ಬೆಂಗಳೂರು : ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಅವರ ವ್ಯಕ್ತಿತ್ವ ಎಂತಹದು ಎಂಬುದನ್ನು ಸಾರಿ ಹೇಳಿದ್ದಾರೆ.
ಜುಲೈ 19 ರಂದು ಟ್ವೀಟ್ ಮಾಡಿರುವ ಅವರು, ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾ ಸೇವೆ ಸಲ್ಲುಸುತ್ತಿರುವ ದರ್ಶನ್ ತುಗೂದೀಪ ಅವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ – ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತಾ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ ಎಂದಿದ್ದಾರೆ.
ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ದರ್ಶನ್ ತೂಗುದೀಪರವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. @dasadarshan pic.twitter.com/cxFvCnzu2l
— P C Mohan (@PCMohanMP) July 19, 2021
ದರ್ಶನ್ ಅವರ ಕುರಿತು ಕೇಳಿ ಬಂದಿರುವ ಹ ಲ್ಲೆ ಆರೋಪದ ಕುರಿತು ಮಾತಾಡಿರುವ ಪಿ.ಸಿ ಮೋಹನ್, ಯಾವುದೇ ಆಧಾರವಿಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಯಾವುದೇ ಆಧಾರವಿಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ. ಶುಭವಾಗಲಿ. @dasadarshan @DTEAM7999
— P C Mohan (@PCMohanMP) July 19, 2021
ಇನ್ನು ಮೈಸೂರಿನಲ್ಲಿ ದರ್ಶನ್ ಅವರು ಹೋಟೆಲ್ ವೇಟರ್ ಮೇಲೆ ಹ ಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಆರೋಪಿಸಿದ್ದಾರೆ. ಇದಕ್ಕೆ ಬಹಿರಂಗ ಸವಾಲು ಹಾಕಿದ ದಚ್ಚು, ತಮ್ಮ ವಿರುದ್ಧದ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡಿ ಎಂದಿದ್ದಾರೆ.
ಡಿ ಬಾಸ್ ಬೆಂಬಲಕ್ಕೆ ನಿಂತ ನಟ ಧರ್ಮ ಕೀರ್ತಿರಾಜ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಯುವ ನಟ ಧರ್ಮಕೀರ್ತಿರಾಜ್ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಡಿ ಬಾಸ್ ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಯಜಮಾನ ದರ್ಶನ್ ಅವರಿಗೆ ಒಂದರ ನಂತರ ಮತ್ತೊಂದರಂತೆ ವಿವಾದಗಳು ಅಂಟಿಕೊಳ್ಳುತ್ತಿವೆ. 25 ಕೋಟಿ ರೂ. ಸಾಲಕ್ಕೆ ಶ್ಯೂರಿಟಿ ಪ್ರಕರಣ ಮುಗಿಯುತ್ತಿದ್ದಂತೆ ಹೋಟೆಲ್ ವೇಟರ್ ಮೇಲೆ ಹಲ್ಲೆ ಪ್ರಕರಣ ಕೇಳಿ ಬಂತು. ಇದಾದ ಬಳಿಕ ದೊಡ್ಮನೆ ಆಸ್ತಿ ವಿಚಾರ ಮುನ್ನೆಲೆಗೆ ಬಂತು. ಹೀಗೆ ದರ್ಶನ್ ಅವರನ್ನು ಬೆಂಬಿಡದೆ ಕಾಡುತ್ತಿರುವ ವಿರೋಧಿಗಳಿಗೆ ಧರ್ಮಕೀರ್ತಿ ರಾಜ್ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.
ಟ್ವೀಟ್ ಮೂಲಕ ಡಿ ಬಾಸ್ ಬೆಂಬಲಿಸಿರುವ ಕ್ಯಾಡ್ಬರಿ ಸ್ಟಾರ್, ಸುತ್ತಲೂ ನೀರು ಮಧ್ಯದಲ್ಲಿ ದ್ವೀಪ. ಆ ದ್ವೀಪಕ್ಕೆ ನೀರಿನ ರೂಪದಲ್ಲಿ ಅಪ್ಪಳಿಸುವ ದುಷ್ಟರ ದಂಡು. ಆದರೆ, ಅವರಿಗೆ ಗೊತ್ತಿರಲಿಲ್ಲ, ಅಲ್ಲಿರೋದು ಬರೀ ದ್ವೀಪ ಅಲ್ಲ ಅದು ತುಗೂದೀಪ ಅಂತಾ ಎಂದು ಟ್ವೀಟ್ ಮಾಡಿದ್ದಾರೆ.
ಮಗ ಅಂತ ಕರೆಯುವ ದರ್ಶನ್ ಪರ ನಿಂತ ಸಂಸದೆ ಸುಮಲತಾ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ‘ದಾಸ’ ನ ಪರ ನಿಂತಿದ್ದಾರೆ. ದರ್ಶನ ಹೆಸರಲ್ಲಿ 25 ಕೋಟಿ ಲೋನ್ ದೋಖಾ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ದರ್ಶನ್ ನಮ್ಮ ಮನೆಗೆ ಬಂದಿದ್ದರು. ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರು. ಯಾರೋ ಮೋಸ ಮಾಡ್ತಿದ್ದಾರೆ ಅಂತ ನನಗೆ ಹೇಳಿದ್ರು. ಮೋಸ ನಡೆದಿದ್ದರೆ ಖಂಡಿತ ನ್ಯಾಯ ಸಿಗಬೇಕು ಎಂದರು.
ನ್ಯಾಯ ದರ್ಶನ್ ಪರ ಇದೆ. ನಾನು ದರ್ಶನ್ ಪರವೇ ಇರುತ್ತೇನೆ. ಉಮಾಪತಿ ಯಾರು ಅಂತ ನನಗೆ ಗೊತ್ತಿಲ್ಲ. ನಾನು ಯಾವತ್ತು ಅವ್ರನ್ನ ಮೀಟ್ ಮಾಡಿಲ್ಲ. ಅ ಬಗ್ಗೆ ನಾನು ಮಾತಾಡೋಕೆ ಇಷ್ಟ ಇಲ್ಲ. ಪ್ರಕರಣದ ಸಂಪೂರ್ಣ ವಿವರ ದರ್ಶನ್ ಹೇಳಿರಲಿಲ್ಲ. ಆದರೆ ಮೋಸ ಆಗಿದೆ ಅಂತ ನನ್ನ ಬಳಿ ಹೇಳಿದ್ರು ಎಂದು ತಿಳಿಸಿದರು.