ಕೋಟಿ ರಾಮು ಬಳಿಕ ಮತ್ತೊಬ್ಬ ಖ್ಯಾತ ನಿರ್ಮಾಪಕರ ಬಲಿ! 2 ತಿಂಗಳು ಜೊತೆಗಿದ್ದರು ಎಂದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ನಟ ನೀನಾಸಂ ಸತೀಶ

in FILM NEWS/Kannada News/News 243 views

ಸದ್ಯ ಇದೀಗ ಕನ್ನಡ ಚಿತ್ರರಂಗದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದ್ದು, ಕರೋನಾ ಎರಡನೇ ಅಲೆಯಿಂದಾಗಿ ಸಾಕಷ್ಟು ಸಿನಿಮಾ ಕ್ಷೇತ್ರಕ್ಕೆ ಸೇರಿದವರು ತಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತಿದ್ದಾರೆ. ಹೌದು ಕಳೆದ ವರುಷ ಕರೋನಾ ಸೋಂಕಿನ ಹಿನ್ನೆಲೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದಾಗಿ ಚಿತ್ರರಂಗದ ಕೆಲಸಗಳೆಲ್ಲ ಸ್ಥಗಿತಗೊಂಡು ಸಾಕಷ್ಟು ನಷ್ಟವನ್ನೂ ಅನುಭವ ಬೇಕಾಯಿತು.

Advertisement

ಆದರೆ ಈ ವರುಷದಿಂದ ಎಲ್ಲವೂ ಸರಿಹೋಯಿತು ಎಂದು ಚಿತ್ರಗಳ ಕೆಲಸವನ್ನು ಕೂಡ ಪ್ರಾರಂಭಿಸಿದ ಬೆನ್ನಲ್ಲೇ ಮತ್ತೊಮ್ಮೆ ಕರೋನಾ ಆರ್ಭಟ ಹೆಚ್ಚಾಗಿದ್ದು,ಇದೀಗ ಮತ್ತೆ ಚಿತ್ರರಂಗದ ಕೆಲಸವೆಲ್ಲ ಸ್ಥಗಿತಗೊಂಡಿದೆ. ಇದರ ಜೊತೆಗೆ ಚಿತ್ರರಂಗದ ಸಾಕಷ್ಟು ನಿರ್ಮಾಪಕ ನಿರ್ದೇಶಕ ಹಾಗೂ ತಂತ್ರಜ್ಞರು ತಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಅವರ ಪ್ರೀತಿಯ ಪತಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರು ಮಾಡಿದ್ದ ಕೋಟಿ ರಾಮು ಅವರಿಗೆ ಕೊರೋನಾ ಸೋಂಕು ತಗುಲಿದ್ದು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ದಿನದಿಂದ ದಿನಕ್ಕೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು ಎಂದೇ ಹೇಳಲಾಗುತ್ತಿದೆ.

ಆದರೆ ಉಸಿರಾಟದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಕೋಟಿ ರಾಮು ಅವರು ಇಹಲೋಕ ತ್ಯಜಿಸಿದ್ದು, ಈ ಘಟನೆ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಆಘಾತ ತಂದಿದೆ. ಇನ್ನೂ ನಿರ್ಮಾಪಕ ಕೋಟಿ ರಾಮು ಅವರ ಸಾವಿನ ಘಟನೆಯನ್ನು ಆರಿಸಿಕೊಳ್ಳುತ್ತಿರುವ ಸಮಯದಲ್ಲಿಯೆರ ಇದೀಗ ಚಂದನವನದ ಮತ್ತೂಬ್ಬ ನಿರ್ಮಾಪಕರ ಪ್ರಾಣ ಪಕ್ಷಿ ಕೂಡ ಹಾರಿಹೋಗಿದ್ದು, ಇವರು ಕೂಡ ಕರೋನ ಸೋಂಕಿಗೆ ಬಲಿಯಾಗಿದ್ದಾರೆ.

ಹೌದು ಕನ್ನಡ ಚಿತ್ರರಂಗದಲ್ಲಿ ಮೂರನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ರಾಜಶೇಖರ್ ಅವರಿಗೆ ಕರೂನಾ ಸೋಂಕು ತಗುಲಿದ್ದ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ನಿರ್ಮಾಪಕ ಕೂಡ ತನ್ನ ಕೊನೆಯುಸಿರೆಳೆದಿದ್ದು, ಚಂದನವನ ಕ್ಕೆ ಮತ್ತೊಮ್ಮೆ ಆಘಾತವಾಗಿದೆ. ರಾಜಶೇಖರ್ ರವರು ದುನಿಯಾ ಸೂರಿ ನಿರ್ದೇಶನದ ಡಾಲಿ ಧನಂಜಯ್ ಅಭಿನಯಿಸಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಸೇರಿದಂತೆ ಬ್ಯಾಡ್ ಮ್ಯಾನರ್ಸ್ ಹಾಗೂ ಪೆಟ್ರೋಮ್ಯಾಕ್ಸ್ಚಿ ಎಂಬ ಸಿನಿಮಾಗಳನ್ನು ನಿರ್ಮಾಣ ಮಾಡಿ ಚಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕುವ ಮೂಲಕ ನಟ ನೀನಾಸಂ ಸತೀಶ್ ಹೀಗೆ ಬರೆದಿದ್ದಾರೆ…

“ರಾಜು”ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹಾತ್ವಾಕಾಂಕ್ಷಿ. ನಮ್ಮ ಪೇಟ್ರೋಮ್ಯಾಕ್ಸ್ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ . ಜಗಳ ಪ್ರೀತಿ ಎಲ್ಲವೂ ಇತ್ತು, ನಮ್ಮ ಜೊತೆ ಕಾರ್ಯಕಾರಿ ನಿರ್ಮಾಪಕರಾಗಿ ೨ ತಿಂಗಳು ಜೊತೆಗಿದ್ದರು. ಪೆಟ್ರೋಮ್ಯಾಕ್ಸ್ ಗೆದ್ದು ಅದರ ಅದ್ದೂರಿ ,ಸಮಾರಂಭ ಮಾಡುವ ಆಸೆ ಹೊತ್ತಿದ್ದರು.ಯಾವಾಗಲು ನಗುತ್ತ ಸೆಟ್ ಅಲ್ಲಿ ಕೂತಿರುತ್ತಿದ್ದ, ನೆನಪುಗಳನ್ನು ನೆನಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ.ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು ಕಾರು ಹತ್ತಿಸಿ ನಾವು ಗೆಲ್ತೀವಿ,ನಡೀರಿ ಸಾರ್ ನೆಮ್ಮದಿಯಾಗಿ ನಿದ್ದೆ ಮಾಡಿ.ಎಂದೂ ಚಿರನಿದ್ರೆಗೆ ಜಾರಿದ “ರಾಜು”ಇದು ತಪ್ಪಲ್ಲವೇ…ಅಂತಿಮ ನಮನ ಸಲ್ಲಿಸಲು ನನಗೆ ಮನಸ್ಸಾಗುತ್ತಿಲ್ಲ………ಕ್ಷಮಿಸಿ

ಇದರ ಜತೆಗೆ ಸಾಕಷ್ಟು ಒಳ್ಳೆಯ ಕನ್ನಡ ಸಿನಿಮಾಗಳನ್ನು ಚಂದನವನಕ್ಕೆ ನೀಡುವ ಕನಸನ್ನು ಹೊಂದಿದ್ದ ಚಂದ್ರಶೇಖರ್ ರವರಿಗೆ ಕಳೆದ ವಾರ ಕರೋನಾ ಸೋಂಕು ತಗುಲಿದ್ದು, ಕನಸನ್ನು ನನಸು ಮಾಡುವ ಮೊದಲೇ ತಮ್ಮ ಉಸಿರಾಟವನ್ನು ನಿಲ್ಲಿಸಿದ್ದಾರೆ. ಇದೀಗ ರಾಜಶೇಖರ್ ಅವರ ಸಾವಿಗೆ ಚಂದನವನ ಸಂತಾಪ ಸೂಚಿಸಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಳ್ಳುತ್ತಿದ್ದಾರೆ.

Advertisement
Share this on...