ಭಾರತದಲ್ಲಿ ಲಂಚ ತೆಗೆದುಕೊಳ್ಳುವವರ ಮತ್ತು ಲಂಚದ ಆರೋಪದಲ್ಲಿ ಜೈಲಿಗೆ ಹೋಗುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂಥದೇ ಒಂದು ಪ್ರಕರಣದಲ್ಲಿಯ ಕೇಸಿಗೆ ನಾಟಕೀಯವಾದ ತಿರುವು ಸಿಕ್ಕಿದೆ.
ಒಬ್ಬಳು ಮಹಿಳಾ ಅಧಿಕಾರಿಯು ಲಂಚ ತೆಗೆದುಕೊಂಡ ಆರೋಪದ ಅಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತದನಂತರ ನ್ಯಾಯಾಧೀಶರ ಜೊತೆಗೆ ಮದುವೆಯಾದ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಆ ಮಹಿಳೆಯ ಹೆಸರು ಪಿಂಕಿ ಮೀನಾ ಎಂದು ಗುರುತಿಸಲಾಗಿದೆ.
ಹಾಯ್ ವೇ ತಯಾರಿಸುತ್ತಿರುವ ಕಂಪನಿಯ ಕಡೆಯಿಂದ 10 ಲಕ್ಷ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ಪಿಂಕಿ ಮೀನಾ ಅವರು ಸಿಕ್ಕಿಬಿದ್ದಿದ್ದಾರೆ. ಆದರೆ ಪಿಂಕಿ ಮೀನಾಗೆ ಹತ್ತು ದಿವಸಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಈ ಹತ್ತು ದಿವಸಗಳ ಕಾಲಾವಧಿಯಲ್ಲಿಯೇ ನ್ಯಾಯಾಧೀಶರೊಂದಿಗೆ ಪಿಂಕಿಯು ಮದುವೆಯಾಗಿದ್ದಾಳೆ. ಪಿಂಕಿಯನ್ನು ಮದುವೆ ಮಾಡಿಕೊಂಡ ವ್ಯಕ್ತಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಈ ಮದುವೆಯ ಬಗ್ಗೆ ಸದ್ಯ ರಾಜಸ್ಥಾನದಲ್ಲಿ ತುಂಬಾ ಚರ್ಚೆಯಾಗುತ್ತಿದೆ.
ಪಿಂಕಿ ಮೀನಾಳ ಬಗ್ಗೆ ಹೇಳಬೇಕಾದರೆ, ಈಕೆ, ಜನವರಿ ತಿಂಗಳವರೆಗೆ ರಾಜಸ್ಥಾನದ ಬಾಂದಿಕೂಯಿಯ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂತರ ಅವರ ವರ್ಗಾವಣೆ ದೆಹಲಿ-ಮುಂಬೈ ಎಕ್ಸ್ಪ್ರೆಸ್ ಹೈವೇಯ ಗುತ್ತಿಗೆ ಪಡೆದ ಕಂಪನಿಯೊಂದರಿಂದ 10 ಲಕ್ಷ ರೂಪಾಯಿಗಳ ಲಂಚದ ಡಿಮಾಂಡ್ ಮಾಡಿದ ಆರೋಪದ ಅಡಿಯಲ್ಲಿ ಎಸಿಬಿ (ಆ‌್ಯಂಟಿ ಕರಪ್ಷನ್ ಬ್ಯೂರೋ) ಯವರು ಜನವರಿ 15ರಂದು ಅರೆಸ್ಟ್ ಮಾಡಿದ್ದರು.
ಆನಂತರ ಪಿಂಕಿ ಮೀನಾಳು ಮದುವೆಯ ಕಾರಣಕ್ಕಾಗಿ ರಾಜಸ್ಥಾನದ ಉಚ್ಚ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದರು. ಪಿಂಕಿ ಸಲ್ಲಿಸಿದ ಅರ್ಜಿಗೆ ನ್ಯಾಯಾಲಯವು ಸ್ಪಂದಿಸಿ ಹತ್ತು ದಿವಸಗಳ ಮಧ್ಯಂತರ ಜಾಮೀನು ನೀಡಿತ್ತು. ಫೆಬ್ರುವರಿ 21ರಂದು ಮಧ್ಯಂತರ ಜಾಮೀನಿನ ಕಾಲಾವಧಿ ಮುಗಿದಿತ್ತು. ಹೀಗಾಗಿ ಪಿಂಕಿ ಮೀನಾ ಮದುವೆಯ ನಂತರ ಮತ್ತೆ ಜೈಲು ಸೇರಬೇಕಾಯಿತು.
ಇದನ್ನೂ ಓದಿ: ಹತ್ತು ವರ್ಷಗಳ ಹಿಂದೆ ಯಾವ ಊರಿನಲ್ಲಿ ಹಣ್ಣಿನ ಜ್ಯೂಸ್ ಮಾರುತ್ತಿದ್ದಳೋ ಈಗ ಅದೇ ಊರಿಗೆ ಪೋಲಿಸ್ ಅಧಿಕಾರಿಯಾಗಿ ಬಂದ ಯುವತಿ
ತಿರುವನಂತಪುರಂ: ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಸ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್ ಹಾಗೂ ಐಸ್ ಕ್ರೀಮ್ ಗಳನ್ನು ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ನೇಮಕವಾದ ಸ್ಫೂರ್ತಿಯುತ ಘಟನೆ ನಡೆದಿದೆ. ಜೂನ್ 25ರಂದು ವರ್ಕಳ ಪೊಲೀಸ್ ಠಾಣೆಗೆ ಸಬ್ ಇನ್ ಸ್ಪೆಕ್ಟರ್ ಆಗಿ 31ರ ಹರೆಯದ ಆನಿ ಶಿವ ನೇಮಕಗೊಂಡಿದ್ದಾರೆ.
ಪೊಲೀಸ್ ಸೇವೆಗೆ 2016ರಲ್ಲಿ ಆನಿ ನೇಮಕಗೊಂಡರೂ ಈಗ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗವಾಗಿರುವುದು ಅದ್ಭುತ ಸಾಧನೆಯೆಂದೇ ಆನಿ ಪರಿಗಣಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ. “10 ವರ್ಷಗಳ ಹಿಂದೆ ವರ್ಕಳದ ಶಿವಗಿರಿಗೆ ಬರುತ್ತಿದ್ದ ಯಾತ್ರಾರ್ಥಿಗಳಿಗೆ ಲೆಮನ್ ಜ್ಯೂಸ್, ಐಸ್ ಕ್ರೀಮ್ ಗಳನ್ನು ಮಾರುತ್ತಿದ್ದೆನೋ, ಅದೇ ಸ್ಥಳಕ್ಕೆ ಇದೀಗ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದೇನೆ. ನಾನು ಇದಕ್ಕಿಂತ ಉತ್ತಮವಾಗಿ ನನ್ನ ನಿನ್ನೆಗಳೊಂದಿಗೆ ಹೇಗೆ ಸೇಡು ತೀರಿಸಿಕೊಳ್ಳಲಿ?” ಎಂದು ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
“ಮೊದಲು ನಾನು ಮಸಾಲ ಹುಡಿಗಳು ಹಾಗೂ ಸಾಬೂನುಗಳ ಮಾರಾಟ ಮಾಡುತ್ತಿದ್ದೆ. ಬಳಿಕ ನಾನು ಇನ್ಶೂರೆನ್ಸ್ ಏಜೆಂಟ್ ಆಗಿ ಕೆಲಸ ಮಾಡಿದೆ. ನಂತರ ಹಲವು ಮನೆಗಳಿಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ನನ್ನ ದ್ವಿಚಕ್ರ ವಾಹನದ ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದೆ. ಹೀಗೆ ಕೆಲಸ ಮಾಡಿಯೇ ನಾನು ಸೋಶಿಯಾಲಜಿಯಲ್ಲಿ ಪದವಿ ಪಡೆದುಕೊಂಡೆ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
2014ರಲ್ಲಿ ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ತಿರುವನಂತಪುರಂನ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮೂರು ವರ್ಷಗಳ ಕಾಲ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ 2019ರಲ್ಲಿ ನಡೆದ ಎಸ್ಸೈ ಆಯ್ಕೆ ಪರೀಕ್ಷೆಯನ್ನು ಬರೆದು ಅದರಲ್ಲಿ ಯಶಸ್ವಿಯಾದರು. ಒಂದೂವರೆ ವರ್ಷಗಳ ತರಬೇತಿಯ ಬಳಿಕ ಇದೀಗ ಟ್ರೈನೀ ಅನ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.
ಆನಿಯ ಯಶಸ್ಸನ್ನು ಮನಗಂಡ ಕೇರಳದ ಪ್ರಸಿದ್ಧ ಸಿನಿಮಾ ನಟ ಮೋಹನ್ ಲಾಲ್ ಫೇಸ್ ಬುಕ್ ನಲ್ಲಿ ಅಭಿನಂದಿಸಿದ್ದಾರೆ. ” ಮನೋರ್ದಾಢ್ಯದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿದ ಆನಿಗೆ ಅಭಿನಂದನೆಗಳು. ಹಲವರ ಜೀವನದ ಕನಸುಗಳಿಗೆ ತಮ್ಮ ಸಾಧನೆಯು ಮಾದರಿಯಾಗಲಿ” ಎಂದು ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.