ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಜ್ಞಾನವಾಪಿ ಮಸೀದಿಯ ಸೀಲ್ ಮಾಡಿದ ನೆಲಮಾಳಿಗೆಯೊಳಗೆ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಅನುಮತಿ ನೀಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ನಂತರ ಸಂಜೆ ಮುಖ್ಯಮಂತ್ರಿಗಳು ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಫೆ. 24-25ರಂದು ವಾರಾಣಸಿಗೆ ಆಗಮಿಸಲಿದ್ದು, ಇದಕ್ಕೂ ಮೊದಲು ಯೋಗಿ ಆದಿತ್ಯನಾಥ್ ಅವರು ವಾರಾಣಸಿಗೆ ಭೇಟಿ ನೀಡಿ, ನೂರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ.
CM Yogi Adityanath’s visit to Gyanvapi, Varanasi marks an important moment as he pays his respects after the puja restarted.@myogiadityanath pic.twitter.com/MPl8FHnj9d
— 𝗥𝗮𝗮𝗺 𝗝𝗶 𝗥𝗮𝗷𝗮𝘄𝗮𝘁 🇮🇳 (@RaamJi_Rajawat) February 13, 2024