ಈ ಕರೊನಾದಿಂದಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಎಷ್ಟೊ ಜನರು ಆಸ್ಪತ್ರೆಗೆ ಹೋದವರು ಶ-ವ-ವಾಗಿ ವಾಪಸು ಬರುತ್ತಿದ್ದಾರೆ. ರೋಗಿಗಳು ಕೊನೆಯುಸಿರೆಳೆವ ಮುನ್ನ ಅವರಿಗೆ ಅವರ ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡುವ ಅವಕಾಶವನ್ನೂ ವೈದ್ಯಕೀಯ ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ. ಅದೇ ರೀತಿ ತಾಯಿಯ ಕೊನೆ ಕ್ಷಣದಲ್ಲಿ ವಿಡಿಯೋ ಕಾಲ್ ಮಾಡಿದ ಮಗ ತಾಯಿಗಾಗಿ ಹಾಡೊಂದನ್ನು ಹಾಡಿರುವ ಘಟನೆ ನಡೆದಿದೆ.
ಡಿಪ್ಶಿಖಾ ಘೋಷ್ ಹೆಸರಿನ ಡಾಕ್ಟರ್ ತಮ್ಮ ಆಸ್ಪತ್ರೆಯಲ್ಲಿ ನಡೆದ ಕಣ್ಣೀರು ತರಿಸುವ ಕಥೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಘಮಿತ್ರ ಚಟರ್ಜಿ ಹೆಸರಿನ ಮಹಿಳೆ ಕರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯನ್ನು ಬದುಕಿಸುವುದು ತುಂಬಾ ಕಷ್ಟವಾಗಿತ್ತಂತೆ. ಇನ್ನೇನು ಆಕೆ ಕೊನೆಯುಸಿರೆಳೆಯುತ್ತಾಳೆ ಎನ್ನುವ ವೇಳೆಗೆ ಡಿಪ್ಶಿಖಾ ಘೋಷ್, ಸೋಂಕಿತೆಯ ಮಗ ಸೋಹಮ್ ಚಟರ್ಜಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಅಮ್ಮ ಮಗನನ್ನು ವಿಡಿಯೋ ಕಾಲ್ನಲ್ಲಿ ಮಾತನಾಡಿಕೊಳ್ಳಲು ಬಿಟ್ಟಿದ್ದಾರೆ.
ಈ ವೇಳೆ ಡಾಕ್ಟರ್ಗೆ ಮನವಿ ಮಾಡಿದ ಸೋಹಮ್, ಅಮ್ಮನಿಗಾಗಿ ಹಾಡೊಂದನ್ನು ಹಾಡಲಾರಂಭಿಸಿದ್ದಾರೆ. ಅಮ್ಮ ಮಗನ ಕಥೆಯಿರುವ ಸಿನಿಮಾದ “ತೇರಾ ಮುಜ್ಸೆ ಹೈ ಪೆಹ್ಲೇ ಕ ನತಾ ಕೋಯಿ” ಹಾಡನ್ನು ಹಾಡಿದ್ದಾರೆ. ಮೊಬೈಲ್ ಹಿಡಿದು ಕುಳಿತಿದ್ದ ಡಾಕ್ಟರ್ ಹಾಡಿಗೆ ತಲೆದೂಗಿದ್ದಾರೆ. ಈ ಹಾಡನ್ನು ಕೇಳಿ ಅಕ್ಕ ಪಕ್ಕದ ವಾರ್ಡ್ಗಳಲ್ಲಿದ್ದ ನರ್ಸ್ಗಳೂ ಬಂದು ನಿಂತಿದ್ದಾರೆ. ಅಮ್ಮ ಮಗನ ಪ್ರೀತಿಯನ್ನು ಕಂಡು ಪ್ರತಿಯೊಬ್ಬರು ಕಣ್ಣೀರು ಸುರಿಸಿದ್ದಾರೆ.
ಈ ಘಟನೆಯನ್ನು ಡಾಕ್ಟರ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಭಾರೀ ವೈರಲ್ ಆಗಿದೆ. ಕರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡಿರುವ ಅದೆಷ್ಟೋ ಜನ ಅವರವರ ಅಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಒಳ್ಳೆಯ ಚಿಕಿತ್ಸೆ ಸಿಕ್ಕಿದ್ದರೆ ನಾನೂ ಬದುಕುತ್ತಿದ್ದೆ ಎಂದು ಪ್ರಾಣ ಬಿಟ್ಟ ನಟ
‘ನನಗೂ ಒಳ್ಳೆ ಚಿಕಿತ್ಸೆ ಸಿಕ್ಕಿದ್ರೆ ಬದುಕುತ್ತಿದ್ದೆ, ಮತ್ತೆ ಹುಟ್ಟಿ ಬರುತ್ತೇನೆ ಹಾಗು ಒಳ್ಳೆ ಕೆಲಸಗಳನ್ನ ಮಾಡುತ್ತೇನೆ. ಈಗ ನಾನು ಧೈರ್ಯ ಕಳೆದುಕೊಂಡಿದ್ದೇನೆ’
ಈ ಮಾತುಗಳನ್ನು ಯಾರೇ ಕೇಳಿದರೂ ಒಮ್ಮೆ ಅವರ ರೋಮಗಳು ಎದ್ದು ನಿಲ್ಲುತ್ತವೆ. ಈ ಮಾತುಗಳು ನಟ ರಾಹುಲ್ ವೊಹ್ರಾ ಅವರದ್ದಾಗಿವೆ. ಅವರ ಸಾ ವಿ ಗೂ ಕೆಲ ಗಂಟೆಗಳ ಮೊದಲು ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ತಮ್ಮ ಮನದಾಳದ ಮಾತುಗಳನ್ನ ಪೋಸ್ಟ್ ಮಾಡಿದ್ದರು. ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ರಾಹುಲ್ ವೊಹ್ರಾ ಭಾನುವಾರ ಬೆಳಿಗ್ಗೆ 6: 30 ಕ್ಕೆ ಜಗತ್ತಿಗೆ ವಿದಾಯ ಹೇಳಿದರು. ರಾಹುಲ್ ವೊಹ್ರಾ ಕೊರೋನಾ ಪಾಸಿಟಿವ್ ಆಗಿದ್ದರು, ನಂತರ ಅವರ ಆರೋಗ್ಯವು ನಿರಂತರವಾಗಿ ಕ್ಷೀಣಿಸುತ್ತಿತ್ತು. ಇದಕ್ಕಾಗಿ ಅವರು ಫೇಸ್‌ಬುಕ್ ಮೂಲಕ ಜನರಿಂದ ಸಹಾಯವನ್ನು ಕೋರಿದ್ದರು.
Heartbreaking💔 RIP🙏
Will miss your thought-provoking videos.
We lost a fabulous actor & YouTuber, Rahul Vohra. pic.twitter.com/f5uSH5A9N3— Shivani Sharma AAP (@shivani5777) May 9, 2021
ಸಾ ಯು ವ ಕೆಲ ಗಂಟೆಗಳ ಮುನ್ನ ಅವರು ಫೇಸ್ಬುಕ್ ನಲ್ಲಿ, “‘ನನಗೂ ಒಳ್ಳೆ ಚಿಕಿತ್ಸೆ ಸಿಕ್ಕಿದ್ರೆ ಬದುಕುತ್ತಿದ್ದೆ, ಮತ್ತೆ ಹುಟ್ಟಿ ಬರುತ್ತೇನೆ ಹಾಗು ಒಳ್ಳೆ ಕೆಲಸಗಳನ್ನ ಮಾಡುತ್ತೇನೆ. ಈಗ ನಾನು ಧೈರ್ಯ ಕಳೆದುಕೊಂಡಿದ್ದೇನೆ. ನಿಮ್ಮ ರಾಹುಲ್ ವೋಹರಾ”. ಒಬ್ಬ ರೋಗಿಯಾಗಿ ಅವರು ತಮ್ಮ ವಿವರಗಳನ್ನ ಫೇಸ್ಬುಕ್ ನಲ್ಲಿ ಹಾಕಿದ್ದರು. ಜೊತೆಗೆ ಅವರು, “ಮತ್ತೆ ಹುಟ್ಟಿ ಬರುತ್ತೇನೆ ಹಾಗು ಒಳ್ಳೆ ಕೆಲಸಗಳನ್ನ ಮಾಡುತ್ತೇನೆ. ಈಗ ನಾನು ಧೈರ್ಯ ಕಳೆದುಕೊಂಡಿದ್ದೇನೆ” ಎಂದೂ ಬರೆದಿದ್ದಾರೆ.
Jyoti Tiwari, Wife of Rahul Vohra released a video and raised question on treatment given by Hospital and demands justice For her husband who lost his life recently. pic.twitter.com/lShcxXJ0KT
— MEWS (@mews_in) May 10, 2021
ಇದಕ್ಕೂ 5 ದಿನಗಳ ಹಿಂದೆಯಷ್ಟೃ ರಾಹುಲ್ ಆಕ್ಸಿಜನ್ ಬೆಡ್ ಗಾಗಿ ಸಹಾಯ ಕೋರುತ್ತಿದ್ದರು. ಆಗ ಅವರು ತಮ್ಮ ಪೋಸ್ಟ್ ನಲ್ಲಿ, “ನಾನು ಕೋವಿಡ್ ಪಾಸಿಟಿವ್ ಆಗಿದ್ದೇನೆ, ಅಡ್ಮಿಟ್ ಆಗಿದ್ದೇನೆ. ಕಳೆದ ನಾಲ್ಕು ದಿನಗಳಾದರೂ ರಿಕವರ್ ಆಗಿಲ್ಲ. ಆಕ್ಸಿಜನ್ ಬೆಡ್ ಇರದ ಆಸ್ಪತ್ರೆಗಳ ಬಗ್ಗೆ ಎಂದಾದರೂ ಕೇಳಿದ್ದೀರ? ನನ್ನ ಆಕ್ಸಿಜನ್ ಲೆವಲ್ ನಿರಂತರವಾಗಿ ಕ್ಷೀಣಿಸುತ್ತಿದೆ. ಆದರೂ ಇಲ್ಲಿ ಯಾರೂ ನೋಡೋಕೆ ಇಲ್ಲ. ನಾನು ಬಹಳ ಅಸಹಾಯಕನಾಗಿ ಈ ಪೋಸ್ಟ್ ಮಾಡುತ್ತಿದ್ದೇನೆ. ಯಾಕಂದ್ರೆ ನನ್ನ ಮನೆಯವರಿಗೆ ಏನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ”
#Watch | YouTuber Rahul Vohra's wife shares a heartbreaking video of him pleading for better treatment before succumbing to his illness. pic.twitter.com/pgZVDMRanc
— TIMES NOW (@TimesNow) May 10, 2021
ಆದರೆ ಸಮಯ ಮೀರಿ ಹೋಗಿತ್ತು. ಇಂತಹ ಕಠಿಣ ಸಮಯದಲ್ಲಿ ರಾಹುಲ್ ವೋಹ್ರಾ ಕೂಡ ಬದುಕನ್ನ ಗೆಲ್ಲಲು ಧೈರ್ಯ ತೋರಲಿಲ್ಲ. ರಾಹುಲ್ ವೋಹ್ರಾಗೆ ಮದುವೆಯಾಗಿತ್ತು. ಅವರ ಪತ್ನಿ ಜ್ಯೋತಿ ತಿವಾರಿ ಒಬ್ಬ ಲೇಖಕಿ. ಕಣ್ಣೆದುರೇ ಗಂಡನನ್ನ ಕಳೆದುಕೊಂಡ ಜ್ಯೋತಿಯ ಸ್ಥಿತಿ ಹೇಳತೀರದ್ದಾಗಿದೆ. ಅವರು ಇನ್ಸ್ಟಾಗ್ರಾಂ ನಲ್ಲಿ ಎರಡು ಪೋಸ್ಟ್ ಗಳನ್ನ ಶೇರ್ ಮಾಡಿದ್ದಾರೆ. ಅದರಲ್ಲಿ ಒಂದು “ನನ್ನ ಹಾಗು ನನ್ನ ಪ್ರೀತಿಯನ್ನ ಬಿಟ್ಟು ಹೊರಟು ಹೋದರು”, ಎರಡನೆಯ ಪೋಸ್ಟ್ ನಲ್ಲಿ “ಇಂದು ಎಲ್ಲ ಭ್ರಮೆಗಳೂ ನುಚ್ಚುನೂರಾದವು” ಎಂದು ಬರೆದಿದ್ದಾರೆ.
ರಾಹುಲ್ ವೋಹ್ರಾ 2006 ರಿಂದ 2008 ರವರೆಗೆ ಅಸ್ಮಿತಾ ಥಿಯೇಟರ್ ಗ್ರೂಪ್ ಜೊತೆ ಇದ್ದರು. ಅಸ್ಮಿತಾ ಥಿಯೇಟರ್ ಗ್ರೂಪ್ ಮಾಲೀಕ ಹಾಗು ಪ್ಲೇ ರೈಟರ್ ಅರವಿಂದ್ ಗೌರ್ ಫೇಸಪೋಸ್ಟ್ ಮೂಲಕ ರಾಗುಲ್ ವೋಹ್ರಾ ರವರ ಸಾವಿನ ಬಗ್ಗೆ ಮಾಹಿತಿ ನೀಡುತ್ತ, “ರಾಹುಲ್ ವೋಹ್ರಾ ಈಗ ನಮ್ಮೊಂದಿಗಿಲ್ಲ, ನನ್ನ ಭರವಸೆಯ ಕಲಾವಿದ ಈಗ ಈ ಜಗತ್ತಿನಲ್ಲಿಲ್ಲ. ಅವರು ಉತ್ತಮ ಚಿಕಿತ್ಸೆ ಪಡೆದಿದ್ದರೆ ಅವರ ಜೀವವನ್ನು ಉಳಿಸಬಹುದಾಗಿತ್ತು ಎಂದು ನೆನ್ನೆಯಷ್ಟೇ ಪೋಸ್ಟ್ ಮಾಡಿದ್ದರು. ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಯಿಂದ ದ್ವಾರಕಾದ ಆಯುಷ್ಮಾನ್‌ಗೆ ಸ್ಥಳಾಂತರಿಸಲಾಯಿತು ಆದರೆ ನಮಗೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ರಾಹುಲ್, ನಾವೇ ನಿಮ್ಮ ಅ ಪ ರಾ ಧಿ ಗಳು. ಅಂತಿಮ ನಮನ” ಎಂದು ಬರೆದುಕೊಂಡಿದ್ದಾರೆ.
ಸರಿಯಾದ ಚಿಕಿತ್ಸೆಯ ಕೊರತೆಯಿಂದಾಗಿ ರಾಹುಲ್ ಸಾ ವಿ ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಿನ್ನ ಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ರಾಜಕಾರಣಿ ಅರ್ಚನಾ ಶರ್ಮಾ ಅವರು ರಾಹುಲ್ ಅವರ ಫೋಟೋ ಒಂದನ್ನ ಪೋಸ್ಟ್ ಮೂಲಕ ಹಂಚಿಕೊಂಡಿದ್ದು ’35 ವರ್ಷದ ಯುವಕ, ತನ್ನ ಕಣ್ಣಲ್ಲೇ ಸಾವನ್ನ ನೋಡುತ್ತ ಈ ಜಗತ್ತನ್ನ ಬಿಟ್ಟು ಹೋಗಿದ್ದಾರೆ. ಇದು #ರಾಹುಲ್ ವೊಹ್ರಾ ರವರ ಅಂತ್ಯವಲ್ಲ ಇದು ಕೊ ಳೆ ತು ನಾರುತ್ತಿರುವ ಈ ಸಿಸ್ಟಂ ಅಂತ್ಯ, ಈ ಸಿಸ್ಟಂನ್ನ ನಡೆಸುತ್ತಿರುವ ಸರ್ಕಾರದ್ದು, ಸರ್ಕಾರವನ್ನು ಅಧಿಕಾರಕ್ಕೆ ತಂದ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವವು ನಿಧಾನವಾಗಿ ಕೊನೆಗೊಳ್ಳುತ್ತಿರುವುದರ ಅಂತ್ಯ. ಇವರ ವೀಡಿಯೊ ಬಹಳಷ್ಟು ಕುಟುಂಬಗಳನ್ನು ಒಡೆಯದಂತೆ ಉಳಿಸಿದೆ, ಆದರೆ ರಾಹುಲ್ ರನ್ನ ಯಾರೂ ಉಳಿಸಲಿಲ್ಲ. ಅಂತಹ ಉತ್ಸಾಹಭರಿತ ವ್ಯಕ್ತಿ ಹೀಗೆ ಹೋಗಬಹುದು ಎಂದು ನಂಬಲೂ ಸಾಧ್ಯವಿಲ್ಲ. ಅವರು ಎಷ್ಟೋ ಜನರಿಗೆ ಹೇಗೆ ಬದುಕಬೇಕೆಂದು ಕಲಿಸಿದರು. ಪ್ರಸಿದ್ಧ ವ್ಯಕ್ತಿಗೇ ಇಂಥಾ ಪರಿಸ್ಥಿತಿಯೆಂದರೆ ಸಾಮಾನ್ಯ ಮನುಷ್ಯರು ಕೀಟಗಳಂತೆಯೇ ಸರಿ” ಎಂದು ಬರೆದಿದ್ದಾರೆ.
ರಾಹುಲ್ ವೊಹ್ರಾ ಉತ್ತರಾಖಂಡದ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಫೇಮಸ್ ಮುಖವಾಗಿತ್ತು. ಅವರು ನೆಟ್‌ಫ್ಲಿಕ್ಸ್ ಸರಣಿ ‘ಅನ್‌ಫ್ರೀಡಮ್’ ನಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ಅವರ ಕೆಲಸವನ್ನ ಜನ ಇಷ್ಟಪಟ್ಟರು. ನಿಜಕ್ಕೂ ಅವರ ಸಾವು ತುಂಬಾ ದುಃಖದ ಘಟನೆ. ಈ ರೀತಿ ಚಿಕಿತ್ಸೆ ಪಡೆಯಲು ರಾಹುಲ್ ವೊಹ್ರಾ ವಿಫಲರಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಹುಲ್ ಮಾತ್ರವಲ್ಲ, ಚಿಕಿತ್ಸೆ ಪಡೆಯದ ಕಾರಣ ಎಷ್ಟೋ ಜನರು ಪ್ರಾ ಣ ಕಳೆದುಕೊಳ್ಳುತ್ತಿದ್ದಾರೆ. ಜನರು ಕರೋನಾದಿಂದ ಪ್ರಾ ಣ ಕಳೆದುಕೊಳ್ಳುತ್ತಿದ್ದಾರೋ ಅಥವಾ ಚಿಕಿತ್ಸೆಯ ಕೊರತೆ, ಆಕ್ಸಿಜನ್ ಕೊರತೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಾರೆ? ಇದನ್ನ ಈ ದರಿದ್ರ ಸಿಸ್ಟಂ ಮಾತ್ರ ಉತ್ತರಿಸಬಹುದು.