ಜಗತ್ತಿನ ಅತಿ ದೊಡ್ಡ ಮತ ಇಸ್ಲಾಂ, ಆದರೆ ಜಗತ್ತಿನಲ್ಲಿ ಒಬ್ಬೇ ಒಬ್ಬ ಮುಸ್ಲಿಮನಿರದ ದೇಶಗಳೂ ಇವೆ, ಆ ದೇಶಗಳ್ಯಾವುವು ಗೊತ್ತಾ?

in Uncategorized 2,462 views

ಕೆಲ ಸಮಯದ ಹಿಂದೆ ಸಾಮಾಜಿಕ ಜಾಲತಾಣವಾದ Quora ನಲ್ಲಿ ಕೆಲವರು ಮುಸ್ಲಿಮರೇ ಇರದ ಅಥವ ಮುಸ್ಲಿಮರು ವಾಸಿಸದ ದೇಶ ಯಾವುದು? ಎಂದು ಕೇಳಿದ್ದರು (List of countries where muslims doesn’t live). ಅನೇಕ ಜನರು ತಮ್ಮ ಜ್ಞಾನಕ್ಕೆ ಅನುಗುಣವಾಗಿ ವಿಭಿನ್ನ ಉತ್ತರಗಳನ್ನು ನೀಡಿದ್ದರು. ಕೆಲವು ಉತ್ತರಗಳು ಸರಿಯಾಗಿದ್ದು, ಕೆಲವು ಅಪೂರ್ಣವಾಗಿದ್ದರೆ ಇನ್ನು ಕೆಲವರು ತಪ್ಪು ಉತ್ತರ ನೀಡಿದ್ದರು. ಇಂದು ನಾವು ಇದಕ್ಕೆ ಸರಿಯಾದ ಉತ್ತರವನ್ನು ನಿಮಗೆ ತಿಳಿಸಲಿದ್ದೇವೆ.

Advertisement

ಇಸ್ಲಾಂ ಮತ (Islam Religion) ಪ್ರಪಂಚದ ಅನೇಕ ದೇಶಗಳಲ್ಲಿ ಹರಡಿದೆ. ಇಸ್ಲಾಮಿಕ್ ನಂಬಿಕೆಗಳ ಆಧಾರದ ಮೇಲೆ ಅನೇಕ ದೇಶಗಳು ರೂಪುಗೊಂಡಿವೆ. ಇವುಗಳಲ್ಲಿ ಪಾಕಿಸ್ತಾನ, ಮಾಲ್ಡೀವ್ಸ್, ಇಂಡೋನೇಷ್ಯಾ, ಅಫ್ಘಾನಿಸ್ತಾನದಂತಹ ಹಲವು ದೇಶಗಳು ಸೇರಿವೆ. 2011 ರ ಜನಗಣತಿಯ ಆಧಾರದ ಮೇಲೆ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯು 17 ಕೋಟಿಯಷ್ಟಿತ್ತು. ಮಧ್ಯ ಏಷ್ಯಾದ ದೇಶಗಳಲ್ಲಿ ಈ ಜನಸಂಖ್ಯೆಯು ಇನ್ನೂ ಹೆಚ್ಚು, ಆದರೆ ಮುಸ್ಲಿಮರೇ ಇಲ್ಲದ (Countries where no muslims live) ಹಲವಾರು ದೇಶಗಳು ಜಗತ್ತಿನಲ್ಲಿವೆ ಅನ್ನೋದು ನಿಮಗೆ ಗೊತ್ತೆ?. ಈ ಎಲ್ಲಾ ದೇಶಗಳಲ್ಲಿ, ಒಂದು ನಿರ್ದಿಷ್ಟ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮದ ಜನರು ವಾಸಿಸದ ಪ್ರಮುಖ ದೇಶವೂ ಇದೆ (Which country has no muslims).

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣವಾದ Quora ನಲ್ಲಿ ಯಾರೋ ಒಬ್ಬರು ಜಗತ್ತಿನ ಯಾವ ದೇಶದಲ್ಲಿ ಮುಸ್ಲಿಮರಿಲ್ಲ? ಎಂದು ಪ್ರಶ್ನೆ ಕೇಳಿದ್ದರು. ಅನೇಕ ಜನರು ತಮ್ಮ ಜ್ಞಾನಕ್ಕೆ ಅನುಗುಣವಾಗಿ ವಿಭಿನ್ನ ಉತ್ತರಗಳನ್ನು ನೀಡಿದ್ದರು. ಕೆಲವು ಉತ್ತರಗಳು ಸರಿಯಾಗಿದ್ದು ಇನ್ನು ಕೆಲವರದ್ದು ಅಪೂರ್ಣವಾಗಿದ್ದರೆ ಇನ್ನು ಕೆಲವರು ತಪ್ಪು ಉತ್ತರ ನೀಡಿದ್ದರು. ಈ ಪ್ರಶ್ನೆಗೆ ಜನರು ಏನು ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಮೊದಲು ನೋಡೋಣ ಬನ್ನಿ. ಒಬ್ಬ ಯೂಸರ್ ಉತ್ತರಿಸುತ್ತ- “ಜಗತ್ತಿನಲ್ಲಿ ಮುಸ್ಲಿಮರು ಬಿಡಿ ಕ್ರಿಶ್ಚಿಯನ್ ಬಿಟ್ಟು ಬೇರಾವ ಧರ್ಮದವರೂ ಇರದ ಒಂದು ದೇಶವಿದೆ ಅದು ವ್ಯಾಟಿಕನ್ ಸಿಟಿ” ಎಂದಿದ್ದಾರೆ. ಮತ್ತೊಂದೆಡೆ ಮೊಹಮ್ಮದ್ ಮಜೀದ್, ದೀಪಿಕಾ ಚೌಧರಿ ಮುಂತಾದವರು ಜಪಾನ್ ಹೆಸರನ್ನು ಉಲ್ಲೇಖಿಸಿದ್ದಾರೆ.

ಜಗತ್ತಿನ ಯಾವ ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ?

ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ವೆಬ್‌ಸೈಟ್‌ನ ವರದಿಯ ಪ್ರಕಾರ, 2022 ರಲ್ಲಿ ಆಫ್ರಿಕಾದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಮಾರಿಟಾನಿಯಾ ಎಂದು ಹೆಸರಿಸಲಾದ ದೇಶದ ಜನಸಂಖ್ಯೆಯು 47 ಲಕ್ಷಕ್ಕೂ ಹೆಚ್ಚಿದೆ ಆದರೆ ಇಲ್ಲಿ ಮುಸ್ಲಿಮರ ಜನಸಂಖ್ಯೆಯು 38 ಲಕ್ಷಕ್ಕೂ ಹೆಚ್ಚು. ದೇಶಗಳ ಆಧಾರದ ಮೇಲೆ ಮುಸ್ಲಿಂ ಜನಸಂಖ್ಯೆಯ ಪಟ್ಟಿಯಲ್ಲಿ, ವೆಬ್‌ಸೈಟ್ ಈ ದೇಶಕ್ಕೆ ಮೊದಲ ಸ್ಥಾನ ನೀಡಿದರೆ, ಸೊಮಾಲಿಯಾ, ಟ್ಯುನಿಷಿಯಾ, ಅಫ್ಘಾನಿಸ್ತಾನ, ಇರಾನ್, ಟರ್ಕಿ, ಯೆಮೆನ್ ದೇಶಗಳು ಮುಸ್ಲಿಮರ ಜನಸಂಖ್ಯೆಯು ಹೆಚ್ಚು ಇರುವ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಥಾನ 23ನೇ ಸ್ಥಾನದಲ್ಲಿದೆ.

ಮುಸ್ಲಿಮರೇ ಇರದ ಜಗತ್ತಿನ ದೇಶಗಳಿವು

ಯಾವ ದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆ ಇಲ್ಲ ಎಂಬ ಈ ಪ್ರಶ್ನೆಗೆ ಉತ್ತರವನ್ನು ಈಗ ತಿಳಿಯೋಣ. ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ವರದಿಯ ಪ್ರಕಾರ ವ್ಯಾಟಿಕನ್ ಸಿಟಿ ಒಬ್ಬನೇ ಒಬ್ಬ ಮುಸಲ್ಮಾನನೂ ವಾಸಿಸದ ದೇಶವಾಗಿದ್ದು, ವರದಿಗಳ ಪ್ರಕಾರ ಇಲ್ಲಿನ ಜನಸಂಖ್ಯೆಯು 800 ವರೆಗೆ ಇದೆ. ಇಲ್ಲಿನ ಜನರೆಲ್ಲರೂ ಕ್ರೈಸ್ತರು. ಆದರೆ ಮುಸ್ಲಿಮರು ವಾಸಿಸದ ದೇಶ ಇದೊಂದೇ ಅಲ್ಲ. ಟೊಕೆಲಾವ್, ನಿಯು, ಫಾಕ್ಲ್ಯಾಂಡ್ ಐಲ್ಯಾಂಡ್, ಕುಕ್ ಐಲ್ಯಾಂಡ್, ಗ್ರೀನ್ಲ್ಯಾಂಡ್, ಸೊಲೊಮನ್ ಐಲ್ಯಾಂಡ್, ಮೊನಾಕೊ ಮುಂತಾದ ಹಲವು ದೇಶಗಳು ಮುಸ್ಲಿಮರು ವಾಸಿಸದ ಈ ಪಟ್ಟಿಯಲ್ಲಿ ಸೇರಿವೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಸಂಪೂರ್ಣ ಪಟ್ಟಿಯನ್ನು ನೋಡಬಹುದು.

Advertisement
Share this on...