ಗಾಂಧಿ ಹತ್ಯೆಯ ಬಳಿಕ ಹಿಂದೂನೂ ಬೇಡ ಮುಸ್ಲಿಮನೂ ಬೇಡ ಅಂತ ಈ ವ್ಯಕ್ತಿಯನ್ನ ತನಿಖಾಧಿಕಾರಿ ಮಾಡಿದ್ದ ಸರ್ಕಾರ: 3 ಬಾರಿ ಅಪೀಲ್ ಹೋಗಿದ್ದ ಗೋಡ್ಸೆ

in Uncategorized 248 views

ಗಾಂಧಿ ಹತ್ಯೆಯ ತನಿಖೆ, ಟ್ರಯಲ್ ಮತ್ತು ಅಪೀಲ್ ಬರೋಬ್ಬರಿ 20 ತಿಂಗಳಲ್ಲಿ ಪೂರ್ಣಗೊಂಡಿತ್ತು. ಗೋಡ್ಸೆಯ ಪೋಷಕರು ವೈಸರಾಯ್‌ಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರು. ಹಿಂದೂನೂ ಅಲ್ಲ ಅಥವಾ ಮುಸಲ್ಮಾನನೂ ಅಲ್ಲ, ಈ ವ್ಯಕ್ತಿ ಗಾಂಧಿ ಹತ್ಯೆಯ ತನಿಖೆ ನಡೆಸಿದ್ದರು. ನಾಥೂರಾಂ ಗೋಡ್ಸೆ ಗಲ್ಲು ಶಿಕ್ಷೆಯಿಂದ ಪಾರಾಗಲು 3 ಬಾರಿ ಅಪೀಲ್ ಮಾಡಿದ್ದರು.

Advertisement

75 ವರ್ಷಗಳ ಹಿಂದೆ, ಜನವರಿ 30 ರಂದು, ಗಾಂಧಿ ಪ್ರಾರ್ಥನೆಗಾಗಿ ದೆಹಲಿಯ ಬಿರ್ಲಾ ಭವನಕ್ಕೆ ಹೋಗುತ್ತಿದ್ದರು. 35 ವರ್ಷದ ನಾಥೂರಾಂ ಗೋಡ್ಸೆ ಗಾಂಧಿಯ ಎದೆಗೆ ಮೂರು ಗುಂಡುಗಳನ್ನು ಹೊಕ್ಕಿಸಿದ್ದರು. ಅದಾದ 15 ನಿಮಿಷಗಳಲ್ಲೇ ಗಾಂಧಿ ನಿಧನರಾದರು. ಅಲ್ಲಿದ್ದ ಸೇನಾ ಸಿಬ್ಬಂದಿ ನಾಥೂರಾಂ ಗೋಡ್ಸೆಯನ್ನು ಹಿಡಿದು ಆತನ ಪಿಸ್ತೂಲನ್ನು ಕಿತ್ತುಕೊಂಡರು. ಅಲ್ಲಿದ್ದ ಗುಂಪು ಗೋಡ್ಸೆಯನ್ನು ಥಳಿಸಲು ಪ್ರಾರಂಭಿಸಿತು, ಹಾಗೋ ಹೀಗೋ ಪೊಲೀಸರು ಗೋಡ್ಸೆಯನ್ನ ರಕ್ಷಿಸಿ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಕರೆದೊಯ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದರು.

ಗಾಂಧಿ ಹತ್ಯೆಯ ತನಿಖೆ ನಡೆಸಿದ್ದ ತನಿಖಾಧಿಕಾರಿ (Investigation Officer ಅಂದರೆ IO) ಯಾರಾಗಿದ್ದರು?

ಗಾಂಧಿ ಹತ್ಯೆಯ ನಂತರ, ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಜಿಮ್ಮಿ ನಗರವಾಲಾ ಎಂದೂ ಕರೆಯಲ್ಪಡುವ ಜಮ್ಶೆಡ್ ದೊರಬ್ ನಗರವಾಲಾ (Jamshed Dorab Nagarvala) ಅವರಿಗೆ ವಹಿಸಲಾಯಿತು. ಜಿಮ್ಮಿ ಆ ಸಮಯದಲ್ಲಿ ಮುಂಬೈನ ಸ್ಪೆಷಲ್ ಬ್ರ್ಯಾಂಚ್‌ನ ಡೆಪ್ಯುಟಿ ಕಮಿಷನರ್ ಆಗಿದ್ದರು ಮತ್ತು ನಂತರ IG ಆದರು. ನಂತರ ಭಾರತೀಯ ಹಾಕಿ ಫೆಡರೇಶನ್‌ನ ಮುಖ್ಯಸ್ಥರಾಗಿದ್ದರು. ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು ತಮ್ಮ ಪುಸ್ತಕ ‘ಲೆಟ್ಸ್ ಕಿಲ್ ಗಾಂಧಿ’ ಯಲ್ಲಿ ಹೀಗೆ ಬರೆದಿದ್ದಾರೆ, “ಜಮ್ಶೆಡ್ ದೊರಬ್ ನಗರವಾಲಾ ಅವರನ್ನು ಪ್ರಕರಣದ IO (ತನಿಖಾಧಿಕಾರಿ) ಮಾಡಲಾಗಿತ್ತು ಏಕೆಂದರೆ ಅವರು ಹಿಂದೂವೂ ಅಲ್ಲ ಮತ್ತು ಮುಸ್ಲಿಮನೂ ಅಲ್ಲ. ತಟಸ್ಥ (ಪಾರಸಿ) ಸಮುದಾಯದಿಂದ ಬಂದವರಾಗಿದ್ದರು”

ಕೆಂಪು ಕೋಟೆಯಲ್ಲಿ ನಡೆದಿದ್ದ ಟ್ರಯಲ್

ಗಾಂಧಿ ಹತ್ಯೆಯ ನಂತರ, ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಯಿತು ಮತ್ತು ವಿಚಾರಣೆಯು ಮೇ 1948 ರಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಾರಂಭವಾಯಿತು. ಗಾಂಧಿಯವರ ಹತ್ಯೆಗೂ ಮುನ್ನ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾ ಜಾಫರ್ (Bahadur Shah Zafar) ಅವರನ್ನೂ ಇಲ್ಲೇ ವಿಚಾರಣೆಗೆ ಒಳಪಡಿಸಿ ರಂಗೂನ್‌ಗೆ ಗಡಿಪಾರು ಮಾಡಲಾಗಿತ್ತು. ಗಾಂಧಿ ಹತ್ಯೆ ಪ್ರಕರಣವನ್ನು ಐಸಿಎಸ್ ಅಧಿಕಾರಿಯಾಗಿದ್ದ ವಿಶೇಷ ನ್ಯಾಯಾಧೀಶ ನ್ಯಾಯಮೂರ್ತಿ ಆತ್ಮಾ ಚರಣ್ ಅವರು ವಿಚಾರಣೆ ನಡೆಸುತ್ತಿದ್ದರು. ಮುಂಬೈನ ಅಡ್ವೊಕೇಟ್ ಜನರಲ್ ವಿಕೆ ದಫ್ತಾರಿ ಅವರು ನಂತರ ಭಾರತದ ಸಾಲಿಸಿಟರ್ ಜನರಲ್ ಮತ್ತು ಅಟಾರ್ನಿ ಜನರಲ್ ಆಗಿದ್ದರು, ಪ್ರಾಸಿಕ್ಯೂಷನ್ ಪರವಾಗಿ ಈ ಪ್ರಕರಣದಲ್ಲಿ ವಾದ ಮಾಡುತ್ತಿದ್ದರು.

ಗೋಡ್ಸೆ ಹಾಗು ಆಪ್ಟೆಗೆ ಮರಣದಂಡನೆ ಶಿಕ್ಷೆ

ಫೆಬ್ರವರಿ 10, 1949 ರಂದು ನ್ಯಾಯಾಲಯವು ತನ್ನ ತೀರ್ಪನ್ನು ನೀಡಿತು. ನಾಥೂರಾಂ ಗೋಡ್ಸೆ, ನಾರಾಯಣ್ ಆಪ್ಟೆ ಮತ್ತು ಇತರ 5 ಮಂದಿಗೆ ಶಿಕ್ಷೆ ವಿಧಿಸಲಾಯಿತು. ಗೋಡ್ಸೆ ಮತ್ತು ಆಪ್ಟೆಗೆ ಮರಣದಂಡನೆ ವಿಧಿಸಲಾಯಿತು. ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ದೋಷಮುಕ್ತಗೊಳಿಸಲಾಯಿತು. ತಪ್ಪಿತಸ್ಥರು ಬಯಸಿದರೆ, ಅವರು 4 ದಿನಗಳ ನಂತರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿತ್ತು‌‌. ಹೀಗಾಗಿ ಗೋಡ್ಸೆ ಮತ್ತು ಇತರರು ಪಂಜಾಬ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು.

ಪಂಜಾಬ್ ಹೈಕೋರ್ಟ್ ಜೂನ್ 21, 1949 ರಂದು ಮೇಲ್ಮನವಿಯ ಮೇಲೆ ತನ್ನ ತೀರ್ಪನ್ನು ನೀಡಿತು ಮತ್ತು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ದತ್ತಾತ್ರೇಯ ಪರ್ಚುರೆ ಮತ್ತು ಶಂಕರ್ ಕಿಸ್ತಯ್ಯ ಮಾತ್ರ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡರು.

ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದ ವೈಸರಾಯ್

ಅಪರಾಧಿಗಳು ನಂತರ ಬ್ರಿಟಿಷರ ಅವಧಿಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವಾಗಿದ್ದ ಪ್ರಿವಿ ಕೌನ್ಸಿಲ್‌ಗೆ ವಿಶೇಷ ಮನವಿಯನ್ನು ಸಲ್ಲಿಸಿದರು. ನಂತರ 1950 ರಲ್ಲಿ, ಸುಪ್ರೀಂ ಕೋರ್ಟ್ ಅದರ ಸ್ಥಾನವನ್ನು ಪಡೆದುಕೊಂಡಿತು. ಪ್ರಿವಿ ಕೌನ್ಸಿಲ್ ಗೋಡ್ಸೆ ಅರ್ಜಿಯನ್ನು ತಿರಸ್ಕರಿಸಿತು. ನಂತರ ಆಗಿನ ಗವರ್ನರ್ ಜನರಲ್ ಕೂಡ ನಾಥೂರಾಂ ಗೋಡ್ಸೆ ಮತ್ತು ಆಪ್ಟೆಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು ಮತ್ತು ಇಬ್ಬರನ್ನೂ ನವೆಂಬರ್ 15, 1949 ರಂದು ಅಂಬಾಲಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಅಷ್ಟಕ್ಕೂ ಗೋಡ್ಸೆ ಗಾಂಧಿಯನ್ನ ಕೊಂದಿದ್ಯಾಕೆ?

ನ್ಯಾಯಾಲಯದಲ್ಲಿ ಗೋಡ್ಸೆ ತಾನು ಗಾಂಧಿಯನ್ನು ಕೊಂದದ್ದನ್ನ ಒಪ್ಪಿಕೊಂಡರು. ಗೋಡ್ಸೆ ಮಾತನಾಡುತ್ತ, “ಗಾಂಧೀಜಿ ದೇಶಕ್ಕಾಗಿ ಮಾಡಿದ ಸೇವೆಯನ್ನು ನಾನು ಗೌರವಿಸುತ್ತೇನೆ. ಅವರ ಮೇಲೆ ಗುಂಡು ಹಾರಿಸುವ ಮೊದಲು ನಾನು ಅವರಿಗೆ ಗೌರವಾರ್ಥವಾಗಿ ನಮಸ್ಕರಿಸಿದೆ ಆದರೆ ಜನರಿಗೆ ಮೋಸಗೊಳಿಸುವ ಮೂಲಕ ಪೂಜ್ಯ ಮಾತೃಭೂಮಿಯನ್ನು ವಿಭಜಿಸುವ ಹಕ್ಕು ಯಾವುದೇ ಮಹಾತ್ಮನಿಗೂ ಇಲ್ಲ. ಗಾಂಧಿಜೀ ದೇಶಕ್ಕೆ ಮೋಸ ಮಾಡಿ ದೇಶವನ್ನು ತುಂಡರಿಸಿದರು. ದೇಶ ವಿಭಜನೆ ಮಾಡಿದರೂ ಅಂತಹ ಅಪರಾಧಿಯನ್ನು ಯಾವ ಆಧಾರದ ಮೇಲೆ ಶಿಕ್ಷಿಸಬಹುದು ಎಂಬ ಯಾವುದೇ ನ್ಯಾಯಾಲಯ ಮತ್ತು ಕಾನೂನು ಆಗ ಇರಲಿಲ್ಲ, ಅದಕ್ಕಾಗಿಯೇ ನಾನು ಗಾಂಧಿಯನ್ನು ಹೊಡೆದುರುಳಿಸಿದೆ” ಎನ್ನುತ್ತಾರೆ.

ಗೋಡ್ಸೆ ಸೋದರ ಸೊಸೆ ಹಿಮಾನಿ ಸಾವರ್ಕರ್ ಹೇಳಿದ್ದೇನು

ನವೆಂಬರ್ 15, 1949 ರಂದು, ಗೋಡ್ಸೆಯನ್ನು ಗಲ್ಲಿಗೇರಿಸುವ ಒಂದು ದಿನ ಮೊದಲು, ಅವರ ಕುಟುಂಬವು ಅವರನ್ನು ಭೇಟಿಯಾಗಲು ಅಂಬಾಲಾ ಜೈಲಿಗೆ ತಲುಪಿತು. ಅವರಲ್ಲಿ ಒಬ್ಬರು ಗೋಡ್ಸೆ ಅವರ ಸೋದರ ಸೊಸೆ ಮತ್ತು ಗೋಪಾಲ್ ಗೋಡ್ಸೆ ಅವರ ಪುತ್ರಿ ಹಿಮಾನಿ ಸಾವರ್ಕರ್ ಕೂಡ ಇದ್ದರು. ಇತಿಹಾಸದ ಅನೇಕ ಪುಸ್ತಕಗಳು ಮತ್ತು ಲೇಖನಗಳಲ್ಲಿ, ನಾಥುರಾಮ್ ಗೋಡ್ಸೆ ಅವರನ್ನು ಹುಚ್ಚ, ಸೈಕೋ ಎಂದು ಹೇಳಲಾಯಿತು‌. ಆದರೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹಿಮಾನಿ ಸಾವರ್ಕರ್, ಗೋಡ್ಸೆ ಯಾವುದೇ ಉದ್ವೇಗದಿಂದಾಗಲಿ ಅಥವ ಸ್ಥಿಮಿತ ಕಳೆದುಕೊಂಡು ಅಲ್ಲ ಬದಲಾಗಿ ಸಂಪೂರ್ಣವಾದ ಪ್ರಜ್ಞೆಯಿಟ್ಟುಕೊಂಡೇ ಬಾಪುವನ್ನು ಕೊಂದಿದ್ದಾರೆ ಎಂದು ಹೇಳಿದರು. ಆ ಸಮಯದಲ್ಲಿ ಗೋಡ್ಸೆ ಸಂಪಾದಕರಾಗಿದ್ದರು. ಹಿಮಾನಿ 2015 ರಲ್ಲಿ ನಿಧನರಾದರು.

ಆತ ಅಖಂಡ ಭಾರತದ ನಕ್ಷೆಗಾಗಿ ನೇಣಿಗೆ ಕೊರಳೊಡ್ಡಿದ್ದ‌

ನವೆಂಬರ್ 15, 1949 ರಂದು, ನಾಥುರಾಮ್ ಗೋಡ್ಸೆ ಮತ್ತು ನಾರಾಯಣ್ ಆಪ್ಟೆ ಅವರನ್ನು ಮರಣದಂಡನೆಗೆ ಕರೆದೊಯ್ಯುವಾಗ, ಅವರು ಒಂದು ಕೈಯಲ್ಲಿ ಭಗವದ್ಗೀತೆ ಅಖಂಡ ಭಾರತದ ನಕ್ಷೆ ಮತ್ತು ಇನ್ನೊಂದು ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದ್ದರು. ಅವರು ‘ನಮಸ್ತೆ ಸದಾ ವತ್ಸಲೆ’ ಎಂದು ಹಾಡುತ್ತ ಗಲ್ಲಿಗೇರಿಸುವ ಮೊದಲು ಘೋಷಣೆಗಳನ್ನು ಕೂಗಿದರು.

ಹಿಮಾನಿ ಸಾವರ್ಕರ್ ಬಿಚ್ಚಿಟ್ಟ ಸತ್ಯ

ಬಿಬಿಸಿಗೆ ನೀಡಿದ್ದ ಇಂಟರ್‌ವ್ಯೂ ನಲ್ಲಿ ಹಿಮಾನಿ ಸಾವರ್ಕರ್, “ಅವರ (ನಾಥುರಾಮ್ ಗೋಡ್ಸೆ) ಮೃತ ದೇಹವನ್ನು ನಮಗೆ ಕೊಡಲಿಲ್ಲ. ಜೈಲಿನೊಳಗೆ ಅವರ ಶವವನ್ನ ಕಾರಿನಲ್ಲಿ ಹಾಕಿ ಹತ್ತಿರದ ಘಗ್ಗರ್ ನದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಸರ್ಕಾರ ಅಂತ್ಯಕ್ರಿಯೆ ನಡೆಸಿತು. ಆದರೆ ನಮ್ಮ ಹಿಂದೂ ಮಹಾಸಭೆಯ ಅತ್ರಿ ಎಂಬ ಕಾರ್ಯಕರ್ತ ಆ ಜಾಗಕ್ಕೆ ಹೋಗಿ ಚಿತೆಯ ಬೆಂಕಿ ಕಡಿಮೆಯಾದಾಗ ಆತ ಅಸ್ಥಿಯನ್ನ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿದ್ದರು” ಎಂದಿದ್ದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇಂದಿಗೂ ಗೋಡ್ಸೆ ಅವರ ಅಸ್ಥಿಯನ್ನ ಸಂರಕ್ಷಿಸಿಡಲಾಗಿದೆ. ಪ್ರತಿ ನವೆಂಬರ್ 15 ರಂದು, ಗೋಡ್ಸೆ ಹೌಸ್‌ನಲ್ಲಿ ಸಂಜೆ 6 ರಿಂದ 8 ರವರೆಗೆ ಒಂದು ಕಾರ್ಯಕ್ರಮ ನಡೆಯುತ್ತದೆ, ಅಲ್ಲಿ ಅವರ ಮೃತ್ಯು ಪತ್ರವನ್ನು ಓದಲಾಗುತ್ತದೆ ಮತ್ತು ಜನರಿಗೆ ಪಠಿಸಲಾಗುತ್ತದೆ. ಅವರ ಕೊನೆಯ ಆಸೆ ಅವರ ಪೀಳಿಗೆಯ ಮಕ್ಕಳಿಗೂ ಕಂಠಪಾಠವಾಗಿದೆ‌

ಗೋಡ್ಸೆಯ ಅಂತಿಮ ಇಚ್ಛೆ ಈಡೇರದ ಕಾರಣ ಈಗಲೂ ಅವರ ಅಸ್ಥಿಯನ್ನ ವಿಸರ್ಜಿಸಲಾಗಿಲ್ಲ

ಗೋಡ್ಸೆ ಕುಟುಂಬವು ಅವರ ಕೊನೆಯ ಆಸೆಯನ್ನು ಗೌರವಿಸಿ, ಅವರ ಚಿತಾಭಸ್ಮವನ್ನು ಇನ್ನೂ ಬೆಳ್ಳಿ ಕಲಶದಲ್ಲಿ ಸಂರಕ್ಷಿಸಿಟ್ಟಿದ್ದಾರೆ. ಈ ಬಗ್ಗೆ ಹಿಮಾನಿ ಸಾವರ್ಕರ್ ಸಂದರ್ಶನದಲ್ಲಿ ಮಾತನಾಡುತ್ತ ಗೋಡ್ಸೆ ಅಂತಿಮ ಆಸೆ, “ನನ್ನ ದೇಹದ ಕೆಲವು ಭಾಗವನ್ನು ಸಂರಕ್ಷಿಸಿಡಿ, ಸಿಂಧೂ ನದಿ ಸ್ವತಂತ್ರ ಭಾರತದಲ್ಲಿ ಹರಿದಾಗ ಮತ್ತು ಮತ್ತೊಮ್ಮೆ ಅಖಂಡ ಇಂಡಿಯಾ ರಚನೆಯಾದಾಗ ಅದನ್ನ ವಿಸರ್ಜಿಸಿ. ಇದಕ್ಕಾಗಿ ನಾಲ್ಕೈದು ತಲೆಮಾರು ಕಳೆದರೂ ಚಿಂತೆಯಿಲ್ಲ ಎಂದು ಬರೆದಿದ್ದಾರೆ.” ಎಂದು ಹಿಮಾನಿ ಸಂದರ್ಶನದಲ್ಲಿ ಹೇಳಿದ್ದರು.

Advertisement
Share this on...