ಕೋವಿಡ್ ನಿಂದ ಲೈಫೇ ಬರ್ಬಾದ್ ಆಯ್ತು, ಬೀದಿ ಬದಿಯಲ್ಲಿ‌ ಮೀನು ಮಾರಾಟ ಮಾಡುತ್ತದ್ದಾನೆ ಖ್ಯಾತ ನಟ

in FILM NEWS/Kannada News/News/Story/ಕನ್ನಡ ಮಾಹಿತಿ 133 views

ಕೋಲ್ಕತಾ: ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿದ್ದ ಬಂಗಾಳಿಯ ಅರಿಂದಮ್ ಪ್ರಮಣಿಕ್, ಇದೀಗ ಅವಕಾಶಗಳಿಲ್ಲದೆ ಮೀನು ಮಾರಾಟ ಮಾಡುತ್ತಿದ್ದಾರೆ. ಒಂದು ಟೈಮಿನಲ್ಲಿ ಬ್ಯುಝಿ ಕಲಾವಿದನಾಗಿದ್ದ ಈತ ಇದೀಗ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಪ್ರತಿಭಾವಂತ ನಟನೆಂದೆ ಗುರುತಿಸಿಕೊಂಡಿದ್ದ ಅರಿಂದಮ್ ಬದುಕು ಹೀಗೆ ಬೀದಿಗೆ ಬಿದ್ದಿರುವುದಕ್ಕೆ ಕಾರಣ ಪಾಪಿ ಕೋವಿಡ್.

Advertisement

ಹೌದು, ಕ್ರೂರಿ ಕೋವಿಡ್ ಅದೆಷ್ಟೋ ಜನರ ಕೆಲಸ ಕಸಿದುಕೊಂಡು ಬೀದಿಗೆ ನೂಕಿತು. ಒಂದು ತುತ್ತಿನ ಊಟಕ್ಕೆ ಪರಿತಪಿಸುವಂತಹ ಪರಸ್ಥಿತಿ ತಂದೊಡ್ಡಿತು. ಕೋವಿಡ್ ಎರಡನೇ ಅಲೆಯಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡವು. ಇದರಿಂದ ನಟ ಅರಿಂದಮ್ ಗೂ ಕೂಡ ಕೆಲಸ ಇಲ್ಲದಂತಾಯಿತು. ಹೀಗಾಗಿ ಮನೆಯಲ್ಲಿ ಕುಳಿತುಕೊಳ್ಳಲಾಗದೆ ಮೀನು ಮಾರಾಟ ಮಾಡುತ್ತಿದ್ದಾರೆ.

ತಮ್ಮ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಅರಿಂದಮ್, ‘ನನ್ನ ತಂದೆ ಪೂರ್ವ ಬುರ್ದ್ವಾನ್ ಜಿಲ್ಲೆಯ ಮೇಮರಿಯಲ್ಲಿ ತರಕಾರಿಗಳನ್ನು ಮಾರುತ್ತಿದ್ದರು. ಆದರೆ ನಾನು ಯಾವಾಗಲೂ ಯಶಸ್ವಿ ನಟನಾಗಬೇಕೆಂದು ಕನಸು ಕಾಣುತ್ತಿದ್ದೆ. ನಾನು ಆ ವೃತ್ತಿಗೆ ಕಾಲಿಟ್ಟ ದಿನದಿಂದ ನನ್ನ ತಂದೆ ಆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ನಾನು ಎಲ್ಲರಿಗೂ ಉದಾಹರಣೆಯಾಗಿದ್ದೆ. ಆದರೆ ಇಂದು ಕರೋನಾದ ಕಾರಣ ನಟನೆಯಲ್ಲಿ ನನಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ನನ್ನ ಕುಟುಂಬವನ್ನು ಪೋಷಿಸಲು ನಾನು ಮೀನು ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿಂದ ಅಪ್ಪ ಅಮ್ಮನನ್ನ ಕಳೆದುಕೊಂಡ 100 ಮಕ್ಕಳನ್ನ ದತ್ತು ಪಡೆದ ವ್ಯಕ್ತಿ

ಕೆಲವರನ್ನೂ ನೋಡುವಾಗ ಅಥವಾ ಅವರ ಬಗ್ಗೆ ಕೇಳುವಾಗ ಇಂಥವರೂ ಇರುತ್ತಾರಾ… ಇವರು ಆ ದೇವರ ಅವತಾರ ಪುರುಷನೇ ಇರಬೇಕು ಎಂದು ಅನಿಸದಿರಲ್ಲ… ಅಂಥ ವ್ಯಕ್ತಿಗಳನ್ನು ನೋಡುವಾಗ ಯಾರೂ ಇಲ್ಲದವರ ರಕ್ಷಣೆಗೆ ದೇವ ಒಬ್ಬನನ್ನು ಕಳುಹಿಸಿಯೇ ಕಳುಸುತ್ತಾನೇ ಎಂಬ ಭರವಸೆ ಮೂಡುವುದು…

ಕೋವಿಡ್‌ 19 2ನೇ ಅಲೆ ಭಾರತಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ…ಅದರ ಹೊಡೆತಕ್ಕೆ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಕೊರೊನಾದಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಇಂಥ ಅನಾಥ ಮಕ್ಕಳ ಪಾಲಿಗೆ ದೇವರಾಗಿದ್ದಾರೆ ಜೈ ಶರ್ಮ…

25ರ ಪ್ರಾಯದಲ್ಲಿಯೇ 100 ಮಕ್ಕಳಿಗೆ ಆಶ್ರಯದಾತ

ಇವರ ಬಗ್ಗೆ ಹೇಳುವುದಾದರೆ ಇನ್ನೂ 25 ಹರೆಯದ ತರುಣ…ಇವರ ಪ್ರಾಯದಲ್ಲಿ ಇತರರ ಬಗ್ಗೆ ಯೋಚಿಸುವುದಕ್ಕಿಂತ ನಾನು-ನನ್ನದು ಎಂದು ಯೋಚಿಸುವರೇ ಹೆಚ್ಚು. ಆದರೆ ಜೈ ಶರ್ಮ ಮಾತ್ರ ತನ್ನ ಬದುಕನ್ನು ಅನಾಥ ಮಕ್ಕಳಿಗಾಗಿ ಮೀಸಲಿಡಲು ತೀರ್ಮಾನಿಸಿದ್ದಾರೆ. ಕೋವಿಡ್‌ 19ನಿಂದ ತಂದೆ-ತಾಯಿ ಕಳೆದುಕೊಂಡು ಪ್ರೀತಿಗಾಗಿ ಬೆಂಬಲಿಸುತ್ತಿರುವ 100 ಮಕ್ಕಳಿಗೆ ಆಶ್ರಯದಾತನಾಗಲು ಪ್ರೀತಿಯಿಂದ ಮುಂದೆ ಬಂದಿದ್ದಾರೆ.

ಮಕ್ಕಳ ಬದುಕಿನ ಆಶಾಕಿರಣ ಜೈ ಶರ್ಮ

ತುಂಬಾ ಮುದ್ದಿನಿಂದ ಅಪ್ಪ-ಅಮ್ಮ ನೋಡಿಕೊಳ್ಳುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಅವರೇ ಕಣ್ಮರೇ ಆಗುತ್ತಾರೆ. ಆ ಚಿಕ್ಕ ಪ್ರಾಯದಲ್ಲಿ ಬದುಕಿನಲ್ಲಿ ಕಾರ್ಮೋಡ ಆವರಿಸಿದಾಗ ಆ ಮಕ್ಕಳ ಬದುಕಿನಲ್ಲಿ ಬೆಳಕಿನ ಕಿರಣವಾಗಿ ಬಂದವರೇ ಡೆಹರಾಡೂನ್‌ನ ಜೈ ಶರ್ಮ. ಜೋಯ್‌ (JOY) ಎಂಬ ಹೆಸರಿನ ಎನ್‌ಜಿಒ ಸ್ಥಾಪಿಸಿ, ಕೋವಿಡ್‌ 19ನಿಂದಾಗಿ ಅನಾಥರಾದ 100 ಮಕ್ಕಳನ್ನು ದತ್ತು ತೆಗೆಯುವುದಾಗಿ ಹೇಳಿದ್ದಾರೆ. ಈಗಾಗಲೇ 20 ಮಕ್ಕಳನ್ನು ದತ್ತು ಪಡೆದಿದ್ದಾರೆ.

ಇನ್ನು ಕೆಲವು ವಾರಗಳಲ್ಲಿಯೇ 100 ಮಕ್ಕಳನ್ನು ದತ್ತು ಪಡೆಯಲು ಅವರು ಹಾಗೂ ಅವರ ತಂಡ ಕಾರ್ಯನಿರ್ವಹಿಸುತ್ತದೆ. ಈ ಮೂಲಕ 100 ಮಕ್ಕಳಿಗೆ ಒಂದು ಸುರಕ್ಷಿತ ಕೈ ಸಿಕ್ಕಂತೆ ಆಗುವುದು.

ಕೊರೊನಾ ಸಮಯದಲ್ಲಿ ಸೇವೆ ಸಲ್ಲಿಸಿದ್ದರು

2ನೇ ಅಲೆ ಪ್ರಾರಂಭವಾದ ಜೈ ಶರ್ಮ ಹಾಗೂ ವನ ತಂಡ ಜೋಯ್‌ ಎನ್‌ಜಿಒ ಮೂಲಕ ಜನರಿಗೆ ಫ್ರೀ ಆಕ್ಸಿಜನ್ ಸಿಲಿಂಡರ್ ಒದಗಿಸುವುದು, ಮೆಡಿಕಲ್ ಕಿಟ್ ತಲುಪಿಸುವುದು, ಇತರ ವೈದ್ಯಕೀಯ ಅಗ್ಯತಗಳನ್ನು ಜನರಿಗೆ ತಲುಪಿಸಿ ಕೊರೊನಾ ವಾರಿಯರ್‌ ಆಗಿ ಮಾನವೀಯತೆ ಮೆರೆದಿದ್ದರು.

ಮರುಜನ್ಮ ಅಂತ ಇದ್ದರೆ ಇದೇ ಬದುಕು ಸಿಗಲಿ ಅಂತ ಬಯಸುತ್ತೇನೆ

ಕೈ ಶರ್ಮ ತಮ್ಮ ಈ ಕುರಿತು ಹೇಳುತ್ತಾ ‘ ಒಂದು ವೇಳೆ ದೇವರು ನನಗೆ ಮತ್ತೊಂದು ಜನ್ಮ ನೀಡಿದರೆ ನಾನು ಇದೇ ಹಾದಿಯಲ್ಲಿ ಮುಂದುವರೆಯಲು ಬಯಸುತ್ತೇನೆ… ಈ ಮಕ್ಕಳ ಬದುಕಿನಲ್ಲಿ ಸಂತೋಷ ನೀಡುವಂಥ ಭಾಗ್ಯ ನನಗೆ ಸಿಕ್ಕಿದೆ. ಜನರು ನನ್ನನ್ನು ಹೊಗಳುವಾಗ ಒಂದು ಹೇಳ ಬಯಸುತ್ತೇನೆ ಮಕ್ಕಳು ನನ್ನನ್ನು ರಕ್ಷಕನಾಗಿ ಸ್ವೀಕರಿಸಿದ್ದಕ್ಕೆ ಧನ್ಯನಾಗಿದ್ದೇನೆ. ಇಡೀ ಜಗತ್ತು ಗಾಢ ನಿದ್ದೆಯಲ್ಲಿದ್ದಾಗ 25 ವರ್ಷದ ನನಗೆ ಮಕ್ಕಳ ಅಳು ಕೇಳಿ ಎಚ್ಚರವಾದೆ. ದೇವರ ಮಕ್ಕಳಿಗೆ ರಕ್ಷಕನಾಗಿರುವುದು ಹೆಮ್ಮೆಯಾಗಿದೆ’ ಎಂದಿದ್ದಾರೆ.

ನೂರು ಮಕ್ಕಳ ಜವಾಬ್ದಾರಿ ಜೈ ಶರ್ಮ ಹೆಗಲ ಮೇಲಿದೆ. ಆ ದೇವರು ಜೈ ಶರ್ಮರಿಗೆ ಆಯುಸ್ಸು, ಆರೋಗ್ಯ ನೀಡಲಿ, ನಿಮ್ಮ ಈ ಕಾರ್ಯಕ್ಕೆ ನಮ್ಮದೊಂದು ಸಲಾಂ.. ಜೈ ಶರ್ಮ

Advertisement
Share this on...