ತಾಂಬೂಲ ಪ್ರಶ್ನೆಯಲ್ಲಿ ಸಿಕ್ತು ದೇವರ ಸುಳಿವು: ಜಮೀನು ಅಗೆಯುವಾಗ ಸಿಕ್ತು ಸಾವಿರ ವರ್ಷಗಳಷ್ಟು ಪುರಾತನವಾದ ವಿಗ್ರಹ

in Uncategorized 151 views

ಭಾರತ (India) ಹೇಳಿ ಕೇಳಿ ಕಲೆ, ಚಿತ್ರಕಲೆ, ಶಿಲ್ಪ ಕಲೆ ಎಲ್ಲದರಲ್ಲೂ ಶ್ರೀಮಂತ ದೇಶವಾಗಿತ್ತು. ಇಲ್ಲಿನ ಶಿಲ್ಪಗಳಿಗೆ, ಕೆತ್ತನೆಗಳಿಗೆ, ಪುರಾತನ ವಸ್ತುಗಳಿಗೆ ಮಾರು ಹೋಗದವರೇ ಇಲ್ಲ. ರಾಜರ (King) ಆಳ್ವಿಕೆ ಕಾಲದಿಂದ ಹಿಡಿದು ಸ್ವಾತಂತ್ರ್ಯ ಪೂರ್ವದವರೆಗೂ ಭಾರತದ ಅನೇಕ ಪರಂಪರಾಗತ ವಸ್ತುಗಳು ವಿದೇಶಿಯರ ಕೈ ವಶವಾದವು. ಕೆಲವನ್ನು ವಶಪಡಿಸಿಕೊಂಡರೆ, ಇನ್ನೂ ಕೆಲವು ಕಳುವಾಗಿ ಅವರ ಪಾಲಾಗಿದ್ದವು. ಸ್ವಾತಂತ್ರ್ಯದ (independence) ನಂತರವೂ ಪುರಾತನ ವಸ್ತುಗಳು ಭಾರತದಿಂದ ಕಾಣೆಯಾಗಿವೆ. ಇತ್ತೀಚೆಗೆ ಭಾರತದಲ್ಲಿ ಅನೇಕ ವಸ್ತುಗಳು ಮತ್ತೆ ಲಭಿಸುತ್ತಿದೆ. ದೇಶದ ಕೆಲ ಪ್ರದೇಶಗಳಲ್ಲಿ ಹಳೆಯ ವಿಗ್ರಹಗಳು ಸಿಗುತ್ತಿದ್ದು, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ (History) ಎನ್ನಬಹುದು.

Advertisement

ಬೆಳ್ತಂಗಡಿ ತಾಲೂಕಿನ ತೆಕ್ಕರ ಗ್ರಾಮದ ಬಟ್ರಬೈಲು ಗ್ರಾಮಸ್ಥರಿಗೆ ಜಮೀನು ಅಗೆಯುತ್ತಿದ್ದಾಗ 12ನೇ ಶತಮಾನದ ಗೋಪಾಲಕೃಷ್ಣ ದೇವರ ಹಾನಿಗೀಡಾಗಿರುವ ವಿಗ್ರಹ ಪತ್ತೆಯಾಗಿದೆ. ಸುಮಾರು 700 ವರ್ಷಗಳ ಹಿಂದೆ ಅಲ್ಲಿ ದೇವಾಲಯವಿತ್ತು ಎನ್ನುವ ನಂಬಿಕೆ ಇತ್ತು. ಅಲ್ಲದೇ ಗ್ರಾಮಸ್ಥರು ಮೇ 2022 ರಲ್ಲಿ ಟ್ರಸ್ಟ್ ಅನ್ನು ರಚಿಸಿದ್ದರು ಮತ್ತು ಗ್ರಾಮದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲು ಯೋಜಿಸುತ್ತಿದ್ದರು. ಭೂಮಿಯ ದಾಖಲೆಯು ಸರ್ಕಾರದ ಹೆಸರಲ್ಲಿರುವುದರಿಂದ ದೇವಾಲಯವನ್ನು ಪುನರ್ನಿರ್ಮಿಸಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ಅದೇ ಜಮೀನಿನಲ್ಲಿ ಸ್ಥಳೀಯ ಗ್ರಾಮಸ್ಥರು ಅಡಿಕೆ ಬೆಳೆಯುತ್ತಿದ್ದರು. ಹಾಗಾಗಿ ದೇವಾಲಯದ ಕೆಲಸ ಆಗಿರಲಿಲ್ಲ.

12 ವರ್ಷಗಳ ಹಿಂದೆ ಬೆಂಗಳೂರಿನ ಕೈಗಾರಿಕೋದ್ಯಮಿ ಲಕ್ಷ್ಮಣ್ ಚೆನ್ನಪ್ಪ ಎಂಬುವರು ಪಕ್ಕದ ಗ್ರಾಮದಲ್ಲಿ ಜಮೀನು ಖರೀದಿಸಿದ್ದರು. ಲಕ್ಷ್ಮಣ ಅವರಿಗೆ ಕನಸಿನಲ್ಲಿ ಸರ್ಕಾರಿ ಜಮೀನಿನ ಬಾವಿಯಲ್ಲಿ ಗೋಪಾಲಕೃಷ್ಣ ಮೂರ್ತಿಯ ಸುಳಿವು ಸಿಕ್ಕಿತು. ಈ ಮಾಹಿತಿಯನ್ನು ಗ್ರಾಮದ ಜನರೊಂದಿಗೆ ಹಂಚಿಕೊಂಡರು. ಎರಡು ವರ್ಷಗಳ ಹಿಂದೆ, ಗ್ರಾಮಸ್ಥರು ಜ್ಯೋತಿಷಿಯನ್ನು ಆಹ್ವಾನಿಸುವ ‘ತಾಂಬೂಲ ಪ್ರಶ್ನೆ’ಯನ್ನು ಏರ್ಪಡಿಸಿದರು, ಅವರು ಪ್ರಾಚೀನ ದೇವಾಲಯದ ಅಸ್ತಿತ್ವದ ಬಗ್ಗೆ ತಿಳಿಸಿದ್ದಾರೆ.

ಭೂಮಿಯ ಅಡಿಯಲ್ಲಿ ಲಭಿಸಿದ ಹಾನಿಗೊಳಗಾದ ವಿಗ್ರಹ

ಕೆಲ ಸಮಯಗಳ ನಂತರ ಭೂಮಿಯನ್ನು ಅಗೆಯಲು ಪ್ರಾರಂಭಿಸಿದಾಗ, ಶ್ರೀ ಗೋಪಾಲಕೃಷ್ಣನ ವಿಗ್ರಹವು ಕಂಡುಬಂದಿದೆ. ವಾಸ್ತು ತಜ್ಞರ ಪ್ರಕಾರ, ಈ ವಿಗ್ರಹವು 12 ನೇ ಶತಮಾನದದ್ದಾಗಿದೆ. ಇದೇ ಜಾಗದಲ್ಲಿ ದೇವಾಲಯವನ್ನ ನಿರ್ಮಾಣ ಮಾಡಲು ಸಹ ಈಗ ನಿರ್ಧಾರ ಮಾಡಲಾಗಿದೆ. ಅಲ್ಲದೇ, ಇನ್ನೂ ಕೆಲ ಅನೇಕ ವಿಗ್ರಹಗಳಿಗಾಗಿ ಹುಡುಕಾಟ ಮಾಡಲಾಗುತ್ತಿದೆ.

Advertisement
Share this on...