ಮುಂಬೈ: ಚೀನಿ ವೈರಸ್ ಭಾರತಕ್ಕೆ ವಕ್ಕರಿಸಿದ ಬಳಿಕ ಬಾಲಿವುಡ್ ನಟ ಸೋನು ಸೂದ್ ಅವರ ಸಹಾಯವನ್ನು ಇಡೀ ದೇಶವೇ ಕೊಂಡಾಡಿದೆ. ಸಂಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುವ ನಟನ ಮಾನವೀಯ ಹೃದಯಕ್ಕೆ ಮಾರು ಹೋಗದವರಿಲ್ಲ. ಇದೀಗ ಬೀದಿ ಬದಿ ವ್ಯಾಪಾರಿಗಳಿಗೆ ಮನೋಸ್ಥೈರ್ಯ ತುಂಬಿರುವ ನಟನ ಕಾರ್ಯಕ್ಕೆ ಮತ್ತೊಮ್ಮೆ ಜನ ಭೇಷ್ ಎಂದಿದ್ದಾರೆ.
ಹೌದು. ಕೊರೊನಾ ಲಾಕ್ ಡೌನ್ ನಿಂದ ಅದೆಷ್ಟೋ ಮಂದಿ ಉದ್ಯೋಗ ಇಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಸದ್ಯ ನಟ ಸಣ್ಣ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ತಾವೇ ರಸ್ತೆ ಬದಿಯಲ್ಲಿ ಬ್ರೆಡ್ ಹಾಗೂ ಮೊಟ್ಟೆ ಮಾರಾಟ ಮಾಡಲು ಇಳಿದಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳಲ್ಲಿ ಸಣ್ಣ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವಂತೆ ವಿನಂತಿಸಿಕೊಂಡಿದ್ದಾರೆ.
ಈ ಸಂಬಂಧ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಟ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ನಟ ಬೈಸಿಕಲ್ ನಲ್ಲಿ ಮೊಟ್ಟೆ, ಬ್ರೆಡ್ ಹಾಗೂ ಇನ್ನಿತರ ಅತ್ಯವಶ್ಯಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಸೋನು ಸೋದ್ ಸೂಪರ್ ಮಾರ್ಕೆಟ್ ಎಂದು ಹೆಸರಿಟ್ಟಿದ್ದಾರೆ. 10 ಮೊಟ್ಟೆ ತಗೊಂಡ್ರೆ 1 ಬ್ರೆಡ್ ಉಚಿತ. ಅಲ್ಲದೆ ಉಚಿವಾಗಿ ಡೆಲಿವರಿ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಒಟ್ಟನಲ್ಲಿ ತನ್ನ ಸಹಾಯ ಮಾಡುವ ಮನೋಭಾವದಿಂದಲೇ ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿರುವ ಸೋನು ಸೂದ್, ತನ್ನ ಹೊಸ ವೀಡಿಯೊದಿಂದ ಜನರನ್ನು ನಗಿಸುವಂತೆ ಮಾಡಿದ್ದಾರೆ. ಮಾಲ್‍ಗಳು ಮುಚ್ಚಲ್ಪಟ್ಟಿದ್ದರೂ ಸಹ ಒಂದು ಪ್ರಮುಖ ಸೂಪರ್ ಮಾರ್ಕೆಟ್ ತೆರೆದಿರುತ್ತದೆ ಎಂದು ಹೇಳುವ ಮೂಲಕ ಅವನು ಅದನ್ನು ಪ್ರಾರಂಭಿಸಿದ್ದಾರೆ. ಮೊಟ್ಟೆಯಿಂದ ಹಿಡಿದು ಬ್ರೆಡ್‍ವರೆಗೆ ‘ಸೋನು ಸೂದ್ ಕಿ ಸೂಪರ್ಮಾರ್ಕೆಟ್ ಎಕ್ಡಮ್ ಹೈ ಬಾಸ್ ಹಿಟ್’ ಹೇಳುತ್ತಾ ಬೀದಿ ಬೀದಿಯಲ್ಲಿ ಮಾರಾಟ ಮಾಡಿದ್ದಾರೆ.
Free home delivery 🙏#supermarket pic.twitter.com/xFcw1yPmbb
— sonu sood (@SonuSood) June 23, 2021
ಇದನ್ನೂ ಓದಿ: ದೊಡ್ಡ ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳವಿರುವ ಈ ದಂಪತಿ ಬೀದಿಯಲ್ಲಿ ತಿಂಡಿ ಮಾರ್ತಾರೆ! ಕಾರಣ ಕೇಳಿದರೆ ಮೈ ರೋಮಾಂಚನವಾಗತ್ತೆ..
ನಮಸ್ತೆ ಸ್ನೇಹಿತರೆ, ದೇವರು ಎಲ್ಲೂ ಇರಲ್ಲ ನಮ್ಮ ತಂದೆ ತಾಯಿ ರೂಪದಲ್ಲಿ, ಒಡ ಹುಟ್ಟಿದವರ ರೂಪದಲ್ಲಿ.. ಸ್ನೇಹಿತರು, ಹಿತೈಷಿಗಳ ರೂಪದಲ್ಲಿ ಇರ್ತಾರೆ. ಮಾನವೀಯತೆ ಉಳ್ಳವರೇ ದೇವರು ಅಲ್ಲವೇ.. ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳಲು ಹೊರಟಿರುವವರು ಮಾನವೀಯತೆಯ ಮತ್ತೊಂದು ರೂಪ.. ಹೇಗೆಂದು ನೊಡೋಣ ಬನ್ನಿ. ಅಶ್ವಿನಿ ಮತ್ತು ಅವರ ಗಂಡ ಪ್ರತಿದಿನ ಮುಂಜಾನೆ 4 ಗಂಟೆಯಿಂದ 10 ಗಂಟೆಯವರೆಗೆ ರೈಲ್ವೇ ನಿಲ್ದಾಣದ ಹೊರಗೆ ಪುಟ್ ಪಾತ್ ಮೇಲೆ ನಿಂತು ತಿಂಡಿ ಮಾರುತ್ತಾರೆ. 10 ಗಂಟೆಯ ನಂತರ ಇಬ್ಬರು ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ..
ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈ ದಂಪತಿ ಯಾಕೆ ರಸ್ತೆಯ ಮೇಲೆ ನಿಂತು ತಿಂಡಿ ಮಾರುತ್ತಿದ್ದಾರೆ ಗೊತ್ತಾ? ಕಾರಣ ತಿಳಿದರೆ ಖಂಡಿತ ಇವರ ಕೆಲಸ ಹೃದಯಕ್ಕೆ ಟಚ್ ಆಗುತ್ತದೆ.. ಮುಂಬೈಗೆ ಸೇರಿದ ಅಶ್ವಿನಿ ಹಾಗು ಅವರ ಪತಿ ಎಂಬಿಎ ಪದವಿದರರು. ಇನ್ನೂ ಇವರು ದೊಡ್ಡ ದೊಡ್ಡ ಕಂಪನಿಯಲ್ಲಿ ಮೇನೆಜರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಆದರೆ ಬೆಳಗ್ಗೆ 4 ಗಂಟೆಗೆ ತಮ್ಮ ಮನೆ ಕೆಲಸದವಳು ಮಾಡಿರುವ ಬಿಸಿ ಬಿಸಿ ತಿಂಡಿಗಳನ್ನು ಹಿಡಿದು ರೈಲ್ವೇ ಸ್ಟೇಷನ್ ನಲ್ಲಿ ಪುಟ್ಪಾತ್ ಗೆ ಬರುವ ಇವರು ಸುಮಾರು 10 ಗಂಟೆಯವರೆಗೂ ತಿಂಡಿ ಮಾರುತ್ತಾರೆ.
ಅದಕ್ಕೆ ಕಾರಣ ಅಶ್ವಿನಿ ಅವರ ಮನೆಯಲ್ಲಿ 55 ವರ್ಷದ ಮನೆ ಕೆಲಸದವಳು ಇದ್ದು ಆಕೆಯ ಪತಿ ಪಾ’ರ್ಶ್ವವಾಯುವಿಗೆ ತುತ್ತಾಗಿದ್ದಾರೆ.. ಹಾಗಾಗಿ ಈ ವಯಸ್ಸಿನಲ್ಲಿ ಅವರು ಹಣಕ್ಕಾಗಿ ಪರದಾಡುವುದು ಬೇಡ ಎಂದು ಮನೆ ಕೆಲಸದಾಕೆ ತಯಾರಿಸಿದ ತಿಂಡಿಗಳನ್ನು ರಸ್ತೆ ಬದಿಯಲ್ಲಿ ಈ ದಂಪತಿಗಳು ಮಾರುತ್ತಿದ್ದಾರೆ. ಈ ಗಂಡ ಹೆಂಡತಿಯದ್ದು ಎಂತಹ ಒಳ್ಳೆಯ ಹೃದಯ ಅಲ್ಲವೇ.. ತಮ್ಮ ಮನೆಕೆಲಸದಾಕೆಯ ಕಷ್ಟವನ್ನು ತಮ್ಮ ಕಷ್ಟು ಎಂದು ಭಾವಿಸಿ ಬೆಳ ಬೆಳಗ್ಗೆ ಎದ್ದು ಸುಮಾರು 5 ಗಂಟೆಗಳ ಕಾಲ ಪುಟ್ಪಾತ್ ಮೇಲೆ ನಿಂತು ತಿಂಡಿ ಮಾರಿ ಆ ಹಣವನ್ನು ಮನೆ ಕೆಲಸದಾಕೆಗೆ ಕೊಡುತ್ತಿದ್ದಾರೆ. ಮಾನವೀಯತೆ ಅಂದರೆ ಇದೇ ಅಲ್ಲವೇ.. ಈ ದಂಪತಿ ಮಾಡುತ್ತಿರುವ ಕೆಲಸದ ಬಗ್ಗೆ ನೀವೇನ್ ಹೇಳ್ತೀರಾ.