ನಮ್ಮ ಕನ್ನಡ ಚಾನೆಲ್ ಗಳಲ್ಲಿ ಇದೀಗ ಡಬ್ಬಿಂಗ್ ಧಾರವಾಹಿಗಳದ್ದೇ ಅಬ್ಬರ. ಕಳೆದ ಬಾರಿ ಕರೋನಾ ಆರ್ಭಟ ಹೆಚ್ಚಾಗಿ ಮೂರು ತಿಂಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದಾಗ ಯಾವುದೇ ಸಿನಿಮಾ ಆಗಲಿ ಧಾರಾಹಿಯಾಗಲಿ ಶೂಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಹಿಂದಿಯ ರಾಮಾಯಣ, ಮಹಾಭಾರತ ಸೇರಿದಂತೆ ಹಲವಾರು ಧಾರವಾಹಿಗಳು ಕನ್ನಡಕ್ಕೆ ಡಬ್ ಆಗಿದ್ದವು. ಕೆಲವೊಂದು ಧಾರವಾಹಿಗಳು ಕನ್ನಡ ಜನರ ಮನಸ್ಸನ್ನು ಗೆದ್ದಿದ್ದವು. ಅದ್ರಲ್ಲಿ ಮಹಾನಾಯಕ ಧಾರವಾಹಿ ಕೂಡ ಒಂದು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಕತೆ ‘ ಮಹಾನಾಯಕ ಡಾ ಬಿ. ಆರ್. ಅಂಬೇಡ್ಕರ್’ ಧಾರವಾಹಿಯು ರಾಜ್ಯಾದ್ಯಂತ ಜನರ ಮೆಚ್ಚುಗೆಗೆ ಪಾತ್ರಬಾಗಿದೆ. ಈ ಧಾರವಾಹಿಯು ದಾಖಲೆ ಮೇಲೆ ದಾಖಲೆ ಸೃಷ್ಟಿಸಿದೆ. ಅಂಬೇಂಡ್ಕರ್ ಅವರು ಜೀವನದಲ್ಲಿ ತೋರಿದ ಧೈರ್ಯ, ಅಸ್ಪೃಶ್ಯತೆಯ ಹೋರಾಡಿದ ಬಗೆಯನ್ನು ಪುಟ್ಟ ಬಾಲಕ ಅದ್ಭುತವಾಗಿ ತೋರಿಸಿದ್ದಾನೆ. ಈ ಭೀಮರಾವ್ ಪಾತ್ರ ಮಾಡಿದ ಚಿಕ್ಕ ಹುಡುಗ ಹೇಗೆ ಎಲ್ಲರ ಹೃದಯ ಗೆದ್ದಿದ್ದಾನೋ ಅದೇ ರೀತಿ ಇನ್ನೊಂದು ಪಾತ್ರ ಕೂಡ ಭಾರೀ ಜನ ಮೆಚ್ಚುಗೆ ಗಳಿಸಿದೆ. ಅದುವೇ ಭೀಮಾದೇವಿ ಪಾತ್ರ.
ಜಾತಿಯ ನೀಚತನ, ವರ್ಣಾಶ್ರಮದ ಸಂಕಷ್ಟ, ಅಸ್ಪೃಶ್ಯತೆಯ ಅಪಮಾನ ಎಲ್ಲವನ್ನೂ ತನ್ನ ಭ್ರೂಣದಲ್ಲಿದ್ದ ಭೀಮನಿಗೆ ತಾಕುವಂತೆ ಮಾಡಿದ್ದ ಮಹಾತಾಯಿ ಭೀಮಾದೇವಿ. ತನ್ನ ಮಗನನ್ನು ಈ ಎಲ್ಲದರ ವಿರುದ್ಧ ಹೋರಾಡಿ, ಸಮಾನತೆಯ ಹರಿವು ಹರಡುವಂತೆ ಮಾಡಿದ್ದ ಆ ಭೀಮಾದೇವಿ ಪಾತ್ರ ಮಾಡಿರುವವರು ನೇಹಾ ಜೋಶಿ. ಅವರ ನಟನೆ ನೋಡಿ ಅವರೇ ಭೀಮಾದೇವಿ ಎಂದೇ ಅನೇಕರು ಅಂದುಕೊಂಡಿದ್ದೂ ಇದೆ. ಹಾಗಾದರೆ ಈ ನೇಹಾ ಜೋಶಿ ಯಾರು? ಎಲ್ಲಿಯವರು? ಅವರಿಗೇ ಈ ಪಾತ್ರ ನೀಡಲು ಕಾರಣ ಏನು ? ಅನ್ನುವುದನ್ನು ನಾವು ನೋಡೋಣ.
ನೇಹಾ ಜೋಶಿ ಮೂಲತಃ ಮರಾಠಿ ಭೂಮಿಯವರು. ಇವರು 14 ಮರಾಠಿ ಸಿನಿಮಾ ಹಾಘೂ 4 ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಮರಾಠಿ ಸೀರಿಯಲ್ ನಲ್ಲಿಯೂ ನಟಿಸಿದ್ದಾರೆ. ಇದೀಗ 33 ವರ್ಷದ ನೇಹಾ ಜೋಶಿ ರಂಗಭೂಮಿ ಕಲಾವಿದೆಯೂ ಹೌದು. ಜೊತೆಗೆ ಈ ಹಿಂದೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಪುಲೆ ಪಾತ್ರವನ್ನೂ ಮಾಡಿದ್ದರು. ಅದು ಕೂಡ ಜನರ ಮನಸ್ಸು ಗೆದ್ದಿತ್ತು. ಇದೇ ಕಾರಣಕ್ಕೆ ಮಹಾನಾಯಕ ಧಾರವಾಹಿ ನಿರ್ದೇಶಕ ಸುಶೀಲ್ ಕುಮಾರ್ ಸಿಂಧೇ ನೇಹಾ ಅವರನ್ನು ಆಯ್ಕೆ ಮಾಡುತ್ತಾರೆ. ಇನ್ನು ಈ ಪಾತ್ರ ಮಾಡಲು ನೇಹಾ ಕೂಡ ಹಿಂದೆ ಮುಂದೆ ನೋಡದೆ, ಇದು ತನಗೆ ಸಿಕ್ಕ ಅತ್ಯುತ್ತಮ ಅವಕಾಶ ಎಂದು ಒಪ್ಪಿಕೊಂಡಿದ್ದರು. ಇದೀಗ ಭೀಮಾದೇವಿ ಪಾತ್ರಕ್ಕೆ ಜೀವ ತುಂಬಿರುವ ನೇಹಾ ಜೋಶಿ ಅಭಿನಯಕ್ಕೆ ಕನ್ನಡಿಗರೂ ಮಾರು ಹೋಗಿದ್ದಾರೆ.