ತಾಪ್ಸಿ ಪನ್ನು ಅಭಿನಯದ ‘ದೋಬಾರಾ’ ಬಿಡುಗಡೆ: “ತಾಕತ್ತಿದ್ರೆ ನಮ್ಮ ಚಿತ್ರ ಬಾಯ್‌ಕಾಟ್ ಮಾಡ್ರೋ” ಎಂದಿದ್ದ ನಟಿಯ ಚಿತ್ರದ ಸ್ಥಿತಿ ಹೇಗಾಯ್ತು ನೋಡಿ

in FILM NEWS/News/ಮನರಂಜನೆ/ಸಿನಿಮಾ 916 views

ಬಾಲಿವುಡ್ ನಟಿ ತಾಪ್ಸಿ ಪನ್ನು ರವರ ಇತ್ತೀಚಿನ ಚಿತ್ರ ‘ದೊಬಾರಾ’ ನೆನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು, ಉತ್ತಮ ರಿವೀವ್ ಪಡೆದಿದೆ. ಆದರೆ ಇದರ ಹೊರತಾಗಿಯೂ, ಥಿಯೇಟರ್‌ಗಳಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆಯೆಂದರೆ ತಾಪ್ಸಿ ಚಿತ್ರದ ಮೊದಲ ದಿನದ ಕಲೆಕ್ಷನ್ ತೋಪೆದ್ದು ಹೋಗಿದೆ. ಅದೇ ಸಮಯದಲ್ಲಿ ತೆಲುಗು ಚಿತ್ರ ‘ಕಾರ್ತಿಕೇಯ 2’ ಇಂದು ಭರ್ಜರಿ ಗಳಿಕೆ ಮಾಡುತ್ತ ಮುಂದೆ ಸಾಗಿದೆ.

ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ 4 ವರ್ಷಗಳ ನಂತರ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಅವರ ಚಿತ್ರ ‘ದೊಬಾರಾ’ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಆಗಿದ್ದು, ಇದು ಟೈಂ ಲೂಪ್‌ನ ಕೆಲವು ತಿರುವುಗಳನ್ನು ಸಹ ಹೊಂದಿದೆ. ಚಿತ್ರವು ಸ್ಕ್ರೀನಿಂಗ್ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು ಮತ್ತು ವಿಮರ್ಶಕರೂ ಚಿತ್ರಕ್ಕೆ ಉತ್ತಮ ರಿವೀವ್ಸ್ ಗಳನ್ನ ನೀಡಿದ್ದರು. ಆದರೆ ಬಿಡುಗಡೆಯಾದ ಮೊದಲ ದಿನವಾದ ಶುಕ್ರವಾರದಂದು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಣ ಗಳಿಸೋಕೆ ಹೆಣಗಾಡುತ್ತಿದೆ.

Advertisement

ಚಿತ್ರದಲ್ಲಿ ತಾಪ್ಸಿ ಪನ್ನು ಜೊತೆಗೆ ಪವೆಲ್ ಗುಲಾಟಿ, ನಾಸರ್ ಮತ್ತು ರಾಹುಲ್ ಭಟ್ ಕೂಡ ನಟಿಸಿದ್ದಾರೆ. ಶುಕ್ರವಾರ ‘ದೊಬಾರಾ’ ಬಾಕ್ಸ್‌ ಆಫೀಸನಲ್ಲಿ ಹಾದುಹೋಗುತ್ತಿರುವ ರೀತಿಯನ್ನ ನೋಡಿದರೆ ಚಿತ್ರವು ತಾಪ್ಸಿ ಪನ್ನು ಕೆರಿಯರ್‌ನ ಅತೀ ಕೆಟ್ಟ ಓಪನಿಂಗ್ ಕಲೆಕ್ಷನ್‌ ಎಂದು ತೋರುತ್ತದೆ.

ಅಡ್ವಾನ್ಸ್ ಬುಕಿಂಗ್‌ನಲ್ಲೂ ಚಿತ್ರಕ್ಕೆ ಶಾಕ್

ರಿಪೋರ್ಟ್ಸ್ ಗಳ ಪ್ರಕಾರ, ತಾಪ್ಸಿ-ಅನುರಾಗ್ ಅಭಿನಯದ ‘ದೊಬಾರಾ’ ಚಿತ್ರಕ್ಕೆ ಕೇವಲ 15.9 ಲಕ್ಷ ರೂಪಾಯಿ ಅಡ್ವಾನ್ಸ್ ಬುಕ್ಕಿಂಗ್ ಆಗಿತ್ತು. ಆನ್‌ಲೈನ್ ಬುಕಿಂಗ್‌ಗೆ ಬದಲಾಗಿ ತಮ್ಮ ಪರವಾಗಿ ಇಟ್ಟುಕೊಳ್ಳುವ ಅಂದರೆ ಥಿಯೇಟರ್‌ಗಳು ಹೋಲ್ಡ್ ಬ್ಲಾಕ್ ಸೀಟ್‌ಗಳನ್ನು ಸಹ ಇದು ಒಳಗೊಂಡಿದೆ. ಸಾರ್ವಜನಿಕರು ಸಿನಿಮಾವನ್ನು ಹೊಗಳಲು ಶುರು ಮಾಡಿದರೆ ಎಲ್ಲೋ ಮೊದಲ ದಿನಕ್ಕಿಂತ ಅಡ್ವಾನ್ಸ್ ಬುಕ್ಕಿಂಗ್ ದುಪ್ಪಟ್ಟಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ‘ದೊಬಾರಾ’ ಬಗ್ಗೆ ಯಾವುದೇ ಉತ್ತಮ ವಾತಾವರಣವಿಲ್ಲ. ಕೇವಲ ಶೇ.2-3ರಷ್ಟು ಆಕ್ಯುಪೆನ್ಸಿ ಇರುವುದರಿಂದ ಹಲವು ಚಿತ್ರಮಂದಿರಗಳು ಶೋಗಳನ್ನ ಕ್ಯಾನ್ಸಲ್ ಮಾಡಿವೆ ಎಂಬ ವರದಿಗಳು ಮೇಲಿಂದ ಮೇಲೆ ಬರುತ್ತಿವೆ. ಹೀಗಿರುವಾಗ ಬರೀ 275ರಿಂದ 300 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ಇದೀಗ ಹೆಚ್ಚಿನ ನಿರೀಕ್ಷೆ ಉಳಿದಿಲ್ಲ.

ದೊಬಾರಾ’ಗೆ ಅಡ್ಡಿಯಾದ ಅಮೀರ್, ಅಕ್ಷಯ್

ಅಕ್ಷಯ್ ಕುಮಾರ್ ಅವರ ‘ರಕ್ಷಾ ಬಂಧನ’ ಮತ್ತು ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಎರಡೂ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿವೆ, ಇದು ಎಲ್ಲರಿಗೂ ಗೊತ್ತು. ಆದರೆ ಥಿಯೇಟರ್ ಪ್ರೇಕ್ಷಕರಿಗೆ ಈಗಲೂ ದೊಡ್ಡ ಆಯ್ಕೆ ಇರೋದು ಈ ಇಬ್ಬರು ಸ್ಟಾರ್‌ಗಳಲ್ಲೇ. ಹಾಗಾಗಿಯೇ ‘ದೋಬಾರಾ’ಗೆ ಈ ಚಿತ್ರಗಳೂ ಅಡ್ಡಿಯಾಗುತ್ತಿವೆ.

ಪ್ರೇಕ್ಷಕರರ ಗಮನ ಸೆಳೆಯುತ್ತಿರುವ ತೆಲುಗು ಚಿತ್ರ ‘ಕಾರ್ತಿಕೇಯನ್ 2’

ತೆಲುಗು ನಟ ನಿಖಿಲ್ ಸಿದ್ಧಾರ್ಥ ಅಭಿನಯದ ‘ಕಾರ್ತಿಕೇಯ 2’ ಚಿತ್ರದ ಹಿಂದಿ ವರ್ಷನ್ ತನ್ನ ಗಳಿಕೆಯ ಮೂಲಕ ಜನರನ್ನು ಅಚ್ಚರಿಗೊಳಿಸುತ್ತಿದೆ. ಶ್ರೀಕೃಷ್ಣ, ಪುರಾಣ, ಸಾಹಸಗಳ ಕಾಂಬಿನೇಷನ್ ಆಗಿರುವ ಈ ಚಿತ್ರಕ್ಕೆ ಸಾರ್ವಜನಿಕರು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಆಗಸ್ಟ್ 13 ರಂದು ಬಿಡುಗಡೆಯಾಗಿದ್ದ ‘ಕಾರ್ತಿಕೇಯ 2’ ಚಿತ್ರದ ಅತಿ ಹೆಚ್ಚು ಅಡ್ವಾನ್ಸ್ ಬುಕ್ಕಿಂಗ್ 7ನೇ ದಿನ ಅಂದರೆ ಶುಕ್ರವಾರವೂ ಮುಂದುವರೆದಿದೆ. ಇದಕ್ಕೆ ಬಹುದೊಡ್ಡ ಕಾರಣ ಕೃಷ್ಣ ಜನ್ಮಾಷ್ಟಮಿಯೂ ಇದೇ ದಿನ ಬಂದಿರುವುದು.

ತಾಪ್ಸಿ ಪನ್ನು ಚಿತ್ರ ‘ದೋಬಾರಾ’ ಶುಕ್ರವಾರ ಒಟ್ಟು 35 ಲಕ್ಷಕ್ಕೂ ಕಡಿಮೆ ಕಲೆಕ್ಷನ್ ಮಾಡಿದ್ದರೆ, ಶುಕ್ರವಾರ ‘ಕಾರ್ತಿಕೇಯ 2’ ಅಡ್ವಾನ್ಸ್ ಬುಕಿಂಗ್ 77 ಲಕ್ಷಕ್ಕೆ ಏರಿದೆ. ನಿಖಿಲ್ ಸಿದ್ಧಾರ್ಥ್ ಅಭಿನಯದ ‘ಕಾರ್ತಿಕೇಯ 2’ ಚಿತ್ರ 7ನೇ ದಿನಕ್ಕೆ 1 ಕೋಟಿ ಕಲೆಕ್ಷನ್ ಮಾಡಬಹುದು ಎಂದು ಹೇಳಲಾಗುತ್ತಿದೆ.

“ತಾಕತ್ತಿದ್ದರೆ ನಮ್ಮ ಚಿತ್ರ ಬಾಯ್‌ಕಾಟ್ ಮಾಡಿ” ಎಂದಿದ್ದ ತಾಪ್ಸಿ ಹಾಗು ಅನುರಾಗ್ ಕಶ್ಯಪ್

ದೊಬಾರಾ ಚಿತ್ರ ಅಷ್ಟೇನೂ ಚರ್ಚೆಗೆ ಗ್ರಾಸವಾಗಿರಲಿಲ್ಲ, ಆದರೆ ನಿರ್ದೇಶಕ ಮತ್ತು ನಟಿಯ ಸಂದರ್ಶನದ ನಂತರ, ಈ ಚಿತ್ರದ ಚರ್ಚೆಗಳು ಹೆಚ್ಚಿವೆ. ಈ ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಹೇಳಿರುವ ವಿಚಾರ ಸಂಚಲನ ಮೂಡಿಸಿದೆ. #boycottlaalsinghchaddha ಹಲವು ತಿಂಗಳುಗಳಿಂದ ಟ್ರೆಂಡಿಂಗ್‌ನಲ್ಲಿದೆ ಮತ್ತು ಇದೀಗ ಅನುರಾಗ್ ಕಶ್ಯಪ್ ಅವರ ಈ ಹೇಳಿಕೆಯ ನಂತರ #dobaaraa ಕೂಡ ಟ್ರೆಂಡಿಂಗ್ ಆಗಿದೆ. ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಬಾಯ್‌ಕಾಟ್ ಟ್ರೆಂಡ್ ಕುರಿತು ಮಾತನಾಡಿದಾಗ, ಅನುರಾಗ್ ಕಶ್ಯಪ್ ಈ ವಿಷಯವನ್ನು ಸಾರಾಸಗಟಾಗಿ ನಿರಾಕರಿಸಿದರು ಮತ್ತು “ಹೇ ಇದು ಬಾಯ್‌ಕಾಟ್ ಅಲ್ಲ, ಯಾರು ಆ ಜನರು!. ನಮ್ಮ ಚಿತ್ರವನ್ನು ಬಾಯ್‌ಕಾಟ್ ಮಾಡಿ ತೋರಿಸಲಿ. ಹೇಗಿದ್ದರೂ ನಮ್ಮ ಚಿತ್ರ 100 ಕೋಟಿ ಬಿಸಿನೆಸ್ ಮಾಡಲ್ಲ. 100 ಕೋಟಿ ಬಜೆಟ್ ಚಿತ್ರ ಮಾಡಿದವರಿಗೆ ಬಾಯ್‌ಕಾಟ್ ಭಯ ಇರುತ್ತೆ. ನಮ್ಮ ಚಿತ್ರ ಒಟ್ಟು 32 ಕೋಟಿವರೆಗೆ ಕಲೆಕ್ಷನ್ ಮಾಡುತ್ತೆ. ನಾವು ಅದಕ್ಕೆ ಹೆದರುವುದಿಲ್ಲ, ಆದರೆ ಬಾಯ್‌ಕಾಟ್ ನ ನಂತರವೂ ನಮ್ಮ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಬ್ಯಾಟ್ ಮಾಡುತ್ತೆ ಅನ್ನೋದನ್ನ ನೋಡಬೇಕಿದೆ” ಎಂದಿದ್ದರು.

ಅನುರಾಗ್ ಕಶ್ಯಪ್ ಅವರ ಈ ಹೇಳಿಕೆಯಿಂದ ಪ್ರೇಕ್ಷಕರ ಭಾವನೆಗಳಿಗೆ ಅನುರಾಗ್ ಕಶ್ಯಪ್ ಗೇಲಿ ಮಾಡುತ್ತಿದ್ದಾರೆ ಅಥವಾ ಪ್ರೇಕ್ಷಕರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರು ಭಾವಿಸುತ್ತಿದ್ದಾರೆ. ಅಂದಿನಿಂದ ಪ್ರೇಕ್ಷಕರು ಅವರ ಸಿನಿಮಾವನ್ನೂ ಬಾಯ್‌ಕಾಟ್ ಮಾಡುತ್ತಿದ್ದಾರೆ. ಇದಲ್ಲದೇ, ತಾಪ್ಸಿ ಪನ್ನು ಸಂದರ್ಶನದಲ್ಲಿ ಪ್ರೇಕ್ಷಕರಿಗೆ ಒಂದು ರೀತಿಯಲ್ಲಿ ಸವಾಲು ಹಾಕುತ್ತ, “ಬಾಯ್ಕಾಟ್ ಮಾಡುವುದನ್ನು ಮುಂದುವರಿಸಿ, ನಮ್ಮ ಚಿತ್ರವನ್ನೂ ಬಾಯ್‌ಕಾಟ್ ಲಿಸ್ಟ್ ನಲ್ಲಿ ಸೇರಿಸಬೇಕು. ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ ಬಾಯ್‌ಕಾಟ್ ಪಟ್ಟಿಯಲ್ಲಿ ನಾವು ಕೂಡ ಸೇರಲು ಬಯಸುತ್ತೇವೆ” ಎಂದಿದ್ದಾರೆ.

ಇದಲ್ಲದೆ, ಇದನ್ನು ಹೇಳುವಾಗ ತಾಪ್ಸಿ ಕೂಡ ನಗುತ್ತಿರುವುದನ್ನು ಕಂಡಬರುತ್ತದೆ, “ನಾವೂ ಬಾಲಿವುಡ್‌ನ ಭಾಗವಾಗಿದ್ದೇವೆ, ನಮಗೂ ಬಾಯ್‌ಕಾಟ್ ಮಾಡಿ” ಎಂದಿದ್ದಾರೆ‌. ಇಷ್ಟೆಲ್ಲಾ ಮಾತಾಡ್ತಾರಲ್ಲ, ಸಿನಿಮಾ ಬಾಯ್‌ಕಾಟ್ ಬಗ್ಗೆ ಮಾತನಾಡುವವರು ಮೊನ್ನೆ ಸಿನಿಮಾ ನೋಡಲು ಬಂದಿದ್ದಾರಾ ಎಂದು ಅನುರಾಗ್ ಕಶ್ಯಪ್ ತೀಕ್ಷ್ಣ ವ್ಯಂಗ್ಯವಾಡಿದ್ದಾರೆ. ಈ ಸಮಯದಲ್ಲಿ, ತಾಪ್ಸಿ ಮತ್ತು ಅನುರಾಗ್ ಕಶ್ಯಪ್ ಬಾಯ್‌ಕಾಟ್ ಮಾಡುವವರನ್ನ ವ್ಯಂಗ್ಯವಾಡಿದರು. ಇದರಿಂದಾಗಿ ಅನುರಾಗ್ ಕಶ್ಯಪ್ ತಮ್ಮದೇ ಪ್ರೇಕ್ಷಕರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರು ಭಾವಿಸುತ್ತಾರೆ.

ಇದಕ್ಕೂ ಮೊದಲಿನ ಸಂದರ್ಶನವೊಂದರಲ್ಲಿ ಅನುರಾಗ್ ಕಶ್ಯಪ್ ಆಸ್ಕರ್ ನಾಮಿನೇಷನ್‌ಗಾಗಿ ಭಾರತ ‘ಕಾಶ್ಮೀರ ಫೈಲ್ಸ್’ ಕಳುಹಿಸಬಾರದು, RRR ಚಲನಚಿತ್ರವನ್ನು ಕಳುಹಿಸಬಹುದು ಎಂದು ಸಹ ಹೇಳಿದ್ದರು. ಈ ಹೇಳಿಕೆಯ ನಂತರ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕೂಡ ಟ್ವೀಟ್ ಮಾಡುತ್ತ, “ಬಾಲಿವುಡ್‌ನ ಕೆಟ್ಟ, ನರಮೇಧ ನಿರಾಕರಣೆ ಲಾಬಿ #TheKashmirFiles’ #Oscars ನಾಮನಿರ್ದೇಶನದ ವಿರುದ್ಧ #Dobaaraa ಚಿತ್ರದ ನಿರ್ಮಾಪಕರ ನೇತೃತ್ವದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ” ಎಂದಿದ್ದರು. ಇದಾದ ಕೆಲವೇ ದಿನಗಳಲ್ಲಿ, ವಿವೇಕ್ ಅವರ ಈ ಟ್ವೀಟ್ ವೈರಲ್ ಆಗಿದ್ದು, ಜನರು ಅದಕ್ಕೆ ನೀಡಿದ ಪ್ರತಿಕ್ರಿಯೆಯನ್ನು ನೀವೂ ಕೆಳಗೆ ನೋಡಬಹುದು

Advertisement
Share this on...