ಹುಬ್ಬಳ್ಳಿ:
ಹುಬ್ಬಳ್ಳಿಯ ವೆಂಕಟೇಶ್ವರ ಕಾಲನಿಯ ಸಿದ್ದನಗೌಡಾ ಪಾಟೀಲ್ ಮತ್ತು ವಿನಾಯಕನಗರದ ರಿಯಾ ಬಂಧಿತರು. ಸುಚಿರಾಯು ಆಸ್ಪತ್ರೆಯಲ್ಲಿ ಕ್ಲೀನರ್ ಆಗಿ ಸಿದ್ದನಗೌಡ ಕೆಲಸ ಮಾಡುತ್ತಿದ್ದ. ಹುಬ್ಬಳ್ಳಿ ನಗರದ ತತ್ವದರ್ಶಿ ಆಸ್ಪತ್ರೆಯ ನರ್ಸ್ ರಿಯಾ. ಪ್ರೇಮಿಗಳಾದ ಇವರಿಬ್ಬರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಬೇಕಿದ್ದ ರೆಮಿಡಿಸಿವರ್ ಇಂಜೆಕ್ಷನ್ಗಳನ್ನು ಕದ್ದು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಲು ಹೋಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊರೋನಾ ರಿಪೋರ್ಟ್ ನಿಂದಾಗಿ ಮಗುವಿನ ಪ್ರಾ ಣ ಬ ಲಿ
ಪಟನಾ: ಕರೊನಾ ಬಂದಾಗಿನಿಂದ ಬೇರೆ ಕಾಯಿಲೆಗಳ ಚಿಕಿತ್ಸೆಯೂ ಕಷ್ಟಸಾಧ್ಯವಾಗಿಬಿಟ್ಟಿದೆ. ಅದೇ ರೀತಿ ತನ್ನ ಎಂಟು ವರ್ಷದ ಮಗಳ ಗಂಟಲಲ್ಲಿ ಲಿಚ್ಚಿ ಹಣ್ಣು ಸಿಕ್ಕಿಹಾಕಿಕೊಂಡಿದೆ ಎಂದು ಆಸ್ಪತ್ರೆಗೆ ಕರೆದುಕೊಂಡ ಹೋದ ತಂದೆಗೆ ಆಸ್ಪತ್ರೆ ಕರೊನಾ ರಿಪೋರ್ಟ್ ತರಲು ಹೇಳಿದ್ದು, ಬಾಲಕಿ ತಂದೆಯ ತೋಳಿನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ.
ಮುಸಾಹಾರಿ ಬ್ಲಾಕ್‌ನಲ್ಲಿರುವ ರಘುನಾಥಪುರದ ನಿವಾಸಿ ಸಂಜಯ್ ರಾಮ್ನ ಎಂಟು ವರ್ಷದ ಮಗಳು ಜೂನ್ 1ರಂದು ಮನೆಯಲ್ಲಿ ಲಿಚ್ಚಿ ಹಣ್ಣು ತಿನ್ನುತ್ತಾ ಕುಳಿತಿದ್ದಾಗ ಆಕಸ್ಮಿಕವಾಗಿ ಅದರ ಬೀಜವನ್ನೂ ನುಂಗಿಬಿಟ್ಟಿದ್ದಾಳೆ. ಗಂಟಲಲ್ಲಿ ಬೀಜ ಸಿಕ್ಕಿಹಾಕಿಕೊಂಡು ಒದ್ದಾಡಲಾರಂಭಿಸಿದ್ದಾಳೆ. ತಕ್ಷಣ ಸಂಜಯ್ ಮಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ಹತ್ತಿರವಿದ್ದ ಸದಾರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ನನ್ನ ಮಗಳಿಗೆ ಚಿಕಿತ್ಸೆ ಕೊಡಿ ಎಂದು ವೈದ್ಯರಲ್ಲಿ ಬೇಡಿಕೊಂಡಿದ್ದಾನೆ.
ಆದರೆ ಯಾವುದೇ ಚಿಕಿತ್ಸೆ ಕೊಡುವುದಕ್ಕೂ ಮುನ್ನ ರೋಗಿಯ ಕರೊನಾ ವರದಿ ನೀಡುವುದು ಅವಶ್ಯಕ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಕರೊನಾ ಟೆಸ್ಟ್, ಅದರ ರಿಪೋರ್ಟ್ ಎಂದು ನಾಲ್ಕು ಗಂಟೆಗಳ ಕಾಲ ಆತನನ್ನು ಕಾಯಿಸಲಾಗಿದೆ. ಅಷ್ಟರಲ್ಲಾಗಲೇ ಸಾಕಷ್ಟು ಒದ್ದಾಡಿದ್ದ ಬಾಲಕಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.
ಪ್ರಾಣ ಬಿಟ್ಟ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿದ್ದ ಸಂಜಯ್ ಆಸ್ಪತ್ರೆಯ ಎದುರೇ ಜೋರಾಗಿ ಅಳಲಾರಂಭಿಸಿದ್ದಾನೆ. ಅದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದಾದ ನಂತರ ಎಚ್ಚೆತ್ತುಕೊಂಡು ವೈದ್ಯಾಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವುದಾಗಿಯೂ ಅವರು ಹೇಳಿದ್ದಾರೆ.