ಕೊರೋನಾ ಲಸಿಕೆ ಪಡೆದವರೆಲ್ಲರೂ ಎರಡು ವರ್ಷಗಳೊಳಗೆ ಸಾವನ್ನಪ್ಪುತ್ತಾರಾ? ವೈರಲ್ ಆಗುತ್ತಿರುವ ಈ ಸುದ್ದಿಯ ಹಿಂದಿನ ಅಸಲಿಯತ್ತೇನು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 491 views

ಕೊರೋನಾ ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾಯುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ.

ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮೊದಲು ಯೋಚಿಸಿ ಎಂದು ಅಸ್ಸಾಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೆಂಚ್ ನೋಬೆಲ್ ಪ್ರಶಸ್ತಿ ವಿಜೇತರನ್ನು ತಪ್ಪುದಾರಿಗೆ ಎಳೆಯುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ರೀತಿ ಪರಿಶೀಲಿಸದ ಸುದ್ದಿಗಳನ್ನು ಫಾರ್ವರ್ಡ್ ಮಾಡಬಾರದು ಎಂದು ಅಸ್ಸಾಂ ಪೊಲೀಸರು ವಿನಂತಿಸಿದ್ದಾರೆ.

ನೆನಪಿಡಿ..! ತಪ್ಪು ಮಾಹಿತಿ ವೈರಸ್ ನಂತೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಈ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಕೇಂದ್ರ ಸರ್ಕಾರದ PIB Fact Check ತಂಡವೂ ತನಿಖೆ ನಡೆಸಿ ಫೇಸ್ಬುಕ್ ಹಾಗು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಈ ಸುದ್ದಿ ಫೇಕ್ ಆಗಿದ್ದು ಇದನ್ನ ಜನ ನಂಬಬಾರದು ಹಾಗು ಫಾರ್ವರ್ಡ್ ಮಾಡಬಾರದು ಎಂದು ಹೇಳಿದೆ.

ಆತಂಕ ಬಿಡಿ, ಆರಾಮಾಗಿರಿ: ಕೊರೋನಾ ಎದುರಿಸಲು ಇಲ್ಲಿವೆ ಸರಳ ಟಿಪ್ಸ್

ಕೊರೋನಾಗಿಂತಲೂ ಹೆಚ್ಚಾಗಿ ಹರಡುತ್ತಿರುವುದು ಏನಾದರೂ ಇದ್ದರೆ ಅದು ಈ ಸಾಂಕ್ರಾಮಿಕದಿಂದ ನಮ್ಮ ಜೀವ- ಜೀವನಗಳ ಮೇಲೆ, ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಮೇಲೆ ಬೀರುವ ಪರಿಣಾಮ, ಭಯ ಮತ್ತು ಆತಂಕಗಳಾಗಿವೆ.

ಹಾಗಾದರೆ ಈ ಭಯ ಮತ್ತು ಆತಂಕಗಳೆಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ಸುತ್ತ ನಡೆಯುತ್ತಿರುವುದಕ್ಕೆ ನಮ್ಮ ದೇಹದ ಸ್ವಾಭಾವಿಕ ಪ್ರತಿಕ್ರಿಯೆಯೇ ಈ ಭಯ ಮತ್ತು ಆತಂಕಗಳು.

ಕೊರೋನಾದಿಂದ ನಮ್ಮ ಜೀವಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವುದು ನಮ್ಮ ಅಸ್ತಿತ್ವಕ್ಕಾಗಿ ಹೋರಾಡಿದಂತೆ. ಆ ನಿಟ್ಟೀನಲ್ಲಿ ಅಗತ್ಯವಿರುವುದನ್ನು ಮಾಡುವುದಕ್ಕೆ  ನಮ್ಮನ್ನು ಕಾರ್ಯಪ್ರವೃತ್ತರನ್ನಾಗಿಸುವ “ಹೋರಾಡು, ಓಡು” ಎಂಬ ಪರಿಸ್ಥಿತಿಗೆ ಬದಲಾಯಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ.

ಆದರೆ ಒಂದು ವೇಳೆ ನಾವು ಭಯ ಅಥವಾ ಆತಂಕದಲ್ಲೇ ಸಿಲುಕಿಕೊಂಡರೆ, ಅವು ನಮ್ಮನ್ನು ಯಾವುದೇ ಕ್ರಮವನ್ನೂ ಕೈಗೊಳ್ಳದಂತಾಗಿಸುತ್ತವೆ.

ಹೌದು, ನಮಗೆ ಭಯವಿದೆ, ಆತಂಕವಿದೆ, ಇನ್ನು ವೈದ್ಯಕೀಯ ಸರಬರಾಜಿನ ಕೊರತೆ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ ಎಂಬುದು ಸಹಜವೆನಿಸಿದರೂ, ಭಯಪಡುವುದರಿಂದ ಆತಂಕಪಡುವುದರಿಂದ ನಮಗೆ ಏನೂ ಸಿಗುವುದಿಲ್ಲ ಹಾಗೂ ಉತ್ತಮ ಎನಿಸುವಂತೆ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಒತ್ತಡ, ಆತಂಕಗಳು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೇಗೆ ಕುಗ್ಗಿಸುತ್ತದೆ, ರಕ್ತದ ಒತ್ತಡವನ್ನು ಅದು ಹೇಗೆ ಹೆಚ್ಚಿಸುತ್ತದೆ, ಬ್ಲಡ್ ಶುಗರ್ ಮಟ್ಟವನ್ನು ಹೇಗೆ ಹೆಚ್ಚಿಸುತ್ತದೆ, ಉಸಿರಾಟದ ಸಮಸ್ಯೆ ಉಂಟಾಗುವುದೂ ಮೊದಲಾದ ಸಮಸ್ಯೆಗಳನ್ನೆಲ್ಲಾ ಹೇಗೆ ತಂದೊಡ್ಡುವ ಮೂಲಕ ನಮ್ಮನ್ನು ಮತ್ತಷ್ಟು ವಿಷವರ್ತುಲದಲ್ಲಿ ಸಿಲುಕಿಸುತ್ತಿದೆ ಎಂಬುದನ್ನು ವಾಸ್ತವದಲ್ಲಿ ನಮ್ಮ ಇಂದಿನ ವಿಜ್ಞಾನವೂ ಹೇಳುತ್ತಿದೆ.

ಕೋವಿಡ್-19 ಪ್ರಾರಂಭವಾದಾಗಿನಿಂದಲೂ ನಮ್ಮಲ್ಲಿ ಸಹಸ್ರಾರು ಮಂದಿ ರೋಗಿಗಳು ಬಂದಿದ್ದರು, ಈಗಲೂ ಬರುತ್ತಿದ್ದಾರೆ. ಕೆಲವು ಮಂದಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿರುತ್ತದೆ, ಇನ್ನೂ ಕೆಲವು ಮಂದಿ ದುರದೃಷ್ಟವಶಾತ್ ವೈರಾಣುವಿನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದರೆ ಬಹುತೇಕ ಇರುವ ಮನೆಯಲ್ಲಿಯೇ ಆರಾಮಾಗಿ ಗುಣಹೊಂದುತ್ತಿರುವ ರೋಗಲಕ್ಷಣ ರಹಿತ ಮಂದಿಯ ಕಥೆಯೇನು? ಅವರುಗಳೆಲ್ಲಾ, ತಮ್ಮ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸುವುದಕ್ಕೆ ತಮ್ಮ ಜೀವನಶೈಲಿಯಲ್ಲಿ ಸರಳವಾದ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಅವರು ಬದಲಾವಣೆ ಮಾಡಿಕೊಂಡಂತೆ ನೀವೂ ಮಾಡಿದಲ್ಲಿ ಅವರಲ್ಲಿ ನೀವೂ ಒಬ್ಬರಾಗಬಹುದು!!

ಈಗಲೇ ನೀವು ಮಾಡಬಹುದಾದ ಒಂದಷ್ಟು ಅಂಶಗಳು ಹೀಗಿವೆ…

  1. ಮನೆಯಲ್ಲಿಯೇ ಇರಿ: ಮನೆಯಲ್ಲಿಯೇ ಇರುವುದು ನೀವು ಕೈಗೊಳ್ಳಬಹುದಾದ ಅತ್ಯಂತ ಸುಲಭವಾದ ಹಾಗೂ ಅತ್ಯಂತ ಪ್ರಭಾವಿಯಾದ ಕ್ರಮ, ಈ ರೀತಿ ಮಾಡುವುದರಿಂದ ನಿಮಗೆ ಅಷ್ಟೇ ಒಳಿತಾಗುವುದರ ಜೊತೆಗೆ ಎಲ್ಲರಿಗೂ ಒಳಿತಾಗಲಿದೆ, ಏಕೆಂದರೆ ಪ್ರತಿಯೊಬ್ಬರೂ ಕೋವಿಡ್-19 ಸೋಂಕು ಹರಡುವಿಕೆ ಸರಪಳಿಯನ್ನು ಒಂದೋ ಬೆಳೆಸುತ್ತಿದ್ದಾರೆ, ಇಲ್ಲವೇ ತುಂಡು ಮಾಡುತ್ತಿದ್ದಾರೆ.
  2. ಆರಾಮಾಗಿರಿ, ನಿದ್ದೆ ಮಾಡಿ :ನೀವು ಎಷ್ಟೇ ಸಾಂಬಾರ ಪದರ್ಥಗಳನ್ನು ಬಳಕೆ ಮಾಡಿದರೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಿದರೂ, ನೀವು ಚೇತರಿಕೆ ಹೊಂದುವುದು ಸರಿಯಾದ ನಿದ್ದೆಯಿಂದ ಅಷ್ಟೇ ಸಾಧ್ಯ! ನಿದ್ದೆ, ಕಡಿಮೆ ರೋಗನಿರೋಧಕ ಶಕ್ತಿ, ಚೇತರಿಕೆಯಲ್ಲಿ ವಿಳಂಬದ ಸುತ್ತಾ ಅಸಂಖ್ಯ ವೈಜ್ಞಾನಿಕ ಮತ್ತು ಕ್ಲಿನಿಕಲ್ ಅಧ್ಯಯನಗಳು ನಡೆದಿವೆ. ಆದರೆ ಈ ಸ್ವಾಭಾವಿಕ ಪ್ರಕ್ರಿಯೆಯನ್ನು ಮಾತ್ರ ನಾವು ತೀರಾ ಲಘುವಾಗಿ ಪರಿಗಣಿಸುತ್ತೇವೆ. ಆದ್ದರಿಂದ ನೀವು ಕೋವಿಡ್ ಬಾರದಂತೆ ತಡೆಯುತ್ತಿದ್ದೀರೋ ಅಥವಾ ಈಗಾಲೇ ಚೇತರಿಕೆ ಕಂಡಿದ್ದೀರೋ ಅದರ ಸ್ಥಿತಿ ಏನೇ ಇರಲಿ, ನಿಸರ್ಗದತ್ತವಾಗಿರುವ ನಿದ್ದೆಯೆಂಬ ವ್ಯವಸ್ಥೆಯನ್ನು ಮಾನ್ಯ ಮಾಡಿ ಪ್ರತಿ ರಾತ್ರಿಯೂ ಗುಣಮಟ್ಟದ ನಿದ್ದೆಯನ್ನು ಮಾಡಿ
  3. ವಿಟಮಿನ್ ಸಿ, ಜಿಂಕ್, ಸೆಲೆನಿಯಮ್, ವಿಟಮಿನ್ ಡಿ3 ಮುಂತಾದ ರೋಗನಿರೋಧಕ ಉತ್ತೇಜನದ ಪೋಷಕಾಂಶಗಳನ್ನು ಸೇವಿಸಿ: ಇವು ಮೂಲದಲ್ಲಿಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಾಗಿದ್ದು, ಜಾಗತಿಕ ಮಟ್ಟದಲ್ಲಿ ವೈದ್ಯಕೀಯವಾಗಿ ಶಿಫಾರಸು ಮಾಡಲಾಗುತ್ತಿರುವ ಅಂಶಗಳಾಗಿವೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಬೆಳವಣಿಗೆ, ಬಲವರ್ಧನೆ, ಸರಿಪಡಿಸುವಿಕೆ, ಚೇತರಿಕೆ, ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡುವುದಕ್ಕೆ ಇವುಗಳು ಕಾರಣವಾಗುತ್ತವೆ. ನಾವು ಅದನ್ನು ಆಹಾರದ ಮೂಲಕವೂ ಪಡೆಯಬಹುದಾಗಿದೆ, ಆದರೆ ಈ ಹಂತದಲ್ಲಿ ನಿಮಗೆ ಅಗತ್ಯವಿದ್ದಲ್ಲಿ, ಪ್ರಬಲ ಪರಿಣಾಮ ಬೇಕಾದಲ್ಲಿ ಈ ಪೂರಕಾಂಶಗಳನ್ನು ವೈದ್ಯರ ಸಲಹೆ ಪಡೆದು ಸೇವಿಸಬಹುದಾಗಿದೆ.

ವಿಟಮಿನ್ ಸಿ ಮೂಲ: ನಿಂಬೆ ಹಣ್ಣು, ಕಿತ್ತಳೆ, ಪೈನ್ ಆಪಲ್, ನೆಲ್ಲಿಕಾಯಿ, ಸೀಬೆಹಣ್ಣು, ಕ್ಯಾಪ್ಸಿಕಂ ಅಥವಾ  ಬೆಲ್ ಪೆಪರ್(ದೊಡ್ಡ ಮೆಣಸಿನಕಾಯಿ), ಪಪಾಯಗಳನ್ನು ಸೇವಿಸಬಹುದಾಗಿದೆ.

ಜಿಂಕ್ ಮೂಲಗಳು: ಕುಂಬಳಕಾಯಿ ಬೀಜಗಳು, ಮನೆ ಹುರುಳಿ ಎಂದು ಕರೆಯಲ್ಪಡುವ ಮನೆ ಹುರುಳಿ, ಬೇಯಿಸಿದ ಕಡಲೆ, ಸೂರ್ಯಕಾಂತಿ ಬೀಜಗಳು, ಸೀಗಡಿಗಳು, ಆಯ್ಸ್ಟರ್ (ಸಿಂಪಿ), ಗೋಡಂಬಿ ಬೀಜಗಳು. ಬಾದಾಮಿ, ಮೊಟ್ಟೆ, ಏಡಿಗಳು, ಮಾಂಸ, ಚಿಕನ್, ಡೈರಿ ಉತ್ಪನ್ನಗಳು

ಸೆಲೆನಿಯಮ್ ಮೂಲಗಳು: ಬ್ರೆಜಿಲ್ ಬೀಜಗಳು, ಇಡಿಯಾದ ಮೊಟ್ಟೆಗಳು, ಕಾಟೇಜ್ ಚೀಸ್, ಮೃದುಗಿಣ್ಣು, ಮಶ್ರೂಮ್ ಗಳು, ಡೈರಿ ಉತ್ಪನ್ನಗಳು

ವಿಟಮಿನ್ ಡಿ3: ರೋಗನಿರೋಧಕ ಶಕ್ತಿ ಮೂಲಭೂತ ಅಂಶಗಳಿಲ್ಲದೇ ಕೆಲಸ ಮಾಡುವುದಿಲ್ಲ. ವಿಟಮಿನ್ ಡಿ3 ರೋಗನಿರೋಧಕ ಶಕ್ತಿಗೆ ಮೂಲಭೂತವಾದ ಅಂಶವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಇದು ಅತ್ಯುತ್ತಮವಾದದ್ದಾಗಿದೆ. ಇದಕ್ಕಾಗಿ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಬೇಕಾಗಬಹುದೇನೋ, ಆದರೆ ನೈಸರ್ಗಿಕವಾಗಿ ಸೂರ್ಯನ ಬೆಳಕು, ಅಣಬೆಗಳು,  ಮೊಟ್ಟೆಗಳು ಇದರ ಮೂಲವಾಗಿದೆ.

Advertisement
Share this on...