ಜನವರಿ 30, 1948 ರಂತೂ ಸೂರ್ಯ ಕಂಡಿರಲಿಲ್ಲ, ನಾಲ್ಕೂ ಕಡೆ ಚಳಿಯ ಕಾರಣ ಮಸುಕು ಕವಿದಿತ್ತು. ದೆಹಲಿಯ ರಸ್ತೆಗಳೆಲ್ಲಾ ಚಳಿಯ ಕಾರಣ ಖಾಲಿ ಖಾಲಿಯಾಗಿದ್ದವು. ಆದರೆ ತನ್ನ ನಿಯಮಾನುಸಾರವನ್ನ ಮಾತ್ರ ಮೋಹನದಾಸ್ ಕರಮಚಂದ್ ಗಾಂಧಿ ಮಾತ್ರ ತಪ್ಪಿಸುತ್ತಿರಲಿಲ್ಲ. ಗಾಂಧಿ ಪ್ರತಿದಿನದಂತೆ ಅಂದು ಬೆಳಿಗ್ಗೆಯೂ ಮೂರು ಗಂಟೆಗೆ ಎದ್ದು ತನ್ನ ದಿನಚರಿಯನ್ನ ಮಾಡುತ್ತಿದ್ದರು. ಆದರೆ ಅಂದು ಸಂಜೆ 5.17 ಕ್ಕೆ ನಡೆದ ಘಟನೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು.
ವಯಸ್ಸಾದ ವ್ಯಕ್ತಿಯೊಬ್ಬ ಸಾಮ್ರಾಜ್ಯವಾದದ ವಿರುದ್ಧ ಇತಿಹಾಸ ಕಂಡ ದೊಡ್ಡ ಹೋರಾಟದ ನೇತೃತ್ವ ವಹಿಸಿದ್ದ, ಜಗತ್ತಿನ ಶಕ್ತಿಶಾಲಿ ಸಾಮ್ರಾಜ್ಯದ ವಿರುದ್ಧ ಅಹಿಂಸಾತ್ಮಕ ಸಂಘರ್ಷದ ಬುನಾದಿ ಹಾಕಿದ್ದ, ಅಂಥ ವ್ಯಕ್ತಿಯನ್ನ ಅಷ್ಟು ಕ್ರೂರವಾಗಿ ಯಾರು ಯಾಕಾಗಿ ಕೊಲ್ಲುತ್ತಾರೆ? ಆದರೆ ನಾಥೂರಾಂ ಗೋಡ್ಸೆ ಹೀಗೆ ಮಾಡಿದ್ದ. ಈ ರೀತಿಯಾಗಿ ಆ ದಿನ ಇತಿಹಾಸದ ಕರಾಳ ಪುಟಗಳಲ್ಲಿ ಸೇರಿಕೊಂಡು ಬಿಟ್ಟಿತು.
ಆ ದಿನ ಗಾಂಧಿಗೆ ಸ್ವಲ್ಪ ತಡವಾಗಿತ್ತು
ಗಾಂಧಿ ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ಬಿರ್ಲಾ ಹೌಸ್ ನಲ್ಲಿ ಸಭೆ ನಡೆಸುತ್ತಿದ್ದರು. ಮೊಟ್ಟಮೊದಲು ಪ್ರಾರ್ಥನೆ ನಡೆಯುತ್ತಿತ್ತು, ಬಳಿಕ ಸಭೆಯ ಕೊನೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಟಿಪ್ಪಣಿ ಮಾಡುತ್ತಿದ್ದರು. ಅವರು ಸಾಮಾನ್ಯವಾಗಿ ಸಂಜೆ 5.10 ಕ್ಕೆ ಪ್ರಾರ್ಥನೆಗಾಗಿ ಬರುತ್ತಿದ್ದರು, ಆದರೆ ಆ ದಿನ ತಡವಾಗಿತ್ತು. ಆತನ ವಯಸ್ಸು ಮತ್ತು ಆರೋಗ್ಯದಿಂದಾಗಿ, ಆತನ ಭುಜಗಳು ಮತ್ತು ಕೈಗಳು ಯಾವಾಗಲೂ ಮನು ಮತ್ತು ಅಭಾ (ಸಹಾಯಕಿಯರು) ಹೆಗಲ ಮೇಲೆ ಇರುತ್ತಿದ್ದವು. ಆ ದಿನ ಗಾಂಧಿ ಬಿರ್ಲಾ ಹೌಸ್ ಕಡೆಗೆ ಬರುತ್ತಿದ್ದರು.
ಆತ ಒಂದಾದ ಮೇಲೊಂದರಂತೆ 3 ಗುಂಡುಗಳನ್ನ ಹಾರಿಸಿದ್ದ
ಇದ್ದಕ್ಕಿದ್ದಂತೆ ಯುವಕನೊಬ್ಬ ಗಾಂಧಿಯ ಪಾದಗಳನ್ನು ಮುಟ್ಟಲು ಪ್ರಾರಂಭಿಸಿದ. ನಂತರ ಏಕಾಏಕಿ ಮೂರು ಗುಂಡುಗಳನ್ನು ಒಂದರ ನಂತರ ಒಂದರಂತೆ ಗಾಂಧಿಯ ಎದೆಗೆ ಹಾರಿಸಿಬಿಟ್ಟ. ಅಲ್ಲಿದ್ದ ಎಲ್ಲರೂ ಸುಮಾರು ಒಂದು ನಿಮಿಷ ತಮ್ಮ ಸ್ಥಳದಲ್ಲೇ ನಿಂತಿದ್ದು ದಿಗ್ಭ್ರಮೆಗೊಂಡರು. ಅಲ್ಲಿ ಶೂಟ್ ಮಾಡಿದ್ದ ವ್ಯಕ್ತಿಯ ಹೆಸರು ನಾಥು ರಾಮ್ ಗೋಡ್ಸೆ ಆಗಿತ್ತು. ಆತ ಖಾಕಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದ. ಆಗ ಯಾರೋ ಗೋಡ್ಸೆ ತಲೆಗೆ ಹೊಡೆದರು. ಆದರೂ ಗೋಡ್ಸೆ ಓಡಿ ಹೋಗಲು ಪ್ರಯತ್ನಿಸಿಲಿಲ್ಲ ಬದಲಾಗಿ ತನ್ನ ರಿವಾಲ್ವರ್ ಅನ್ನು ಅಲ್ಲಿದ್ದ ಜನರಿಗೆ ಹಸ್ತಾಂತರಿಸಿದನು.
ಮರಣದಂಡನೆ ಶಿಕ್ಷೆಯಲ್ಲಿ ಈ ಹೆಸರೂ ಇತ್ತು
ಕೆಂಪು ಕೋಟೆಯಲ್ಲಿ ನಡೆದ ವಿಚಾರಣೆಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ್ ಆಪ್ಟೆ ಅವರಿಗೆ ನ್ಯಾಯಮೂರ್ತಿ ಆತ್ಮ ಚರಣ್ ಅವರು ಮರಣದಂಡನೆ ವಿಧಿಸಿದರು. ಇತರ ಐದು ಸಹಚರರಾದ ವಿಷ್ಣು ಕರ್ಕರೆ, ಮದನ್ ಲಾಲ್ ಪಾಹ್ವಾ, ಶಂಕರ್ ಕಿಸ್ತೈಯಾ, ಗೋಪಾಲ್ ಗೋಡ್ಸೆ ಮತ್ತು ದತ್ತಾರಿಹ್ ಪರ್ಚುರೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ನಂತರ, ಹೈಕೋರ್ಟ್ ಕಿಸ್ತೈಯಾ ಮತ್ತು ಪರ್ಚುರೇ ಅವರನ್ನು ಖುಲಾಸೆಗೊಳಿಸಿತು.
ಅಷ್ಟಕ್ಕೂ ಗೋಡ್ಸೆ ಗಾಂಧಿಯನ್ನ ಕೊಂದಿದ್ಯಾಕೆ?
ನ್ಯಾಯಾಲಯದಲ್ಲಿ ಗೋಡ್ಸೆ ತಾನು ಗಾಂಧಿಯನ್ನು ಕೊಂದದ್ದನ್ನ ಒಪ್ಪಿಕೊಂಡರು. ಗೋಡ್ಸೆ ಮಾತನಾಡುತ್ತ, “ಗಾಂಧೀಜಿ ದೇಶಕ್ಕಾಗಿ ಮಾಡಿದ ಸೇವೆಯನ್ನು ನಾನು ಗೌರವಿಸುತ್ತೇನೆ. ಅವರ ಮೇಲೆ ಗುಂಡು ಹಾರಿಸುವ ಮೊದಲು ನಾನು ಅವರಿಗೆ ಗೌರವಾರ್ಥವಾಗಿ ನಮಸ್ಕರಿಸಿದೆ ಆದರೆ ಜನರಿಗೆ ಮೋಸಗೊಳಿಸುವ ಮೂಲಕ ಪೂಜ್ಯ ಮಾತೃಭೂಮಿಯನ್ನು ವಿಭಜಿಸುವ ಹಕ್ಕು ಯಾವುದೇ ಮಹಾತ್ಮನಿಗೂ ಇಲ್ಲ. ಗಾಂಧಿಜೀ ದೇಶಕ್ಕೆ ಮೋಸ ಮಾಡಿ ದೇಶವನ್ನು ತುಂಡರಿಸಿದರು. ದೇಶ ವಿಭಜನೆ ಮಾಡಿದರೂ ಅಂತಹ ಅಪರಾಧಿಯನ್ನು ಯಾವ ಆಧಾರದ ಮೇಲೆ ಶಿಕ್ಷಿಸಬಹುದು ಎಂಬ ಯಾವುದೇ ನ್ಯಾಯಾಲಯ ಮತ್ತು ಕಾನೂನು ಆಗ ಇರಲಿಲ್ಲ, ಅದಕ್ಕಾಗಿಯೇ ನಾನು ಗಾಂಧಿಯನ್ನು ಹೊಡೆದುರುಳಿಸಿದೆ” ಎನ್ನುತ್ತಾರೆ.
ಗೋಡ್ಸೆ ಸೋದರ ಸೊಸೆ ಹಿಮಾನಿ ಸಾವರ್ಕರ್ ಹೇಳಿದ್ದೇನು
ನವೆಂಬರ್ 15, 1949 ರಂದು, ಗೋಡ್ಸೆಯನ್ನು ಗಲ್ಲಿಗೇರಿಸುವ ಒಂದು ದಿನ ಮೊದಲು, ಅವರ ಕುಟುಂಬವು ಅವರನ್ನು ಭೇಟಿಯಾಗಲು ಅಂಬಾಲಾ ಜೈಲಿಗೆ ತಲುಪಿತು. ಅವರಲ್ಲಿ ಒಬ್ಬರು ಗೋಡ್ಸೆ ಅವರ ಸೋದರ ಸೊಸೆ ಮತ್ತು ಗೋಪಾಲ್ ಗೋಡ್ಸೆ ಅವರ ಪುತ್ರಿ ಹಿಮಾನಿ ಸಾವರ್ಕರ್ ಕೂಡ ಇದ್ದರು. ಇತಿಹಾಸದ ಅನೇಕ ಪುಸ್ತಕಗಳು ಮತ್ತು ಲೇಖನಗಳಲ್ಲಿ, ನಾಥುರಾಮ್ ಗೋಡ್ಸೆ ಅವರನ್ನು ಹುಚ್ಚ, ಸೈಕೋ ಎಂದು ಹೇಳಲಾಯಿತು. ಆದರೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹಿಮಾನಿ ಸಾವರ್ಕರ್, ಗೋಡ್ಸೆ ಯಾವುದೇ ಉದ್ವೇಗದಿಂದಾಗಲಿ ಅಥವ ಸ್ಥಿಮಿತ ಕಳೆದುಕೊಂಡು ಅಲ್ಲ ಬದಲಾಗಿ ಸಂಪೂರ್ಣವಾದ ಪ್ರಜ್ಞೆಯಿಟ್ಟುಕೊಂಡೇ ಬಾಪುವನ್ನು ಕೊಂದಿದ್ದಾರೆ ಎಂದು ಹೇಳಿದರು. ಆ ಸಮಯದಲ್ಲಿ ಗೋಡ್ಸೆ ಸಂಪಾದಕರಾಗಿದ್ದರು. ಹಿಮಾನಿ 2015 ರಲ್ಲಿ ನಿಧನರಾದರು.
ಆತ ಅಖಂಡ ಭಾರತದ ನಕ್ಷೆಗಾಗಿ ನೇಣಿಗೆ ಕೊರಳೊಡ್ಡಿದ್ದ
ನವೆಂಬರ್ 15, 1949 ರಂದು, ನಾಥುರಾಮ್ ಗೋಡ್ಸೆ ಮತ್ತು ನಾರಾಯಣ್ ಆಪ್ಟೆ ಅವರನ್ನು ಮರಣದಂಡನೆಗೆ ಕರೆದೊಯ್ಯುವಾಗ, ಅವರು ಒಂದು ಕೈಯಲ್ಲಿ ಭಗವದ್ಗೀತೆ ಅಖಂಡ ಭಾರತದ ನಕ್ಷೆ ಮತ್ತು ಇನ್ನೊಂದು ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದ್ದರು. ಅವರು ‘ನಮಸ್ತೆ ಸದಾ ವತ್ಸಲೆ’ ಎಂದು ಹಾಡುತ್ತ ಗಲ್ಲಿಗೇರಿಸುವ ಮೊದಲು ಘೋಷಣೆಗಳನ್ನು ಕೂಗಿದರು.
ಹಿಮಾನಿ ಸಾವರ್ಕರ್ ಬಿಚ್ಚಿಟ್ಟ ಸತ್ಯ
ಬಿಬಿಸಿಗೆ ನೀಡಿದ್ದ ಇಂಟರ್ವ್ಯೂ ನಲ್ಲಿ ಹಿಮಾನಿ ಸಾವರ್ಕರ್, “ಅವರ (ನಾಥುರಾಮ್ ಗೋಡ್ಸೆ) ಮೃತ ದೇಹವನ್ನು ನಮಗೆ ಕೊಡಲಿಲ್ಲ. ಜೈಲಿನೊಳಗೆ ಅವರ ಶವವನ್ನ ಕಾರಿನಲ್ಲಿ ಹಾಕಿ ಹತ್ತಿರದ ಘಗ್ಗರ್ ನದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಸರ್ಕಾರ ಅಂತ್ಯಕ್ರಿಯೆ ನಡೆಸಿತು. ಆದರೆ ನಮ್ಮ ಹಿಂದೂ ಮಹಾಸಭೆಯ ಅತ್ರಿ ಎಂಬ ಕಾರ್ಯಕರ್ತ ಆ ಜಾಗಕ್ಕೆ ಹೋಗಿ ಚಿತೆಯ ಬೆಂಕಿ ಕಡಿಮೆಯಾದಾಗ ಆತ ಅಸ್ಥಿಯನ್ನ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿದ್ದರು” ಎಂದಿದ್ದರು.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇಂದಿಗೂ ಗೋಡ್ಸೆ ಅವರ ಅಸ್ಥಿಯನ್ನ ಸಂರಕ್ಷಿಸಿಡಲಾಗಿದೆ. ಪ್ರತಿ ನವೆಂಬರ್ 15 ರಂದು, ಗೋಡ್ಸೆ ಹೌಸ್ನಲ್ಲಿ ಸಂಜೆ 6 ರಿಂದ 8 ರವರೆಗೆ ಒಂದು ಕಾರ್ಯಕ್ರಮ ನಡೆಯುತ್ತದೆ, ಅಲ್ಲಿ ಅವರ ಮೃತ್ಯು ಪತ್ರವನ್ನು ಓದಲಾಗುತ್ತದೆ ಮತ್ತು ಜನರಿಗೆ ಪಠಿಸಲಾಗುತ್ತದೆ. ಅವರ ಕೊನೆಯ ಆಸೆ ಅವರ ಪೀಳಿಗೆಯ ಮಕ್ಕಳಿಗೂ ಕಂಠಪಾಠವಾಗಿದೆ
ಗೋಡ್ಸೆಯ ಅಂತಿಮ ಇಚ್ಛೆ ಈಡೇರದ ಕಾರಣ ಈಗಲೂ ಅವರ ಅಸ್ಥಿಯನ್ನ ವಿಸರ್ಜಿಸಲಾಗಿಲ್ಲ
ಗೋಡ್ಸೆ ಕುಟುಂಬವು ಅವರ ಕೊನೆಯ ಆಸೆಯನ್ನು ಗೌರವಿಸಿ, ಅವರ ಚಿತಾಭಸ್ಮವನ್ನು ಇನ್ನೂ ಬೆಳ್ಳಿ ಕಲಶದಲ್ಲಿ ಸಂರಕ್ಷಿಸಿಟ್ಟಿದ್ದಾರೆ. ಈ ಬಗ್ಗೆ ಹಿಮಾನಿ ಸಾವರ್ಕರ್ ಸಂದರ್ಶನದಲ್ಲಿ ಮಾತನಾಡುತ್ತ ಗೋಡ್ಸೆ ಅಂತಿಮ ಆಸೆ, “ನನ್ನ ದೇಹದ ಕೆಲವು ಭಾಗವನ್ನು ಸಂರಕ್ಷಿಸಿಡಿ, ಸಿಂಧೂ ನದಿ ಸ್ವತಂತ್ರ ಭಾರತದಲ್ಲಿ ಹರಿದಾಗ ಮತ್ತು ಮತ್ತೊಮ್ಮೆ ಅಖಂಡ ಇಂಡಿಯಾ ರಚನೆಯಾದಾಗ ಅದನ್ನ ವಿಸರ್ಜಿಸಿ. ಇದಕ್ಕಾಗಿ ನಾಲ್ಕೈದು ತಲೆಮಾರು ಕಳೆದರೂ ಚಿಂತೆಯಿಲ್ಲ ಎಂದು ಬರೆದಿದ್ದಾರೆ.” ಎಂದು ಹಿಮಾನಿ ಸಂದರ್ಶನದಲ್ಲಿ ಹೇಳಿದ್ದರು.