ತನ್ನ ಮಡದಿಯ ಗರ್ಭದಲ್ಲೇ ಗಂಡು ಮಗುವಾಗಿ ಜನಿಸಿ ಬಂದ ಸಿಕ್ಕಿಂ ದುರ್ಘಟನೆಯಲ್ಲಿ ಸಾವನ್ನಪ್ಪಿದ ವೀರ ಯೋಧ #ಅರವಿಂದ್: ಶೋಕದ ಮನೆಯಲ್ಲಿ ಮಗು ತಂದ ಹರ್ಷೋದ್ಘಾರ

in Uncategorized 1,246 views

ಸಿಕ್ಕಿಂ ದುರ್ಘಟನೆಯಲ್ಲಿ ಹುತಾತ್ಮರಾದ ಹರಿಯಾಣ ನಿವಾಸಿ ಅರವಿಂದ ಸಾಂಗ್ವಾನ್ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 23 ರಂದು ಸಿಕ್ಕಿಂನ ಜೆಮಾ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಅರವಿಂದ್ ಸಾಂಗ್ವಾನ್ ಹುತಾತ್ಮರಾಗಿದ್ದರು.

ಹರಿಯಾಣದ ಚರಖಿ ದಾದ್ರಿ ಜಿಲ್ಲೆಯ ಜೊಜು ಕಲಾನ್ ಗ್ರಾಮದ ನಿವಾಸಿ ಅರವಿಂದ್ ಸಂಗ್ವಾನ್ ಎಂಬ ಸೇನಾ ಯೋಧ ಇತ್ತೀಚೆಗೆ ಹುತಾತ್ಮರಾಗಿದ್ದರು. ಸಿಕ್ಕಿಂನಲ್ಲಿ ರಸ್ತೆ ಅಪಘಾತದಲ್ಲಿ ಹುತಾತ್ಮರಾದ ಅರವಿಂದ್ 10 ದಿನಗಳಲ್ಲೇ ಅವರ ಮನೆಯಲ್ಲಿ ಗಂಡು ಮಗು ಜನಿಸಿದೆ. ಹುತಾತ್ಮ ಯೋಧ ಅರವಿನ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ ಎನ್ನಲಾಗುತ್ತಿದೆ.

Advertisement

ಸುದ್ದಿ ಮೂಲಗಳ ಪ್ರಕಾರ ಹುತಾತ್ಮ ಅರವಿಂದ್ ಅವರ ಪತ್ನಿ ಪಿಂಕಿ ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹುತಾತ್ಮ ಯೋಧನ ಪತ್ನಿ ಪಿಂಕಿಯನ್ನು ಝೋಝಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಅಲ್ಲಿ ಆಕೆ ಗಂಡು ಮಗನಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಲಾಗಿದೆ. ಪಿಂಕಿ ಮತ್ತು ಅವರ ನವಜಾತ ಮಗು ಇಬ್ಬರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಜೊಜು ಸಿಎಚ್‌ಸಿಯಲ್ಲಿ ಪೋಸ್ಟ್ ಮಾಡಲಾದ ಡಾ. ಅಭಿಮನ್ಯು ಮತ್ತು ಡಾ. ಸುಮನ್ ಶಿಯೋರಾನ್ ಹೇಳಿದ್ದಾರೆ.

ವೈದ್ಯರ ಪ್ರಕಾರ, ನವಜಾತ ಶಿಶುವಿನ ತೂಕವು ಮೂರು ಕೆಜಿಯಷ್ಟಿದೆ. ಅರವಿಂದನ ಪುತ್ರರಿಬ್ಬರೂ ಸೇನೆಗೆ ಸೇರಿ ದೇಶಸೇವೆ ಮಾಡಬೇಕು ಎಂಬುದೇ ನಮ್ಮ ಆಶಯ ಎಂದು ಹುತಾತ್ಮ ಯೋಧನ ತಂದೆ ರಾಜೇಂದ್ರ ಸಾಂಗ್ವಾನ್ ಹೇಳಿದ್ದಾರೆ. ಇದೇ ವೇಳೆ ರಾಜ್ಯ ಸಚಿವ ಅನೂಪ್ ಧನಕ್ ಕೂಡ ಹುತಾತ್ಮ ಯೋಧನ ಮನೆಗೆ ಆಗಮಿಸಿ ಅರವಿಂದ್ ಅವರ ಸಾವಿಗೆ ಸಂತಾಪ ಸೂಚಿಸಿ, ಗಂಡು ಮಗು ಜನಿಸಿದ್ದಕ್ಕೆ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು.

ಅರವಿಂದರ ಹುತಾತ್ಮತೆಗೆ ದೇಶ ಸದಾ ಋಣಿಯಾಗಿದೆ ಎಂದು ರಾಜ್ಯ ಸಚಿವ ಅನುಪ್ ಧಾನಕ್ ಹೇಳಿದ್ದಾರೆ. ಗಮನಿಸುವ ಸಂಗತಿಯೆಂದರೆ, ಹುತಾತ್ಮ ಅರವಿಂದ್ ಸಾಂಗ್ವಾನ್ ಅವರ ಪತ್ನಿ ಪಿಂಕಿ ಕೂಡ ಹರಿಯಾಣ ಪೊಲೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಂಕಿಯವರನ್ನು ದಾದ್ರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದೆ. ಅರವಿಂದ್ ಮತ್ತು ಪಿಂಕಿಗೆ ಈಗಾಗಲೇ ಒಬ್ಬ ಮಗನಿದ್ದನು. ಅರವಿಂದ್ ಅವರ ಎಂಟು ವರ್ಷದ ಮಗ ಧ್ರುವ ಸಾಂಗ್ವಾನ್ ತಮ್ಮ ಹುತಾತ್ಮ ತಂದೆಯ ಚಿತೆಗೆ ಅಗ್ನಿಸ್ಪರ್ಷ ಮಾಡಿದ್ದನು.

ಡಿಸೆಂಬರ್ 23 ರಂದು, ಸಿಕ್ಕಿಂನ ಗೆಮಾ ಪ್ರದೇಶದಲ್ಲಿ ಸೇನಾ ವಾಹನವು ಆಳವಾದ ಕಮರಿಗೆ ಬಿದ್ದಿತ್ತು. ಈ ದುರ್ಘಟನೆಯಲ್ಲಿ ಝೋಝಾ ಕಲಾನ್ ಗ್ರಾಮದ ಅರವಿಂದ್ ಸಾಂಗ್ವಾನ್ ಸೇರಿದಂತೆ 16 ಸೇನಾ ಯೋಧರು ಹುತಾತ್ಮರಾಗಿದ್ದರು. ಹುತಾತ್ಮ ಅರವಿಂದ್ ಅವರ ಅಂತ್ಯಕ್ರಿಯೆಯನ್ನು ಡಿಸೆಂಬರ್ 25 ರಂದು ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಮಾಡಲಾಗಿತ್ತು.

ಇದನ್ನೂ ಓದಿ:

ಹುತಾತ್ಮ ಯೊಧನ ಸಹೋದ್ಯೋಗಿ ಸೈನಿಕರು ಬಂದು ಮಾಡಿದ್ದೇನು ನೋಡಿ: “ಥ್ಯಾಂಕ್ಯೂ ಅಣ್ಣಂದಿರಾ” ಎಂದ ಹುತಾತ್ಮ ಯೋಧನ ತಂಗಿ

ಇತ್ತೀಚೆಗೆ ಕಾಶ್ಮೀರ ಟೈಗರ್ ಗ್ರೂಪ್‌ನ ಕೆಲ ಉ ಗ್ರ ರು ಭದ್ರತಾ ಸಿಬ್ಬಂದಿಯ ಬಸ್‌ನ ಮೇಲೆ ದಾ ಳಿ ನಡೆಸಿದ್ದರು. ಇದರಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಈ ಯೋಧರ ಪೈಕಿ ಒಬ್ಬ ಯೋಧನ ತಂಗಿಯ ಮದುವೆ ನೆನ್ನೆ ನಡೆಯಿತ. ಆದರೆ ಸೋದರರ ರೂಪದಲ್ಲಿ ಅನೇಕ ಯೋಧರು ಈ ತಂಗಿಗೆ ಅಣ್ಣನ ಇಲ್ಲದಿರುವಿಕೆಯ ನೋವನ್ನ ಮರೆಯುವಂತೆ ಮಾಡಿದ್ದಾರೆ. ಈ ಸುದ್ದಿಯ ಮೂಲಕ ಹುತಾತ್ಮ ಯೊಧನ ಸಹೋದ್ಯೋಗಿ ಸೈನಿಕರು ಮಾಡಿದ್ದೇನು? ಈ ಬಗ್ಗೆ ದೇಶದ ಜನ ಹಾಡಿ ಹೊಗಳುತ್ತಿರೋದ್ಯಾಕೆ? ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ಹುತಾತ್ಮ ಯೋಧನ ಜಾಗದಲ್ಲಿ ನಿಂತು ತಂಗಿಯ ಮದುವೆ ಮಾಡಿಕೊಟ್ಟ ಯೋಧನ ಸ್ನೇಹಿತರು

ಕಳೆದ ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದರು. ಆ ಪೈಕಿ ಒಬ್ಬ ಯೋಧನ ಸ್ನೇಹಿತರು ಕೈಗೊಂಡ ನಿರ್ಧಾರಕ್ಕೆ ಇದೀಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅನೇಕ ಸಿಆರ್‌ಪಿಎಫ್ ಯೋಧರು ಹುತಾತ್ಮ ಯೋಧನ ಮನೆಗೆ ಹೋಗಿ ಮದುವೆಯ ದಿನದಂದು ಹುತಾತ್ಮ ಯೋಧನ ಸಹೋದರಿಯ ಮದುವೆಯನ್ನ ತಾವೇ ಮುಂದೆ ನಿಂತು ಮಾಡಿದ್ದಾರೆ. ಅನೇಕ ಸಿಆರ್‌ಪಿಎಫ್ ಯೋಧರು ಯುವತಿಯನ್ನ ಆಶೀರ್ವದಿಸಿದರು. ಇದನ್ನು ಕಂಡು ಆ ಯುವತಿ ಭಾವುಕಳಾದಳು.

ದಾ ಳಿಯಲ್ಲಿ 3 ಜನ ಭಾಗಿಯಾಗಿದ್ದರು

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರ ಐಜಿಪಿ, ಈ ದಾ ಳಿಯಲ್ಲಿ ಇಬ್ಬರು ವಿದೇಶಿಗರು ಮತ್ತು ಒಬ್ಬ ಸ್ಥಳೀಯ ಭ ಯೋ ತ್ಪಾ ದಕ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮೂವರು ವ್ಯಕ್ತಿಗಳು ನಿನ್ನೆ ಸಂಜೆ ಪೂರ್ವ ಯೋಜನೆ ನಂತರವೇ ಮಾಡಿದ್ದಾರೆ. ಸೋಮವಾರ, ಜಮ್ಮು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ 3 ಜನರು ಬಸ್ ಮೇಲೆ ದಾ ಳಿ ಮಾಡಿದ್ದರು. ಈ ವೇಳೆ ಕೆಲ ಯೊಧರು ಹುತಾತ್ಮರಾದರೆ  ಮತ್ತೊಂದೆಡೆ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾನ್ಸ್‌ಟೇಬಲ್ ಸಮೇತ ಮೂರು ಜನ ಹುತಾತ್ಮರಾಗಿದ್ದಾರೆ

ಈ ದಾ ಳಿ ಯಲ್ಲಿ ಕಾನ್‌ಸ್ಟೆಬಲ್ ಸೇರಿ ಒಟ್ಟು 3 ಜನ ಹುತಾತ್ಮರಾಗಿದ್ದಾರೆ. ಕಾನ್ಸ್ಟೇಬಲ್ ನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಆಸ್ಪತ್ರೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬಂಧಿತ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ಈ ವಿಷಯವನ್ನು ಸರ್ಕಾರವು ಖಾಸಗಿ ಮಟ್ಟದಲ್ಲಿಯೂ ಪರಿಶೀಲಿಸುತ್ತಿದೆ.

 

Advertisement
Share this on...