ಗರಂ‌ ಆದ ಸುದೀಪ್: ಬಿಗ್ ಬಾಸ್ ಸ್ಪರ್ಧಿಗಳನ್ನ ಹಿಗ್ಗಾಮುಗ್ಗಾ ಝಾಡಿಸಿ ವಾರ್ನಿಂಗ್ ಕೊಟ್ಟ ಸುದೀಪ್, ಕಾರಣವೇನು ನೋಡಿ

in Kannada News/News/ಮನರಂಜನೆ 167 views

ಬಿಗ್‍ಬಾಸ್‍ನ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆಗೆ ವಾರಾಂತ್ಯದ ಕಾರ್ಯಕ್ರಮದಲ್ಲಿ ಸುದೀಪ್ ಅವರು ಬಿಗ್‍ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಮಾಡಿದ್ದಾರೆ.

ವಾರಾಂತ್ಯಾದ ಪಂಚಾಯ್ತಿ ವೇಳೆ ಒಂದು ಚೊಂಬನ್ನು ನೀಡಲಾಗಿತ್ತು. ಎಲ್ಲಾ ಸ್ಪರ್ಧಿಗಳು ಈ ಚೊಂಬಿಗೆ ಯಾರು ಅರ್ಹರು ಎಂದು ಡಿಸೈಡ್ ಮಾಡಿ ಅವರಿಗೆ ನೀಡಬೇಕು. ಸುದೀಪ್ ವೇದಿಕೆಯಿಂದ ಮಾತನಾಡುತ್ತಿದ್ದಂತೆ ಮಧ್ಯೆ ಸಾಕಷ್ಟು ಬಾರಿ ಸ್ಪರ್ಧಿಗಳು ಮಾತನಾಡಿದರು ಈ ವೇಳೆ ಸುದೀಪ್ ಎಚ್ಚರಿಕೆಯನ್ನು ನೀಡಿದ್ದಾರೆ.

Advertisement

ಒಬ್ಬರು ಮಾತಾನಾಡುವಾಗ ಮಧ್ಯೆ ಮಾತಾನಾಡಬಾರದು. ಪ್ರತಿಯೊಬ್ಬರಿಗೂ ಮಾತಾಡೋಕೆ ಕೊಟ್ಟಿದೀವಿ. ವೇದಿಕೆಯಲ್ಲಿ ಮಾತನಾಡುವವರಿಗೆ ಇದು ಗೌರವವಲ್ಲ. ಪ್ರತಿಯೊಬ್ಬರಿಗೂ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ. ನಿಮ್ಮ ವಿವರಣೆ ತೆಗೆದುಕೊಳ್ಳದೆ ಸೆಗ್ಮೆಂಟ್ ಮುಗಿಸಿಲ್ಲ. ಹಾಗಿರುವಾಗ ಒಬ್ಬರು ಮಾತನಾಡುತ್ತಿದ್ದಾರೆ ಎಂದರೆ, ನಾವು ಅವರಿಗೆ ಪ್ರಶ್ನೆ ಕೇಳಿದ್ದೇವೆ ಎಂದರ್ಥ. ಆ ಮಾತಿನಲ್ಲಿ ಅವರು ಯಾರಿಗಾದರೂ ಏನಾದರೂ ಹೇಳಿದ್ದರೆ ಅವರಿಗೂ ಮಾತನಾಡೋಕೆ ಒಂದು ಅವಕಾಶ ಕೊಡ್ತೀವಿ ಎಂದು ಮಾತು ಆರಂಭಿಸಿದರು ಸುದೀಪ್.

ಎಲ್ಲರೂ ಕೂತು ನೋಡುವಾಗ ವ್ಯಕ್ತಿತ್ವದ ಮೇಲೆ, ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆ. ನಿಮಗೆ ತಾಳ್ಮೆ ಇಲ್ಲ. ಯಾರೋ ಮಾತನಾಡುವಾಗ ಮಧ್ಯದಲ್ಲಿ ನೀವು ಮಾತನಾಡುತ್ತಿದ್ದೀರಿ ಎಂದರೆ ಅದು ಎಂತಹ ಸಭ್ಯತೆ ಇದು ಕ್ಲಾಸ್ ಆಗಿ ತೆಗೆದುಕೊಳ್ಳಬೇಡಿ. ಇದು ವಾನಿರ್ಂಗ್ ಎಂದೇ ಪರಿಗಣಿಸಿ. ಇದು 43 ದಿನ ಗ್ಯಾಪ್ ಆಗಿದ್ದರ ಎಫೆಕ್ಟಾ 73 ದಿನಗಳಲ್ಲಿ ಇಲ್ಲದ ಸ್ಪರ್ಧಿಗಳಾಗಿ ನೀವು ಬಂದಿದೀರಾ ತಾಳ್ಮೆ ಇಲ್ಲವೇ ಇದು ಎಲ್ಲರಿಗೂ ಅನ್ವಯವಾಗುತ್ತದೆ. ಇದು ಮೊದಲ ಬಾರಿ ಆಗಿದೆ. ಮನಸ್ಸಲ್ಲಿ ಸಾವಿರ ವಿಚಾರ ಇಟ್ಕೊಂಡು ಬಂದಿದೀರಾ. ಎಲ್ಲವನ್ನೂ ಹೇಳೋಕಾಗಲ್ಲ. ನಿಮ್ಮ ಉತ್ತರವನ್ನು ನಾವು ಕೇಳ್ತಾ ಇದೀವಿ ಎಂದರೆ ಅದಕ್ಕೆ ಅಗೌರವ ತೋರಿಸಬೇಡಿ ಎಂದರು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ವಾರಪೂರ್ತಿ ನಡೆದ ಘಟನೆಗಳನ್ನು ಇಟ್ಟ್ಕೊಂಡು ವಾರಾಂತ್ಯದಲ್ಲಿ ಸುದೀಪ್ ಅವರು ಮಾತನಾಡುತ್ತಾರೆ. ಸುದೀಪ್ ಸ್ಪರ್ಧಿಗಳಿಗೆ ಕೆಲವು ವಿಚಾರಗಗಳ ಕುರಿತಾಗಿ ಸ್ಪಷ್ಟ ಪಡಿಸುತ್ತಾರೆ? ಆದರೆ ಸ್ಪರ್ಧಿಗಳ ನಡುವಳಿಕೆ ಕೊಂಚ ಬೇಸರ ತಂದಿದೆ.

ಇದನ್ನೂ ಓದಿ: ಮಂಜು ಪಾವಗಡ ವಿರುದ್ಧ ಕಲರ್ಸ್ ಕನ್ನಡಕ್ಕೆ ಓಪನ್ ಲೆಟರ್ ಬರೆದ ಅರವಿಂದ್-ದಿವ್ಯಾ ಅಭಿಮಾನಿಗಳು 

ಕರೊನಾದಿಂದಾಗಿ ಬಿಗ್​ಬಾಸ್​ ಸೀಸನ್​​ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡು ಮತ್ತೆ ಪ್ರಸಾರ ಆಗುತ್ತಿದೆ. ಸ್ಪರ್ಧಿಗಳೆಲ್ಲರು ದೊಡ್ಮನೆಯಿಂದ ಹೊರಗೆ ಹೋಗಿ ಮತ್ತೆ ಮರಳಿದ್ದಾರೆ. ಮೊದಲನೇ ಇನ್ನಿಂಗ್ಸ್​ಗಿಂತ ಎರಡನೇ ಇನ್ನಿಂಗ್ಸ್​ ಕೊಂಚ ವಿಭಿನ್ನವಾಗಿದ್ದು, ಸ್ಪರ್ಧಿಗಳ ಗೇಮ್​ ಪ್ಲಾನ್​ ಕೂಡ ಬದಲಾಗಿದೆ.

ಎರಡನೇ ಇನ್ನಿಂಗ್ಸ್​ ಆರಂಭವಾಗಿ ಕೆಲವೇ ದಿನಗಳು ಕಳೆದಿದೆ. ಅಷ್ಟರಲ್ಲೇ ಮಂಜು ಪಾವಗಡ ವಿರುದ್ಧ ಅರವಿಂದ್​ ಮತ್ತು ದಿವ್ಯಾ ಉರುಡುಗ ಅಭಿಮಾನಿಗಳು ಕಲರ್ಸ್​ ಕನ್ನಡಕ್ಕೆ ಓಪನ್​ ಲೆಟರ್​ ಬರೆದಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇದುವರೆಗಿನ ಬಿಗ್​ಬಾಸ್​ ಆವೃತ್ತಿಗಿಂತ ಪ್ರಸ್ತುತ 8ನೇ ಆವೃತ್ತಿಯು ಹೆಚ್ಚು ಪ್ರಸಿದ್ದಿ ಪಡೆದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಅರವಿಯಾ (ಅರವಿಂದ್​-ದಿವ್ಯಾ) ಜೋಡಿ ಹೆಚ್ಚು ಸುದ್ದು ಮಾಡಿದ್ದೇ, ಶೋ ಮೇಲೆ ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣ. ಅಲ್ಲದೆ, ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಅರವಿಯಾ ಟ್ರೆಂಡ್​ ಕೂಡ ಆಗಿದೆ. ಸಾಕಷ್ಟು ಚರ್ಚೆಗಳು ಆಗಿದೆ. ಈ ಕಾರಣದಿಂದಲೇ ಶೋ ಅರ್ಧಕ್ಕೆ ಮೊಟಕುಗೊಂಡರು ಮತ್ತೆ ಆರಂಭಿಸಿದ್ದು.

ಒಂದೆಡೆ ಅರವಿಯಾ ಜೋಡಿ ಮತ್ತೊಂದೆಡೆ ಸುದೀಪ್​ ನಿರೂಪಣೆ 8ನೇ ಆವೃತ್ತಿಗೆ ಪ್ಲಸ್​ ಪಾಯಿಂಟ್​​ ಆಯಿತು. ಎಷ್ಟರಮಟ್ಟಿಗೆ ಅಂದರೆ, ವಾರದ ದಿನಗಳಲ್ಲಿ ಅರವಿಯಾ ಜೋಡಿಯ ಲವ್​ ಕಹಾನಿ ಮತ್ತು ವಾರಾಂತ್ಯದಲ್ಲಿ ಸುದೀಪ್​ ನಿರೂಪಣೆ ಟಿಆರ್​ಪಿ ಹೆಚ್ಚಾಗಲು ಕಾರಣವಾಯಿತು.

ಆದರೆ, ಕಲರ್ಸ್​ ಕನ್ನಡ ಎರಡನೇ ಇನ್ನಿಂಗ್ಸ್​ನಲ್ಲಿ ತನ್ನ ಗೇಮ್​ ಪ್ಲಾನ್​ ಬದಲಾಯಿಸಿಕೊಂಡಿದ್ದು, ಕೇವಲ ವೈಷ್ಣವಿ ಮತ್ತು ಮಂಜು ಪಾವಗಡ ಮೇಲೆ ಹೆಚ್ಚು ಗಮನಹರಿಸುತ್ತಿದೆ ಎಂದು ಅರವಿಯಾ ಅಭಿಮಾನಿಗಳು ಹೇಳುತ್ತಿದ್ದಾರೆ. ಇಡೀ ಶೋನಲ್ಲಿ ಅರವಿಯಾ ಜೋಡಿ ಎಲ್ಲಿಯೂ ನಕಲಿ ಅನಿಸಲೇ ಇಲ್ಲ. ಮುಖವಾಡವನ್ನು ಧರಿಸಿಲ್ಲ. ಆದರೆ, ಮಂಜು ವೋಟ್​ಗಾಗಿ ಮುಖವಾಡ ಧರಿಸಿದಂತೆ ಅನೇಕ ಬಾರಿ ಕಂಡಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಜತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಮಂಜು, ಇದೀಗ ವೈಷ್ಣವಿ ಜತೆಗಿದ್ದಾರೆ. ಆಗಾಗ ಅವರ ಗೇಮ್​ ಪ್ಲಾನ್​ ಬದಲಾಗುತ್ತಿರುತ್ತದೆ. ಎರಡನೇ ಇನ್ನಿಂಗ್ಸ್​ನಲ್ಲಿ ಮಂಜು ಅವರು ಮುಖವಾಡ ಧರಿಸಿಕೊಂಡು ಎಲ್ಲರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂಜು ಮತ್ತು ವೈಷ್ಣವಿ ಅವರು ಹೆಚ್ಚು ಫುಟೇಜ್​ಗಳನ್ನು ಕಲರ್ಸ್​ ಕನ್ನಡ ತೋರಿಸುತ್ತಿದೆ ಎಂದು ಕಲರ್ಸ್​ ಕನ್ನಡಕ್ಕೆ ಅರವಿಯಾ ಅಭಿಮಾನಿಗಳು ಓಪನ್​ ಲೆಟರ್​ ಬರೆದಿದ್ದಾರೆ.

 

Advertisement
Share this on...