ಗಾಂಧಿನಗರ:
ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಹತಾಶೆ ಮೂಡಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಭವಿಷ್ಯದ ಚಿಂತೆಯಲ್ಲಿದ್ದಾರೆ. ಪಕ್ಷ ತೊರೆದಿರುವ ಹಲವು ನಾಯಕರು ಪಕ್ಷದಲ್ಲಿ ನಾಯಕತ್ವದ ಕೊರತೆ ಬಗ್ಗೆ ಬಹಿರಂಗವಾಗಿಯೇ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗುಜರಾತ್‌ನ ನಾಯಕರು ಮತ್ತು ಕಾರ್ಯಕರ್ತರು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ತಮ್ಮ ಮಾತುಗಳನ್ನು ತಿಳಿಸುತ್ತಿದ್ದರು, ಆದರೆ ಅಹ್ಮದ್ ಪಟೇಲ್ ಅವರ ನಿಧನದ ನಂತರ ಅವರು ತಮ್ಮನ್ನು ತಾವು ಅಸಹಾಯಕರೆಂದು ಪರಿಗಣಿಸುತ್ತಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ, 2014 ರಿಂದ ಬಿಜೆಪಿ ಕಾಂಗ್ರೆಸ್‌ನ್ನ ನಿರಂತರವಾಗಿ ಸೋಲಿಸುತ್ತ ಬರುತ್ತಿರುವ ಹಿನ್ನೆಲೆಯಲ್ಲಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಹಾದಿ ಕಷ್ಟಕರವಾಗಿದೆ. ಕಾಂಗ್ರೆಸ್‌ನಲ್ಲಿ ಮುಂದಿನ ಭವಿಷ್ಯವನ್ನು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ, ಅದಕ್ಕಾಗಿಯೇ ಅವರು ಬಿಜೆಪಿ ಪಾಳೆಯಕ್ಕೆ ಹೋಗುತ್ತಿದ್ದಾರೆ.
ದಿಗಂಬರ ಕಾಮತ್ ಮತ್ತು ಮೈಕೆಲ್ ಲೋಬೋ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಬುಧವಾರ ಬಿಜೆಪಿ ಪಾಳಯಕ್ಕೆ ಸೇರ್ಪಡೆಗೊಂಡ ಗೋವಾ ಬಗ್ಗೆ ಉಲ್ಲೇಖವನ್ನು ಮಾಡಲಾಗುತ್ತಿದೆ. ಅವರಿಬ್ಬರೂ ಸೇರಿ ಇನ್ನೂ 6 ಶಾಸಕರನ್ನು ಕರೆದೊಯ್ದಿದ್ದಾರೆ. ಗೋವಾ ವಿಧಾನಸಭೆಯಲ್ಲಿ ಕೇವಲ 3 ಕಾಂಗ್ರೆಸ್ ಶಾಸಕರು ಉಳಿದಿದ್ದು, ಪ್ರಮುಖ ವಿರೋಧ ಪಕ್ಷದ ಟ್ಯಾಗ್ ಕೂಡ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಈ ಯಾತ್ರೆಯ ಬದಲು ಪಕ್ಷವನ್ನು ಬಲಪಡಿಸುವತ್ತ ಹೆಜ್ಜೆ ಇಡುವುದು ಅಗತ್ಯ ಎಂದು ಹಲವು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಸದ್ಯ ರಾಹುಲ್ ಗಾಂಧಿ ತಮ್ಮ ಕಾಂಗ್ರೆಸ್ ಪಕ್ಷದ ಮೂಲಕ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿದ್ದು ಈ ಯಾತ್ರೆ ಐದು ತಿಂಗಳ ಸುದೀರ್ಘ ಪಾದಯಾತ್ರೆಯಾಗಿದ್ದು 12 ರಾಜ್ಯಗಳ ಮೂಲಕ ಸಾಗಲಿದೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಿವಾದಗಳಲ್ಲಿ ಇರುತ್ತಾರೆ. ಕೆಲ ದಿನಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಹಿಟ್ಟು ಲೀಟರ್ ಗಟ್ಟಲೆ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು. ಇದರ ನಂತರ, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರ ವಿದೇಶಿ ಟಿ-ಶರ್ಟ್ ಕೂಡ ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾದರಿಯನ್ನ ಭೇಟಿ ಮಾಡಿದ್ದಕ್ಕೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು. ವಾಸ್ತವವಾಗಿ, ರಾಹುಲ್ ಗಾಂಧಿ ಭೇಟಿಯಾದ ಪಾದರಿ ಜೀಸಸ್ ಕ್ರೈಸ್ಟ್ ಮಾತ್ರ ನಿಜವಾದ ದೇವರು ಎಂದು ಬಣ್ಣಿಸಿದ್ದ ಅವರು, ಹಿಂದೂ ದೇವತೆಗಳ ಶಕ್ತಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು, ಆದರೆ ಪಾದರಿ ಹಾಗೆ ಹೇಳುತ್ತಿದ್ದರೂ ರಾಹುಲ್ ಗಾಂಧಿ ಮೌನವಾಗಿದ್ದರು. ಹಿಂದೂ ದೇವರು ಮತ್ತು ದೇವತೆಗಳನ್ನು ಉಲ್ಲೇಖಿಸಿ ಮಾಡಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಅವರು ಏನನ್ನೂ ಹೇಳಲಿಲ್ಲ. ನಂತರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಟೀಕೆಗೆ ಗುರಿಯಾದರು. ಮತ್ತೊಂದೆಡೆ ಬಿಜೆಪಿ ಕೂಡ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸಂಬಿತ್ ಪಾತ್ರಾ
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಪಾದರಿಯನ್ನ ಭೇಟಿ ಮಾಡಿರುವುದು ಹಿಂದೂ ವಿರೋಧಿ ಮುಖದ ಮಾಡೆಲ್ ಎಂದು ಕರೆದಿದ್ದಾರೆ. ಪಾದರಿಯನ್ನ ಭೇಟಿಯಾದ ನಂತರ ರಾಹುಲ್ ಗಾಂಧಿ ಅವರೇ ತಮ್ಮ ಅಸಲಿ ಮುಖ ಹಾಗು ಸತ್ಯವನ್ನು ಹೇಳಿದ್ದಾರೆ ಎಂದು ಹೇಳಿದರು. ಇದರೊಂದಿಗೆ ಇಡೀ ಕಾಂಗ್ರೆಸ್ ಜಮಾತ್ ನ ಸತ್ಯಾಂಶ ಬಯಲಾಗಿದೆ. ನವರಾತ್ರಿಗೂ ಮುನ್ನ ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದು, ಕಾಂಗ್ರೆಸ್ ಮೌನವಾಗಿ ಕೇಳುತ್ತಿದೆ ಎಂದರು. ಮತ್ತೊಂದೆಡೆ, ಬಿಜೆಪಿಯ ಈ ವಾಗ್ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಮುಖ ವಿಷಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಬಯಸುತ್ತಿದೆ. ನಿಜ ಹೇಳಬೇಕೆಂದರೆ, ಕಾಂಗ್ರೆಸ್ ನ ಭಾರತ್ ಜೋಡೋ ಅಭಿಯಾನದ ಯಶಸ್ಸಿನಿಂದ ಬಿಜೆಪಿಗೆ ಮರ್ಮಾಘಾತವಾಗಿದೆ ಹಾಗಾಗಿ ರಾಹುಲ್ ಗಾಂಧಿಯ ಮಾನಹಾನಿ ಮಾಡಲು ಇಂತಹ ಅಪಪ್ರಚಾರ ಮಾಡುತ್ತಿದೆ ಎಂದಿದ್ದಾರೆ. ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗುವಂತೆ ನಟಿಸುತ್ತಾರೆ, ಆದರೆ ಚುನಾವಣೆ ಮುಗಿದ ನಂತರ ಅವರ ಹಿಂದೂ ವಿರೋಧಿ ಮುಖವು ಸ್ವಯಂಚಾಲಿತವಾಗಿ ಎಲ್ಲರ ಮುಂದೆ ಬಹಿರಂಗಗೊಳ್ಳುತ್ತದೆ ಎಂದು ಪಾತ್ರಾ ಹೇಳಿದರು. ಮತ್ತೊಂದೆಡೆ, ಬಿಜೆಪಿ ಈ ವಿಷಯದ ಮೂಲಕ ರಾಹುಲ್ ಗಾಂಧಿಯವರ ಮಾನಹಾನಿ ಮಾಡುವ ಪ್ರಯತ್ನವನ್ನು ಮಾಡುತ್ತಿದೆ, ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.