ದಾರೆಂದು ತಿಳಿಸಲು ವಿಶಾದಿಸುತ್ತೇನೆ. ನಮ್ಮ ತಂದೆಯವರು Shankhanaada Aravinda Kalarunda Aravind MA” ಎಂದು ಅವರು ಬರೆದುಕೊಂಡಿದ್ದಾರೆ. ಮೃ ತ ರು ಮೂವರು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.