ನವದೆಹಲಿ: ರೋಚೆಸ್ ಆಂಟಿಬಾಡಿ ಕಾಕ್ಟೇಲ್ ನ್ನು ಕೋವಿಡ್-19 ವಿರುದ್ಧ ಚಿಕಿತ್ಸೆಗೆ ಭಾರತದಲ್ಲಿ ಪ್ರತಿ ಡೋಸ್ ಗೆ 59 ಸಾವಿರದ 750 ರೂಪಾಯಿಗೆ ಮಾರಾಟ ಮಾಡಲು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ರೋಚೆ ಇಂಡಿಯಾ ಮತ್ತು ಸಿಪ್ಲಾ ಕಂಪೆನಿ ಪ್ರಕಟಿಸಿದೆ.
ರೋಚೆಸ್ ಆಂಟಿಬಾಡಿ ಕಾಕ್ಟೇಲ್ ಗಳಾದ ಕಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ನ ಮೊದಲ ಭಾಗ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿದ್ದು ಜೂನ್ ಮಧ್ಯಭಾಗ ಹೊತ್ತಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ. ಭಾರತದಲ್ಲಿ ಲಭ್ಯವಾಗಲಿರುವ ತಲಾ ಒಂದು ಲಕ್ಷ ಪ್ಯಾಕ್‌ಗಳಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುವುದರಿಂದ ಒಟ್ಟಾರೆಯಾಗಿ ಅವರು 2 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ಕಂಪೆನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸಿಪ್ಲಾ ತನ್ನ ವಿತರಣಾ ಸಾಮರ್ಥ್ಯವನ್ನು ದೇಶಾದ್ಯಂತ ಹೆಚ್ಚಿಸುವ ಮೂಲಕ ಉತ್ಪನ್ನವನ್ನು ವಿತರಿಸಲಿದೆ. ಪ್ರತಿ ರೋಗಿಯ ಡೋಸ್‌ಗೆ ಬೆಲೆ [ಒಟ್ಟು 1,200 ಮಿಗ್ರಾಂ (600 ಮಿಗ್ರಾಂ ಕ್ಯಾಸಿರಿವಿಮಾಬ್ ಮತ್ತು 600 ಮಿಗ್ರಾಂ ಇಮ್ಡೆವಿಮಾಬ್)] ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ 59,750 ರೂ ಆಗಿರುತ್ತದೆ.
ಮಲ್ಟಿ ಡೋಸ್ ಪ್ಯಾಕ್‌ನ ಗರಿಷ್ಠ ಚಿಲ್ಲರೆ ಬೆಲೆ (ಪ್ರತಿ ಪ್ಯಾಕ್ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲದು) ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ 1,19,500 ರೂಪಾಯಿಗಳು. ಆಸ್ಪತ್ರೆಗಳು ಪ್ರಮುಖ ಆಸ್ಪತ್ರೆಗಳು ಮತ್ತು ಸಿಒವಿಐಡಿ ಚಿಕಿತ್ಸಾ ಕೇಂದ್ರಗಳ ಮೂಲಕ ಲಭ್ಯವಿರುತ್ತವೆ ಇದು ಲಭ್ಯವಿರುತ್ತದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಇತ್ತೀಚೆಗೆ ಭಾರತದಲ್ಲಿ ಆಂಟಿಬಾಡಿ ಕಾಕ್ಟೇಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಗಾಗಿ ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ಒದಗಿಸಿತ್ತು. ಇದು ಯುಎಸ್ ಮತ್ತು ಹಲವಾರು ಇಯು ದೇಶಗಳಲ್ಲಿ ಇಯುಎ ಅನ್ನು ಸಹ ಪಡೆದಿದೆ.
ಮುಂದಿನ ಸುದ್ದಿ: ಕೊರೋನಾದ ಅಂತ್ಯಕಾಲ ಇನ್ನೂ ತುಂಬಾ ದೂರವಿದೆ ಎಂದ WHO
ಸಾಕಷ್ಟು ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಕೊರೊನಾ ಅಂತ್ಯಕಾಲ ತುಂಬಾ ದೂರವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೊನಾ ಸಾಂಕ್ರಾಮಿಕ ನಿಭಾಯಿಸಲು ವಿಶ್ವದ ರಾಷ್ಟ್ರಗಳು ಇನ್ನಿಲ್ಲದ ಕಷ್ಟ ಪಡುತ್ತಿವೆ. ಕೊರೋನಾ ಎದುರಿಸುವಲ್ಲಿ ಸಾಕಷ್ಟು ಗೊಂದಲಗಳಿವೆ.
ಮನುಷ್ಯರ ಬೇಜವಾಬ್ದಾರಿತನದಿಂದಾಗಿ ಸಾಂಕ್ರಾಮಿಕ ಅಂತ್ಯಗೊಳ್ಳಲು ನಾವು ಇನ್ನು ಬಹು ದೂರ ಕ್ರಮಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಸಂಶೋಧನೆ ಹೇಳುತ್ತದೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರತಿ ಮೂವರಲ್ಲಿ ಒಬ್ಬರು ನರ ಸಮಸ್ಯೆಗಳು ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕೊರೊನಾ ಸೋಂಕು ತಗುಲಿದ ಮೊದಲ ಆರು ತಿಂಗಳಲ್ಲಿ ಸುಮಾರು ಶೇ. 34ರಷ್ಟು ಮಂದಿಯ ಮೇಲೆ ಪ್ರಭಾವ ಉಂಟಾಗಿದೆ.
ಅತ್ಯಾಧುನಿಕ ವೈದ್ಯಕೀಯ ಕ್ರಮಗಳ ಮೂಲಕ ಕೆಲ ತಿಂಗಳ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಿಸಬಹುದು ಎಂಬುದು ದೃಢಪಟ್ಟಿದೆ.
ಈ ವರ್ಷದ ಮೊದಲ ಎರಡು ತಿಂಗಳ ಅಂಕಿ ಅಂಶ ನೋಡಿದರೆ ಅದು ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಸಾವು, ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ ಎಂದು ಟೆಡ್ರೊಸ್ ವಿವರಿಸಿದ್ದಾರೆ.
ವೈರಸ್ ಅನ್ನು ನಿಯಂತ್ರಿಸಬಹುದು ಹಾಗೂ ರೂಪಾಂತರಿಗಳನ್ನು ತಡೆಯಬಹುದು ಎಂಬುದು ಸ್ಪಷ್ಟವಾಗಿದೆ. ಕೆಲವು ದೇಶಗಳಲ್ಲಿ ಕೊರೊನಾ ಹೆಚ್ಚಳಗೊಂಡಿದ್ದರೂ, ನೈಟ್ ಕ್ಲಬ್ ಗಳು, ರೆಸ್ಟೋರೆಂಟ್ ಗಳು ಹಾಗೂ ಮಾರುಕಟ್ಟೆಗಳು ಜನ ದಟ್ಟಣಿಯಿಂದ ತುಂಬಿ ಹೋಗಿವೆ. ಜನರ ಬೇಜವ್ದಾರಿತನ ತೊಲಗಬೇಕು ಎಂದು ಅವರು ಹೇಳಿದ್ದಾರೆ.