ಗೋವಿನ ಈ ಪ್ರಯೊಜನಗಳನ್ನ ತಪ್ಪದೇ ಪಡೆಯಿರಿ ಎಂದು ಅಮೇರಿಕಾದ ತಜ್ಞರು ಕಿವಿ ಹಿಂಡಿ ಹೇಳುತ್ತಿದ್ದಾರೆ ಗೋಮಾತೆಯನ್ನ ಈಗಲಾದರೂ ಗೌರವದಿಂದ ಕಾಣಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 917 views

ಹಸು (ಗೋವು) ವಿಗೆ ಭಾರತದಲ್ಲಿ ಮಾತೆಯ ಸ್ಥಾನಮಾನ ಸಿಕ್ಕಿದೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಸುವನ್ನು ತಾಯಿಯಾಗಿ ಸ್ವೀಕರಿಸಲಾಗಿದೆ. ಇದರ ಹಿಂದಿನ ಒಂದು ದೊಡ್ಡ ಕಾರಣವೆಂದರೆ ಹಸು ಬಹಳ ಉಪಯುಕ್ತ ಪ್ರಾಣಿ. ಹೊಲಗಳನ್ನು ಉಳುಮೆ ಮಾಡಲು ಹಸುಗಳನ್ನು ಬಳಸಲಾಗುತ್ತದೆ, ಇದಲ್ಲದೆ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್ ಇತ್ಯಾದಿಗಳು ಮನೆಯ ಅಡುಗೆಮನೆಯ ಶೋಭೆಯನ್ನ ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಪೂಜಾ ಪಾಠ ಹಾಗು ಇತ್ಯಾದಿಗಳಲ್ಲಿ ಹಸುವಿನ ಗೋಮೀತ್ರ ಮತ್ತು ಸಗಣಿಯನ್ನ ಬಳಸಲಾಗುತ್ತದೆ.

Advertisement

ಹಸುವಿನ ಮಹತ್ವವನ್ನು ಕೇವಲ ಪುರಾಣಗಳಲ್ಲಿ ಮಾತ್ರವಲ್ಲ ವಾಸ್ತು ಶಾಸ್ತ್ರದಲ್ಲಿ ಗೋಮಾತೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹಸು ವಾಸಿಸುವ ಸ್ಥಳದಲ್ಲಿ, ಎಲ್ಲಾ ವಾಸ್ತು ದೋಷಗಳು ತಾವಾಗಿಯೇ ಹೋಗುತ್ತವೆ ಎಂದು ನಂಬಲಾಗಿದೆ. ಆದರೆ ಭಾರತದಲ್ಲಿ ಗೋಮಾತೆಯ ಬಗ್ಗೆಯಾಗಲಿ ಅಥವ ಅದರ ರಕ್ಷಣೆಯ ಬಗ್ಗೆಯಾಗಲಿ ಮಾತನಾಡಿದರೆ ಕೋಮುವಾದಿ ಪಟ್ಟ ಕಟ್ಟಿಬಿಡುತ್ತಾರೆ. ಅದೇನೋ ಹೇಳ್ತಾರಲ್ಲ ಶಂಖದಿಂದ ಬಂದರೆ ಮಾತ್ರ ತೀರ್ಥ ಅಂದ ಹಾಗೆ ಈಗ ಗೋಮಾತೆಯ ಮಹತ್ವದ ಬಗ್ಗೆ ಅಮೇರಿಕದ  ವಿಜ್ಞಾನಿಗಳು ಹೇಳುತ್ತಿದ್ದಾರೆ. ಬನ್ನಿ ಅವರು ಹೇಳಿದ್ದೇನು ಅನ್ನೋದನ್ನ ನಿಮಗೆ ತಿಳಿಸುತ್ತೇವೆ.

ನಿಮಗೆ ನೆನಪಿದೆಯೇ ನಾವೆಲ್ಲರೂ ಚಿಕ್ಕವರಿದ್ದಾಗ ನಮಗೆ ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್​​ನಂತಹ ಡೈರಿ ಉತ್ಪನ್ನಗಳನ್ನು ತಿನ್ನುವಂತೆ ನಮ್ಮ ಮನೆಯ ಹಿರಿಯರು ನಮಗೆ ತಿದ್ದಿ ಬುದ್ದಿ ಹೇಳುತ್ತಿದ್ದರು. ಆದರೆ ನಾವು ಬೆಳೆದು ದೊಡ್ಡವರಾದಂತೆ ತುಪ್ಪ ತಿನ್ನುವುದರಿಂದ ಫ್ಯಾಟ್ ಅಂಶ ದೇಹಕ್ಕೆ ಸೇರುತ್ತದೆ ಎನ್ನುವ ಆತಂಕ ಎಲ್ಲೆಡೆ ಹರಿದಾಡಿತು. ಇನ್ನೂ ದೇಸಿ ತುಪ್ಪ ಸೇವನೆ ಮಾಡಿ ಅಂದರೆ ಅದು ಫ್ಯಾಟ್​ ಅಂಶದಿಂದ ಕೂಡಿದೆ. ಅಲ್ಲದೇ ಹೃದಯಕ್ಕೆ ತೊಂದರೆ, ಅಪಧಮನಿಗಳನ್ನು ಬ್ಲಾಕ್​​ ಮಾಡುತ್ತದೆ ಎನ್ನುವ ಭಯ ಸೃಷ್ಟಿಯಾಗಿದೆ.

ದೇಸಿ ತುಪ್ಪ ಸಿದ್ಧವಾಗುವುದು ಹೇಗೆ?

ಹಾಲಿನಲ್ಲಿರುವ ಫ್ಯಾಟ್​ ಅಂಶಗಳಾದ ಮಲಾಯ್, ಕೆನೆ, ಬೆಣ್ಣೆಯನ್ನು ಹಾಲಿನಿಂದ ಬೇರ್ಪಡಿಸಿ 100 ಡಿಗ್ರಿ ಸೆಲ್ಷಿಯಸ್ನಲ್ಲಿ ಬಿಸಿ ಮಾಡಿ, ಆವಿ ಪ್ರಕ್ರಿಯೆಯಿಂದ ನೀರಿನಂಶವನ್ನು ಹೊರತೆಗೆಯಲಾಗುತ್ತದೆ. ನೀರನ್ನು ಬೇರ್ಪಡಿಸಿ ತೆಗೆದ ಹಾಲಿನ ಫ್ಯಾಟನ್ನು ಫಿಲ್ಟರ್ ಮಾಡಿ ಹಾಲಿನಂಶವನ್ನು ಸಂಪೂರ್ಣವಾಗಿ ಹೊರಗೆ ತೆಗೆಯಲಾಗುತ್ತದೆ.

ಆಯುರ್ವೇದ ವೈದ್ಯ ಮತ್ತು ನಮ್ಮ ಭಾರತದ ಅಡುಗೆ ಮನೆಯಲ್ಲಿ ಹಲವಾರು ವರ್ಷಗಳಿಂದ ಈ ಪದ್ಧತಿ ಬೆಳೆದು ಬಂದಿದೆ. ದೇಸಿ ತುಪ್ಪವನ್ನು ಘೃತ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ಘೃತ ಎಂದರೆ ತುಪ್ಪ ಎಂದು ಅರ್ಥ. ನಮ್ಮ ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಹೋಮಗಳಲ್ಲಿ ತುಪ್ಪದ ಬಳಕೆ ಸಾಮಾನ್ಯವಾಗಿದೆ.

ಆಯುರ್ವೇದ ತುಪ್ಪದ ಬಗ್ಗೆ ಏನು ಹೇಳುತ್ತದೆ?

ಯುಎಸ್ ಲೈಬ್ರರಿ ಆಫ್ ಮೆಡಿಸಿನ್ ಲೇಖಕರಾದ ಹರಿ ಶರ್ಮಾ, ಕ್ಸಿಯೊಯಿಂಗ್ ಜಾಂಗ್ ಮತ್ತು ಚಂದ್ರಧರ್ ದ್ವಿವೇದಿ ಅವರು ಪ್ರಕಟಿಸಿದ ಪೀರ್-ರಿವ್ಯೂಡ್ ಪೇಪರ್‌ನಲ್ಲಿರುವ ಕೆಲವು ಅಂಶಗಳು ಗಮನ ಸೆಳೆಯುತ್ತವೆ. ದಕ್ಷಿಣ ಡಕೋಟಾ ರಾಜ್ಯ ವಿಶ್ವವಿದ್ಯಾಲಯದ ಔಷಧಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರು ಚಂದ್ರಧರ್ ದ್ವಿವೇದಿ.

ಸೀರಮ್ ಲಿಪಿಡ್ ಮಟ್ಟಗಳು ಮತ್ತು ಮೈಕ್ರೋಸೋಮಲ್ ಲಿಪಿಡ್ ಪೆರಾಕ್ಸಿಡೇಶನ್ ಮೇಲೆ ತುಪ್ಪದ ಪರಿಣಾಮಗಳನ್ನು ತಜ್ಞರು ಗಮನಿಸಿದಾಗ ಹಲವಾರು ಅಂಶಗಳು ಬೆಳಕಿಗೆ ಬಂದಿವೆ. ಕಳೆದ ಹಲವಾರು ದಶಕಗಳಲ್ಲಿ ಏಷ್ಯಾದ ಭಾರತೀಯರಲ್ಲಿ ಸಿಎಡಿ ಅಂದರೆ ಪರಿಧಮನಿಯ ಕಾಯಿಲೆಗೆ ತುತ್ತಾಗಿರುವುದು ಕಂಡು ಬಂದಿದ್ದು, ಇದಕ್ಕೆ ತುಪ್ಪದ ಸೇವನೆಯೇ ಕಾರಣವೆಂದು ಉಲ್ಲೇಖಿಸಲಾಗಿದೆ.

ತುಪ್ಪವು ಸ್ಯಾಚುರೇಟೆಡ್​ ಫ್ಯಾಟಿ ಆಸಿಡ್ಸ್, ಕೊಲೆಸ್ಟ್ರಾಲ್​ ಹಾಗೂ ಕಾಯಿಸಿದ ತುಪ್ಪದಲ್ಲಿನ ಕೊಲೆಸ್ಟ್ರಾಲ್​ ಆಕ್ಸಿಡೀಕರಣದಿಂದ ಆರೋಗ್ಯಕರ ಆಹಾರಗಳ ಪಟ್ಟಿಯಿಂದ ಕುಸಿದಿದೆ.

ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ತುಪ್ಪವು ಸೇವಿಸಬಹುದಾದ ಒಳ್ಳೆಯ ಕೊಬ್ಬು ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ

ಜಠರಾಗ್ನಿಯನ್ನು ಸುಧಾರಿಸುವುದಲ್ಲದೇ ಹೀರಿಕೊಳ್ಳುವಿಕೆ ಮತ್ತು ಸಂಯೋಜನೆಯನ್ನು ವೃದ್ಧಿಸುತ್ತದೆ. ಇದು ದೇಹದ ಎಲ್ಲಾ ಅಂಗಾಂಶಗಳ (ಧಾತು) ಸೂಕ್ಷ್ಮ ಸಾರವಾದ ಓಜಸ್​ ಅನ್ನು ಪೋಷಿಸುತ್ತದೆ.

ಅಪರಿಮಿತ ನೆನಪಿನ ಶಕ್ತಿಯನ್ನು ನೀಡುವುದಲ್ಲದೇ ನರ ಮತ್ತು ಮೆದುಳಿನ ವ್ಯವಸ್ಥೆಯನ್ನು ಬಲಗೊಳಿಸುತ್ತದೆ.

ಇದು ಸಂಯೋಜಕ ಅಂಗಾಂಶಗಳನ್ನು ಮೃದುತ್ವವನ್ನು ತರುತ್ತದೆ. ಇದರಿಂದಾಗಿ ದೇಹವು ಹೆಚ್ಚು ನಯವಾಗಿರುತ್ತದೆ.

ಮೂರು ದೋಷಗಳಾದ ವಾತ, ಪಿತ್ತ ಮತ್ತು ಕಫವನ್ನು ಸುಧಾರಿಸುತ್ತದೆ. ಕಫ ಪ್ರಕೃತಿಯವರು ಮಿತವಾಗಿ ಸ್ವೀಕರಿಸಬೇಕು.

ಗಿಡಮೂಲಿಕೆಗಳ ಔಷಧಿ ತಯಾರಿಕೆಯಲ್ಲಿ ತುಪ್ಪದ ಬಳಕೆ ಇದೆ ಎನ್ನುವುದು ದ್ವಿವೇದಿಯವರ ಅಭಿಪ್ರಾಯವಾಗಿದೆ. ತುಪ್ಪವು ಪವಿತ್ರ ಸ್ಥಾನವನ್ನು ಹೊಂದಿದ್ದು, ಇದರೊಟ್ಟಿಗೆ ಔಷಧಿ ಸ್ವೀಕರಿಸುವುದು ದೈಹಿಕ ಮತ್ತು ಅಧ್ಯಾತ್ಮಿಕ ಆರೋಗ್ಯ ಎರಡಕ್ಕೂ ಉತ್ತಮವಾಗಿದೆ.

ಆಧ್ಯಾತ್ಮಿಕ ಅಂಶಗಳ ಹೊರತಾಗಿಯೂ, ತುಪ್ಪದ ಸೇವನೆಯೂ ಖನಿಜ, ಜೀವಸತ್ವಗಳನ್ನು ಪೂರೈಸುತ್ತದೆ. ತುಪ್ಪದೊಟ್ಟಿಗೆ ತರಕಾರಿ, ಬಿಸಿ ಆಹಾರವನ್ನು ಸೇವಿಸುವುದು ಪೋಷಣೆಗೆ ನೆರವಾಗುತ್ತದೆ. ಮಕ್ಕಳು ತುಪ್ಪದ ರುಚಿ ಇಷ್ಟಪಡುವುದಲ್ಲದೇ, ಮಕ್ಕಳು ಹೆಚ್ಚು ಊಟ ಮಾಡಲು ಸಹ ಇದು ಕಾರಣವಾಗುತ್ತದೆ.

ಈ ಅಧ್ಯಯನವನ್ನು ಅಮೆರಿಕದ ನ್ಯೂ ಬೆಥೆಸ್ಡಾ, ಲ್ಯಾಂಕಾಸ್ಟರ್ ಫೌಂಡೇಶನ್ ಒದಗಿಸಿದ ನಿಧಿಯಿಂದ ಮಾಡಲಾಗಿದೆ.

ಈ ಪರೀಕ್ಷೆಗಳು ಹೇಗೆ ನಡೆದವು?

ಹೃದಯದ ಆರೋಗ್ಯದ ಮೇಲೆ ತುಪ್ಪದ ಕೆಟ್ಟ ಅಥವಾ ಉತ್ತಮ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ತಜ್ಞರು ಇಲಿಗಳ ಮೇಲೆ ಅಧ್ಯಯನ ನಡೆಸಿದರು.

ತುಪ್ಪ ಭರಿತ ಆಹಾರವನ್ನು ಎರಡು ಸೆಟ್ ಇಲಿಗಳಿಗೆ ನೀಡಲಾಗುತ್ತಿತ್ತು. ಒಂದು ಸೆಟ್ ಆರೋಗ್ಯಕರ ಪ್ರಾಣಿಗಳು, ಇನ್ನೊಂದು ಸೆಟ್ ಇನ್ಬ್ರೆಡ್ ಇಲಿಗಳಾಗಿದ್ದು, ಕಾಯಿಲೆಯ ತಳೀಯ ಸೃಷ್ಟಿಯಾಗಿದ್ದವು.

ಆರೋಗ್ಯಕರ ಪ್ರಾಣಿಗಳಿಗೆ ಶೇಕಡಾ 10 ರಷ್ಟು ತುಪ್ಪ ನೀಡುವುದರಿಂದ ಹೃದಯದ ಕಾಯಿಲೆ, ಕೊಲೆಸ್ಟ್ರಾಲ್​ ಉಂಟಾಗುವುದಿಲ್ಲ ಎನ್ನುವುದು ಸಂಶೋಧಕರಿಗೆ ತಿಳಿಯಿತು. ಆದರೆ ಕಾಯಿಲೆಗಳಿಗೆ ಮುಂದಾದ ಎರಡನೇ ಸೆಟ್‌ನಲ್ಲಿ, ತುಪ್ಪ ಭರಿತ ಆಹಾರ ಸೇವಿನೆಯಿಂದ ಅದರ ರಕ್ತದಲ್ಲಿನ ಅನಾರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಪ್ರಮಾಣ ಹೆಚ್ಚಾಗಿದ್ದು ಕಂಡು ಬಂದಿದೆ.

ಈ ನಿಟ್ಟಿನಲ್ಲಿ ಆರೋಗ್ಯವಂತ ವ್ಯಕ್ತಿಗಳ ಆಹಾರದಲ್ಲಿ ಸೇರಿಸಲಾದ ತುಪ್ಪ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಹಾಗೆಂದು ಅಡುಗೆ ಎಣ್ಣೆಯ ಬದಲಿಗೆ ತುಪ್ಪವನ್ನು ಬಳಕೆ ಮಾಡಬೇಕು ಎಂದಲ್ಲ.

ಮನುಷ್ಯನ ಮೇಲೆ ಈ ಸಂಶೋಧನೆಯ ಸಾರಂಶ

ಭಾರತದ ಹಳ್ಳಿಗಳಲ್ಲಿ ತುಪ್ಪವನ್ನು ಸೇವಿಸುವ ಪುರುಷರಲ್ಲಿ ಪರಿಧಮನಿಯ ಹೃದಯ ಕಾಯಿಲೆಯ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸಂಶೋಧನೆ ತೋರಿಸುತ್ತದೆ.

ಸೋರಿಯಾಸಿಸ್ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧೀಯ ತುಪ್ಪದ ಸೇವನೆಯಿಂದ ಸೀರಮ್ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಗಳು, ಫಾಸ್ಫೋಲಿಪಿಡ್​​ಗಳು ಮತ್ತು ಕೊಲೆಸ್ಟ್ರಾಲ್ ಎಸ್ಟರ್ ಕಡಿಮೆಯಾಗಿದೆ. ಸೋರಿಯಾಸಿಸ್ ರೋಗಲಕ್ಷಣಗಳಲ್ಲೂ ಗಮನಾರ್ಹ ಸುಧಾರಣೆಗಳಿವೆ.

ತುಪ್ಪದೊಂದಿಗಿನ ಗಿಡಮೂಲಿಕೆಗಳ ಮಿಶ್ರಣವಾಗಿ MAK-4, ಹೈಪರ್‌ಲಿಪಿಡೆಮಿಕ್ ರೋಗಿಗಳಲ್ಲಿ ಆಕ್ಸಿಡೀಕರಣಕ್ಕೆ ಎಲ್​ಡಿಎಲ್​​ ಪ್ರತಿರೋಧವನ್ನು ಹೆಚ್ಚಿಸಿದ್ದು, ಸೀರಮ್ ಮೊತ್ತದ ಕೊಲೆಸ್ಟ್ರಾಲ್, ಎಚ್​​ಡಿಎಲ್, ಎಲ್​ಡಿಎಲ್​ ಅಥವಾ ಟ್ರೈಗ್ಲಿಸರೈಡ್ಗಳ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.

ತುಪ್ಪವನ್ನು ಹೊಂದಿರುವ ಇತರ ಮಿಶ್ರಣಗಳು ಹೆಪಟೊಪ್ರೊಟೆಕ್ಟಿವ್ ಪರಿಣಾಮಗಳು, ಆಂಟಿಕಾನ್ವಲ್ಸೆಂಟ್ ಚಟುವಟಿಕೆ, ಸ್ಮರಣೆಯ ವೃದ್ಧಿಯ ಮೇಲಿನ ಪರಿಣಾಮಗಳು ಮತ್ತು ಗಾಯದ ಗುಣಪಡಿಸುವಿಕೆಯ ವರ್ಧನೆಯನ್ನು ತೋರಿಸಿದೆ.

ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಆರೋಗ್ಯದ ಮೇಲೆ ತುಪ್ಪದ ಪ್ರಯೋಜನಕಾರಿ ಪರಿಣಾಮಗಳನ್ನು ತಿಳಿಸಿದೆ. ಆಯುರ್ವೇದ ಔಷಧ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ತುಪ್ಪವನ್ನು ಚಿಕಿತ್ಸೆಯ ಒಂದು ಭಾಗವಾಗಿ ಬಳಸಲಾಗುತ್ತಿದೆ . ಇದಕ್ಕೆ ಪೂರಕವಾಗಿ ಈ ಸಕಾರಾತ್ಮಕ ಸಂಶೋಧನಾ ಆವಿಷ್ಕಾರಗಳು ಬೆಂಬಲಿಸುತ್ತವೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಗೋವಿನ ಜೊತೆ ಸಮಯ ಕಳೆಯುವುದಕ್ಕೂ ಅಮೇರಿಕದಲ್ಲಿ ಒಂದು ಗಂಟೆಗೆ 200 ಡಾಲರ್ (ಸುಮಾರು 15,000) ಚಾರ್ಜ್ ಮಾಡುತ್ತಾರೆ

ಕ್ಯಾಲಿಫೋರ್ನಿಯಾ: ಭಾರತದ ಪ್ರತಿಯೊಂದು ಸಂಪ್ರದಾಯ, ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಕುಳಿತಿದ್ದರೆ, ಭಾರತೀಯರು ನಿಜಕ್ಕೂ ತಲೆತಗ್ಗಿಸಬೇಕಾದ ಟ್ರೆಂಡ್‌ ಒಂದು ಅಮೆರಿಕದಲ್ಲಿ ಶುರುವಾಗಿದೆ. ಭಾರತೀಯರು ಗೋಮಾತೆ ಎಂದು ಪೂಜಿಸುವ ಹಸುಗಳನ್ನು ತಬ್ಬಿಕೊಂಡರೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು ಎಂದು ಅರ್ಥ ಮಾಡಿಕೊಂಡಿರುವ ಅಮೆರಿಕನ್ನರು ಇದೀಗ ಹಣ ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.

ಕೌ ಹಗ್ಗಿಂಗ್‌ (COW HUGGING- ಹಸುಗಳನ್ನು ಅಪ್ಪಿಕೊಳ್ಳುವುದು) ಎಂಬ ಟ್ರೆಂಡ್‌ ಶುರುವಾಗಿದ್ದು, ಒಮ್ಮೆ ಹಸು ಅಪ್ಪಿಕೊಳ್ಳಲು ಒಂದು ತಾಸಿಗೆ 200 ಡಾಲರ್‌ (ಸುಮಾರು 15 ಸಾವಿರ ರೂ.) ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.

ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್‌ಗಳನ್ನು ಆರಂಭಿಸಲಾಗಿದೆ. ನಂಬಲು ಅಸಾಧ್ಯ ಅಂದರೆ, ಜುಲೈ ವರೆಗೂ ಬುಕಿಂಗ್‌ ಆಗಿದ್ದು, ಹಸುಗಳು ಸಿಗುತ್ತಿಲ್ಲವಂತೆ! ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸೆಂಚುರಿ, ಅಮೆರಿಕದ ಅಭಯಾರಣ್ಯಗಳಲ್ಲಿ ಹಸುಗಳನ್ನು ತಬ್ಬಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕೋವಿಡ್‌ನ ಈ ಅವಧಿಯಲ್ಲಿ ಭಯಭೀತರಾಗಿರುವ ಸಂದರ್ಭದಲ್ಲಿ ಹಸುಗಳನ್ನು ತಬ್ಬಿಕೊಂಡರೆ ಉಲ್ಲಾಸದ ಭಾವನೆ ಮೂಡುತ್ತದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ, ಇದು ಸಾಬೀತಾಗಿದೆ ಕೂಡ ಎನ್ನುತ್ತಾರೆ ಇಲ್ಲಿಯ ಜನರು.

ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ ಎನ್ನುತ್ತಾರೆ ಅವರು. ಅಮೆರಿಕ ಮಾತ್ರವಲ್ಲದೇ ನೆದರ್ಲೆಂಡ್‌, ಸ್ವಿಜರ್ಲ್ಯಾಂಡ್, ಬ್ರಿಟನ್‌ನಲ್ಲಿಯೂ ಈ ರೀತಿಯ ಚಿಕಿತ್ಸಾ ಪದ್ಧತಿ ಇದೆ ಎನ್ನಲಾಗಿದೆ. ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.

ಭಾರತದಲ್ಲಿ ಗೋಮಾತೆಗಿರುವ ಮಹತ್ವ ಹಾಗು ಅದರಿಂದ ಸಿಗುವ ವೈಜ್ಞಾನಿಕ ಚಿಕಿತ್ಸೆಗಳು

ವಾಸ್ತು ದೋ-ಷ-ಕ್ಕೆ ಮುಕ್ತಿ ನೀಡುತ್ತದೆ ಗೋಮಾತೆ

ಮಾನ್ಯತೆಯ ಪ್ರಕಾರ ಹಸು ಯಾವ ಜಾಗದಲ್ಲಿ ನಿಂತು ಶಾಂತಿಯಿಂದ ಉಸಿರಾಡುವ ಸ್ಥಳದಲ್ಲಿ ಎಲ್ಲಾ ವಾಸ್ತು ದೋ-ಷ-ಗಳು ದೂರವಾಗುತ್ತವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಯಾವ ಮನೆಯಲ್ಲಿ ಗೋಮಾತೆ ಸಂತೋಷದಿಂದ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿಯ ವಾಸವೂ ಇರುತ್ತದೆ ಗೋಮಾತೆಯ ಕೊರಳಿಗೆ ಗಂಟೆಯನ್ನು ಕಟ್ಟಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಏಕೆಂದರೆ ಹಸುವಿನ ಕೊರಳಿಗೆ ಕಟ್ಟಿದ ಗಂಟೆ ಶಬ್ದವಾಗುವುದರಿದ ಗೋಮಾತೆಯ ಆರತಿಯಾದಂತೆ ಎಂದು ಹೇಳಲಾಗುತ್ತದೆ.

ನಿಮ್ಮ ಮನೆಯಲ್ಲಿ ಹಸುಗಳಿಲ್ಲ ಆದರೆ ಹಸುಗಳು ಪ್ರತಿದಿನ ಮನೆಯ ಮುಂದೆ ಬರುತ್ತವೆಯೆಂದರೆ, ಅವು ಒಳ್ಳೆಯ ದಿನಗಳ ಸಂಕೇತಗಳಾಗಿವೆ. ಅದೇ ಸಮಯದಲ್ಲಿ, ವಾಸ್ತು ದೋ-ಷ-ಗಳು ಮನೆಯ ಮುಖ್ಯ ದ್ವಾರದಿಂದ ಕಣ್ಮರೆಯಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ.

ಗೋಮಾತೆಯ ಸೇವೆಯಿಂದ ಈ ಲಾಭಗಳಾಗುತ್ತವೆ

ಗೋಮಾತೆಯನ್ನ ನಿಯಮಿತವಾಗಿ ಪೂಜಿಸುವ ಮತ್ತು ಸೇವೆ ಮಾಡುವ ಜನರಿಗೆ ಕಷ್ಟ ಕಾರ್ಪಣ್ಯಗಳು ಹತ್ತಿರವು ಸುಳಿಯಲ್ಲ ಎಂದು ನಂಬಲಾಗಿದೆ. ಅಂತಹ ಜನರ ಮೇಲಿನ ಎಲ್ಲಾ ವಿಪತ್ತುಗಳ ನಾಶಕ್ಕೆ ಗೋಮಾತೆ ಕಾರಣಳಾಗುತ್ತಾಳೆ.  ಗೋಮಾತೆಯಲ್ಲಿ ದೇವ ದೇವಾದಿಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ, ಅಂಥದ್ರಲ್ಲಿ ಗೋಮಾತೆ ಯಾವ್ಯಾವ ಸ್ಥಳಗಳಿಗೆ ಹೋಗುತ್ತದೆಯೋ ಅಲ್ಲಿ ಹಾ-ವು ಚೇ-ಳು-ಗಳು ಎಂದಿಗೂ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಗೋಮಾತೆಯ ಬಾಲದಿಂದ ದೂರವಾಗುತ್ತದೆ ದೃಷ್ಟಿ ದೋ-ಷ

ಪೌರಾಣಿಕ ಮಾನ್ಯತೆಗಳ ಪ್ರಕಾರ ಹಸುವಿನ ಸಗಣಿಯಲ್ಲಿ ತಾಯಿ ಲಕ್ಷ್ಮಿ ನಿವಾಸವಿರುತ್ತದೆ ಮತ್ತು ಗೋಮಾತೆಯ ಒಂದು ಕಣ್ಣಿನಲ್ಲಿ ಸೂರ್ಯನಿದ್ದರೆ ಮತ್ತೊಂದು ಕಣ್ಣಿನಲ್ಲಿ ಚಂದ್ರ ದೇವ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಇದಲ್ಲದೆ, ಹಸುವಿನ ಹಾಲಿನಲ್ಲಿ ಕೆಲ ಅದ್ಭುತ ತತ್ವಗಳಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋ-ಗ-ಗಳ ವಿ-ರು-ದ್ಧ ಹೋರಾಡುವ ಸಾಮರ್ಥ್ಯವನ್ನು ಮನುಷ್ಯನಿಗೆ ನೀಡುತ್ತದೆ.

ಗೋಮಾತೆಯ ಬಾಲದಲ್ಲಿ ಹನುಮಂತ ನೆಲೆಸಿರುತ್ತಾನೆ. ಹಾಗಾಗಿ ಯಾರ ಮೇಲಾದರೂ ಕೆಟ್ಟ ದೃಷ್ಟಿ ಬಿದ್ದರೆ ಆಗ ಗೋಮಾತೆಯ ಬಾಲದಿಂದ ದೃಷ್ಟಿ ತೆಗೆಯಲಾಗುತ್ತದೆ

ರೋ-ಗ-ಗಳ ನಾ-ಶ-ಪಡಿಸುತ್ತದೆ ಗೋಮಾತೆ

ಗೋಮಾತೆಯ ಬೆನ್ನ ಮೇಲಿರುವ ಡುಬ್ಬದ ಮೇಲೆ ಸೂರ್ಯದೇವ ಕೇತು ನಾಡಿಯಿರುತ್ತದೆ. ಮಾನ್ಯತೆಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ ಗೋಮಾತೆಯ ಬೆನ್ನ ಮೇಲೆ ಕೈ ಸವರುವುದರಿಂದ ಎಲ್ಲ ರೋ-ಗ-ಗಳೂ ನಾ-ಶ-ವಾಗುತ್ತವೆ. ಗೋವಿಗೆ ಮೇವು ತನ್ನಿಸುವುದರಿಂದ 33 ಕೋಟಿ ದೇವತೆಗಳ ಸಂತೃಪ್ತರಾಗುತ್ತಾರೆ. ಯಾಕಂದ್ರೆ ಗೋಮಾತೆಯಲ್ಲಿ 33 ಕೋಟಿ ದೇವತೆಗಳಿದ್ದಾರೆ ಎಂಬ ನಂಬಿಕೆಯಿದೆ. ಅಂಥದ್ರಲ್ಲಿ ಅಂತಹ ಗೋಮಾತೆಗೆ ಮೇವು ತಿನ್ನಿಸಲೇಬೇಕು.

ಅದೃಷ್ಟ ತರುತ್ತಾಳೆ ಗೋಮಾತೆ

ನೀವು ಮಾಡುವ ಕೆಲಸಗಳು ಫೇಲ್ ಆಗುತ್ತಿದ್ದರೆ ಮತ್ತು ಅದೃಷ್ಟವು ನಿಮಗೆ ಸಾಥ್ ನೀಡದಿರುತ್ತಿದ್ದತೆ ನೀಡದಿದ್ದರೆ, ಈ ಕ್ರಮಗಳು ನಿಮಗೆ ತುಂಬಾ ಪರಿಣಾಮಕಾರಿಯಾಗಿ ಸಾಬೀತಾಗಬಹುದು. ಹಾಗಾಗಿ ನಿಮ್ಮ ಅದೃಷ್ಟವನ್ನ ಖುಲಾಯಿಸಲು ಸ್ವಲ್ಪ ಬೆಲ್ಲವನ್ನು ಅಂಗೈಯಲ್ಲಿ ಇರಿಸಿ ಅದನ್ನ ಹಸುವಿನ ನಾಲಿಗೆಯಿಂದ ನೆಕ್ಕಿಸಿ‌.

ಒಂದು ವೇಳೆ ನಿಮ್ಮ ಅಂಗೈಯಲ್ಲಿರುವ ಬೆಲ್ಲವನ್ನ ಗೋಮಾತೆ ತನ್ನ ನಾಲಿಗೆಯಿಂದ ನೆಕ್ಲಿದರೆ ನಿಮ್ಮ ಅದೃಷ್ಟ ಖುಲಾಯಿಸಿತೆಂದೇ ಅಂದಯಕೊಳ್ಳಿ. ಅದರ ಜೊತೆಗೆ ಗೋಮಾತೆಯ ನಾಲ್ಕೂ ಕಾಲುಗಳ ಮಧ್ಯದಿಂದ ಪರಿಕ್ರಮ ಮಾಡುವುದರಿಂದ ಮನುಷ್ಯ ಭ-ಯ-ಮುಕ್ತನಾಗುತ್ತಾನೆ.

ನವಗ್ರಹಗಳನ್ನ ಈ ರೀತಿಯಾಗಿ ಶಾಂತಗೊಳಿಸುತ್ತೆ ಗೋಮಾತೆ

ಹಿಂದೂ ಧರ್ಮದ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಕಪ್ಪು ಬಣ್ಣದ ಗೋಮಾತೆಯನ್ನ ಪೂಜಿಸುವುದರಿಂದ ನವಗ್ರಹಗಳು ಶಾಂತವಾಗುತ್ತವೆ. ಅಷ್ಟೇ ಅಲ್ಲ ವ್ಯಕ್ತಿ ಸಂಪೂರ್ಣ ವಿಧಿವಿಧಾನಗಳೊಂದಿಗೆ ಗೋಮಾತೆಯ ಪೂಜೆ ಮಾಡಿದರೆ ಅಂತಹ ವ್ಯಕ್ತಿಗೆ ಶ-ತ್ರು-ಗಳಿಂದ ಮುಕ್ತಿ ಸಿಗುತ್ತದೆ.

ನಿಮ್ಮ ಯಾವುದಾದರೂ ಕೆಲಸಗಳು ಫೇಲ್ ಆಗುತ್ತಿದ್ದರೆ ಅಥವ ನಿಮಗೆ ಕಷ್ಟಗಳು ದೂರವಾಗುತ್ತಿರಲಿಲ್ಲವೆಂದರೆ ಆ ವಿಷಯವನ್ನು ನೀವು ಯಾರ ಹತ್ತಿರವೂ ಹೇಳಿಕೊಳ್ಳಲಾಗದಿದ್ದರೆ ಅದನ್ನ ನೀವು ಗೋಮಾತೆಯ ಕಿವಿಯಲ್ಲಿ ಹೇಳಿ. ನಿಮ್ಮ ನಿಂತ ಕೆಲಸಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತವೆ‌.

Advertisement
Share this on...