ಗೋರಖನಾಥ್ ಮಂದಿರದ ಮೇಲೆ ದಾಳಿ ನಡೆಸಿದ್ದ, ”ಹೆಂಡತಿ ಬೇಕಿಲ್ಲ ಜನ್ನತ್ ನಲ್ಲಿ 72 ಹೂರ್ ಸಿಗ್ತಾರೆ” ಎಂದಿದ್ದ #ಮುರ್ತಜಾ_ಅಬ್ಬಾಸ್ ಗೆ ಮರಣದಂಡನೆ ಶಿಕ್ಷೆ

in Uncategorized 284 views

ಗೋರಖ್‌ಪುರದ ಗೋರಖನಾಥ ದೇಗುಲದ ಮೇಲೆ ದಾಳಿ ನಡೆಸಿದ್ದ ಉಗ್ರ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ ವಿಧಿಸಲಾಗಿದೆ. ATS-NIA ನ್ಯಾಯಾಲಯವು ಸೋಮವಾರ (30 ಜನವರಿ 2022) ಈತನಿಗೆ ಶಿಕ್ಷೆ ವಿಧಿಸಿದೆ. ಈತ ಏಪ್ರಿಲ್ 4, 2022 ರಂದು ‘ಅಲ್ಲಾ-ಹು-ಅಕ್ಬರ್’ ಎಂದು ಕೂಗುತ್ತಾ ದೇವಾಲಯವನ್ನು ಪ್ರವೇಶಿಸಲು ಪ್ರಯತ್ನಿಸಿದ್ದ. ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸಿ ಯೋಧರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದ. ದಾಳಿಯ ನಂತರ ಮುರ್ತಾಜಾನನ್ನ ಹುಚ್ಚ ಎಂದು ಘೋಷಿಸುವ ಮೂಲಕ ಬಚಾವ್ ಮಾಡುವ ಪ್ರಯತ್ನಗಳು ನಡೆದಿದ್ದವು, ಬಳಿಕ ವೈದ್ಯರು ಇದನ್ನ ತಿರಸ್ಕರಿಸಿದ್ದರು.

Advertisement

ಮಾಧ್ಯಮ ವರದಿಗಳ ಪ್ರಕಾರ, ಮುರ್ತಾಜಾ ಅಬ್ಬಾಸಿ ಪ್ರಕರಣದ ವಿಚಾರಣೆಯು ಗೋರಖ್‌ಪುರದ NIA/ATS ನ್ಯಾಯಾಲಯದಲ್ಲಿ ನಡೆಯಿತು. ದೇಶದ ವಿರುದ್ಧ ಯುದ್ಧ (ಯುಎಪಿಎ) ಮತ್ತು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಕ್ಕಾಗಿ ಮುರ್ತಾಜಾ ವಿರುದ್ಧ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಮೂರ್ತಿ ವಿವೇಕಾನಂದರು ಎಟಿಎಸ್ ಮಾಡಿದ ಆರೋಪಗಳು ಶಿಕ್ಷೆಗೆ ಸಾಕಾಗುತ್ತದೆ ಎಂದು ಕಂಡುಕೊಂಡರು. ನ್ಯಾಯಾಲಯದಿಂದ ಅಹ್ಮದ್ ಮುರ್ತಾಜಾನ ಪರವಾಗಿ ವಾದಿಸಲು ನೇಮಿಸಿದ್ದ ವಕೀಲರಿಗೂ ಆರೋಪಿಗ ಸಹಕರಿಸಲಿಲ್ಲ ಎಂದು ಹೇಳಲಾಗುತ್ತಿದೆ. ವಿಚಾರಣೆ ವೇಳೆ ಮುರ್ತಾಜಾ ತಾನು ಮಾನಸಿಕ ಅಸ್ವಸ್ಥ ಎಂದು ಮತ್ತೆ ಮತ್ತೆ ಅಳುತ್ತಲೇ ಇದ್ದ.

ಆದರೆ ಮುರ್ತಾಜಾ ತನ್ನ ಮಾನಸಿಕ ಅಸ್ವಸ್ಥತೆಯನ್ನು ಸಾಬೀತುಪಡಿಸಲು ನ್ಯಾಯಾಲಯದಲ್ಲಿ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಮುರ್ತಾಜಾ ದಾಳಿಯನ್ನು ನ್ಯಾಯಾಲಯದಲ್ಲಿ ಲೋನ್ ವುಲ್ಫ್ ಅಟ್ಯಾಕ್ ಎಂದು ಎಟಿಎಸ್ ಹೇಳಿತ್ತು. ಇಂತಹ ದಾಳಿಗಳಲ್ಲಿ, ಒಬ್ಬ ವ್ಯಕ್ತಿಯು ತನ್ನ ಟಾರ್ಗೆಟ್ ಮೇಲೆ ಏಕಾಂಗಿಯಾಗಿ ಹೊಂಚುದಾಳಿಯಿಂದ ದಾಳಿ ಮಾಡುತ್ತಾನೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಮತ್ತು ಇತರ ಧರ್ಮದ ಜನರಿಗೆ ಗರಿಷ್ಠ ಹಾನಿಯನ್ನುಂಟುಮಾಡಲು ಮುರ್ತಾಜಾ ಪ್ರಯತ್ನಿಸುತ್ತಿದ್ದ ಎಂದು ಎಟಿಎಸ್ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?

ಮುರ್ತಾಜಾ ಏಪ್ರಿಲ್ 4, 2022 ರಂದು ಗೋರಖ್‌ಪುರದ ಗೋರಖನಾಥ ದೇವಾಲಯದ ಮೇಲೆ ಹರಿತವಾದ ಆಯುಧದಿಂದ ಏಕಾಂಗಿಯಾಗಿ ದಾಳಿ ಮಾಡಿದ್ದ. ಈ ದಾಳಿಯನ್ನು ತಡೆಯಲು ಯತ್ನಿಸಿದ ಇಬ್ಬರು PAC ಜವಾನರು ಗಂಭೀರವಾಗಿ ಗಾಯಗೊಂಡಿದ್ದರು. ಮುರ್ತಾಜಾ ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದ. ಆದರೆ, ಆತ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದ.

ಪೊಲೀಸರು ಮುರ್ತಾಜಾನ ಕೃತ್ಯವನ್ನು ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ ಮತ್ತು ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಹಸ್ತಾಂತರಿಸಿದ್ದರು. ಝಾಕಿರ್ ನಾಯಕ್‌ನ ವಿಡಿಯೋಗಳನ್ನು ನೋಡುತ್ತಿದ್ದ ಮುರ್ತಾಜಾ ಐಸಿಸ್‌ನ ಸಿದ್ಧಾಂತದಿಂದ ಪ್ರೇರಿತನಾಗಿದ್ದ ಎಂದು ಪೊಲೀಸರು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಏತನ್ಮಧ್ಯೆ, ಅವರ ಸಂಬಂಧಿಕರು ಮಾನಸಿಕ ಅಸ್ವಸ್ಥತೆಯ ಕಾರಣ ನೀಡಿ ಮುರ್ತಜಾನ ಕೃತ್ಯಗಳನ್ನು ಮುಚ್ಚಿಡಲು ಸಾಕಷ್ಟು ಪ್ರಯತ್ನಿಸಿದ್ದರು. ಈ ಪ್ರಕರಣದಲ್ಲಿ ವಾದಿಸುತ್ತಾ, ಪ್ರಾಸಿಕ್ಯೂಷನ್ ಮುರ್ತಾಜಾ ಅಬ್ಬಾಸಿ ಒಬ್ಬ ಮನೋರೋಗಿ ಎಂಬ ವಾದಗಳನ್ನ ನಿರಾಕರಿಸುತ್ತ ಈತ ಉನ್ನತ ಶಿಕ್ಷಣ ಪಡೆದವ ಎಂದು ವಿವರಿಸಿದರು ಮತ್ತು ಆತನ ಕೃತ್ಯಗಳನ್ನ ಉದ್ದೇಶಪೂರ್ವಕ ಭಯೋತ್ಪಾದಕ ದಾಳಿ ಎಂದು ವಿವರಿಸುತ್ತ ಮರಣದಂಡನೆ ಶಿಕ್ಷೆ ವಿಧಿಸಿದೆ.

ಹೆಂಡತಿ ಬೇಕಿಲ್ಲ ಜನ್ನತ್ ನಲ್ಲಿ 72 ಹೂರ್ ಸಿಗ್ತಾರೆ” ಎಂದಿದ್ದ ಮುರ್ತಜಾ

ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿಯ ಕೊಠಡಿಯಿಂದ ಎಟಿಎಸ್ ಹಲವು ಉಪಕರಣಗಳನ್ನು ವಶಪಡಿಸಿಕೊಂಡಿತ್ತು. ಇದರೊಂದಿಗೆ ಆತನ ಹಲವು ಸೋಶಿಯಲ್ ಮೀಡಿಯಾ ಅಕೌಂಟ್ ಗಳ ಬಗ್ಗೆಯೂ ಮಾಹಿತಿ ಪಡೆದಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಮುರ್ತಜಾ ತೀವ್ರ ಆಕ್ರೋಶಭರಿತನಾಗಿ ದಾಳಿ ನಡೆಸಲು ನಿರ್ಧರಿಸಿದ್ದ.

ಎಟಿಎಸ್ ಮೊರ್ತಜಾನ ಕೊಠಡಿಯಿಂದ 3 ಬ್ರಾಂಡ್ ಏರ್ ಗನ್‌ಗಳನ್ನು ವಶಕ್ಕೆ ಪಡೆದಿತ್ತು. ಅದಕ್ಕೂ ಮೊದಲೂ ಮೂರು ಏರ್ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮುರ್ತಾಜಾ ಸ್ನೈಪರ್ ಆಗಲು ಬಯಸಿದ್ದ ಆದ್ದರಿಂದ ಆತ ಏರ್‌ಗನ್ ಇಟ್ಟುಕೊಂಡಿದ್ದ. ಆತ ಜಿಹಾದ್ ಮತ್ತು ಜನ್ನತ್ ಬಗ್ಗೆ ಮಾತನಾಡುತ್ತಲೇ ಇರುತ್ತಿದ್ದ, ಆತ ಇಂಟರ್‌ನೆಟ್‌ನಲ್ಲಿ ಬಾಂಬ್‌ಗಳನ್ನು ತಯಾರಿಸುವ ಹೊಸ ವಿಧಾನಗಳನ್ನು ಹುಡುಕುತ್ತಲೇ ಇದ್ದ ಎಂದು ಎಟಿಎಸ್‌ಗೆ ತಿಳಿಸಿದ್ದ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿಯೆಂದರೆ ಈತನಿಗೆ ಈಗಾಗಲೇ ಮದುವೆಯಾಗಿತ್ತು ಆದರೆ ಹೆಂಡತಿಯನ್ನೂ ಬಿಟ್ಟಿದ್ದ ಹಾಗು ಹೆಂಡತಿ ಯಾರಿಗೆ ಬೇಕು ಜಿಹಾದ್ ಮಾಡಿ ಸತ್ತರೆ ಜನ್ನತ್ ನಲ್ಲಿ 72 ಹೂರ್ ಸಿಗ್ತಾರೆ ಅಂತಲೂ ಹೇಳಿದ್ದ.

Advertisement
Share this on...