ಕೊರೋನಾ ವಿರುದ್ಧ ಕೋವಿಶೀಲ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ.
ಒಂದು ಡೋಸ್ ಮತ್ತು ಎರಡು ಡೋಸ್ ಪಡೆದಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ ಕೋವಿಶೀಲ್ಡ್ ಲಸಿಕೆ ಕೋವ್ಯಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಲಸಿಕೆ-ಪ್ರೇರಿತ ಆಂಟಿಬಾಡಿ ಟೈಟ್ರೆ(ಕೋವಾಟ್) ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ತಿಳಿದುಬಂದಿದೆ.
ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸಿದವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸೆರೊಪೊಸಿಟಿವಿಟಿ ದರಗಳು ಗಮನಾರ್ಹವಾಗಿ ಹೆಚ್ಚಿವೆ ಎಂದು ಅಧ್ಯಯನ ಹೇಳಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳ ಎರಡು ಡೋಸ್ ಪಡೆವರಲ್ಲಿ ಉತ್ತಮವಾಗಿ ಪ್ರತಿಕಾಯಗಳು ಹೆಚ್ಚಾಗಿವೆ ಎಂದು ಅಧ್ಯಯನ ಹೇಳಿದೆ. ಆದರೆ ಕೋವಿಶೀಲ್ಡ್ನಲ್ಲಿ ಸಿರೊಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ.
227 ಮಹಿಳೆಯರು ಮತ್ತು 325 ಪುರುಷರು ಸೇರಿದಂತೆ 552 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ 456 ಮಂದಿ ಕೋವಿಶೀಲ್ಡ್ ಮತ್ತು 96 ಮಂದಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದರು. ಒಟ್ಟಾರೆಯಾಗಿ ಕೋವಿಶೀಲ್ಡ್ ಪಡೆದವರಲ್ಲಿ ಶೇಕಡಾ 80ರಷ್ಟು ಪ್ರತಿಕಾಯ ಹೆಚ್ಚಾಗಿದೆ. ಅದಾಗ್ಯೂ, ಅಧ್ಯಯನದ ತೀರ್ಮಾನವು ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಪಡೆದಿವೆ ಎಂದು ತಿಳಿದುಬಂದಿದೆ.
ಎರಡೂ ಲಸಿಕೆಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸಿದರೂ, ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಗೆ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸುವವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸಿರೊಪೊಸಿಟಿವಿಟಿ ದರಗಳು ಗಮನಾರ್ಹವಾಗಿ ಹೆಚ್ಚಿವೆ. ನಡೆಯುತ್ತಿರುವ ಕೋವಾಟ್ ಅಧ್ಯಯನವು ಎರಡನೇ ಡೋಸ್ ನಂತರ ಎರಡು ಲಸಿಕೆಗಳ ನಡುವಿನ ರೋಗನಿರೋಧಕ ಪ್ರತಿಕ್ರಿಯೆಯನ್ನು ಮತ್ತಷ್ಟು ತಿಳಿಸುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಎರಡನೆ ಅಲೆಯೇ ಇನ್ನೂ ಮುಗಿದಿಲ್ಲ ಆಗಲೇ ಮತ್ತೊಂದು ಹೊಸ ಡೇಂಜರಸ್ ಕೊರೋನಾ ಪತ್ತೆ
ಭಾರತದಲ್ಲಿ ಕೊರನಾವೈರಸ್‌ನ ಎರಡನೇ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೊಸ ಮಾದರಿಯ B.1.1.28.2 ಕೊರೊನಾವೈರಸ್‌ಅನ್ನು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಲಾಗಿದೆ.
ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ ಮಾಡಲಾಗಿದೆ.
ಹೊಸ ರೂಪಾಂತರಿ ದೇಹದ ತೂಕದ ಇಳಿಕೆಗೆ ಕಾರಣವಾಗಿದ್ದು ಶ್ವಾಸನಾಳದಲ್ಲಿ ಮತ್ತು ಶ್ವಾಸಕೋಶಕ್ಕೆ ಘಾಸಿಗೊಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. D614G ರೂಪಾಂತರಿಗಿಂತ ಹೆಚ್ಚಿನ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪರೀಕ್ಷೆಗಳ ಆಧಾರದಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ವೈರಸ್ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿಯಷ್ಟೇ ತೀವ್ರತೆಯನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಮೊದಲಿಗೆ ಪತ್ತೆಯಾದ ‘ಆಲ್ಫಾ’ ರೂಪಾಂತರಿಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಸದ್ಯ ಭಾರತದಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ದೊಡ್ಡ ಪ್ರಮಾಣದಲ್ಲಿ ವೈರಸ್‌ನ ಹರಡುವಿಕೆಗೆ ಕಾರಣವಾಗಿದೆ. ಉಳಿದ ಎಲ್ಲಾ ರೂಪಾಂತರಿಗಿಂತ ಇದು ಹೆಚ್ಚಿನ ಹಾನಿಯುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.