ತಲೇಲಿತ್ತು ಒಂದು ಸಣ್ಣ ಐಡಿಯಾ: ಆ ಐಡಿಯಾದಿಂದ ಬರೋಬ್ಬರಿ 400 ಕೋಟಿ‌ ಒಡೆಯನಾದ ಯುವಕನ‌ ಯಶಸ್ಸಿನ ಕಥೆಯಿದು

in Kannada News/News/Story/ಕನ್ನಡ ಮಾಹಿತಿ 514 views

ರೆಡ್ ಬಸ್ ಇದು ಆನ್ಲೈನ್ ಟಿಕೆಟ್ ಮಾಡಲು ಒಂದು ವೇದಿಕೆಯಾಗಿದೆ. ಅಗಸ್ಟ್ ತಿಂಗಳು 2006ರ ವರ್ಷದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಇದರ ಮುಖ್ಯ ಕಚೇರಿ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ. ಆದ್ದರಿಂದ ನಾವಿಲ್ಲಿ ರೆಡ್ಬಸ್ ನ  ಹಿಂದಿನ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Advertisement

ಫಣೀಂದ್ರ ಎಂಬ ವ್ಯಕ್ತಿ ಆಂಧ್ರಪ್ರದೇಶದ ನಿಜಾಮಾಬಾದ್ ನವರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಒಂದು ಕಂಪನಿಯಾದ ಟ್ಯಾಕ್ಸಸ್ ಇನ್ಸ್ಟ್ರುಮೆಂಟ್ ನಲ್ಲಿ ಕೆಲಸ ಮಾಡುತ್ತಾರೆ. 2004 ನೇ ಇಸವಿಯಲ್ಲಿ ಇವರಿಗೆ ಒಂದು ಉಪಾಯ ಹೊಳೆಯುತ್ತದೆ. ಅದು ದೀಪಾವಳಿಯ ಸಮಯ ಆಗಿರುತ್ತದೆ. ಆಗ ಅವರ ಸ್ನೇಹಿತರೆಲ್ಲರೂ ಹಬ್ಬಕ್ಕಾಗಿ ಮನೆಗೆ ಹೋಗಿರುತ್ತಾರೆ. ಆದರೆ ಇವರಿಗೆ ಬಸ್ ಟಿಕೆಟ್ ಸಿಗುವುದೇ ಇಲ್ಲ. ಆಗ ಇಂಥ ಸಂದರ್ಭ ಮತ್ತೆ ಯಾರಿಗೂ ಬರಬಾರದು ಎಂದು ಇವರೇ ಒಂದು ವೆಬ್ಸೈಟನ್ನು ಮಾಡಲು ಉಪಾಯ ಹೂಡುತ್ತಾರೆ.

ಆಗ ಬಸ್ ಟಿಕೆಟ್ ಮಾಡಲು ಬೇಕಾಗುವ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಆದರೆ ಯಾರೂ ಇದನ್ನು ಸರಿಯಾಗಿ ನೀಡುವುದಿಲ್ಲ. ಒಬ್ಬ ಹುಡುಗ ಬಸ್ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳುತ್ತಿರುತ್ತಾನೆ. ಅವನು ಎಲ್ಲ ಮಾಹಿತಿಗಳನ್ನು ನೀಡುತ್ತಾನೆ. ಈ ಉಪಾಯವನ್ನು ತಮ್ಮ ಸ್ನೇಹಿತರ ಬಳಿ ಹೋಗಿ ಹೇಳಿಕೊಂಡು ಹಾಗೆಯೇ ಮಾಡುತ್ತಾರೆ. ಇದಕ್ಕೆ ಸುಮಾರು 5ಲಕ್ಷ ಬಂಡವಾಳ ಹೂಡಿ ರೆಡ್ಬಸ್ ಎನ್ನುವ ವೇದಿಕೆಯನ್ನು ಮಾಡುತ್ತಾರೆ. ಆಗ ಅವರ ರೂಮ್ ಆಫೀಸ್ ಆಗುತ್ತದೆ. ಇದರಿಂದ ತುಂಬಾ ಲಾಭ ಬರುತ್ತಾ ಹೋಗುತ್ತದೆ. ಇವರ ಸ್ನೇಹಿತರೆ ಜನರ ಹತ್ತಿರ ಹೋಗಿ ಟಿಕೆಟ್ ಗಳನ್ನು ಬುಕ್ ಮಾಡಿಸುತ್ತಾ ಇರುತ್ತಾರೆ.

ಇದನ್ನು ಓದದೇ ಇರುವವರು ಕೂಡ ತಿಳಿದುಕೊಳ್ಳಬಹುದು. ಅಷ್ಟೊಂದು ಸುಲಭವಾಗಿ ವ್ಯವಸ್ಥೆಯನ್ನು ಇವರು ಮಾಡಿರುತ್ತಾರೆ.  ಸ್ವಲ್ಪ ಸಮಯದ ನಂತರ ಇನ್ನೂ ಹೆಚ್ಚಿನ ಬಂಡವಾಳವನ್ನು ಹೂಡುವುದರಿಂದ ಇನ್ನೂ ಹೆಚ್ಚಿನ ಯಶಸ್ಸನ್ನು ಇದು ಕಾಣುತ್ತದೆ. ಈಗ ಇದು ನಮ್ಮ ದೇಶದಲ್ಲಿ 15 ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ಸಲ್ಲಿಸುತ್ತಿದೆ. 2013ರಲ್ಲಿ ಇದನ್ನು ಒಂದು ಗುಂಪಿಗೆ ಸುಮಾರು ನಾಲ್ಕು ನೂರು ಕೋಟಿ ಹಣಕ್ಕೆ ಮಾರಾಟ ಮಾಡುತ್ತಾರೆ. ಹೀಗೆ ಆಗುತ್ತದೆ ಎಂದು ಇವರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದ್ದರಿಂದ ಯಾವುದನ್ನೇ ಕಷ್ಟಪಟ್ಟು ಮಾಡಿದರೆ ಗೆಲುವು ನಿಶ್ಚಿತ ಎಂದು ಹೇಳಬಹುದು.

ಕಲ್ಲಿದ್ದಲು ಮಾರಾಟ ಮಾಡಿ ಕೋಟ್ಯಾಧಿಪತಿಯಾದ ಮಹಿಳೆ, ಈಕೆಯ ಬಳಿಯಿರುವ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು.

ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ

ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ ಬಗ್ಗೆ. ಪ್ರಸ್ತುತ, ಗುಜರಾತ್‌ನಲ್ಲಿ ಈ ಹೆಸರು ಪ್ರತಿಯೊಬ್ಬರಿಗೂ ಚಿರಪರಿಚಿತ ಹೆಸರು. ಆದರೆ ಅವರು ಮನೆ ಮನೆಗೆ ತೆರಳಿ ಕಲ್ಲಿದ್ದಲು ಮಾರುವ ಒಂದು ಕಾಲವಿತ್ತು.  ಸವಿತಾ ಬೆನ್ ಅವರ ಯಶಸ್ಸಿನ ಪ್ರಯಾಣ ಸುಲಭದ್ದಾಗಿರಲಿಲ್ಲ. ಆದರೆ ಅವರ ಕಠಿಣ ಪರಿಶ್ರಮದಿಂದಾಗಿ ಇಂದು ಅವರು ಕೋಟ್ಯಾಧೀಶ್ವರರಾಗಿದ್ದಾರೆ.

ಅನಕ್ಷರಸ್ಥೆ ಎಂಬ ಕಾರಣಕ್ಕೆ ಎಲ್ಲೂ ಸಿಕ್ಕಿರಲಿಲ್ಲ ಕೆಲಸ

ಗುಜರಾತಿನ ಅಹಮದಾಬಾದ್ ನಿವಾಸಿ ಸವಿತಾ ಬೆನ್ ತುಂಬಾ ಬಡ ಕುಟುಂಬದಿಂದ ಬಂದವರು. ಪತಿ ಅಹಮದಾಬಾದ್‌ನ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್‌ನಲ್ಲಿ ಕಂಡಕ್ಟರ್ ಆಗಿದ್ದರು. ದೊಡ್ಡ ಕುಟುಂಬವಾಗಿರುವುದರಿಂದ, ಪ್ರತಿಯೊಬ್ಬರೂ ಅವರ ಗಳಿಕೆಯಲ್ಲೇ ಪೋಷಿಸುವುದು ಸುಲಭದ ಮಾತಾಗಿರಲಿಲ್ಲ. ಮನೆಯ ಕೆಟ್ಟ ಆರ್ಥಿಕ ಸ್ಥಿತಿಯನ್ನು ನೋಡಿದ ಸವಿತಾ ತಾವೂ ಕೆಲಸ ಮಾಡಲು ನಿರ್ಧರಿಸಿದರು. ಆದರೆ ಅನಕ್ಷರಸ್ಥರಾಗಿದ್ದರಿಂದ ಯಾರೂ ಅವರಿಗೆ ಕೆಲಸ ನೀಡಲಿಲ್ಲ.

ಕಲ್ಲಿದ್ದಲಿನಿಂದ ಖುಲಾಯಿಸಿದ ಅದೃಷ್ಟ

ಸವಿತಾ ಬೆನ್ ಅನೇಕ ಸ್ಥಳಗಳಲ್ಲಿ ಕೆಲಸ ಕೇಳಿಕೊಂಡು ಹೋದರು ಆದರೆ ಎಲ್ಲಾ ಕಡೆಯೂ ಅವರಿಗೆ ನಿರಾಸೆ ಎದುರಾಯಿತೇ ಹೊರತು ಕೆಲಸ ಮಾತ್ರ ಸಿಗಲಿಲ್ಲ. ಸವಿತಾ ಬೆನ್ ಅವರು ತಮ್ಮದೇ ಆದ ಸ್ವಂತ ಕೆಲಸವನ್ನು ಮಾಡಬೇಕು ಎಂದು ನಿರ್ಧರಿಸುತ್ತಾರೆ. ಅವರ ತಾಯಿ ಮತ್ತು ತಂದೆ ಕಲ್ಲಿದ್ದಲು ಮಾರುತ್ತಿದ್ದರು. ಸವಿತಾ ಬೈನ್ ಅವರು ಕೂಡ ಕಲ್ಲಿದ್ದಲು ಮಾರಾಟ ಮಾಡುವುದಾಗಿ ನಿರ್ಧರಿಸಿದರು. ಆದರೆ ಹೊಸ ಸರಕುಗಳನ್ನು ಖರೀದಿಸಲು ಅವಳ ಬಳಿ ಹಣವಿರಲಿಲ್ಲ, ಆದ್ದರಿಂದ ಅವರು ಸುಟ್ಟ ಕಲ್ಲಿದ್ದಲನ್ನು ಗಾಡಿಯಲ್ಲಿ ಬಿನ್ ಇಲ್ಲದೆ ಮಾರಾಟ ಮಾಡುತ್ತಿದ್ದರು.

ಸವಿತಾ ಬೆನ್ ಅವರು ಬಡವರಷ್ಟೇ ಅಲ್ಲ ಅವರು ದಲಿತ ಮಹಿಳೆಯೂ ಆಗಿದ್ದರು, ಆದ್ದರಿಂದ ಯಾವುದೇ ಉದ್ಯಮಿಗಳೂ ಇವರ ಜೊತೆ ವ್ಯವಹಾರ ಮಾಡಲು ಬಯಸುತ್ತಿರಲಿಲ್ಲ.

ಕಲ್ಲಿದ್ದಲ್ಲನ್ನ ಮಾರಿ ಕೋಟ್ಯಾಂತರ ರೂಪಾಯಿ ಉದ್ಯಮ ಬೆಳೆಸಿದರು

ಸವಿತಾ ಬೈನ್ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ ಮತ್ತು ನಿಧಾನವಾಗಿ ಬಂಡಿಯಲ್ಲಿ ಕಲ್ಲಿದ್ದಲು ಮಾರಾಟವನ್ನು ಮುಂದುವರೆಸಿದರು. ಅವರ ಗ್ರಾಹಕರು ಸಹ ಕಾಲಾನಂತರದಲ್ಲಿ ಹೆಚ್ಚಿದರು. ನಂತರ ಅವರು ಸಣ್ಣ ಅಂಗಡಿಯಿಂದ ಕಲ್ಲಿದ್ದಲು ಮಾರಾಟ ಮಾಡಲು ಪ್ರಾರಂಭಿಸಿದರು. ಒಂದು ದಿನ ಅವರಿಗೆ ಸೆರಾಮಿಕ್ ಕಂಪೆನಿಯೊಂದರಿಂದ ದೊಡ್ಡ ಆರ್ಡರ್ ಸಿಕ್ಕಿತು. ಸವಿತಾ ಬೇನ್ ಗ್ರಾಹಕರ ಡಿಮ್ಯಾಂಡ್ ಗಳನ್ನ ಅರಿತುಕೊಂಡು ನಂತರ ಸೆರಾಮಿಕ್ ಭಟ್ಟಿ (ಕುಲುಮೆ)ಯನ್ನು ಪ್ರಾರಂಭಿಸಿದರು.

ಇದರ ನಂತರ, ಸವಿತಾ ಬೆನ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಹೋದರು. 1991 ರಲ್ಲಿ, ಅವರು ಸ್ಟರ್ಲಿಂಗ್ ಸೆರಾಮಿಕ್ಸ್ ಲಿಮಿಟೆಡ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಇಲ್ಲಿಂದ ಅದು ತನ್ನ ಉತ್ಪನ್ನಗಳನ್ನು ವಿದೇಶಕ್ಕೂ ರಫ್ತು ಮಾಡಲು ಪ್ರಾರಂಭಿಸಿತು.

ಕೋಟ್ಯಂತರ ಮೌಲ್ಯದ ಆಸ್ತಿಯ ಒಡತಿ ಸವಿತಾ ಬೆನ್

ಸವಿತಾ ಬೇನ್ ಅವರನ್ನು ಈಗ ಭಾರತದ ಅತ್ಯಂತ ಯಶಸ್ವಿ ಮಹಿಳಾ ಕೈಗಾರಿಕೋದ್ಯಮಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂದು ಅವರು ಅನೇಕ ಐಷಾರಾಮಿ, ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಅಹಮದಾಬಾದ್‌ನ ಐಷಾರಾಮಿ ಪ್ರದೇಶದಲ್ಲಿ ಅವರ 10 ಬೆಡ್‌ರೂಮ್‌ಗಳ ದೊಡ್ಡ ಬಂಗಲೆಯೂ ಇದೆ.

Advertisement
Share this on...