ಅಹಮದಾಬಾದ್‌ನ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ ಗುಜರಾತ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಸ್ಲಿಮರು ಒಗ್ಗಟ್ಟಾಗಿರಲು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು 2012ರಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದನ್ನು ನೆನಪಿಸಿಕೊಂಡರು. ಇದಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಮರು ಒಗ್ಗಟ್ಟಾಗಿ ಮತ ಹಾಕುವಂತೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಹಿ ಇಮಾಮ್ ಹೇಳಿದರು. ಶಬ್ಬೀರ್ ಅಹಮದ್ ಅವರು ಶನಿವಾರ (ಡಿಸೆಂಬರ್ 3, 2022) ಈ ಹೇಳಿಕೆ ನೀಡಿದ್ದಾರೆ.
‘ಎಬಿಪಿ ನ್ಯೂಸ್’ ಜೊತೆ ಮಾತನಾಡಿದ ಇಮಾಮ್ ಶಬ್ಬೀರ್, ಮುಸ್ಲಿಂ ಮತಗಳ ವಿಭಜನೆಯಿಂದಾಗಿ 2012ರಲ್ಲಿ ಅಹಮದಾಬಾದ್‌ನ ಜಮಾಲ್‌ಪುರ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿತ್ತು. ಇಮಾಮ್ ಪ್ರಕಾರ, ಇದಕ್ಕೆ ಕಾರಣ ಮುಸ್ಲಿಂ ಮತಗಳು ತಮ್ಮಲ್ಲಿ ವಿಭಜನೆಯಾಗೋದೇ ಕಾರಣ ಎಂದಿದ್ದಾರೆ. ಈ ಬಾರಿಯ ಚುನಾವಣೆಯ ಕುರಿತು ಶಬ್ಬೀರ್ ಮಾತನಾಡುತ್ತ, ಮುಸ್ಲಿಮರು ಪ್ರತಿನಿಧಿಸುವವರನ್ನೇ ಗೆಲ್ಲಿಸಬೇಕು ಎಂದು ಹೇಳಿದ್ದಾರೆ. ಡಿಸೆಂಬರ್ 5, 2022 ರಂದು ಅಹಮದಾಬಾದ್‌ನಲ್ಲಿ ಎರಡನೇ, ಅಂದರೆ ಕೊನೆಯ ಹಂತದ ಚುನಾವಣೆಯಲ್ಲಿ ಶಬ್ಬೀರ್ ಅವರೂ ಮತದಾನ ಮಾಡಲಿದ್ದಾರೆ.
2012ರಲ್ಲಿ ಕಾಂಗ್ರೆಸ್ ಪಕ್ಷವು ಜಮಾಲಪುರ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇವರ ವಿರುದ್ಧ ಸ್ಥಳೀಯ ಮುಖಂಡ ಸಾಬೀರ್ ಕಾಬಲಿವಾಲಾ ಕೂಡ ಸ್ಪರ್ಧಿಸಿದ್ದರು. ಕಾಬಲಿವಾಲಾ ಸುಮಾರು 30 ಸಾವಿರ ಮತಗಳನ್ನು ಪಡೆದಿದ್ದರು. ಈ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ 6000 ಮತಗಳಿಂದ ಗೆದ್ದಿದ್ದರು. ಮತ್ತೊಮ್ಮೆ ಅದೇ ಜಮಾಲಪುರ ಕ್ಷೇತ್ರದಿಂದ ಕಾಬಲಿವಾಲಾ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಅವರು ಓವೈಸಿ ಪಕ್ಷದ ಎಐಎಂಐಎಂ ಅಭ್ಯರ್ಥಿಯಾಗಿದ್ದಾರೆ.
Big Breaking: Shahi Imam of Jama Masjid Ahmedabad has told ABP news that Muslims are sending WhatsApp messages to each other.
He said that the Muslim vote should not be divided like in 2012, otherwise BJP will win! pic.twitter.com/ZYpECSz0nn
— Vijay Patel🇮🇳 (@vijaygajera) December 3, 2022
ಗುಜರಾತ್ ಚುನಾವಣೆಯಲ್ಲಿ ಓವೈಸಿ ಪಕ್ಷದ ಎಂಟ್ರಿಯನ್ನ ಪ್ರಶ್ನಿಸಿದ ಇಮಾಮ್ ಶಬ್ಬೀರ್, ಅವರು (ಓವೈಸಿ) ವಿಧಾನಸಭೆಯಲ್ಲಿ ಏನು ಮಾಡಲು ಹೊರಟಿದ್ದೀರ? ಎಂದಿದ್ದಾರೆ. ಶಾಹಿ ಇಮಾಮ್ ಪ್ರಕಾರ, ಮುಸ್ಲಿಮರು ಬಿಜೆಪಿಯೊಂದಿಗೆ ದ್ವೇಷವನ್ನು ಹೊಂದಿದ್ದಾರೆ, ಆದ್ದರಿಂದ ಅಂತಹ ಸಮಯದಲ್ಲಿ ಅವರು ಕಾಂಗ್ರೆಸ್‌ನೊಂದಿಗೆ ದ್ವೇಷ ಸಾಧಿಸಬಾರದು. ಇಮಾಮ್ ಅವರು ಮುಸ್ಲಿಮರು ಒಗ್ಗೂಡಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಬಹಿರಂಗವಾಗಿ ಮನವಿ ಮಾಡಿದರು. ಇಮಾಮ್ ಅವರ ಈ ಹೇಳಿಕೆಯ ಕುರಿತು ಬಿಜೆಪಿ ಅಭ್ಯರ್ಥಿ ಭೂಷಣ್ ಅಶೋಕ್ ಮಿತ್ತಲ್ ಅವರೂ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ತಮ್ಮನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ ಎಂದು ಮಿತ್ತಲ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಉಳಿಸಲು ಸೀಮಿತ ಆಯ್ಕೆಗಳನ್ನು ಹೊಂದಿದೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದರು.
ಗುಜರಾತ್ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಏನನ್ನುತ್ತೆ ಒಪಿನಿಯನ್ ಪೋಲ್?
ಎಬಿಪಿ ನ್ಯೂಸ್ ಸಿ-ವೋಟರ್ ಸಮೀಕ್ಷೆಯು ಗುಜರಾತ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಸಮೀಕ್ಷೆಯನ್ನು ಮಾಡಿದೆ. ಇದರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಲಭವಾಗಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಕಾಣಬಹುದಾಗಿದೆ. ಸಮೀಕ್ಷೆಯಲ್ಲಿ ಬಿಜೆಪಿಗೆ 97 ಸೀಟುಗಳು ಸಿಗಲಿವೆ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಗರಿಷ್ಠ 26 ಸ್ಥಾನಗಳನ್ನು ಪಡೆಯಲಿದೆ. ಅದೇ ಸಮಯದಲ್ಲಿ, ಎಎಪಿ ಗರಿಷ್ಠ 13 ಸ್ಥಾನಗಳಷ್ಟು ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಎಪಿಬಿ ನ್ಯೂಸ್ ಇದನ್ನು ಅಂತಿಮ ಅಭಿಪ್ರಾಯ ಸಂಗ್ರಹ (Final Opinion poll) ಎಂದು ಬಣ್ಣಿಸಿದೆ. ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಡಿಸೆಂಬರ್ 1 ರಂದು ಮುಗಿದಿದೆ. ಎರಡನೇ ಹಂತದಲ್ಲಿ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಪಕ್ಷ ಸೀಟುಗಳು
ಬಿಜೆಪಿ 85-97
ಕಾಂಗ್ರೆಸ್ 14-26
ಆಪ್ 8-13
ಇತರರು 0-2
ಎಬಿಪಿ ನ್ಯೂಸ್ ಸಿ-ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ದಾರಿ ಸ್ಪಷ್ಟವಾಗಿದೆ. ಬಿಜೆಪಿಗೆ 85-97 ಸೀಟುಗಳು ಸಿಗಲಿದೆಯಂತೆ. ಬಿಜೆಪಿಗೆ ಪ್ರಬಲ ಪೈಪೋಟಿ ನೀಡವುತ್ತ ಯಾವ ಪಕ್ಷವೂ ಕಾಣಿಸುತ್ತಿಲ್ಲ. ಕಾಂಗ್ರೆಸ್ ಮತ್ತು ಎಎಪಿ ಎರಡೂ ಬಿಜೆಪಿಗೆ ಟಕ್ಕರ್ ಕೊಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ 14-26 ಸ್ಥಾನಗಳನ್ನು ಪಡೆಯಬಹುದೆಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಆದರೆ, ಎಎಪಿ 8-13 ಸ್ಥಾನಗಳನ್ನು ಪಡೆಯಲಿದೆಯಂತೆ. ಸಮೀಕ್ಷೆಯಲ್ಲಿ ಇತರರಿಗೆ 0-2 ಸ್ಥಾನಗಳನ್ನು ನೀಡಲಾಗಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಹೊರತುಪಡಿಸಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (NCP), ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (CPI), ಭಾರತೀಯ ಬುಡಕಟ್ಟು ಪಕ್ಷ (BTP), ಎಐಎಂಐಎಂ (AIMIM) ಮತ್ತು ತೃಣಮೂಲ ಕಾಂಗ್ರೆಸ್ (TMC) ಗುಜರಾತ್ ಚುನಾವಣೆಯಲ್ಲಿ ಕಣದಲ್ಲಿವೆ. ಮೊದಲ ಹಂತದಲ್ಲಿ ರಾಜ್ಯದ 89 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮತ್ತೊಂದೆಡೆ, ರಾಜ್ಯದ ಉಳಿದ ಸ್ಥಾನಗಳಿಗೆ ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ. ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವೂ ಇದೇ ದಿನ ಬರಲಿದೆ. ಈ ಸಮೀಕ್ಷೆಯಲ್ಲಿ 19 ಸಾವಿರದ 271 ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆ ಎಂದು ಎಬಿಪಿ ನ್ಯೂಸ್ ತಿಳಿಸಿದೆ. ಈ ಸಮೀಕ್ಷೆಯನ್ನು ನವೆಂಬರ್ 22 ರಿಂದ ನವೆಂಬರ್ 28 ರವರೆಗೆ ಮಾಡಲಾಗಿದೆ.
Gujrat Elections: 2014 ರಿಂದ 2022 ರ ನಡುವೆ ಎಷ್ಟು ಪ್ರತಿಶತ ಹೆಚ್ಚಾಯ್ತು ನರೇಂದ್ರ ಮೋದಿ ಜನಪ್ರಿಯತೆ? ಅಂಕಿಅಂಶ ಬಿಡುಗಡೆ ಮಾಡಿದ CDSC
CDSC Survey Tells about PM Modi Popularity: ಸಿಡಿಎಸ್‌ಸಿ (CDSC) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2009ರಲ್ಲಿ ನರೇಂದ್ರ ಮೋದಿ ಅವರು ದೇಶದಲ್ಲಿ ಶೇ.2ರಷ್ಟು ಮತ್ತು ಗುಜರಾತ್‌ನಲ್ಲಿ ಶೇ.17ರಷ್ಟು ಜನಪ್ರಿಯರಾಗಿದ್ದರು. 2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ ಜನಪ್ರಿಯತೆ ಹೆಚ್ಚಾಯಿತು.
Gujarat Election: ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಶತಾಯಗತಾಯವಾಗಿ ಗೆಲ್ಲಲು ಭಾರತೀಯ ಜನತಾ ಪಕ್ಷ (ಬಿಜೆಪಿ) ನಿರಂತರ ಪ್ರಯತ್ನ ಮಾಡುತ್ತಿದೆ. ಇದೇ ವೇಳೆ ಸಿಡಿಎಸ್‌ಸಿ(CDSC) ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಸಂಬಂಧಿಸಿದ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. 2009 ರಿಂದ 2022 ರವರೆಗೆ ಗುಜರಾತ್ ಮತ್ತು ದೇಶದಲ್ಲಿ ಪ್ರಧಾನಿ ಮೋದಿ ಎಷ್ಟು ಜನಪ್ರಿಯರಾಗಿದ್ದಾರೆ ಎಂಬುದನ್ನು ಅದರ ಅಂಕಿ ಅಂಶಗಳ ಮೂಲಕ ಹೇಳಲಾಗಿದೆ. ನರೇಂದ್ರ ಮೋದಿ ಈಗ ಎಷ್ಟು ಜನಪ್ರಿಯತೆ ಗಳಿಸಿದ್ದಾರೆ ಮತ್ತು ಯಾವ ವರ್ಷಗಳಲ್ಲಿ ಅವರು ಜನಪ್ರಿಯರಾಗಿದ್ದರು ಎಂಬುದನ್ನು ತಿಳಿಯೋಣ.
ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರ ಜನಪ್ರಿಯತೆಯ ಗ್ರಾಫ್ ವೇಗವಾಗಿ ಹೆಚ್ಚಾಯಿತು
ಸಿಡಿಎಸ್‌ಸಿ (CDSC) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2009ರಲ್ಲಿ ನರೇಂದ್ರ ಮೋದಿ ಅವರು ದೇಶದಲ್ಲಿ ಶೇ.2ರಷ್ಟು ಮತ್ತು ಗುಜರಾತ್‌ನಲ್ಲಿ ಶೇ.17ರಷ್ಟು ಜನಪ್ರಿಯರಾಗಿದ್ದರು. 2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ ಜನಪ್ರಿಯತೆ ಹೆಚ್ಚಾಯಿತು. ಈ ವರ್ಷ ನರೇಂದ್ರ ಮೋದಿಯವರ ಜನಪ್ರಿಯತೆ ಗುಜರಾತ್‌ನಲ್ಲಿ ಶೇಕಡ 49 ಮತ್ತು ದೇಶದಲ್ಲಿ ಶೇ 35 ರಷ್ಟಿತ್ತು. ಆದರೆ, 2019 ರಲ್ಲಿ, ಇದು ಮತ್ತಷ್ಟು ಹೆಚ್ಚಾಗಿದೆ. ಇದು ದೇಶದಲ್ಲಿ 47 ಪ್ರತಿಶತ ಮತ್ತು ಗುಜರಾತ್‌ನಲ್ಲಿ 68 ಪ್ರತಿಶತವನ್ನು ತಲುಪಿದೆ. ಆದರೆ, 2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಈ ಕುಸಿತ ದೇಶದಲ್ಲಿ ಮಾತ್ರವಲ್ಲ ಗುಜರಾತ್‌ನಲ್ಲೂ ಸಂಭವಿಸಿದೆ. ಈ ವರ್ಷ ಮೋದಿಯವರ ಜನಪ್ರಿಯತೆ ದೇಶದಲ್ಲಿ ಶೇ.44 ಮತ್ತು ಅವರ ತವರು ರಾಜ್ಯ ಗುಜರಾತ್‌ನಲ್ಲಿ ಶೇ.53 ರಷ್ಟಿದೆ.
ಗುಜರಾತ್ ನ ಅಭಿವೃದ್ಧಿ ಮಾಡೆಲ್‌ನ ಮೇಲೆ ದೇಶದ ಜನರಿಂದ ಮತ ಯಾಚಿಸಿದ್ದ ನರೇಂದ್ರ ಮೋದಿ
ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗುವ ಮೊದಲು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಗುಜರಾತ್ ಸೇರಿದಂತೆ ಇಡೀ ದೇಶದಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. 2014ರಲ್ಲಿ ನರೇಂದ್ರ ಮೋದಿಯವರು ಗುಜರಾತ್‌ನ ಅಭಿವೃದ್ಧಿ ಮಾದರಿಯ ಹೆಸರಿನಲ್ಲಿ ದೇಶದ ಜನತೆಯಿಂದ ಮತ ಕೇಳಿದ್ದರು. ಅದೇ ಸಮಯದಲ್ಲಿ, 2017 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯು ಕಾಂಗ್ರೆಸ್‌ನೊಂದಿಗೆ ಜಿದ್ದಾಜಿದ್ದಿನ ಹೋರಾಟವನ್ನು ಹೊಂದಿತ್ತು.
ಗುಜರಾತ್ ಚುನಾವಣೆಗಾಗಿ ಘೋಷಣಾ ಪತ್ರ ಜಾರಿ ಮಾಡಿದ ಬಿಜೆಪಿ
ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ (ನವೆಂಬರ್ 26) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಭೂಪೇಂದ್ರ ಪಟೇಲ್ ಮತ್ತು ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರ ಸಮ್ಮುಖದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯ ಘೋಷಣಾ ಪತ್ರವನ್ನು ಘೋಷಿಸಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಯುವಕರಿಗೆ 20 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಮತ್ತು ಆಮೂಲಾಗ್ರೀಕರಣ (Anti radicalisation) ಸೆಲ್‌ನ್ನ ರಚಿಸುವ ಹಲವಾರು ಭರವಸೆಗಳನ್ನು ನೀಡಲಾಗಿದೆ.
ಎರಡು ಹಂತಗಳಲ್ಲಿ ನಡೆಯಲಿದೆ ಚುನಾವಣೆ
ಗುಜರಾತ್ ವಿಧಾನಸಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಮತದಾನ ಡಿಸೆಂಬರ್ 1 ಮುಗಿದಿದ್ದು ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ.