ಗುಡ್ ನ್ಯೂಸ್: ನೀವು ಭಾರತದ ಯಾವದೇ ರಾಜ್ಯದ ಡ್ರೈವಿಂಗ್ ಲೆಸನ್ಸ್ ಹೊಂದಿದ್ದರೆ ಈ 15 ದೇಶಗಳಲ್ಲಿ ವಾಹನ ಓಡಿಸಲು ಆ ದೇಶಗಳ DL ಬೇಕಿಲ್ಲ

in Kannada News/News/ಕನ್ನಡ ಮಾಹಿತಿ 5,116 views

ವಾಹನ ಓಡಿಸಬೇಕಾದರೆ Driving license ಕಡ್ಡಾಯವಾಗಿದೆ. ಭಾರತದ ವಾಹನ ಚಲಾಯಿಸಲು ಚಾಲನಾ ಪರವಾನಗಿ ಬೇಕು. ಆದರೆ ಇದೇ ಡ್ರೈವಿಂಗ್ ಲೈಸೆನ್ಸ್ಟ ಇಟ್ಟುಕೊಂಡು ವಿದೇಶದಲ್ಲಿ ಕೂಡ ವಾಹನ ಚಲಾಯಿಸಬಹುದು ಎಂಬುದು ನಿಮಗೆ ಗೊತ್ತಾ‌ ? ಹೌದು. ಭಾರತದ ಹೊರತಾಗಿ ಇನ್ನೂ ಹಲವು ದೇಶಗಳಲ್ಲಿ ಭಾರತದ ಡಿಎಲ್ ಮಾನ್ಯವಿದೆ. ಆ ದೇಶಗಳು ಯಾವುದು ಎಂದು ನೋಡೋಣ….

Advertisement

ಅಮೆರಿಕಾ : ಅಮೆರಿಕಾದ ಹೆಚ್ಚಿನ ರಾಜ್ಯಗಳು ಭಾರತೀಯ ಡಿಎಲ್ ಇಟ್ಟುಕೊಂಡು 1 ವರ್ಷದ ತನಕ ಬಾಡಿಗೆ ವಾಹನ ಓಡಿಸಬಹುದು. ವಾಹನ ಓಡಿಸಲು ಇಂಗ್ಲೀಷಿನಲ್ಲಿ ಇರಬೇಕು. ಡಿಎಲ್ ಜೊತೆಗೆ ಯುಎಸ್ಎ ಗೆ ಬಂದ ದಿನಾಂಕವನ್ನು ಒಳಗೊಂಡಿರುವ I-94 ಫಾರ್ಮ್ ಇಟ್ಟುಕೊಂಡಿರಬೇಕು.

ನ್ಯೂಜಿಲೆಂಡ್ : ಸಣ್ಣ ಸಣ್ಣ ದ್ವೀಪಗಳಿಂದ ಕೂಡಿದ ಈ ದೇಶದಲ್ಲಿ ಡ್ರೈವ್ ಮಾಡುವ ಮಜವೇ ಬೇರೆ. ಇಲ್ಲಿ ಕೂಡ ನೀವು ಭಾರತದ ಡಿಎಲ್ ಮೂಲಕ ಒಂದು ವರ್ಷದವರೆಗೆ ಡ್ರೈವ್ ಮಾಡಬಹುದು.

ಜರ್ಮನಿ : ಭಾರತೀಯ ಡ್ರೈವಿಂಗ್ ಲೈಸೆನ್ಸ್ ಮೂಲಕ ಜರ್ಮನಿಯಲ್ಲಿ 6 ತಿಂಗಳು ವಾಹನ ಓಡಿಸಬಹುದು. ಆಟೋಮೊಬೈಲ್ ದೇಶ ಎಂದೇ ಖ್ಯಾತಿ ಪಡೆದಿರುವ ಜರ್ಮನಿಯಲ್ಲಿ ಮರ್ಸಿಡೀಸ್-ಬೆಂಜ್, ಆಡಿ ಮತ್ತು ಬಿ ಎಮ್ ಡಬ್ಲು ನಂತಹ ಐಶಾರಾಮಿ ಕಾರುಗಳು ತಯಾರಾಗುತ್ತವೆ.

ಭೂತಾನ್ : ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಭೂತಾನ್ ನಲ್ಲಿ ಕೂಡ ಭಾರತದ ಚಾಲನಾ ಪರವಾನಗಿ ಇಟ್ಟುಕೊಂಡು ಚಾಲನಾ ಆನಂದ ಪಡೆಯಬಹುದು.

ಕೆನಡಾ : ಕೆನಡಾವನ್ನು ಮಿನಿ ಪಂಜಾಬ್ ಎಂದು ಕರೆಯುತ್ತಾರೆ. ಇಲ್ಲಿನ ವಿಶಾಲವಾದ ರಸ್ತೆಗಳಲ್ಲಿ ಭಾರತೀಯ ಡಿಎಲ್ ಹೊಂದಿದವರೂ ಡ್ರೈವ್ ಮಾಡಬಹುದು. ಇಲ್ಲಿ ನೀವು ನಿಮ್ಮ ಬಲಭಾಗದಲ್ಲಿ ಗಾಡಿ ಓಡಿಸಬೇಕಾಗುತ್ತೆ.

ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಕೆಲವು ನಿಯಮ ಮತ್ತು ಶರತ್ತುಗಳನ್ನು ಅನುಸರಿಸಿ ನೀವು ವಾಹನ ಓಡಿಸಬಹುದು. ಇಂಗ್ಲೀಷ್ ಭಾಷೆಯಲ್ಲಿರುವ ಲೈಸೆನ್ಸ್ ಮೂಲಕ ನೀವು ಇಲ್ಲಿ 3 ತಿಂಗಳು ವಾಹನ ಓಡಿಸಬಹುದು.

ಬ್ರಿಟನ್ : ಭಾರತದ ಡಿಎಲ್ ಬಳಸಿಕೊಂಡು 1 ವರ್ಷದ ಕಾಲ ಬ್ರಿಟನ್ ನಲ್ಲಿ ವಾಹನ ಓಡಿಸಬಹುದು. ಇಲ್ಲಿ ನೀವು ನಿಮ್ಮ ಎಡಗಡೆ ವಾಹನ ಚಲಾಯಿಸಬೇಕು. ಪ್ರಸಿದ್ಧ ಕಾರುಗಳಾದ ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್, ಅಸ್ಟೋನ್ ಮಾರ್ಟಿನ್ ಕಾರುಗಳು ಇಲ್ಲಿ ನಿರ್ಮಾಣವಾಗುತ್ತೆ.

ಇಟಲಿ : ಇಟಲಿಯ ಸ್ಪೋರ್ಟ್ಸ್ ಕಾರುಗಳ ಫ್ಯಾನ್ಸ್ ಜಗತ್ತಿನೆಲ್ಲೆಡೆ ಇದ್ದಾರೆ. ಇಲ್ಲಿನ ರಸ್ತೆಗಳಲ್ಲಿ ವಾಹನ ಓಡಿಸುವ ಚಾನ್ಸ್ ಸಿಕ್ಕರೆ ಯಾರು ಬಿಡುತ್ತಾರೆ ಹೇಳಿ. ಇಟಲಿಯಲ್ಲಿ ಡ್ರೈವ್ ಮಾಡಬೇಕೆಂದರೆ ನಿಮ್ಮ ಬಳಿ ಅಂತರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್ ಇರುವ ಲೈಸೆನ್ಸ್ ಇರಬೇಕಾಗುತ್ತೆ.

ಸ್ವಿಡ್ಜರ್ಲೆಂಡ್ : ಮಧ್ಯ ಯುರೋಪಿನ ಈ ದೇಶ ಜಗತ್ತಿನ ಸ್ವರ್ಗ ಎಂದೇ ಪ್ರಸಿದ್ಧಿ. ಇಲ್ಲಿ ನೀವು ದೇಶದ ಭಾಗದಲ್ಲಿ 1 ವರ್ಷ ಡ್ರೈವ್ ಮಾಡಬಹುದು. ಇದರ ಹೊರತಾಗಿ ನೀವು ಇಂಗ್ಲೀಷ್ ಭಾಷೆಯಲ್ಲಿರುವ ಡಿಎಲ್ ಆಧಾರದ ಮೇಲೆ ವಾಹನವನ್ನು ಬಾಡಿಗೆಗೆ ಪಡೆಯಬಹುದು.

ದಕ್ಷಿಣ ಆಫ್ರಿಕಾ : ಈ ದೇಶದಲ್ಲಿ ಡ್ರೈವ್ ಮಾಡಲು ನಿಮ್ಮ ಡಿಎಲ್ ಇಂಗ್ಲೀಷ್ ನಲ್ಲಿ ಇರಬೇಕು ಮತ್ತು ಅದರಲ್ಲಿ ನಿಮ್ಮ ಫೋಟೋ, ಸಿಗ್ನೇಚರ್ ಕೂಡ ಇರಬೇಕು.

ಫ್ರಾನ್ಸ್ : ಈ ದೇಶಕ್ಕೆ ಅತಿಥಿಯಾಗಿ ಬರುವವರು ಲೋಕಲ್ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು 1 ವರ್ಷದವರೆಗೆ ಗಾಡಿ ಓಡಿಸಬಹುದು. ಇಲ್ಲಿನ ಲೈಸೆನ್ಸ್ ಫ್ರಾನ್ಸಿಸಿ ಭಾಷೆಯಲ್ಲಿ ಇರುತ್ತದೆ. ಫ್ರಾನ್ಸ್ ಗಾಡಿಗಳ ಇಂಜಿನ್ ಗೆ ಮಾರುಹೋಗದವರಿಲ್ಲ. ಹಾಗಾಗಿ ನೀವು ಅಲ್ಲಿನ ಗಾಡಿಗಳ ಮಜಾ ಅನುಭವಿಸಬಹುದು.

ಸಿಂಗಾಪುರ : ಮಲೇಶಿಯಾ ಮತ್ತು ಇಂಡೋನೆಶಿಯಾದ ನಡುವೆ ಇರುವ ಸಿಂಗಾಪುರ ಪ್ರಮುಖ ವ್ಯವಹಾರ ಕೇಂದ್ರ ಮತ್ತು ಬಂದರುಗಳನ್ನು ಹೊಂದಿದೆ. ಇಲ್ಲಿನ ಸರಕಾರ ವಿದೇಶೀ ಅತಿಥಿಗಳಿಗಾಗಿ ಇಂಟರ್ ನ್ಯಾಶನಲ್ ಡಿಎಲ್ ಗಳ ಮೂಲಕ ವಾಹನ ಓಡಿಸುವ ಅನುಮತಿ ನೀಡಿದೆ. ಈ ಲೈಸೆನ್ಸ್ ನಿಂದ ನೀವು ಹಾಂಗ್ ಕಾಂಗ್ ಮತ್ತು ಮಲೇಶಿಯಾಗಳಿಗೆ ಕೂಡ ಹೋಗಬಹುದು.

ಫಿನ್ಲೆಂಡ್ : ಉತ್ತರ ಯುರೋಪ್ ನಲ್ಲಿರುವ ಈ ದೇಶದಲ್ಲಿ ನೀವು ಭಾರತೀಯ ಡಿಎಲ್ ಮೂಲಕ 1 ವರ್ಷ ಡ್ರೈವ್ ಮಾಡಬಹುದು. ಲೈಸೆನ್ಸ್ ಜೊತೆಗೆ ಹೆಲ್ತ್ ಇನ್ಶುರೆನ್ಸ್ ಕೂಡ ಇರಲೇಬೇಕು.

ಮಾರಿಶಸ್ : ಮಾರಿಶಸ್ ನಲ್ಲಿ ಡ್ರೈವಿಂಗ್ ನಿಯಮ ಕಠಿಣವಾಗಿದೆ. ಇಲ್ಲಿ ಭಾರತೀಯ ವಾಹನ ಪರವಾನಗಿಯ ಮೂಲಕ ಕೇವಲ ಒಂದು ದಿನ ಮಾತ್ರ ಡ್ರೈವ್ ಮಾಡಬಹುದು. ಶೇಕಡಾ 51 ರಷ್ಟು ಹಿಂದುಗಳನ್ನು ಒಳಗೊಂಡ ದೇಶದ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ.

ನಾರ್ವೆ : ಈ ದೇಶದಲ್ಲಿ ಜಗತ್ತಿನಲ್ಲೇ ಅತ್ಯಂತ ಸುಂದರವಾದ ಸ್ಥಳಗಳಿವೆ. ಇಲ್ಲಿ ಕೇವಲ 3 ತಿಂಗಳು ಮಾತ್ರ ವಾಹನ ಓಡಿಸಬಹುದು. ಈ ದೇಶ ಮಧ್ಯರಾತ್ರಿಯ ಸೂರ್ಯೋದಯಕ್ಕೆ ಪ್ರಸಿದ್ಧಿಯಾಗಿದೆ.

Advertisement
Share this on...