ಕೊರೋನಾ ಮೂರನೆ ಅಲೆಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಏಮ್ಸ್ ನಿರ್ದೇಶಕ: ಭಯಪಡುವ ಅಗತ್ಯವೇ ಇಲ್ಲ ಆದರೆ ಎಚ್ಚರಿಕೆ ಮುಖ್ಯ

in Helath-Arogya/Kannada News/News 586 views

ನವದೆಹಲಿ: ಕೋವಿಡ್ -19 ರ ಮುಂದಿನ ಯಾವುದೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತೋರಿಸಲು ಭಾರತ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದತ್ತಾಂಶ ಲಭ್ಯವಿಲ್ಲ ಇಲ್ಲ ಎಂದು ಏಮ್ಸ್ ದೆಹಲಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಂಗಳವಾರ ಹೇಳಿದ್ದಾರೆ.

Advertisement

ಕೋವಿಡ್-19 ಪರಿಸ್ಥಿತಿಯ ಕುರಿತು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಗುಲೇರಿಯಾ, ಕೋವಿಡ್-19 ಸಾಂಕ್ರಾಮಿಕ ರೋಗದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎಂಬುದು ತಪ್ಪು ಮಾಹಿತಿಯಾಗಿದ್ದು, ಇದಕ್ಕೆ ಯಾವುದೇ ಆಧಾರಗಳು ಇಲ್ಲ ಎಂದಿದ್ದಾರೆ.

“ಮುಂದಿನ ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ಒಳಗಾಗುತ್ತಾರೆ ಎಂದು ತೋರಿಸಲು ಭಾರತ ಮತ್ತು ಜಾಗತಿಕವಾಗಿ ಯಾವುದೇ ಡಾಟಾ ಲಭ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್‌ ಮೂರನೇ ಅಲೆ ನವೆಂಬರ್‌ ವೇಳೆಗೆ ಅಪ್ಪಳಿಸಲಿದ್ದು, ಇದು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸುದ್ದಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಯಾವ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಮಕ್ಕಳು ಮಾಸ್ಕ್ ಧರಿಸಬೇಕೇ? ಈ ಬಗ್ಗೆ WHO ಏನು ಹೇಳುತ್ತೆ?

ಕೊರೋನಾದ ಪರಿಣಾಮ ಮಕ್ಕಳ ಮೇಲೂ ಅತಿಯಾಗಿದೆ. ಕೊರೋನಾದ ಕರಿ ನೆರಳಿನಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಪರದಾಡುತ್ತಿದ್ದಾರೆ. ಮುಖದ ಮೇಲಿನ ಮಾಸ್ಕ್ ಕೊರೋನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ. ಆದರೆ ಮಕ್ಕಳು ಈ ಮಾಸ್ಕ್ ಧರಿಸಬೇಕೇ? ಧರಿಸಿದರೂ ಎಂತಹ ಮಾಸ್ಕ ಮಕ್ಕಳಿಗೆ ಸೂಕ್ತ ಎಂಬ ಗೊಂದಲ ಹೆತ್ತವರದ್ದು. ಅದಕ್ಕಾಗಿ ಈ ಲೇಖನದಲ್ಲಿ WHO ಈ ಕುರಿತು ಏನು ಹೇಳುತ್ತೆ ಎಂಬುದನ್ನು ಹೇಳಿದ್ದೇವೆ.

ಮಕ್ಕಳ ಮಾನಸಿಕ ಮನಸ್ಥಿತಿಯ ಅಂಶಗಳನ್ನು ಆಧರಿಸಿ, WHO ಮತ್ತು ಯುನಿಸೆಫ್ ಮಕ್ಕಳಿಗೆ ಮಾಸ್ಕ್ಕ ಕುರಿತು ಈ ಕೆಳಗಿನ ಸಲಹೆ ನೀಡುತ್ತವೆ:

5 ವರ್ಷಕ್ಕಿಂತ ಕೆಳಗಿರುವ ಮಕ್ಕಳು:

5 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಇದು ಮಗುವಿನ ಸುರಕ್ಷತೆ, ಆಸಕ್ತಿ ಮತ್ತು ಮಾಸ್ಕ್ ಬಳಸುವ ಕನಿಷ್ಠ ಸಾಮರ್ಥ್ಯವನ್ನು ಆಧರಿಸಿದೆ. ಏಕೆಂದರೆ ಮಕ್ಕಳಿಗೆ ಅದನ್ನು ನಿರ್ವಹಿಸುವುದು ಅಸಾಧ್ಯ. ಜೊತೆಗೆ ಉಸಿರುಗಟ್ಟಿದ ಅನುಭವವೂ ಆಗಬಹುದು.

6-11 ವರ್ಷ ವಯಸ್ಸಿನ ಮಕ್ಕಳು:

ಈ ವಯೋಮಾನದ ಮಕ್ಕಳು ಮಾಸ್ಕ್ ಬಳಸುವ ನಿರ್ಧಾರವು ಈ ಕೆಳಗಿನ ಅಂಶಗಳನ್ನು ಆಧರಿಸಿರಬೇಕು.

ಮಗು ಇರುವ ಪ್ರದೇಶದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆಯೇ? ಹಾಗಿದ್ದರೆ ಮಾತ್ರ ಮಾಸ್ಕ್ ಬಳಸಿ.

ಮಕ್ಕಳು ಶಾಲೆ ಅಥವಾ ಇತರ ಸ್ಥಳಗಳಿಗೆ ಭೇಟಿ ನೀಡಿದಾಗ ಬಳಸಿ.

ವಯಸ್ಸಾದವರು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆ ಇರುವವರ ಜೊತೆ ಮಗು ಮಾತನಾಡುವಾಗ ಮಾಸ್ಕ್ ಬಳಸಿ.

ಮುಖವಾಡಗಳನ್ನು ಹೇಗೆ ಧರಿಸುವುದು, ತೆಗೆಯುವುದು ಮತ್ತು ಸುರಕ್ಷಿತವಾಗಿ ಧರಿಸುವುದು ಎಂಬುದರ ಕುರಿತು ಮಗುವಿಗೆ ಸಾಕಷ್ಟು ವಯಸ್ಕರ ಮೇಲ್ವಿಚಾರಣೆಯಿದ್ದಾಗ ಬಳಸಿ.

12 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು:

ಡಬ್ಲ್ಯುಎಚ್ಒ ಮತ್ತು ಯುನಿಸೆಫ್ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ವಯಸ್ಕರಂತೆಯೇ ಮಾಸ್ಕನ್ನು ಧರಿಸಬೇಕೆಂದು ಸಲಹೆ ನೀಡುತ್ತಾರೆ. ಸೋಂಕಿತ ವ್ಯಕ್ತಿಯಿಂದ ಅಥವಾ ಇತರರಿಂದ ಕನಿಷ್ಠ 1 ಮೀಟರ್ ದೂರದಲ್ಲಿ ಇರದಿದ್ದಾಗ ಮಾಸ್ಕ ಬಳಸಿ. ಅಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ಮಕ್ಕಳು ಯಾವ ರೀತಿಯ ಮಾಸ್ಕ್ ಧರಿಸಬೇಕು?:

ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಿರುವ ಮಕ್ಕಳು ವೈದ್ಯಕೀಯೇತರ ಅಥವಾ ಫ್ಯಾಬ್ರಿಕ್ (ಬಟ್ಟೆಯ) ಮಾಸ್ಕ್ ಧರಿಸಬಹುದು. ಇದು ಮೂಲ ರಕ್ಷಣೆಯನ್ನು ಒದಗಿಸುತ್ತದೆ, ಅಂದರೆ ಸೋಂಕಿಗೆ ಒಳಗಾಗಿದ್ದರೆ ಮತ್ತು ಒಳಗಾಗಿರುವುದು ತಿಳಿದಿಲ್ಲದಿದ್ದರೆ ಅದು ಇತರರಿಗೆ ಹರಡದಂತೆ ಮಾಡುತ್ತದೆ.

ಸಿಸ್ಟಿಕ್ ಫೈಬ್ರೋಸಿಸ್, ಕ್ಯಾನ್ಸರ್ ಅಥವಾ ಇಮ್ಯುನೊಸಪ್ರೆಶನ್ನಂತಹ ಆರೋಗ್ಯ ಸಮಸ್ಯೆಯಿರುವ ಮಕ್ಕಳು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಮೆಡಕಲ್ ಮಾಸ್ಕನ್ನು ಧರಿಸಬೇಕು. ಇದು ವೈರಸ್ ಹರಡುವುದನ್ನು ನಿಯಂತ್ರಿಸುತ್ತದೆ ಮತ್ತು ರಕ್ಷಣೆ ನೀಡುತ್ತದೆ.

Advertisement
Share this on...