ಗುಡ್ ನ್ಯೂಸ್: ಈ ಟ್ರೀಟ್‌ಮೆಂಟ್ ಪಡೆದರೆ ಕೇವಲ 24 ಗಂಟೆಗಳಲ್ಲಿ ಕೊರೋನಾ ಮಾಯ!?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 357 views

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಡುವೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೈದ್ರಾಬಾದಿನ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

Advertisement

ದೇಶದಲ್ಲಿ ಹರಡುತ್ತಿರುವ ಕೊವಿಡ್-19 ರೂಪಾಂತರ ತಳಿ ‘ಡೆಲ್ಟಾ’ ಅಂಟಿಕೊಂಡಿರುವ ರೋಗಿಗಳ ಚಿಕಿತ್ಸೆಗೆ ವಿಶಿಷ್ಟ, ವಿಶೇಷ ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನವನ್ನು ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ವಿಸ್ಕಿ, ಬ್ರಾಂದಿ, ರಮ್, ಜಿನ್ ರೀತಿಯ ಮದ್ಯದ ಜೊತೆಗೆ ಹಣ್ಣಿನ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಸಿದ್ಧಪಡಿಸಿದ ಮೊನೊಕ್ಲೋನಲ್ ಪ್ರತಿಕಾಯದ ಒಂದು ಡೋಸ್ ಅನ್ನು 40 ಕೊವಿಡ್-19 ರೋಗಿಗಳಿಗೆ ನೀಡಲಾಯಿತು ಎಂದು ಎನ್ ಡಿ ಟಿವಿ ವರದಿ ಮಾಡಿದೆ. ಹೀಗೆ ಮೊನೊಕ್ಲೋನಲ್ ಪ್ರತಿಕಾಯ ನೀಡಿದ 24 ಗಂಟೆಗಳ ನಂತರದಲ್ಲಿ ಈ ರೋಗಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಜ್ವರ ಹಾಗೂ ಅಸ್ವಸ್ಥತೆ ರೀತಿಯ ವೈದ್ಯಕೀಯ ಸೋಂಕಿತ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೈದ್ರಾಬಾದ್ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಚೇರ್ ಮನ್ ಡಾ. ನಾಗೇಶ್ವರ್ ರೆಡ್ಡಿ ಹೇಳಿದ್ದಾರೆ.

ಕೊವಿಡ್-19 ಸೋಂಕಿತರಿಗೆ 3ರಿಂದ 7 ದಿನಗಳಲ್ಲಿ ಲಸಿಕೆ

ಕೊರೊನಾವೈರಸ್ ಸೋಂಕಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳನ್ನು ಹೊಂದಿರುವವರಿಗೆ ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆ ನೀಡುವುದರಿಂದ ರೋಗಿಗಳಲ್ಲಿ ರೋಗದ ತೀವ್ರತೆ ಇಳಿಮುಖ ಆಗಲಿದೆ. ಕಳೆದ ವರ್ಷ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊವಿಡ್-19 ಸೋಂಕಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಈ ಪ್ರಯೋಗವನ್ನು ನಡೆಸಲಾಗಿತ್ತು. ಕೊರೊನಾವೈರಸ್ ಸೋಂಕು ತಗುಲಿದ ರೋಗಿಗೆ 3 ರಿಂದ 7 ದಿನಗಳಲ್ಲೇ ವಿಸ್ಕಿ, ಬ್ರಾಂದಿ, ರಮ್, ಜಿನ್ ರೀತಿಯ ಮದ್ಯದ ಜೊತೆಗೆ ಹಣ್ಣಿನ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಸಿದ್ಧಪಡಿಸಿದ ಮೊನೊಕ್ಲೋನಲ್ ಪ್ರತಿಕಾಯದ ಒಂದು ಡೋಸ್ ಅನ್ನು ನೀಡಲಾಗಿತ್ತು.

ಮೊನೊಕ್ಲಾನಲ್ ಚಿಕಿತ್ಸೆ ಪಡೆಯಲು 70,000 ರೂ.

ಭಾರತದಲ್ಲಿ ಕ್ಯಾಸಿರಿವಿಮಾಬ್ ಮತ್ತು ಇಂಡೆವಿಮಾಬ್ ಔಷಧಿಗಳ ಮಿಶ್ರಿತ ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆಗೆ 70,000 ರೂಪಾಯಿ ಅಥವಾ 1,000 ಯುಎಸ್ ಡಾಲರ್ ಖರ್ಚು ಆಗುತ್ತದೆ. ಅಮೆರಿಕಾದಲ್ಲಿ ಒಬ್ಬರಿಗೆ ಇದೇ ಚಿಕಿತ್ಸೆ ನೀಡುವುದಕ್ಕೆ 20,000 ಯುಎಸ್ ಡಾಲರ್ ಆಗುತ್ತದೆ. ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆಗೆ ಆದ್ಯತೆ ಹೆಚ್ಚಾಗುತ್ತಿದ್ದಂತೆ ಈ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

“ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆಗೂ ಅತಿ ಆಗಬಾರದು”

‘ನಾವು ಯಾವುದೇ ಕಾರಣಕ್ಕೂ ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆ ವಿಧಾನವನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ. ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಅಧಿಕೃತ ಮತ್ತು ಅಗತ್ಯ ವ್ಯಕ್ತಿಗಳಿಗೆ ಮಾತ್ರ ಈ ಚಿಕಿತ್ಸೆಯನ್ನು ನೀಡಬೇಕು. ಈ ಚಿಕಿತ್ಸೆಯ ವಿಧಾನವನ್ನು ಹೆಚ್ಚು ಜನರ ಮೇಲೆ ಪ್ರಯೋಗಿಸಿದ್ದಲ್ಲಿ ಹೊಸ ರೂಪಾಂತರ ತಳಿಗಳು ಉತ್ಪತ್ತಿಯಾಗುವ ಅಪಾಯವಿರುತ್ತದೆ. ಈ ಹಿನ್ನೆಲೆ ಆಯ್ದ ಕೆಲವರಿಗೆ ಮಾತ್ರ ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆ ನೀಡತಕ್ಕದ್ದು’ ಎಂದು ಹೈದ್ರಾಬಾದ್ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಚೇರ್ ಮನ್ ಡಾ. ನಾಗೇಶ್ವರ್ ರೆಡ್ಡಿ ಹೇಳಿದ್ದಾರೆ.

3 ತಿಂಗಳು ಕೊವಿಡ್-19 ಲಸಿಕೆ ಪಡೆಯುವಂತಿಲ್ಲ

ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆ ಪಡೆದುಕೊಂಡ ಕೊರೊನಾವೈರಸ್ ಸೋಂಕಿತರಲ್ಲಿ ಪ್ರತಿಕಾಯ ಶಕ್ತಿ ತೀವ್ರ ಸ್ವರೂಪದಲ್ಲಿ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವಂತಿಲ್ಲ. ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆ ಪಡೆದುಕೊಂಡ 3 ತಿಂಗಳ ನಂತರದಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ

ದೇಶದಲ್ಲಿ ಒಂದೇ ದಿನ 80,834 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,32,062 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,303 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 2,94,39,989 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,80,43,446 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,70,384 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 10,26,159 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ತಗ್ಗಿದ ಕೊರೊನಾವೈರಸ್ ತಪಾಸಣೆ ಪ್ರಮಾಣ

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವುದಕ್ಕೆ ಇನ್ನೂ ಒಂದು ಕಾರಣ ಅಡಗಿದೆ. ಕೊವಿಡ್-19 ಸೋಂಕು ಪರೀಕ್ಷೆ ಪ್ರಮಾಣದಲ್ಲೂ ಇಳಿಕೆ ಕಂಡು ಬಂದಿದೆ. ಪ್ರತಿನಿತ್ಯ 20 ಲಕ್ಷಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ 19,00,312 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 37,81,32,474 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಕೃಪೆ: ಒನ್ ಇಂಡಿಯಾ

Advertisement
Share this on...