ತೆಲಂಗಾಣದಲ್ಲಿ 8 ದಿನಕ್ಕೇ ಫ್ರೀ ಬಸ್​ ಯೋಜನೆ ವಿರುದ್ಧ ಶುರುವಾದ ಆಕ್ರೋಶ! ಬಸ್​ಗೆ ಅಡ್ಡಲಾಗಿ ನಿಂತ ಯುವಕರು ಮಾಡಿದ್ದೇನು ನೋಡಿ

in Uncategorized 110 views

ಬಸ್​ನಲ್ಲಿ ಸೀಟಿಲ್ಲ ಎಂದು ಯುವಕನೊಬ್ಬ ಆಕ್ರೋಶ ವ್ಯಕ್ತಪಡಿಸಿ ಸರ್ಕಾರಿ ಬಸ್ ನಲ್ಲಿ ಪುರುಷರಿಗೆ ವಿಶೇಷ ಆಸನಗಳನ್ನು ಮೀಸಲಿಡಬೇಕು ಎಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

Advertisement

ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಿದೆ. ಇದರಿಂದಾಗಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಆರ್​ಟಿಸಿ ಬಸ್ ಗಳಲ್ಲಿ ದಾಖಲೆ ಮಟ್ಟದಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರಿದ್ದಾರೆ. ಸಾಮಾನ್ಯವಾಗಿ ಬಹುತೇಕ ಎಲ್ಲಾ ಆಸನಗಳು ಅವುಗಳಿಂದ ತುಂಬಿರುತ್ತವೆ. ಪುರುಷರಿಗೆಂದು ಸೀಟುಗಳು ಕಡಿಮೆ ಇರುತ್ತವೆ. ಇದೀಗ ಮಹಾಲಕ್ಷ್ಮಿ ಯೋಜನೆಯಿಂದ ಆ ಸೀಟುಗಳು ಇಲ್ಲದಂತಾಗಿವೆ.

ಇದೇ ವಿಚಾರಕ್ಕೆ ಯುವಕನೊಬ್ಬ ಆಕ್ರೋಶ ವ್ಯಕ್ತಪಡಿಸಿ ಸರ್ಕಾರಿ ಬಸ್ ನಲ್ಲಿ ಪುರುಷರಿಗೆ ವಿಶೇಷ ಆಸನಗಳನ್ನು ಮೀಸಲಿಡಬೇಕು ಎಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ನಿಜಾಮಾಬಾದ್ ಜಿಲ್ಲೆಯ ಆರ್ಮರ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಸ್ಸಿಗೆ ಅಡ್ಡಲಾಗಿ ನಿಂತ ಯುವಕ ತನ್ನ ಆಕ್ರೋಶ ಹೊರಹಾಕಿದ್ದಾನೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿರುವುದರಿಂದ ಎಲ್ಲಾ ಸೀಟುಗಳಲ್ಲೂ ಮಹಿಳೆಯರೇ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾನೆ.

ಫ್ರೀ ಬಸ್​ ನೋಡಿರುವುದರಿಂದ ಹೆಚ್ಚಿನ ಮಹಿಳೆಯರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ. ಪುರುಷರಿಗೆ ಸೀಟು ಸಿಗುತ್ತಿಲ್ಲ. ಸರ್ಕಾರಿ ಬಸ್ ನಲ್ಲಿ ತಮ್ಮ ಮಗಳು, ಪತ್ನಿ ಕೂಡ ಪ್ರಯಾಣಿಸಿದ್ದಾರೆ. ಇದೊಂದು ಉತ್ತಮ ಯೋಜನೆಯಾಗಿದೆ. ಆದರೆ ಪುರುಷರಿಗೂ ಸೀಟುಗಳನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾನೆ. ಪ್ರತಿ ಬಸ್‌ನಲ್ಲಿ ಕನಿಷ್ಠ 15 ಸೀಟುಗಳನ್ನಾದರೂ ಪುರುಷರಿಗೆ ಮೀಸಲಿಡಬೇಕು ಎಂದು ಯುವಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಯುವಕರ ಪ್ರತಿಭಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಎಂ ರೇವಂತ್ ರೆಡ್ಡಿ ಡಿಸೆಂಬರ್ 9ರಂದು ವಿಧಾನಸೌಧ ಆವರಣದಲ್ಲಿ ಮಹಾಲಕ್ಷ್ಮಿ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದರು.

Advertisement
Share this on...