ಕೊರೋನಾ ಬರದವರಿಗೂ ಕಾಡುತ್ತಾ ಬ್ಲ್ಯಾಕ್ ಫಂಗಸ್?

in Uncategorized 1,309 views

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಮೊದಲನೇ ಅಲೆಗಿಂತ ದೊಡ್ಡ ಪ್ರಮಾಣದಲ್ಲಿ ಆಘಾತವನ್ನು ನೀಡುತ್ತಿದೆ. ಎರಡನೇ ಅಲೆಯಲ್ಲಿ ಯುವಕರು ಕೂಡ ಈ ವೈರಸ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಈ ವೈರಸ್‌ನ ಭೀಕರ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಈ ಮಧ್ಯೆ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ಇದು ಭಾರತದ ವೈದ್ಯಕೀಯ ವ್ಯವಸ್ಥೆಗೆ ಮತ್ತಷ್ಟು ಸವಾಲಾಗಿದೆ.

ಸದ್ಯ ದೇಶಾದ್ಯಂತ 10,000ಕ್ಕೂ ಅಧಿಕ ಮ್ಯೂಕೋರ್ಮಿಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಸಾಕಷ್ಟು ಜನರು ಇದಕ್ಕೆ ಬಲಿಯಾಗಿದ್ದಾರೆ. ವ್ಯಾಪಕವಾಗಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಬಹುತೇಕ ರಾಜ್ಯಗಳು ಬ್ಲ್ಯಾಕ್ ಫಂಗಸ್‌ಅನ್ನು ಕೂಡ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಮೆದುಳು, ಶ್ವಾಸಕೋಶ ಮತ್ತು ಸೈನೊಸಿಸ್‌ಗಳ ಮೇಲೆ ಇದು ನೇರವಾಗಿ ಪರಿಣಾಮವನ್ನು ಬೀರುತ್ತಿದೆ.

ಕೋವಿಡ್ ಸೋಂಕಿತರಿಗೆ ಮಾತ್ರವೇ ಕಾಡುತ್ತಾ ಬ್ಲ್ಯಾಕ್ ಫಂಗಸ್?

ಕೊರೊನಾ ವೈರಸ್‌ನ ಎರಡನೇ ಅಲೆ ಕಂಡು ಬಂದ ನಂತರ ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ತೀವ್ರವಾಗಿದೆ. ಈ ಸೋಂಕಿನಿಂದ ಚೇತರಿಕೆ ಕಂಡವರಲ್ಲಿ ಈ ವೈರಸ್‌ಗಳು ವರದಿಯಾಗಿದೆ. ಆದರೆ ತಜ್ಞರು ನೀಡುವ ಮಾಹಿತಿಯ ಪ್ರಕಾರ ಕೊರೊನಾ ವೈರಸ್ ಸೋಂಕಿತರು ಮಾತ್ರವೇ ಬ್ಲ್ಯಾಕ್‌ಫಂಗಸ್‌ಗೆ ತುತ್ತಾಗುವುದಿಲ್ಲ. ಇತರರನ್ನು ಕೂಡ ಇದು ಕಾಡಬಹುದು ಎಂದಿದ್ದಾರೆ.

ಅತಿಯಾದ ಮದುಮೇಹಿಗಳಿಗೆ ಹೆಚ್ಚು ಅಪಾಯ

ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ನೀಡಿರುವ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದ್ದು ಅದರಲ್ಲಿ ಅವರು ‘ವೈದ್ಯಕೀಯ ವಿದ್ಯಾರ್ಥಿಗಳಿಗೆ ನಾವು ಅತಿಯಾದ ಮದುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬ್ಲ್ಯಾಕ್‌ಫಂಗಸ್ ತಗುಲುತ್ತದೆ ಎನ್ನುತ್ತೇವೆ. ಆದರೆ ಅನಿಯಂತ್ರಿತ ಮದುಮೇಹದ ಜೊತೆಗೆ ಇತರ ಕೆಲ ಸಂಗತಿಗಳು ಕೂಡ ಇದಕ್ಕೆ ಕಾರಣವಾಗಬಹುದು’ ಎಂದಿದ್ದಾರೆ.

ಕೋವಿಡ್ ಇಲ್ಲದವರಿಗೂ ಕಾಡಬಹುದು

‘ನ್ಯುಮೋನಿಯಾ ತರಹದ ಯಾವುದೇ ಕಾಯಿಲೆಗಳು ಬ್ಲ್ಯಾಕ್ ಫಂಗಸ್ ಸಾಧ್ಯತೆಗಳನ್ನು ಹೆಚ್ಚುಗೊಳಿಸುತ್ತದೆ. ಈಗ ಕೊರೊನಾ ವೈರಸ್‌ನಿಂದಲೂ ಈ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಸ್ಟಿರಾಯ್ಡ್ ಬಳಕೆಯಿಂದಲೂ ಇದರ ಹರಡುವಿಕೆ ಸಾಧ್ಯತೆ ಹೆಚ್ಚುತ್ತದೆ. ಅಂದರೆ ಚಿಕ್ಕದಾಗಿ ಹೇಳಬೇಕೆಂದರೆ ಕೊರೊನಾ ವೈರಸ್‌ಗೆ ತುತ್ತಾಗದವರು ಕೂಡ ಈ ಫಂಗಸ್‌ಗೆ ಒಳಗಾಗಬಹುದು’ ಎಂದು ಡಾ. ವಿಕೆ ಪೌಲ್ ತಿಳಿಸಿದ್ದಾರೆ.

ಆರೋಗ್ಯವಂತರು ಆತಂಕಪಡಬೇಕಿಲ್ಲ

ಇನ್ನು ಬ್ಲ್ಯಾಕ್ ಫಂಗಸ್ ಹರಡುವಿಕೆಯ ವಿಚಾರವಾಗಿ ಏಮ್ಸ್‌ನ ಡಾ. ನಿಖಿಲ್ ಟಂಡನ್ ಉತ್ತಮ ಆರೋಗ್ಯವನ್ನು ಹೊಂದಿರುವವರು ಬ್ಲ್ಯಾಕ್ ಫಂಗಸ್‌ನ ಬಗ್ಗೆ ಆತಂಕವನ್ನು ಪಡುವ ಅಗತ್ಯವಿಲ್ಲ ಎಂದಿದ್ದಾರೆ. ‘ಎರಡನೇ ಅಲೆಯ ಕೊರೊನಾ ವೈರಸ್ ಮೊದಲ ಅಲೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರ ದೈಹಿಕ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಇದು ಈ ಫಂಗಸ್ ಹರಡುವಿಕೆಗೆ ಕಾರಣವಾಗಬಹುದು. ಇದರ ಜೊತೆಗೆ ಸ್ಟಿರಾಯ್ಡ್‌ಅನ್ನು ಅತಿಯಾಗಿ ಬಳಸುವುದು ಕೂಡ ಈ ಫಂಗಲ್ ಇನ್‌ಫೆಕ್ಷನ್‌ಗೆ ಕಾರಣವಾಗಿರಬಹುದು. ಆದರೆ ಇದೇ ಕಾರಣವೆಂದು ಸೂಕ್ತ ತನಿಖೆಯಿಲ್ಲದೆ ಹೇಳುವುದು ಅಸಾಧ್ಯ’ ಎಂದಿದ್ದಾರೆ ಡಾ ನಿಖಿಲ್ ಟಂಡನ್.

 

Advertisement
Share this on...