ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಆತ್ಮವಿಶ್ವಾಸ ಬೇಕು ಅಂತಾ ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನಕ್ಕಿಂತಲೂ ಜನ ಹೆಚ್ಚು ಸಫರ್ ಆಗಿದ್ದಾರೆ
ಕೊರೊನಾ ಗೆದ್ದ ಖುಷಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್.. ಕೊರೊನಾ ವಿರುದ್ಧ ಹೋರಾಡಲು ನಾವು ನಾನಾಗೇ ಇರಬೇಕು, ಆಗ ಮಾತ್ರ ಎಲ್ಲವನ್ನೂ ನಿಭಾಯಿಸಬೇಕು. ನಾನು ಕೊರೊನಾದಿಂದ ಎಷ್ಟು ಕಷ್ಟಪಟ್ಟೆ ಅನ್ನೋದಕ್ಕಿಂತ ಜನ ನನ್ನಕ್ಕಿಂತಲೂ ಹೆಚ್ಚು ಸಫರ್ ಆಗಿದ್ದಾರೆ. ಇಂತಹ ಸಂದರ್ಭದಲ್ಲೇ ನಾವು ಎಷ್ಟು ಹೃದಯವನ್ನ ಗೆದ್ದಿದ್ದೇವೆ ಅನ್ನೋದು ಗೊತ್ತಾಗುತ್ತೆ. 15 ದಿನ ಐಸೋಲೇಷನ್ನಲ್ಲಿದ್ದೆ. ಆದರೆ ನನಗೆ ರಿಕವರಿ ಆಗಲು ಒಂದು ತಿಂಗಳೇ ಬೇಕಾಯಿತು. ನಾವು ಎಷ್ಟು ಸ್ಟ್ರಾಂಗ್ ಆಗಿದ್ದೇವೆ ಅನ್ನೋದೇ ಆಗ ಗೊತ್ತಾಯಿತು.
ಫ್ಯಾಮಿಲಿ, ಸ್ನೇಹಿತರ ಜೊತೆ ಮಾತನಾಡಿಕೊಂಡು ಇದ್ದೆ
ಇಂತಹ ಸಂದರ್ಭದಲ್ಲಿ ಯಾವುದೇ ಸ್ಟಾರ್ಡಮ್ ಬರಲ್ಲ. ಇದನೆಲ್ಲಾ ಎದುರಿಸಲು ಪ್ರಾರ್ಥನೆ ಇರಬೇಕು. ಪ್ರಾರ್ಥನೆಯಲ್ಲಿ ನಂಬಿಕೆ ಇರಬೇಕು. ಕೊರೊನಾ ಎದುರಿಸಲು ನಮಗೆ ಆಪ್ಷನ್ ಇರಲ್ಲ. ಕೊರೊನಾ ಬಂದಾಗ ನಮ್ಮ ಅಕ್ಕಪಕ್ಕ ಯಾರೂ ಇರಲ್ಲ. ಕೊರೊನಾ ವಿಚಾರದಲ್ಲಿ ಯಾವುದೇ ಫುಡ್ ಪ್ರೋಟೋಕಾಲ್ ಇರಲಿಲ್ಲ. ನನಗೆ ಒಳ್ಳೆಯ ಸ್ನೇಹಿತರಿದ್ದರು. ಫ್ಯಾಮಿಲಿ, ಸ್ನೇಹಿತರ ಜೊತೆ ಮಾತನಾಡಿಕೊಂಡು ಇದ್ದೆ. ನನ್ನ ದಿನನಿತ್ಯದ ಕಾರ್ಯಕ್ರಮ ನಮ್ಮ ಸುತ್ತಮುತ್ತ ಇರುವ ಜನರಿಂದ ಶುರುವಾಗುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಮೂರು ವಾರದಲ್ಲಿ ನಾನು ಎಲ್ಲವನ್ನೂ ತಿಂದಿದ್ದೇನೆ.
ಉದ್ದೇಶ ಸರಿ ಇಲ್ಲದಿದ್ದಾಗ ಉದ್ದಾರ ಆಗಲ್ಲ
ನಾನು ಪುಸ್ತಕ ಓದಲ್ಲ, ಯಾರಾದ್ರೂ ಓದುತ್ತಿದ್ರೆ ಅದನ್ನ ಕೂತುಕೊಂಡು ಕೇಳುತ್ತೇನೆ. ಈ ಸಂದರ್ಭದಲ್ಲಿ ನಾನು ಸಿನಿಮಾ ಕೂಡ ನೋಡುತ್ತಿರಲಿಲ್ಲ. ನನ್ನ ಚಾರಿಟೆಬಲ್ ಟ್ರಸ್ಟ್ನಿಂದ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿವೆ. ಯಾಕಂದ್ರೆ ನಮ್ಮ ಉದ್ದೇಶ ಸರಿ ಇದೆ. ನಮ್ಮಲ್ಲಿರುವ ಉದ್ದೇಶಗಳೆಲ್ಲಾ ಒಂದೇ ಆಗಿದ್ದಾಗ ಎಲ್ಲವೂ ಚೆನ್ನಾಗಿತ್ತು. ಉದ್ದೇಶ ಸರಿ ಇಲ್ಲದಿದ್ದಾಗ ಯಾವುದೂ ಉದ್ದಾರ ಆಗಲ್ಲ.
ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ
ಕೊರೊನಾ ವಿಚಾರದಲ್ಲಿ ಯಾರು ಎಡವಿದರು ಅನ್ನೋದು ಗೊತ್ತಿಲ್ಲ. ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಅನ್ನೋದು ಮಾತ್ರ ಗೊತ್ತಿದೆ. ಆದರೆ ಯಾರು ತಪ್ಪು ಮಾಡಿದ್ರು ಅನ್ನೋದ್ರ ವಿಶ್ಲೇಷಣೆ ಮಾಡುವ ಸಮಯ ಇದಲ್ಲ. ಎಲ್ಲರೂ ಒಗ್ಗಟ್ಟಿನಿಂದ ಎದುರಿಸುವ ಸಮಯ. ಅದನ್ನ ವಿರೋಧ ಪಕ್ಷಗಳು ಮಾಡುತ್ತವೆ.
ನನ್ನ ಪ್ರಕಾರ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಜನ ಸಹಾಯ ಮಾಡ್ತಿದ್ದಾರೆ. ಹಾಗಂತ ಎಲ್ಲರೂ ಮಾಡಬೇಕು ಅಂತಲೂ ಇಲ್ಲ. ಮೊದಲು ನಮ್ಮ ಕೈಯಲ್ಲಿ ಆಗಿದ್ದನ್ನ ನಾವು ಮಾಡಬೇಕು. ಬೇರೆಯವರನ್ನ ಪ್ರಶ್ನೆ ಮಾಡುವ ಮುಂಚೆ ನಾವು ಎಷ್ಟು ಮಾಡಿದ್ದೇವೆ ಅನ್ನೋದನ್ನ ನೋಡಿಕೊಳ್ಳಬೇಕು. ಸಿನಿಮಾ ಇಂಡಸ್ಟ್ರಿಯಲ್ಲಿರೋರು ಕೆಲವರು ತಮ್ಮ ಕೈಯಲ್ಲಿ ಆಗುವ ಕೆಲಸವನ್ನ ಮಾಡುತ್ತಿದ್ದಾರೆ.
ಪ್ರೊಟೋಕಾಲ್ ತಂದಿರೋದು ನಮ್ಮ ಒಳ್ಳೆಯದಕ್ಕೆ
ಕೊರೊನಾ ಸಕೆಂಡ್ ವೇವ್ಯಿಂದ ತಪ್ಪಿಸಿಕೊಳ್ಳೋದು ತುಂಬಾ ಕಷ್ಟ ಇದೆ. ಸರ್ಕಾರ ಪ್ರೊಟೋಕಾಲ್ ತಂದಿರೋದು ನಮ್ಮ ಒಳ್ಳೆಯದಕ್ಕೆ. ನಮಗೆ ಕೊರೊನಾ ಬರದೆ ಇರಬಹುದು, ಆದರೆ ನಮ್ಮಿಂದ ಬೇರೆಯವರಿಗೆ ಬರುವ ಸಾಧ್ಯತೆ ಇದೆ. ನಿಮ್ಮನೆಯವರೇ ಸಫರ್ ಆಗುವ ಸಾಧ್ಯತೆ ಇದೆ. ಕೊರೊನಾ ಈ ಕ್ಷಣಕ್ಕೆ ಓಡಿಸಲು ಸಾಧ್ಯವಿಲ್ಲ. ಇದಕ್ಕೆ ಸಮಯ ಬೇಕು.
ಕೊರೊನಾ ಪರಿಸ್ಥಿತಿಯಲ್ಲಿ ಯಾರು ಸಹಾಯ ಮಾಡಲು ಬರಲು ಆಗಲ್ಲ. ನಾವು ಒಬ್ಬಂಟಿಯಾಗಿ ಹೋರಾಡಬೇಕು. ಯಾರಿಗಾದ್ರೂ ಕೊರೊನಾ ಬಂದರೆ ಮನೆಯವರು ತುಂಬಾ ಸಫರ್ ಆಗುತ್ತಾರೆ. ನನ್ನನ್ನ ನರ್ಸಸ್ ಡಾಕ್ಟರ್ ತುಂಬಾ ಚೆನ್ನಾಗಿ ನೋಡಿಕೊಂಡರು. ಇಂದು ನರ್ಸಗಳ ದಿನ, ಇವತ್ತು ನರ್ಸ್ಗಳ ಸಂಖ್ಯೆ ಕಡಿಮೆ ಇದೆ. ಅವರು ಇಲ್ಲ ಅಂದ್ರೆ ಯಾವ ಆಸ್ಪತ್ರೆಗಳು ಇರಲ್ಲ. ಇಂದು ನಾವೆಲ್ಲರೂ ಸೆಲ್ಯೂಟ್ ಹೊಡೆಯಬೇಕು. ಜೀವ ಒತ್ತಡ ಇಟ್ಟು, ನಮ್ಮ ಸೇವೆ ಮಾಡುತ್ತಾರೆ. ಅವರನ್ನ ತಲೆಯಲ್ಲಿಟ್ಟುಕೊಂಡು ನಮ್ಮನ್ನ ನಾವು ಕಾಪಾಡಿಕೊಳ್ಳೋಣ.
ಪ್ರೊಟೋಕಾಲ್ ತಂದಿರೋದು ನಮ್ಮ ಒಳ್ಳೆಯದಕ್ಕೆ
ಜವಾಬ್ದಾರಿ ಅನ್ನೋದು ರಕ್ತದಲ್ಲಿ ಬರಬೇಕು. ಜವಾಬ್ದಾರಿ ವ್ಯಕ್ತಿತ್ವದಲ್ಲಿ ಬರಬೇಕು. ಯಾರು ಹೇಳಿ ಕೊಡೋದ್ರಿಂದ ಆ ಜವಾಬ್ದಾರಿ ಬರಲ್ಲ. ಮಳೆ ಬಂದಾಗ ಛತ್ರಿ ತೆಗೆದುಕೊಂಡು ಹೋಗಿಲ್ಲ ಒದ್ದೆಯಾಗುತ್ತೇವೆ. ಮೊದಲ ಬಾರಿ ಗೊತ್ತಾಗದೇ ನೆನೆದಾಗ ತಪ್ಪು ಎನಿಸಲ್ಲ. ಆದರೆ ಎರಡನೇ ಬಾರಿಯೂ ಛತ್ರಿ ತೆಗೆದುಕೊಂಡು ಹೋಗಿಲ್ಲ ಅಂದ್ರೆ ಅದು ತಪ್ಪು. ಮೊದಲ ಬಾರಿಯ ಕೊರೊನಾ ಅಲೆಗೆ ತುಂಬಾ ಕಷ್ಟ ಪಟ್ಟಿದ್ದೀವಿ. ಇದೀಗ ಎರಡನೇ ಕೊರೊನಾ ಅಲೆಯಲ್ಲಿ ನಾವು ಎಡವಿದ್ದೇವೆ. ಮೂರನೇ ವೇವ್ನಲ್ಲೂ ನಾವು ಎಡವಿದ್ರೆ ಅದು ನಮ್ಮ ಅನ್ಪ್ಲಾನ್ಡ್. ನಮ್ಮ ಅನ್ಪ್ಲಾನ್ಡ್ನಿಂದಾಗಿ ಜನ ಸಾಯುತ್ತಿದ್ದಾರೆ.